ಮನೆ ಕಟ್ಟುವಾಗ ಫಾಲ್ ಸೀಲಿಂಗ್ (Fals Ceiling) ಕೂಡ ಒಂದು ಮುಖ್ಯವಾದ ವಿಷಯ. ಈಗ ಮೂರು ರೀತಿಯಾದ ಫಾಲ್ಸ್ ಸೀಲಿಂಗ್ ಆಯ್ಕೆಗಳಿವೆ. ಪಾಪ್ ಫಾಲ್ ಸೀಲಿಂಗ್ (POP Fals Ceiling), ಜಿಪ್ಸಂ ಸೀಲಿಂಗ್ (Gypsum Ceiling), ಪಿವಿಸಿ ಫಾಲ್ ಸೀಲಿಂಗ್ (PVC Fals Ceiling) ಇದರಲ್ಲಿ ಯಾವುದು ಬೆಸ್ಟ್ ಯಾವುದನ್ನು ಮಾಡಿಸುವುದರಿಂದ ಯಾವ ರೀತಿ ವ್ಯತ್ಯಾಸವಾಗುತ್ತದೆ? ಬಾಳಿಕೆ ಹೇಗೆ? ಬೆಲೆ ಹೇಗೆ? ಯಾವುದರಲ್ಲಿ ಹೆಚ್ಚು ಡಿಸೈನ್ ಸಿಗುತ್ತದೆ ಇತ್ಯಾದಿ ವಿವರಗಳ ಬಗ್ಗೆ ಈ ಲೇಖನದಲ್ಲಿ ತಿಳಿಸುತ್ತಿದ್ದೇವೆ.
ಯಾವುದು ಹೆಚ್ಚು ಬಾಳಿಕೆ ಬರುತ್ತದೆ ಎನ್ನುವ ವಿಚಾರದ ಬಗ್ಗೆ ಹೇಳುವುದಾದರೆ ಪಾಪ್ ಸೀಲಿಂಗ್ 15 ವರ್ಷಗಳವರೆಗೆ ಗ್ಯಾರೆಂಟಿ ಬಾಳಿಕೆ ಬರುತ್ತದೆ, ಅದಕ್ಕಿಂತ ಹೆಚ್ಚಿನ ವರ್ಷಗಳವರೆಗೆ ಬಂದಿರುವ ಉದಾಹರಣೆಗಳು ಇವೆ ಜಿಪ್ಸಂ ಸೀಲಿಂಗ್ ನಲ್ಲಿ ಜಿಪ್ಸಂ ಬೋರ್ಡ್ ಗಳಿಂದ ಫೀಲಿಂಗ್ ಮಾಡುತ್ತಾರೆ.
ಇದು ಕೂಡ 8-10 ವರ್ಷಗಳ ಗ್ಯಾರಂಟಿ ನಂತರ ಇದು ಪುಡಿಯಾಗಿ ಉದುರುತ್ತಿರುತ್ತದೆ ಅಥವಾ ಡಂಪ್ ನೆಸ್ ಬರುತ್ತದೆ. PVC ಸೀಲಿಂಗ್ ಕೂಡ 6-7 ವರ್ಷಗಳ ಕಾಲ ಬಾಳಿಕೆ ಬರುತ್ತದೆ ಇದು ಹೀಟ್ ಕಾರಣದಿಂದ ಬೇಗ ಹಾಳಾಗುತ್ತದೆ, ಬಿಸಿಲಿನ ಕಾರಣದಿಂದ ಪುಡಿಯಾಗುತ್ತದೆ ಕಲರ್ ಫೇಡ್ ಆಗುತ್ತದೆ.
ಈ ಸುದ್ದಿ ಓದಿ:- ಕರ್ನಾಟಕ ರಾಜ್ಯ ಸಹಕಾರಿ ಅಪೆಕ್ಸ್ ಬ್ಯಾಂಕ್ ನಲ್ಲಿ ಉದ್ಯೋಗವಕಾಶ, ಬ್ಯಾಂಕ್ ಸಹಾಯಕರ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ ವೇತನ 87,125/-
ಯಾವುದೇ ಫೀಲಿಂಗ್ ಮಾಡಿಸ್ತಿದ್ರು ಕೂಡ ಒಂದೇ ದಿನದ ಟೈಮ್ ನಲ್ಲಿ ಮುಗಿಸಿಕೊಡುತ್ತಾರೆ ಒಂದು ವೇಳೆ ನೀವು ಪೇಂಟ್ ಮಾಡಿಸಲು ಬಯಸಿದರೆ ಮರುದಿನ ಪೇಂಟ್ ಮಾಡಬೇಕು ಆಗ ಮಾತ್ರ ಒಂದು ದಿನ ಎಕ್ಸ್ಟ್ರಾ ಆಗುತ್ತದೆ. ಬಜೆಟ್ ಬಗ್ಗೆ ಹೇಳುವುದಾದರೆ 10*10 ರೂಮ್ ನ ಉದಾಹರಣೆಯೊಂದಿಗೆ ಇದನ್ನು ವಿವರಿಸಲು ಇಚ್ಚಿಸುತ್ತಿದ್ದೇನೆ.
ಈ ಅಳತೆಗೆ ಮಾಡುವಾಗ ಮೊದಲಿಗೆ 18 ಇಂಚಿನ ಬಾರ್ಡರ್ ಮಾಡಿಕೊಳ್ಳುತ್ತಾರೆ ಇದಕ್ಕೆ ಸ್ಟಾಪರ್ ಮಾಡುತ್ತಾರೆ ಅದು ಕೂಡ ಲೆಕ್ಕ ಹಾಕಲಾಗುತ್ತದೆ ಆಮೇಲೆ ಮಧ್ಯದಲ್ಲಿ ಡಿಸೈನ್ ಮಾಡುತ್ತಾರೆ. ಬಾರ್ಡರ್, ಸ್ಟಾಪರ್ ಮತ್ತು ರೂಮ್ ಅಳತೆ ಕ್ಯಾಲ್ಕುಲೇಟ್ ಮಾಡುವುದಾದರೆ 57+50-100 = 207 Sq.ft ಆಗುತ್ತದೆ. ಈಗಿರುವ ಬೆಲೆಗಳ ಪ್ರಕಾರ ಇದಕ್ಕೆ ತಗಲುವ ವೆಚ್ಚ POP ಫೀಲಿಂಗ್ ಆದರೆ per sq.ft Rs.80 ಇದೆ, 207sft * Rs.80 = Rs.16,560 ಆಗುತ್ತದೆ.
ಒಂದು ವೇಳೆ ಚಿಪ್ಸಮ್ ಬೋರ್ಡ್ ಗೆ ಹೋಗುವುದಾದರೆ ಇದಕ್ಕಿಂತ 10 ರೂಪಾಯಿ ಕಡಿಮೆ ಇರುತ್ತದೆ. per sq.ft Rs.70 ಎನ್ನುವ ಲೆಕ್ಕಾಚಾರದಲ್ಲಿ 207sft * Rs.70 = Rs.14,490 ಆಗುತ್ತದೆ. PVC ಸೀಲಿಂಗ್ ಇನ್ನೂ ಕಡಿಮೆಗೆ per Sq.ft Rs.50 ಲೆಕ್ಕದಲ್ಲಿ Rs.10,350 ತಗಲುತ್ತದೆ. ಇಷ್ಟು ಖರ್ಚು ಮಾಡಿದ ಮೇಲೆ ಲುಕ್ ಕೂಡ ಸಮಾಧಾನಕರವಾಗಿರಬೇಕು.
ಈ ಸುದ್ದಿ ಓದಿ:- ಗೃಹಲಕ್ಷ್ಮಿ 7ನೇ ಕಂತಿನ ಹಣ ಬಿಡುಗಡೆ, ಮಾರ್ಚ್ 14 ರ ಒಳಗೆ ಈ ಕೆಲಸ ಮಾಡಿದೆ ಹೋದರೆ ಆಧಾರ್ ಕಾರ್ಡ್ ರದ್ದು, ಗೃಹಲಕ್ಷ್ಮಿ ಹಣ ಕೂಡ ಬರಲ್ಲ.!
ಕೆಲವರು ಬಹಳ ವಿಚಿತ್ರವಾದ ಬಣ್ಣ ಸೆಲೆಕ್ಟ್ ಮಾಡಿ ಅದರ ಅಂದವನ್ನು ಕೆಡಿಸಿ ಬಿಡುತ್ತಾರೆ. ಹೀಗೆ ಮಾಡಬೇಡಿ ಸಾಧ್ಯವಾದಷ್ಟು ಕ್ಲಾಸಿ ಕಲರ್ ಗಳನ್ನು ಸೆಲೆಕ್ಟ್ ಮಾಡಿ. ಹಳದಿ ಆರೆಂಜ್ ಗ್ರೀನ್ ಪರ್ಪಲ್ ಈ ಬಣ್ಣಗಳನ್ನು ಸೆಲೆಕ್ಟ್ ಮಾಡದಿರುವುದೇ ಉತ್ತಮ. ಸಾಧ್ಯವಾದಷ್ಟು ಲೈಟ್ ಆಗಿರುವ ಮೈಲ್ಡ್ ಕಲರ್ ಗಳನ್ನು ಕಾಂಟ್ರೆಸ್ಟ್ ಕಲರ್ ಗಳನ್ನು ಚೂಸ್ ಮಾಡಿ. ಗ್ರೇ, ಬ್ರೌನ್ ಕಲರ್ ಗಳು ಚೆನ್ನಾಗಿರುತ್ತವೆ. ಸೀಲಿಂಗ್ ಆದಮೇಲೆ ಲೈಟ್ ಇಂಟಿಗ್ರೇಶನ್ ಕೂಡ ಅಷ್ಟೇ ಪ್ರಮುಖ ಪಾತ್ರ ವಹಿಸುತ್ತದೆ ವೈಟ್ ಅಥವಾ ಆಫ್ ವೈಟ್ ಸೆಲೆಕ್ಟ್ ಮಾಡಿ ಮಲ್ಟಿ ಕಲರ್ ಗಳಂತೂ ಚೂಸ್ ಮಾಡಲೇಬೇಡಿ.