ಮೊಬೈಲ್ ಮೂಲಕ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸುವ ವೇಳಾಪಟ್ಟಿ ಚೆಕ್ ಮಾಡುವ ವಿಧಾನ.! ಈ ಟೈಮ್ ನಲ್ಲಿ ಮಾತ್ರ ನೀವು ಅರ್ಜಿ ಸಲ್ಲಿಸೋಕೆ ಸಾಧ್ಯ.

ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸುವ ಮಾರ್ಗಸೂಚಿಯನ್ನು ಸರ್ಕಾರ ತಿಳಿಸಿದೆ, ಕುಟುಂಬದ ಯಜಮಾನಿಯ ಆಧಾರ್ ಕಾರ್ಡ್ ಗೆ ಲಿಂಕ್ ಆಗಿರುವ ಮೊಬೈಲ್ ಇಂದ ಪಡಿತರ ಚೀಟಿ ಸಂಖ್ಯೆಯನ್ನು 8147500500 ಈ ಸಂಖ್ಯೆಗೆ SMS ಮಾಡಿದರೆ ಕೆಲವೇ ಸೆಕೆಂಡ್ ಗಳಲ್ಲಿ ಸರ್ಕಾರದಿಂದ ರಿಪ್ಲೈ ಬರುತ್ತದೆ ಅದರಲ್ಲಿ ನೀವು ಯಾವ ದಿನ ಹೋಗಿ ಅರ್ಜಿ ಸಲ್ಲಿಸಬೇಕು ಎನ್ನುವ ಮಾಹಿತಿ ಇರುತ್ತದೆ.

WhatsApp Group Join Now
Telegram Group Join Now

ಈ ಹಿಂದಿನ ಯೋಜನೆಗಳಲ್ಲಿ ಅರ್ಜಿ ಸಲ್ಲಿಸುವ ವೇಳೆ ಆದ ಸಮಸ್ಯೆಗಳು ಉಂಟಾಗಬಾರದು ಎನ್ನುವ ಕಾರಣಕ್ಕೆ ಒಂದು ದಿನಕ್ಕೆ 60 ಜನರಿಗೆ ಮಾತ್ರ ಅರ್ಜಿ ಸಲ್ಲಿಸಲು ಅವಕಾಶ ಮಾಡಿಕೊಡಲಾಗಿದೆ. ಆ 60 ಜನರ ಲಿಸ್ಟ್ ಅನ್ನು ಸರ್ಕಾರವು ಸೇವಾ ಕೇಂದ್ರಗಳಿಗೆ ಕಳುಹಿಸಿರುತ್ತದೆ. ಆ ದಿನ ಅವರಿಗೆ ಮಾತ್ರ ಅರ್ಜಿ ಸಲ್ಲಿಸಲು ಅವಕಾಶವಿರುತ್ತದೆ.

ಬಾಪೂಜಿ ಸೇವಾ ಕೇಂದ್ರ, ಗ್ರಾಮ ಒನ್, ಕರ್ನಾಟಕ ಒನ್ ಅಥವಾ ಬೆಂಗಳೂರು ಒನ್ ಕೇಂದ್ರಗಳಲ್ಲಿ ಅರ್ಜಿ ಸಲ್ಲಿಸಬಹುದು. ಇವುಗಳಲ್ಲಿ ನೀವು ಎಲ್ಲಿ ಅರ್ಜಿ ಸಲ್ಲಿಸಬೇಕು ಎನ್ನುವುದನ್ನು ನಿಮ್ಮ ಮೊಬೈಲ್ ಗೆ ಕಳುಹಿಸಿದ SMS ಅಲ್ಲಿ ತಿಳಿಸಲಾಗಿರುತ್ತದೆ. ನೀವು ಅರ್ಜಿ ಸಲ್ಲಿಸಬೇಕಾದ ದಿನಾಂಕ, ಸ್ಥಳ ಮತ್ತು ಸಮಯದ ಜೊತೆಗೆ ಸರ್ಕಾರದ ಯಾವ ಸೇವಾ ಕೇಂದ್ರದಲ್ಲಿ ಅರ್ಜಿ ಸಲ್ಲಿಸಬೇಕು ಎನ್ನುವ ವೇಳಾಪಟ್ಟಿಯನ್ನು ತಿಳಿಸಲಾಗಿರುತ್ತದೆ.

ಆದರೆ ಕೆಲವರಿಗೆ ಮೆಸೇಜ್ ಬರುತ್ತಿಲ್ಲ, ಇನ್ನು ಕೆಲವರು ಬಂದಿದ್ದ ಮೆಸೇಜ್ ಅನ್ನು ಮರೆತು ಡಿಲೀಟ್ ಮಾಡಿರಬಹುದು. ಮೊದಲಿಗೆ ನೋಂದಣಿಯಾಗಿ ವೇಳಾಪಟ್ಟಿ ಪಡೆದು ನಂತರ ಆ ಸಮಯದಲ್ಲೇ ಅರ್ಜಿ ಸಲ್ಲಿಸಬೇಕಾದ ಕಾರಣ ಇಂತಹ ಪರಿಸ್ಥಿತಿಯಲ್ಲಿ ನಿಮ್ಮ ವೇಳಾಪಟ್ಟಿ ಯಾವಾಗ ಎಂದು ತಿಳಿದುಕೊಳ್ಳಬೇಕಾದದ್ದು ಅನಿವಾರ್ಯ. ಹಾಗಾಗಿ ನೀವೀಗ ನಿಮ್ಮ ಮೊಬೈಲ್ ಮೂಲಕವೇ ನಿಮ್ಮ ವೇಳಾಪಟ್ಟಿ ಚೆಕ್ ಮಾಡಬಹುದಾದ ಆ ಸುಲಭ ವಿಧಾನದ ಬಗ್ಗೆ ಈ ಅಂಕಣದಲ್ಲಿ ತಿಳಿಸಿ ಕೊಡುತ್ತಿದ್ದೇವೆ.

ಅರ್ಜಿ ಸ್ಥಿತಿ ಚೆಕ್ ಮಾಡುವ ವಿಧಾನ

● ಮೊದಲಿಗೆ ಗೃಹಲಕ್ಷ್ಮಿ ಯೋಜನೆ ಅಧಿಕೃತ ವೆಬ್ಸೈಟ್ ಭೇಟಿ ಕೊಡಿ.

https://sevasindhugs1.karnataka.gov.in/gl-stat-sp/Slot_Track

ಈ ಮೇಲಿನ ಲಿಂಕ್ ಕ್ಲಿಕ್ ಮಾಡುವ ಮೂಲಕ ಡೈರೆಕ್ಟ್ ಆಗಿ ಗೃಹಲಕ್ಷ್ಮೀ ವೆಬ್ ಸೈಟ್ ಗೆ ಭೇಟಿ ಕೊಡಬಹುದು.
● ನಿಮ್ಮ ಪಡಿತರ ಚೀಟಿಯ 12 ಸಂಖ್ಯೆಗಳನ್ನು ನಮೂದಿಸಬೇಕು. ನಂತರ ಕೆಳಗಿನ ಭಾಗದಲ್ಲಿ ಕ್ಯಾಪ್ಚಾ ಇರುತ್ತದೆ ಅದನ್ನು ಎಂಟರ್ ಮಾಡಿ, ಸ್ಥಿತಿಯನ್ನು ಪರಿಶೀಲಿಸಿ ಎಂಬ ಆಯ್ಕೆಯ ಇರುತ್ತದೆ ಅದನ್ನು  ಕ್ಲಿಕ್ ಮಾಡಿ.

● ನಂತರ ಪುಟದಲ್ಲಿ, ಗೃಹಲಕ್ಷ್ಮಿ ಯೋಜನೆಗೆ ನೊಂದಣಿಯನ್ನು ಮಾಡಿಕೊಳ್ಳಲು ವೇಳಾಪಟ್ಟಿ ಎಂದು ಬರೆದಿರುತ್ತದೆ. ಅದರಲ್ಲಿ ನಿಮ್ಮ ರೇಷನ್ ಕಾರ್ಡ್ ಸಂಖ್ಯೆ ಕೂಡ ಇರುತ್ತದೆ ನೀವು ಯಾವ ಸ್ಥಳದಲ್ಲಿ, ಯಾವ ದಿನಾಂಕದಂದು ಯಾವ ಸಮಯದಲ್ಲಿ ಹೋಗಿ ಅರ್ಜಿ ಹಾಕಬಹುದು ಎನ್ನುವ ಮಾಹಿತಿ ನೀಡಲಾಗಿರುತ್ತದೆ.

● ಆ ವೇಳಾಪಟ್ಟಿಯ ಪ್ರಕಾರ ಕುಟುಂಬದ ಯಜಮಾನಿಯು ಅರ್ಜಿ ಸಲ್ಲಿಸಲು ಕೇಳಿರುವ ದಾಖಲೆಗಳಾದ ರೇಷನ್ ಕಾರ್ಡ್ ಪ್ರತಿ,  ಪತಿ-ಪತ್ನಿಯ ಆಧಾರ್ ಕಾರ್ಡ್ ಪ್ರತಿ, ಬ್ಯಾಂಕ್ ಪಾಸ್ ಬುಕ್ ವಿವರ ಮತ್ತು ಆಧಾರ್ ಕಾರ್ಡ್ ಗೆ ಲಿಂಕ್ ಆಗಿರುವ ಮೊಬೈಲ್ ಜೊತೆ ಹೋಗಿ, ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಹಾಕಬಹುದು. ಈ ರೀತಿ ಅರ್ಜಿ ಸಲ್ಲಿಸುವ ಕುಟುಂಬದ ಯಜಮಾನಿಗೆ ಆಗಸ್ಟ್ ತಿಂಗಳಿನಿಂದ ಪ್ರತಿ ತಿಂಗಳು 2000ರೂ. ಸಹಾಯಧನ ಬರುತ್ತದೆ. ಇಂತಹ ಉಪಯುಕ್ತ ಮಾಹಿತಿಯನ್ನು ನಿಮ್ಮ ಕುಟುಂಬದವರು ಹಾಗೂ ಸ್ನೇಹಿತರ ಜೊತೆಗೆ ತಪ್ಪದೆ ಹಂಚಿಕೊಳ್ಳಿ.

Leave a Comment

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now