ರೇಷನ್ ಕಾರ್ಡ್ ಇದ್ದವರಿಗೆ ಬಿಗ್ ಶಾ-ಕ್, ಜೂನ್ 30ರ ಒಳಗೆ ಈ ಕೆಲಸ ಕಡ್ಡಾಯವಾಗಿ ಮಾಡಲೇಬೇಕು, ಇಲ್ಲದಿದ್ದರೆ ನಿಮ್ಮ ರೇಷನ್ ಕಾರ್ಡ್ ಬಂದ್

 

ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯು ನೀಡಿರುವಂತಹ ಒಂದು ಗುರುತಿನ ಚೀಟಿಯಾದ ರೇಷನ್ ಕಾರ್ಡ್ ಸರ್ಕಾರದ ಅನೇಕ ಯೋಜನೆಗಳಿಗೆ ಅಗತ್ಯ ದಾಖಲೆಯಾಗಿದೆ. ಈ ರೇಷನ್ ಕಾರ್ಡ್ ಅನ್ನು ಮಾನದಂಡವಾಗಿ ಇಟ್ಟುಕೊಂಡು ಸರ್ಕಾರವು ಬಡತನ ರೇಖೆಗಿಂತ ಕೆಳಗಿರುವವರನ್ನು ಗುರುತಿಸಿ ಅವರಿಗಾಗಿ ಸಾಕಷ್ಟು ಯೋಜನೆಗಳ ಅನುದಾನವನ್ನು ನೀಡುತ್ತಿದೆ.

BPL ಮತ್ತು AAY ಕಾರ್ಡನ್ನು ಬಡತನ ರೇಖೆಗಿಂತ ಕೆಳಗಿರುವ ಕಾರ್ಡ್ ಎಂದು ಗುರುತಿಸಲಾಗಿದೆ ಮತ್ತು ಇವರಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ಉಚಿತ ಪಡಿತರ ಹಾಗೂ ಸರ್ಕಾರವು ಬಡವರಿಗಾಗಿಯೇ ನೀಡುತ್ತಿರುವ ಒಂದಷ್ಟು ಯೋಜನೆಗಳ ಅನುಕೂಲತೆ ಸಿಗುತ್ತಿದೆ. ಹೀಗೆ ರೇಷನ್ ಕಾರ್ಡ್ ಉಚಿತ ಪಡಿತರ ವ್ಯವಸ್ಥೆಗೆ ಮಾತ್ರವಲ್ಲದೆ ಸರ್ಕಾರದ ವತಿಯಿಂದ ಘೋಷಿಸಲಾಗುವ ಅನೇಕ ಯೋಜನೆಗಳಿಗೆ ಅವಶ್ಯಕವಾಗಿ ಬೇಕಿರುವ ಮಾಹಿತಿ ಆಗಿದೆ.

BPL ಕಾರ್ಡ್ ಮತ್ತು AAY ಕಾರ್ಡ್ ಹೊಂದಿರುವ ಕುಟುಂಬಗಳಿಗೆ ಅಡುಗೆ ಅನಿಲದ ಸಬ್ಸಿಡಿ, ವೈದ್ಯಕೀಯ ಮತ್ತು ಶೈಕ್ಷಣಿಕ ಶುಲ್ಕದಲ್ಲಿ ರಿಯಾಯಿತಿ, ಪ್ರಧಾನಮಂತ್ರಿ ಉಜ್ವಲ ಯೋಜನೆ ಸೇರಿದಂತೆ ಇನ್ನಷ್ಟು ಯೋಜನೆಗಳ ಪ್ರಯೋಜನ ಸಿಗುತ್ತಿದೆ. ರೇಷನ್ ಮೂಲಕವೇ ಆ ಕುಟುಂಬ ಅಥವಾ ಕುಟುಂಬದಲ್ಲಿರುವ ಸದಸ್ಯರ ಆದಾಯ ಪ್ರಮಾಣ ಪತ್ರ ಪಡೆಯಲು ಸಾಧ್ಯ.

ಹೀಗೆ ಇಷ್ಟೆಲ್ಲಾ ಅನುಕೂಲತೆಗಳು ಸಿಗುವುದರಿಂದ ಉಳ್ಳವರು ಕೂಡ ನಕಲಿ BPL ಮತ್ತು AAY ಕಾಡುಗಳನ್ನು ಮಾಡಿಸಿಕೊಂಡು ಇವುಗಳ ಪ್ರಯೋಜನವನ್ನು ಪಡೆಯುತ್ತಿದ್ದಾರೆ. ಇದರಿಂದ ಅರ್ಹರಿಗೆ ಈ ಪ್ರಯೋಜಗಳು ತಲುಪದೇ ಅನ್ಯಾಯವಾಗುತ್ತಿದೆ. ಇದನ್ನೆಲ್ಲಾ ಗಮನಿಸಿರುವ ಕೇಂದ್ರ ಸರ್ಕಾರವು ಈಗ ಇವುಗಳಿಗೆ ಕಡಿವಾಣ ಹಾಕಲು ಮುಂದಾಗಿದೆ. ಅದಕ್ಕಾಗಿ ರೇಷನ್ ಕಾರ್ಡ್ ಕೂಡ ಆಧಾರ್ ಕಾರ್ಡ್ ಲಿಂಕ್ ಕಡ್ಡಾಯ ಎನ್ನುವ ಅಸ್ತ್ರವನ್ನು ಪ್ರಯೋಗ ಮಾಡಿದೆ.

ಈಗಷ್ಟೇ ಕೇಂದ್ರ ಸರ್ಕಾರವು ಆದಾಯ ತೆರಿಗೆ ವಂಚನೆ ಮಾಡುವವರಿಗೆ ಕಡಿವಾಣ ಹಾಕಲು ಪಾನ್ ಕಾರ್ಡ್ ಜೊತೆ ಆಧಾರ್ ಕಾರ್ಡ್ ಲಿಂಕ್ ಮಾಡುವುದು ಕಡ್ಡಾಯ ಮಾಡಿತ್ತು ಈಗ ಹಾಗೆಯೇ ನಕಲಿ BPL ಮತ್ತು AAY ಉಳ್ಳುವವರನ್ನು ಹಾಗೂ ನಕಲಿ ಸದಸ್ಯರ ಹೆಸರನ್ನು ಕಾಡುಗಳಲ್ಲಿ ತೆಗೆದುಹಾಕಲು ರೇಷನ್ ಕಾರ್ಡ್ ಜೊತೆ ಆಧಾರ್ ಕಾರ್ಡ್ ಲಿಂಕ್ ಮಾಡುವುದನ್ನು ಕಡ್ಡಾಯ ಎಂದು ಹೇಳಿದೆ.

ಸರ್ಕಾರವು ಈ ಹಿಂದೆಯೇ ಇದನ್ನು ಹೇಳುತ್ತಿತ್ತಾದರೂ ಇದಕ್ಕೆ ಅಂತಿಮ ಗಡುವನ್ನಾಗಿ ಅಕಥ ಒತ್ತಡವನ್ನಾಗಲಿ ಹೇರಿರಲಿಲ್ಲ. ಆದರೆ ಈಗ ಶೀಘ್ರವಾಗಿ ಇದನ್ನು ಜಾರಿಗೆ ತರಬೇಕು ಎಂದು ಈಗ ಜುಲೈ 30ರ ಒಳಗೆ ಕುಟುಂಬದ ಎಲ್ಲಾ ಸದಸ್ಯರ ಹೆಸರಿಗೂ ಕೂಡ ಅವರವರ ಆಧಾರ್ ಕಾರ್ಡ್ ಲಿಂಕ್ ಆಗಿರಬೇಕು ಎಂದು ಘೋಷಣೆ ಮಾಡಿದೆ.

ಹಾಗಾಗಿ ತಪ್ಪದೆ ಪ್ರತಿಯೊಬ್ಬ BPL ಮತ್ತು AAY ಕಾರ್ಡ್ ಹೊಂದಿರುವ ಫಲಾನುಭವಿಗಳು ತಪ್ಪದೆ ಅವರ ಆಧಾರ್ ಕಾರ್ಡ್ ಅನ್ನು ರೇಷನ್ ಕಾರ್ಡ್ ಜೊತೆ ಲಿಂಕ್ ಮಾಡಬೇಕು. ರೇಷನ್ ಕಾರ್ಡ್ ಅಲ್ಲಿರುವ ಯಾವುದಾದರು ಸದಸ್ಯರ ಹೆಸರಿಗೆ ಆಧಾರ್ ಕಾರ್ಡ್ ಲಿಂಕ್ ಆಗಿಲ್ಲ ಎಂದರೆ ಅವರಿಗೆ ಸರ್ಕಾರದ ಯಾವುದೇ ಯೋಜನೆಯ ಪ್ರಯೋಜನಗಳು ಸಿಗುವುದಿಲ್ಲ.

ಒಂದು ವೇಳೆ ಒಂದು ರೇಷನ್ ಕಾರ್ಡಲ್ಲಿ ಯಾವುದೇ ಸದಸ್ಯರ ಹೆಸರಿಗೂ ಆಧಾರ್ ಕಾರ್ಡ್ ಲಿಂಕ್ ಮಾಡಿಸದೆ ಹೋದಲ್ಲಿ ರೇಷನ್ ಕಾರ್ಡೇ ರದ್ದಾಗುತ್ತದೆ. ಆದ್ದರಿಂದ ತಪ್ಪದೇ ಎಲ್ಲರೂ ಜೂನ್ 30ರ ಒಳಗೆ ಈ ಕೆಲಸವನ್ನು ಮಾಡಿ ಮತ್ತು ಈ ಮಾಹಿತಿಯನ್ನು ನಿಕಮ ಕುಟುಂಬದವರು ಹಾಗೂ ಸ್ನೇಹಿತರ ಜೊತೆಗೂ ಹಂಚಿಕೊಂಡು ಎಲ್ಲರಿಗೂ ಈ ವಿಷಯ ತಲುಪುವಂತೆ ಮಾಡಿ.

Leave a Comment

%d bloggers like this: