ಇತ್ತೀಚಿಗೆ ಎಲ್ಲಾ ವ್ಯವಹಾರಗಳು ಕೂಡ ಆನ್ಲೈನ್ ಮೂಲಕವೇ ನಡೆಯುತ್ತಿದೆ. ಹಾಗಾಗಿ ಆಧಾರ್ ಕಾರ್ಡ್ ಗೆ ಮೊಬೈಲ್ ನಂಬರ್ ಲಿಂಕ್ ಮಾಡುವುದು, ಬ್ಯಾಂಕ್ ಅಕೌಂಟ್ ಗೆ ಮೊಬೈಲ್ ಲಿಂಕ್ ಮಾಡುವುದು ಕಡ್ಡಾಯವಾಗಿದೆ. ಬ್ಯಾಂಕ್ ಅಕೌಂಟ್ ಗಳಿಗೆ ಮೊಬೈಲ್ ನಂಬರ್ ಲಿಂಕ್ ಆದಾಗ ಆನ್ಲೈನ್ ಮೂಲಕ ಬ್ಯಾಂಕ್ ವ್ಯವಹಾರಗಳನ್ನು ಮಾಡಿಕೊಳ್ಳಬಹುದು. ಆದರೆ ಕಾರಣಾಂತರಗಳಿಂದ ನಾವು ಬ್ಯಾಂಕಿನಲ್ಲಿ ರಿಜಿಸ್ಟರ್ ಮಾಡಿದ ಮೊಬೈಲ್ ಸಂಖ್ಯೆಯನ್ನು ಬದಲಾಯಿಸುವ ಅನಿವಾರ್ಯತೆ ಉಂಟಾಗುತ್ತದೆ.
ಆದರೆ ಹೇಗೆ ಮೊಬೈಲ್ ಸಂಖ್ಯೆಯನ್ನು ಬದಲಾಯಿಸಬೇಕು ಎನ್ನುವ ಮಾಹಿತಿ ಹಲವು ಜನರಿಗೆ ತಿಳಿಯದೆ ಗೊಂದಲಕ್ಕೆ ಒಳಗಾಗುತ್ತಾರೆ. ಇದಕ್ಕಾಗಿ ಬ್ಯಾಂಕುಗಳು ಅನುಕೂಲತೆಯನ್ನು ಮಾಡಿಕೊಟ್ಟಿವೆ. ಈ ಮೂರು ವಿಧಾನಗಳಲ್ಲಿ ನೀವು ನಿಮ್ಮ ಬ್ಯಾಂಕ್ ಖಾತೆಗಳಿಗೆ ಲಿಂಕ್ ಆಗಿರುವ ಮೊಬೈಲ್ ಸಂಖ್ಯೆಯನ್ನು ಬದಲಾಯಿಸಬಹುದು. ಮೊದಲ ವಿಧಾನದಲ್ಲಿ ನೀವು ನೇರವಾಗಿ ಬ್ಯಾಂಕ್ಗಳಿಗೆ ಭೇಟಿ ಕೊಡಬೇಕು. ಬ್ಯಾಂಕ್ ಗಳಿಗೆ ಭೇಟಿ ಕೊಟ್ಟ ಸಿಬ್ಬಂದಿ ಬಳಿ ಮೊಬೈಲ್ ನಂಬರ್ ಚೇಂಜ್ ಮಾಡುವುದಕ್ಕೆ ಇರುವ ಅರ್ಜಿ ಫಾರಂ ಪಡೆದು ಅದರಲ್ಲಿ ಕೆಲ ವಿವರಗಳು ಇರುತ್ತವೆ.
ಆ ಮಾಹಿತಿಯನ್ನು ನಮೂದಿಸಿ ಸಹಿ ಮಾಡಿಕೊಟ್ಟರೆ ಸಾಕು. ಬ್ಯಾಂಕ್ ಸಿಬ್ಬಂದಿ ನಿಮ್ಮ ಅರ್ಜಿ ಫಾರಂ ಪಡೆದು ಮೊಬೈಲ್ ನಂಬರ್ ಅನ್ನು ಬ್ಯಾಂಕ್ ಅಕೌಂಟ್ ನಲ್ಲಿ ಬದಲಾಯಿಸುತ್ತಾರೆ. ನೀವು ಎಂದಿನಂತೆ ಹಳೆಯ ನಂಬರ್ ಬದಲು ಈಗ ಕೊಟ್ಟ ಹೊಸ ಮೊಬೈಲ್ ನಂಬರ್ ನಲ್ಲಿ ಎಲ್ಲಾ ವ್ಯವಹಾರಗಳನ್ನು ನಡೆಸಬಹುದು. ನಿಮ್ಮ ಖಾತೆಗೆ ಹಣ ಕ್ರೆಡಿಟ್ ಆಗುವುದು, ಡೆಬಿಟ್ ಆಗುವುದು ಅಥವಾ ಇನ್ನಿತರ ಬ್ಯಾಂಕಿಗೆ ಸಂಬಂಧಪಟ್ಟ ಪ್ರಮುಖ ಮಾಹಿತಿ ಎಲ್ಲವೂ ಕೂಡ ಹೊಸ ನಂಬರಿಗೆ ಮೆಸೇಜ್ ಮೂಲಕವೇ ಬರುತ್ತದೆ.
ಎರಡನೇ ವಿಧಾನದಲ್ಲಿ ATM ಗಳಿಗೆ ಭೇಟಿ ಕೊಡುವ ಮೂಲಕ ನೀವು ನಿಮ್ಮ ಮೊಬೈಲ್ ಸಂಖ್ಯೆಯನ್ನು ಬದಲಾಯಿಸಿಕೊಳ್ಳಬಹುದು. ಎಲ್ಲರಿಗೂ ಸಹ ಬ್ಯಾಂಕ್ ಶಾಖೆಗಳಿಗೆ ಹೋಗುವ ಅನುಕೂಲತೆ ಇರುವುದಿಲ್ಲ ಅಥವಾ ಹತ್ತಿರದಲ್ಲಿ ಬ್ಯಾಂಕ್ ಶಾಖೆಗಳು ಇರುವುದಿಲ್ಲ ಆ ಸಮಯದಲ್ಲಿ ಸಮಯ ಉಳಿತಾಯ ಮಾಡಲು ಮತ್ತು ಗ್ರಾಹಕರಿಗೆ ಈ ವಿಧಾನವನ್ನು ಇನ್ನಷ್ಟು ಸರಳ ಮಾಡಿಕೊಳ್ಳಲು ಇಂತಹ ಒಂದು ಅನುಕೂಲತೆಯನ್ನು ಬ್ಯಾಂಕ್ ಗಳು ಮಾಡಿಕೊಟ್ಟಿವೆ.
ATM ಗಳು ಮಿಷಿನ್ ಬಳಿ ಹೋಗಿ ನಿಮ್ಮ ಡೆಬಿಟ್ ಕಾರ್ಡ್ ಹಾಕಿ ಮೆನುವಿನಲ್ಲಿ ರಿಜಿಸ್ಟರ್ ಆಯ್ಕೆ ಮಾಡಿಕೊಂಡು ATM ಪಿನ್ ಹಾಕಿ ಮೊಬೈಲ್ ನಂಬರ್ ಅಪ್ಡೇಟ್ ಆಪ್ಷನ್ ಇರುವುದನ್ನು ಕ್ಲಿಕ್ ಮಾಡಿ, ಹಳೆಯ ನಂಬರನ್ನು ಮೊದಲಿಗೆ ಎಂಟ್ರಿ ಮಾಡಿ ಕನ್ಫರ್ಮ್ ಮಾಡಿ ನಂತರ ಹೊಸ ನಂಬರನ್ನು ಹಾಕಿ ಅದನ್ನು ಕೂಡ ಕನ್ಫರ್ಮ್ ಮಾಡಿ. ನಿಮ್ಮ ಹಳೆಯ ನಂಬರ್ ಹಾಗೂ ಹೊಸ ನಂಬರ್ಗಳಿಗೆ OTP ಬರುತ್ತದೆ.
OTP ಬಂದ ನಾಲ್ಕು ಗಂಟೆಗಳ ಒಳಗೆ OTP ಮತ್ತು ರೆಫರೆನ್ಸ್ ನಂಬರ್ ಇತ್ಯಾದಿಗಳನ್ನು ನೀವು ಮೊಬೈಲ್ ಮೂಲಕ ಸಂದೇಶ ಕಳಿಸಬೇಕು. ಉದಾಹರಣೆಗೆ SBI ಅಕೌಂಟ್ ಹೊಂದಿದ್ದರೆ ACTIVATE (NEW NUMBER OTP REF.NO) ಹಾಕಿ 567676 ಈ ನಂಬರಿಗೆ ಮೆಸೇಜ್ ಮಾಡಬೇಕು ಪ್ರತಿಯೊಂದು ಬ್ಯಾಂಕ್ಗಳು ಕೂಡ ತಮ್ಮದೇ ಆದ. ನಂಬರ್ಗಳನ್ನು ಹೊಂದಿರುತ್ತವೆ ಆಯಾ ಬ್ಯಾಂಕ್ ಗಳ ವೆಬ್ಸೈಟ್ ಅಲ್ಲಿ ಚೆಕ್ ಮಾಡಿದರೆ ನಂಬರ್ ಸಿಗುತ್ತದೆ. ಗ್ರಾಹಕರು ಅವರ ಬ್ಯಾಂಕ್ಗಳ ಅನುಸಾರವಾಗಿ ಈ ರೀತಿ ಆಕ್ಟಿವೇಟ್ ಆಗಲು ಮೆಸೇಜ್ ಮಾಡಬೇಕು. ಮೂರನೇ ವಿಧಾನದಲ್ಲಿ ನೆಟ್ ಬ್ಯಾಂಕಿಂಗ್ ಹೊಂದಿರುವವರು ಬ್ಯಾಂಕಿಗೆ ಹೋಗದೆ ಮೊಬೈಲ್ ಸಂಖ್ಯೆಯನ್ನು ಬದಲಾಯಿಸಬಹುದು.