ಪ್ರತಿಯೊಬ್ಬರಿಗೂ ಕೂಡ ಊಟದ ಮದ್ಯ ನೀರನ್ನು ಕುಡಿಯಬೇಕೇ ಅಥವಾ ಕುಡಿಯ ಬಾರದೆ ಎನ್ನುವಂತಹ ಪ್ರಶ್ನೆ ಇದ್ದೇ ಇರುತ್ತದೆ? ಅದೇ ವಿಷಯವಾಗಿ ಈ ದಿನ ಕೆಲವೊಂದಷ್ಟು ಮಾಹಿತಿಗಳನ್ನು ತಿಳಿದು ಕೊಳ್ಳುತ್ತಾ ಹೋಗೋಣ. ಸಾಮಾನ್ಯವಾಗಿ ನಿಮಗೆಲ್ಲರಿಗೂ ತಿಳಿದಿರು ವಂತೆ ಬಹಳ ಹಿಂದಿನ ಕಾಲದಿಂದಲೂ ಕೂಡ ಮನೆಗಳಲ್ಲಿ ಊಟ ಮಾಡುವುದಕ್ಕೂ ಮುನ್ನ ಊಟಕ್ಕೆ ಕುಳಿತ ತಕ್ಷಣ ಮನೆಯಲ್ಲಿರುವಂತಹ ಹೆಣ್ಣು ಮಕ್ಕಳು ಮೊದಲು ಕುಡಿಯುವ ನೀರನ್ನು ತಂದು ಇಡುತ್ತಿದ್ದರು.
ಹಾಗೂ ಅದಕ್ಕೆ ಒಂದು ಮಹತ್ವಪೂರ್ಣವಾದ ಅಂಶ ಇದೆ ಅದು ಏನೆಂದರೆ ಹೊರಗಡೆಯಿಂದ ಬಿಸಿಲಿನಿಂದ ಬಂದಿರುತ್ತಾರೆ ಬಾಯಾರಿಕೆ ಯಾಗಿರುತ್ತದೆ ಮೊದಲು 2 ರಿಂದ 3 ಬಾರಿ ನೀರನ್ನು ಕುಡಿಯುವುದ ರಿಂದ ಅವರ ಬಾಯಾರಿಕೆ ಕಡಿಮೆಯಾಗುತ್ತದೆ ನಂತರ ಅವರು ಊಟವನ್ನು ಮಾಡುವುದಕ್ಕೆ ಸರಾಗ ವಾಗುತ್ತದೆ ಎನ್ನುವ ಉದ್ದೇಶದಿಂದ ಈ ವಿಧಾನವನ್ನು ಬಹಳ ಹಿಂದಿನ ಕಾಲದಿಂದಲೂ ಕೂಡ ಅನುಸರಿಸುತ್ತಿದ್ದಾರೆ
ಆದರೆ ಇತ್ತೀಚಿನ ದಿನಗಳಲ್ಲಿ ಕೆಲವೊಬ್ಬರು ಹೇಳುವುದರ ಪ್ರಕಾರ ಊಟವನ್ನು ಮಾಡುವ ಮುಂಚೆ ಹಾಗೂ ಊಟದ ಮಧ್ಯದಲ್ಲಿ ಹಾಗೂ ಊಟ ಆದ ನಂತರ ಹೆಚ್ಚು ನೀರನ್ನು ಕುಡಿಯಬಾರದು ಎಂದು ಹೇಳುತ್ತಾರೆ. ಆದರೆ ಅದು ಯಾವುದೇ ರೀತಿಯಲ್ಲೂ ಸರಿಯಾದ ಮಾಹಿತಿ ಅಲ್ಲ, ಬದಲಿಗೆ ಅದು ತಪ್ಪು ಮಾಹಿತಿಯಾಗಿದೆ. ಆದ್ದರಿಂದ ಈ ವಿಷಯವಾಗಿ ಪ್ರತಿಯೊಬ್ಬರೂ ಕೂಡ ಒಳ್ಳೆಯ ಮಾಹಿತಿಗಳನ್ನು ತಿಳಿದು ಕೊಂಡಿರುವುದು ಬಹಳ ಮುಖ್ಯವಾಗಿರುತ್ತದೆ.
ಹಾಗೂ ನಿಮ್ಮ ಆರೋಗ್ಯದ ದೃಷ್ಟಿಯಿಂದ ಈ ವಿಧಾನವನ್ನು ಅನುಸರಿಸುವುದು ಕೂಡ ಬಹಳ ಮುಖ್ಯವಾಗಿರುತ್ತದೆ. ಹಾಗಾದರೆ ಊಟದ ಮುಂಚೆ ನೀರನ್ನು ಕುಡಿಯುವುದರಿಂದ ಆಗುವ ಪ್ರಯೋಜನಗಳೇನು ಎಂದು ನೋಡುವುದಾದರೆ. ಪ್ರತಿಯೊಬ್ಬರಿಗೂ ತಿಳಿದಿರುವಂತೆ ಪ್ರತಿಯೊಬ್ಬ ಮನುಷ್ಯನ ದೇಹದಲ್ಲಿ ಸುಮಾರು 70% ನೀರು ಇರುವುದರಿಂದ ಆ ಮನುಷ್ಯ ಆರೋಗ್ಯವಾಗಿ ಇರುತ್ತಾನೆ ಎಂದು ಹೇಳುತ್ತಾರೆ.
ಅದೇ ರೀತಿಯಾಗಿ ಮನುಷ್ಯನಿಗೆ ನೀರಿನ ಅವಶ್ಯಕತೆಯೂ ಕೂಡ ಅಷ್ಟೇ ಅವಶ್ಯಕವಾಗಿರುತ್ತದೆ ಊಟದ ಮುಂಚೆ ನೀರನ್ನು ಕುಡಿಯುವುದರಿಂದ ಹೊಟ್ಟೆಯಲ್ಲಿರುವ ಎಲ್ಲಾ ಅಂಗಗಳು ಕೂಡ ಕ್ರಿಯಾಶೀಲವಾಗುತ್ತದೆ ಹಾಗೂ ಆಹಾರವನ್ನು ಸೇವಿಸುವುದಕ್ಕೆ ನಾವು ಪ್ರಚೋದನೆ ಕೊಟ್ಟಂತೆ ಆಗುತ್ತದೆ ಆದ್ದರಿಂದ ಕಡಿಮೆ ಪ್ರಮಾಣದಲ್ಲಿ ನೀರನ್ನು ಕುಡಿಯುವುದರಿಂದ ಯಾವುದೇ ರೀತಿಯ ತೊಂದರೆ ಉಂಟಾಗುವುದಿಲ್ಲ.
ಹಾಗೂ ಊಟದ ಮದ್ಯ ಸಮಯದಲ್ಲಿ ನೀರನ್ನು ಕುಡಿಯುವುದು ಎಷ್ಟರ ಮಟ್ಟಿಗೆ ಸರಿ ಅಥವಾ ತಪ್ಪು ಎಂದು ನೋಡುವುದಾದರೆ ಮಧ್ಯದ ಸಮಯದಲ್ಲಿ ನೀರನ್ನು ಕುಡಿಯಲೇ ಬೇಕು ಅವಶ್ಯಕತೆ ಎಂದರೆ ಮಾತ್ರ ಕುಡಿಯುವುದು ಉತ್ತಮ ಬದಲಿಗೆ ಕುಡಿಯುವುದರಿಂದ ಉಪಯೋಗವಾಗುತ್ತದೆ ಎಂಬ ನಿಯಮ ಎಲ್ಲೂ ಕೂಡ ಇಲ್ಲ ಹಾಗೂ ಊಟ ಆದ ನಂತರ ನೀರನ್ನು ಕುಡಿಯಬಾರದು ಎರಡು ಗಂಟೆ ಬಿಟ್ಟು ನಂತರ ಕುಡಿಯಬೇಕು ಎಂದು ಕೆಲವರು ಹೇಳುತ್ತಿರುತ್ತಾರೆ.
ಆದರೆ ಅದು ತಪ್ಪು, ಪ್ರತಿಯೊಬ್ಬರೂ ಕೂಡ ಊಟ ಆದ ನಂತರ ನೀರನ್ನು ಕುಡಿಯುವುದು ಅವಶ್ಯಕವಾಗಿರುತ್ತದೆ ಏಕೆಂದರೆ ಅವನು ತಿಂದಂತಹ ಆಹಾರ ಸರಿಯಾದ ಕ್ರಮದಲ್ಲಿ ಜೀರ್ಣವಾಗಬೇಕು ಎಂದರೆ ನೀರಿನ ಅವಶ್ಯಕತೆ ಕಡ್ಡಾಯವಾಗಿ ಬೇಕೆಬೇಕು. ಆದ್ದರಿಂದ ಪ್ರತಿಯೊಬ್ಬರೂ ಕೂಡ ಸ್ವಲ್ಪಮಟ್ಟಿಗೆ ಆಹಾರವನ್ನು ಕಡಿಮೆ ತಿಂದು ನಂತರ ಒಂದು ಲೋಟ ನೀರನ್ನು ಕುಡಿಯುವುದು ಉತ್ತಮ ಇದರಿಂದ ನಿಮಗೆ ಒಳ್ಳೆಯ ಆರೋಗ್ಯ ಹೆಚ್ಚಾಗುತ್ತದೆ.
ಜೊತೆಗೆ ನೀವು ತಿಂದಂತಹ ಆಹಾರ ಸರಿ ಯಾದ ರೀತಿಯಲ್ಲಿ ಜೀರ್ಣವಾಗಿ ನಿಮ್ಮ ಜೀರ್ಣಕ್ರಿಯೆ ಕ್ರಿಯಾಶೀಲ ವಾಗಿರುತ್ತದೆ ಆದರೆ ಊಟವನ್ನು ಕಡಿಮೆ ಮಾಡಿ ನೀರು ಕುಡಿಯುವುದು ಉತ್ತಮ ಹೆಚ್ಚಾಗಿ ಆಹಾರ ತಿಂದು ನೀರು ಕುಡಿಯುವುದು ತಪ್ಪು. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.