ಅನೇಕ ವಿದ್ಯಾರ್ಥಿಗಳು ಮತ್ತು ಸರ್ಕಾರಿ ಉದ್ಯೋಗ ಆಕಾಂಕ್ಷಿಗಳು ಈ ರೀತಿ ಒಂದು ಸಮಸ್ಯೆಗೆ ಸಿಕ್ಕಿ ಹಾಕಿಕೊಂಡಿರುತ್ತಾರೆ. ಅದೇನೆಂದರೆ, ಜಾತಿ ಪ್ರಮಾಣ ಪತ್ರದಲ್ಲಿರುವ ಮಾಹಿತಿಯ ಬಗ್ಗೆ.ಯಾಕೆಂದರೆ ಮೀಸಲಾತಿ ವಿಷಯ ಬಂದಾಗ ಜಾತಿ ಪ್ರಮಾಣ ಪತ್ರ ಒಂದು ಅಧಿಕೃತ ದಾಖಲೆಯಾಗಿ ಕೆಲಸ ಮಾಡುತ್ತದೆ. ಆದರೆ ಶಾಲೆಗೆ ದಾಖಲಾದ ಸಮಯದಲ್ಲಿ ಈಗಾಗಲೇ ಜಾತಿ ಹೆಸರು ನೋಂದಣಿ ಆಗಿರುವುದರಿಂದ, ಶಾಲೆಯಿಂದ ಕೊಡುವ TCಯಲ್ಲಿ ಸಹ ಅದನ್ನೇ ನಮೂದಿಸಲಾಗುತ್ತದೆ.
ಅದರ ಆಧಾರದ ಮೇಲೆ ತಹಶೀಲ್ದಾರರು ಜಾತಿ ಪ್ರಮಾಣ ಪತ್ರವನ್ನು ಕೊಡುತ್ತಾರೆ. ಅದನ್ನು ಇಟ್ಟುಕೊಂಡು ವಿದ್ಯಾರ್ಥಿಗಳು ಶಾಲಾ ಕಾಲೇಜುಗಳಲ್ಲಿ ಸೀಟ್ ಪಡೆಯುತ್ತಾರೆ ಆದರೆ ನಂತರ ದಿನಗಳಲ್ಲಿ ಕೆಲವರಿಗೆ ಸಮಸ್ಯೆ ಆಗಿರುವುದು ಅರಿವಿಗೆ ಬರುತ್ತದೆ. ಅದೇನೆಂದರೆ ಅವರ ನಿಜವಾದ ಜಾತಿಯ ಬೇರೆ ಆಗಿರುತ್ತದೆ ಶಾಲಾ ದಾಖಲೆಗಳಲ್ಲಿ ಕೊಟ್ಟಿರುವ ಜಾತಿಯೇ ಬೇರೆ ಆಗಿರುತ್ತದೆ.
ಆ ಕಾರಣಕ್ಕಾಗಿ ತಹಶೀಲ್ದಾರರು ಕೊಟ್ಟ ಸರ್ಟಿಫಿಕೆಟ್ ಅಲ್ಲಿರುವ ಜಾತಿಯು ಬೇರೆ ಆಗಿರುತ್ತದೆ. ಹೀಗೆ ಒಂದಕ್ಕೊಂದು ಹೋಲಿಕೆ ಆಗದ ಕಾರಣ ಅವರ ಉದ್ಯೋಗ ಸಿಂಧುತ್ವಕ್ಕೆ ಬಂದಿದ್ದರು ಕೂಡ ಹೋಲ್ಡ್ ಆಗಬಹುದು. ಇಂತಹ ಸಮಯದಲ್ಲಿ ಅವರು ಕೋರ್ಟಿಗೆ ಹೋಗಿ ಡಿಗ್ರಿ ಪಡೆದುಕೊಂಡು ಬನ್ನಿ ಎಂದು ಒಂದು ಮಾತು ಹೇಳುತ್ತಾರೆ. ಆದರೆ ಈಗ ಅದು ಸಹ ಮಾನ್ಯವಾಗಿಲ್ಲ.
2015 ಮತ್ತು 2017ರಲ್ಲಿ ಪದೇಪದೇ ಈ ನಿಯಮಗಳಲ್ಲಿ ತಿದ್ದುಪಡಿ ಆಗಿದೆ. ಕೆಲವೊಮ್ಮೆ ಇವುಗಳ ತಿದ್ದುಪಡಿ ಮಾಡುವ ಅಧಿಕಾರವನ್ನು ತಹಶೀಲ್ದಾರ್ ಕಛೇರಿಗೆ ನೀಡಿದ್ದರೆ, ಕೆಲವೊಮ್ಮೆ ಜಿಲ್ಲಾಮಟ್ಟದಲ್ಲಿರುವ ಜಾತಿ ಪರಿಶೀಲನ ಸಮಿತಿಗೆ ಈ ಬಗ್ಗೆ ಅಧಿಕಾರ ಕೊಡಲಾಗಿದೆ. ಕೆಲವೊಮ್ಮೆ ಸಮಾಜ ಕಲ್ಯಾಣ ಇಲಾಖೆಗೆ ಇದರ ಜವಾಬ್ದಾರಿಯನ್ನು ಹೊರಸಿ ಕೊಡಲಾಗಿದೆ.
ವಿದ್ಯಾರ್ಥಿಗಳು ಅಥವಾ ಅಭ್ಯರ್ಥಿಗಳು ಈ ರೀತಿ ತಮ್ಮ ಶಾಲಾ ದಾಖಲೆಗಳಲ್ಲಿ ತೊಂದರೆಗಳಾದಾಗ ಎಲ್ಲಿ ಹೋಗಬೇಕು ಯಾವ ರೀತಿ ಇದನ್ನು ಸರಿಪಡಿಸಿಕೊಳ್ಳಬೇಕು ಎನ್ನುವುದರ ಬಗ್ಗೆ ಗೊಂದಲಕ್ಕೊಳಗಾಗುತ್ತಾರೆ. ಸರ್ಕಾರದಿಂದ ಇದುವರೆಗೆ ಹೊರಬಿದ್ದಿರುವ ಎಲ್ಲಾ ಸುತ್ತೋಲೆಗಳ ಪ್ರಕಾರ ಸರ್ಕಾರ ಹೇಳುವುದು ಏನೆಂದರೆ, ತಮಿಳುನಾಡಿನ ಗುರುಮೂರ್ತಿ ಎನ್ನುವ ಪ್ರಕರಣದಲ್ಲಿ ನ್ಯಾಯಾಲಯವು ಸ್ಪಷ್ಟವಾಗಿ ತಿಳಿಸಿತು.
ಇಂತಹ ಯಾವುದೇ ಕೇಸ್ಗಳು ಬಂದಾಗ ಅಥವಾ ಜಾತಿ ಸಂಬಂಧಿಸಿದ ಸಮಸ್ಯೆಗಳು ಬಂದಾಗ ಅಲ್ಲಿನ ಸಿವಿಲ್ ಕೋರ್ಟ್ ಆ ವಿಷಯದಲ್ಲಿ ತಲೆ ಹಾಕುವಂತಿಲ್ಲ, ಅವುಗಳಿಗೆ ಅದನ್ನು ತೀರ್ಪು ಕೊಡುವ ಹಕ್ಕು ಬರುವುದಿಲ್ಲ ಎಂದು ಹೇಳಿತ್ತು. ನಂತರದ ದಿನಗಳಲ್ಲಿ ಅವುಗಳನ್ನು ತಿದ್ದುಪಡಿಗಾಗಿ ಬೇರೆಲ್ಲಿ ಹೋಗಬೇಕು ಎನ್ನುವ ಗೊಂದಲ ಶುರುವಾಯಿತು.
ನಂತರದ ದಿನಗಳಲ್ಲಿ ಸರ್ಕಾರ ಮತ್ತೊಂದು ಸುತ್ತೋಲೆಯನ್ನು ಹೊರಡಿಸಿತು. ಜಿಲ್ಲಾ ಮಟ್ಟದ ಜಾತಿ ಪರಿಶೀಲನ ಸಮಿತಿಯು ತಹಶೀಲ್ದಾರರು ನೀಡಿದ ಜಾತಿ ಪ್ರಮಾಣ ಪತ್ರಗಳನ್ನು ಪರಿಶೀಲಿಸಿ ಅದಕ್ಕೆ ಸಿಂಧುತ್ವ ಕೊಡಬಹುದು ಹೊರತು ಶಾಲಾ ಕಾಲೇಜುಗಳಲ್ಲಿ ಇರುವ ಜಾತಿಗಳನ್ನು ತಿದ್ದುವ ಅಧಿಕಾರ ಅದಕ್ಕೆ ಇಲ್ಲ ಎಂದು ತಿಳಿಸಿತು. ಮತ್ತೊಂದು ಸುತ್ತೋಲೆಯಲ್ಲಿ ತಹಶೀಲ್ದಾರ್ ಕಚೇರಿಗಳಲ್ಲಿ ಈ ರೀತಿ ಜಾತಿ ಪ್ರಮಾಣ ಪತ್ರವನ್ನು ನೀಡುವಾಗ ಬರಿ ಶಾಲಾ ದಾಖಲೆಗಳನ್ನು ಆಧರಿಸಿ ಕೊಡಬಾರದು.
ಅಲ್ಲಿ ಸ್ಥಳ ಮಹಜರು ಕೂಡ ಮುಖ್ಯವಾಗುತ್ತದೆ. ಇದರೊಂದಿಗೆ ಇತರ ದಾಖಲೆಗಳನ್ನು ಪರಿಶೀಲನೆ ಮಾಡುವುದು ಮುಖ್ಯವಾಗುತ್ತದೆ. ಇದನ್ನೆಲ್ಲ ಮಾಡಿದ ಬಳಿಕ ಜಾತಿ ಪ್ರಮಾಣ ಪತ್ರ ಕೊಟ್ಟಾಗ ಈ ರೀತಿ ಸಮಸ್ಯೆಗಳು ಎದುರಾಗುವುದು ತಪ್ಪುತ್ತದೆ ಎಂದು ತೀರ್ಪು ನೀಡಿದೆ. ಈ ವಿಚಾರವಾಗಿ ಪದೇ ಪದೇ ಹೊಸ ಹೊಸ ಅಪ್ಡೇಟ್ಗಳು ಹೊರಬಿದ್ದಿದ್ದು ಇವುಗಳ ಬಗ್ಗೆ ತಿಳಿದುಕೊಳ್ಳಲು ಈ ವಿಡಿಯೋವನ್ನು ಪೂರ್ತಿಯಾಗಿ ನೋಡಿ.