ಆಸ್ತಿ ಹಂಚುವಾಗ, ಮದುವೆ ಮಾಡಿಕೊಟ್ಟ ಹೆಣ್ಣು ಮಗಳು ಮ.ರ.ಣ ಹೊಂದಿದ್ದರೆ ಆ ಆಸ್ತಿ ಯಾರಿಗೆ ಸೇರುತ್ತೆ ಗೊತ್ತ.? ತವರು ಮನೆಯಿಂದ ಬಂದ ಆಸ್ತಿ.!

ಆಸ್ತಿ ವಿಚಾರಕ್ಕೆ ಸಂಬಂಧಿಸಿದಂತೆ ಹಲವಾರು ತೀರ್ಮಾನಗಳು ಕೋರ್ಟ್ ನಲ್ಲಿ ನಡೆಯುತ್ತಿರುತ್ತದೆ. ಅದೇ ರೀತಿಯಾಗಿ ಈ ದಿನ ಒಂದು ಉದಾಹರಣೆಯನ್ನು ತೆಗೆದುಕೊಳ್ಳುತ್ತಾ ಮೇಲೆ ಇರುವ ಪ್ರಶ್ನೆಗೆ ಉತ್ತರವನ್ನು ಈ ಕೆಳಗಿನಂತೆ ತಿಳಿದುಕೊಳ್ಳುತ್ತಾ ಹೋಗೋಣ. ಉದಾಹರಣೆಗೆ ಮೂರು ಜನ ತಂಗಿಯರು ಇದ್ದು ಒಬ್ಬ ಅಣ್ಣ ಇದ್ದಂತಹ ಸಮಯದಲ್ಲಿ ಅವರ ತಂದೆಯ ಆಸ್ತಿಯನ್ನು ಆ ನಾಲ್ಕು ಜನರು ಕೂಡ ಸಮನಾಗಿ ಪಾಲನ್ನು ತೆಗೆದುಕೊಳ್ಳಬೇಕು.

ಆ ಸಂದರ್ಭದಲ್ಲಿ ಅವರ ತಂದೆಯ ಆಸ್ತಿ ಹೆಣ್ಣು ಮಕ್ಕಳಿಗೆ ಮತ್ತು ಗಂಡು ಮಗನಿಗೆ ಸಮನಾದ ಪಾಲನ್ನು ಕೊಡಲೇಬೇಕು ಹಾಗೇನಾದರೂ ಆ ಆಸ್ತಿಯಲ್ಲಿ ಗಂಡುಮಗ ಹೆಣ್ಣು ಮಕ್ಕಳಿಗೆ ಕೊಡುವುದಿಲ್ಲ ಅಥವಾ ನನಗೆ ಅದನ್ನು ಬಿಟ್ಟು ಕೊಡಿ ನಾನು ಅದಕ್ಕೆ ಇಂತಿಷ್ಟು ಎಂದು ನಿಮಗೆ ಹಣವನ್ನು ಕೊಡುತ್ತೇನೆ ಎಂದು ಹೇಳಿದರೆ, ಆ ಹೆಣ್ಣು ಮಕ್ಕಳು ಒ ಪ್ಪಿ ಅವರು ಕೊಟ್ಟಂತಹ ಹಣವನ್ನು ಪಡೆದು ಕೊಂಡರೆ ಮಾತ್ರ ಅಷ್ಟು ಆಸ್ತಿ ಅವರ ಅಣ್ಣನಿಗೆ ಹೋಗುತ್ತದೆ.

ಬದಲಿಗೆ ಅವರ ತಂಗಿಯರು ತಂದೆಯ ಆಸ್ತಿಯಲ್ಲಿ ಸಮನಾಗಿ ನನಗೆ ಪಾಲು ಬೇಕೇ ಬೇಕು ಎಂದು ಕುಳಿತರೆ ಆಸ್ತಿಯನ್ನು ಗಂಡು ಮಗ ಸಂಪೂರ್ಣವಾಗಿ ತಾನು ತೆಗೆದುಕೊಳ್ಳುವಂತೆ ಬರುವುದಿಲ್ಲ. ಹಾಗೇನಾದರೂ ಅವನು ತನ್ನ ಆಸ್ತಿಯನ್ನು ಸಂಪೂರ್ಣವಾಗಿ ತಾನೆ ಉಳಿಸಿಕೊಳ್ಳಬೇಕು ಎಂದರೆ ಅವರ ತಂಗಿಯರಿಗೆ ಈಗಿನ ಸಮಯದಲ್ಲಿ ಆ ಭೂಮಿಯ ಬೆಲೆ ಎಷ್ಟು ಇರುತ್ತದೆಯೋ ಅಷ್ಟು ಹಣವನ್ನು ಅವರಿಗೆ ಕೊಟ್ಟು ಅವರ ಸಂಪೂರ್ಣವಾಗಿ ಒಪ್ಪಿ ಅದಕ್ಕೆ ಸಹಿಯನ್ನು ಹಾಕಿ ಕೊಡುವುದರ ಮೂಲಕ ರಿಜಿಸ್ಟರ್ ಮಾಡಿಕೊಡುವುದರ ಮೂಲಕ ನೀವು ಅದನ್ನು ಸಂಪೂರ್ಣವಾಗಿ ಪಡೆಯಬಹುದು.

ಆದರೆ ಅದರಲ್ಲಿ ಒಬ್ಬರು ಒಪ್ಪಿ ಮತ್ತೊಬ್ಬರು ಒಪ್ಪಲಿಲ್ಲ ಎಂದರು ಕೂಡ ಅಷ್ಟು ಆಸ್ತಿ ಸಂಪೂರ್ಣವಾಗಿ ನಿಮಗೆ ಸೇರುವುದಿಲ್ಲ. ಹಾಗೇ ನಾದರೂ ನಿಮ್ಮ ಮೂರು ಜನ ತಂಗಿಯರಲ್ಲಿ ಒಬ್ಬರು ತೀರಿ ಹೋದರೆ ಆ ಆಸ್ತಿ ನನಗೆ ಬರಬೇಕು ಎಂದು ಗಂಡು ಮಗ ಅಂದರೆ ಅಣ್ಣ ವಾದ ಮಾಡುತ್ತಿದ್ದರೆ ಆ ಆಸ್ತಿ ಅವನಿಗೆ ಬರುವುದಿಲ್ಲ. ಬದಲಿಗೆ ಆ ಹೆಣ್ಣು ಮಗಳ ಗಂಡ ಇದ್ದರೆ ಹಾಗೂ ಅವರ ಮಕ್ಕಳಿದ್ದರೆ ಅವರಿಗೆ ನಾಲ್ಕು ಭಾಗದಲ್ಲಿ ಒಂದು ಭಾಗ ಹೋಗುತ್ತದೆ.ಮ ಆದರೆ ಗಂಡನಿಗೆ ಮತ್ತು ಮಗನಿಗೆ ಬೇರೆ ಭಾಗe ಬರುವುದಿಲ್ಲ.

ಹಾಗೇನಾದರೂ ಅವರು ಭಾಗ ಮಾಡಿಕೊಳ್ಳಬೇಕು ಎಂದರೆ ಆ ತಂದೆ ಮಗ ಆಸ್ತಿಯಲ್ಲಿ ಭಾಗ ಮಾಡಿಕೊಳ್ಳುವಾಗ ಭಾಗ ಮಾಡಿಕೊಳ್ಳಬೇಕೆ ಹೊರತು. ಈ ಸಂದರ್ಭದಲ್ಲಿ ನಾಲ್ಕನೇ ಒಂದು ಭಾಗವನ್ನು ಮಾತ್ರ ಪಡೆದು ಕೊಳ್ಳುವ ಹಕ್ಕನ್ನು ಹೊಂದಿರುತ್ತಾರೆ. ಅದೇ ರೀತಿ ಗಂಡು ಮಕ್ಕಳಿಗೂ ಕೂಡ ಇದೇ ರೀತಿಯ ಕಾನೂನು ಅನ್ವಯಿಸುತ್ತದೆ ಒಟ್ಟಾರೆಯಾಗಿ ಯಾರೇ ಆಗಲಿ ಹೆಣ್ಣು ಮಕ್ಕಳು ತಂದೆ ಆಸ್ತಿಯನ್ನು ಬೇಡ ನೀವೇ ಇಟ್ಟುಕೊಳ್ಳಿ.

ಎಂದು ಹೇಳಿ ಅವರು ಸಹಿ ಹಾಕಿ ಕೊಟ್ಟರೆ ಮಾತ್ರ ಅದು ಅವರ ತಂದೆಯ ಮನೆಯಲ್ಲಿಯೇ ಅಂದರೆ ಅವರ ಅಣ್ಣ ತಮ್ಮಂದಿರಿಗೆ ಆಸ್ತಿ ಸೇರುತ್ತದೆ. ಆದ್ದರಿಂದ ಮೇಲೆ ಹೇಳಿದ ವಿಷಯಕ್ಕೆ ಈ ದಿನ ಸಂಪೂರ್ಣವಾದ ಉತ್ತರ ಇಲ್ಲಿದೆ. ಆದ್ದರಿಂದ ಈ ವಿಷಯವಾಗಿ ಪ್ರತಿಯೊಬ್ಬರೂ ಕೂಡ ತಿಳಿದು ಕೊಂಡಿರುವುದು ಬಹಳ ಮುಖ್ಯವಾಗಿರುತ್ತದೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

Leave a Comment

%d bloggers like this: