ದಾನ, ವಿಭಾಗ, ಕ್ರಯ ಅಥವಾ ವೀಲ್ ಮೂಲಕ ಒಬ್ಬ ಹೆಸರಿನಲ್ಲಿರುವ ಆಸ್ತಿಯು ಮತ್ತೊಬ್ಬರ ಹೆಸರಿಗೆ ವರ್ಗಾವಣೆ ಆಗುತ್ತದೆ. ಹೀಗೆ ಈ ಮೇಲೆ ತಿಳಿಸಿದ ಯಾವುದೇ ವಿಧಾನದಿಂದ ಆಸ್ತಿ ಹಕ್ಕು ವರ್ಗಾವಣೆ ಆಗುವಾಗಲೂ ಆಸ್ತಿಯ ಹಕ್ಕು ವರ್ಗಾವಣೆ ಆಗುವುದರ ಕುರಿತು ನಿಮ್ಮದೇನಾದರೂ ತಕರಾರುಗಳು ಇದ್ದರೆ ಅದಕ್ಕೆ ಅರ್ಜಿ ಸಲ್ಲಿಸಬಹುದು.
ಈ ರೀತಿಯ ತಕರಾರು ಅರ್ಜಿಗಳನ್ನು ಎಲ್ಲಿ ಹೇಗೆ ಸಲ್ಲಿಸಬೇಕು ಮತ್ತೆ ಈ ಪ್ರಕ್ರಿಯೆ ಹೇಗೆ ನಡೆಯುತ್ತದೆ ಎನ್ನುವ ಮಾಹಿತಿಯು ಪ್ರತಿಯೊಬ್ಬ ರೈತನು ಕೂಡ ತಿಳಿದುಕೊಳ್ಳಲೇಬೇಕಾದ ಒಂದು ಅಗತ್ಯ ಮಾಹಿತಿ ಆಗಿದೆ. ಈ ಕಾರಣಕ್ಕಾಗಿ ಇಂದು ಈ ಅಂಕಣದಲ್ಲಿ ನಾವು ತಕರಾರು ಅರ್ಜಿ ಸಲ್ಲಿಸುವುದು ಹೇಗೆ ಮತ್ತು ಇದು ಹೇಗೆ ನಡೆಯುತ್ತದೆ? ಯಾರು ಅರ್ಜಿ ಸಲ್ಲಿಸಬಹುದು ಮತ್ತು ಎಂತಹ ಸಮಯದಲ್ಲಿ ಅರ್ಜಿ ಸಲ್ಲಿಸಬಹುದು ಎನ್ನುವ ವಿಷಯದ ಬಗ್ಗೆ ಪ್ರಮುಖ ಮಾಹಿತಿಯನ್ನು ಹಂಚಿಕೊಳ್ಳುತ್ತಿದ್ದೇವೆ.
ಈ ಸುದ್ದಿ ನೋಡಿ:- ರೈತರ ಖಾತೆಗೆ ಬಂತು ಬರ ಪರಿಹಾರ ಉಚಿತ ರೂ.2,000 ಹಣ, ನಿಮ್ಮ ಮೊಬೈಲ್ ನಲ್ಲೇ ಚೆಕ್ ಮಾಡಿ.! ಹಣ ಬರದೇ ಇದ್ದವರು ಚಿಂತೆ ಮಾಡಬೇಡಿ ಈ ದಿನಾಂಕದಂದು ನಿಮಗೂ ಬರುತ್ತೆ.!
ರಿಜಿಸ್ಟರ್ ಮಾಡಲಾದ ಎಲ್ಲಾ ಕಡತಗಳು ಕೂಡ ಭೂಮಿ ಕೇಂದ್ರದ ಮೂಲಕವೇ ಮ್ಯೂಟೇಶನ್ ಗೆ ಒಳಪಡುತ್ತವೆ. ಆಗ ಸಂಬಂಧ ಪಟ್ಟ ಗ್ರಾಮ ಲೆಕ್ಕಾಧಿಕಾರಿಗಳು (ತಲಾಟಿ) ತಕರಾರು ಅಥವಾ ಆಕ್ಷೇಪಣೆಗಾಗಿ J ಫಾರಂ ಮೂಲಕ 21 ದಿನಗಳ ಸಾರ್ವಜನಿಕ ಪ್ರಚಾರ ನಡೆಸುತ್ತಾರೆ.
ಗೊತ್ತು ಪಡಿಸಿದ ಇಷ್ಟು ದಿನದ ಒಳಗೆ ನೊಂದ ರೈತರು ಆಸ್ತಿಗೆ ಸಂಬಂಧಿಸಿದಂತೆ ತಮ್ಮಲ್ಲಿ ಲಭ್ಯವಿರುವ ಸೂಕ್ತ ದಾಖಲೆಗಳೊಂದಿಗೆ ಒಂದು ಬಿಳಿ ಹಾಳೆಯಲ್ಲಿ ತರಕಾರು ಅರ್ಜಿಯನ್ನು ಬರೆದು ತಮ್ಮ ಮನವಿಯನ್ನು ಗ್ರಾಮ ಲೆಕ್ಕಾಧಿಕಾರಿ ಅಂದರೆ ತಲಾಟಿಯವರಿಗೆ ಸಲ್ಲಿಸಬಹುದು.
ಈ ಸುದ್ದಿ ನೋಡಿ:- ಹೊಸ ಡಿಜಿಟಲ್ ವೋಟರ್ ಐಡಿ ಕಾರ್ಡ್ ಪಡೆಯುವ ವಿಧಾನ.! ಮೊಬೈಲ್ ನಲ್ಲಿ ಅಪ್ಲೈ ಮಾಡಿ ಪೋಸ್ಟ್ ಮೂಲಕ ನಿಮ್ಮ ಮನೆಗೆ ಬರಲಿದೆ.!
ತಕರಾರು ಅರ್ಜಿ ಸಲ್ಲಿಕೆಯಾದ ನಂತರ ನಡೆಯುವ ಪ್ರಕ್ರಿಯೆ:-
* ತಕರಾರು ಅರ್ಜಿ ಸಲ್ಲಿಕೆಯಾದ ನಂತರದ ಪ್ರಕ್ರಿಯೆ ಹೇಗೆ ನಡೆಯುತ್ತದೆ, ಇದು ಹೇಗೆ ಬಗೆಹರಿಯುತ್ತದೆ ಎಂದರೆ ಮಾನ್ಯ ಗ್ರಾಮ ಲೆಕ್ಕಾಧಿಕಾರಿಗಳು ಆ ದೂರುದಾರರಿಂದ ತಕರಾರು ಅರ್ಜಿ ಸ್ವೀಕರಿಸಿ ವಿವಾಧಾತ್ಮಕ ಪ್ರಕರಣ ದಾಖಲಿಸಿ ಮುಂದಿನ ಕ್ರಮಕ್ಕಾಗಿ ತಹಶೀಲ್ದಾರ್ ಕಚೇರಿಗೆ ಅದನ್ನು ಕಳುಹಿಸಿಕೊಡುತ್ತಾರೆ.
* ತಹಶೀಲ್ದಾರ್ ಕಚೇರಿಯಿಂದ ತಕರಾರು ಅರ್ಜಿ ಸಲ್ಲಿಸಿರುವವರಿಗೂ ಮತ್ತು ತಕರಾರು ಅರ್ಜಿ ಸಲ್ಲಿಕೆ ಆಗಿರುವ ಆ ಆಸ್ತಿಯನ್ನು ರಿಜಿಸ್ಟರ್ ಮಾಡಿಸಿಕೊಂಡಿರುವವರಿಗೂ ಇದರ ಸಂಬಂಧ ನೋಟಿಸ್ ಬರುತ್ತದೆ
* ನೋಟಿಸ್ ನಲ್ಲಿ ಒಂದು ದಿನಾಂಕವನ್ನು ಗೊತ್ತು ಪಡಿಸಲಾಗಿರುತ್ತದೆ ಆ ದಿನದಂದು ಮಾನ್ಯ ತಹಶೀಲ್ದಾರ್ ಪೀಠದಲ್ಲಿ ದೂರುದಾರರು ಹಾಗೂ ಅರ್ಜಿದಾರರು ಸೂಕ್ತ ದಾಖಲೆಗಳೊಂದಿಗೆ ತಮ್ಮ ಅಹವಾಲು ಹೇಳಬೇಕಾಗಿ ಬರುತ್ತದೆ.
ಈ ಸುದ್ದಿ ನೋಡಿ:- ಈ ಮಹಿಳೆಯರ ಗೃಹಲಕ್ಷ್ಮಿ ಹಣ ಮತ್ತು ಅಕ್ಕಿ ಹಣ ಬಂದ್, 5 ಲಕ್ಷ BPL ಕಾರ್ಡ್ ಕ್ಯಾನ್ಸಲ್, ಹೊಸ ಪಟ್ಟಿ ಬಿಡುಗಡೆ ನಿಮ್ಮ ಕಾರ್ಡ್ ಸ್ಟೇಟಸ್ ಮೊಬೈಲ್ ನಲ್ಲಿಯೇ ಈ ರೀತಿ ಚೆಕ್ ಮಾಡಿಕೊಳ್ಳಿ.!
* ಇಲ್ಲಿ ಅಹವಾಲನ್ನು ತಾವೇ ಹೇಳಬಹುದು ಅಥವಾ ತಮ್ಮ ವಕೀಲರ ಮೂಲಕ ಕೂಡ ವಾದ ಮಾಡಿಸಬಹುದು
* ಮಾನ್ಯ ತಹಶೀಲ್ದಾರರು ಕಾಲ ಕಾಲಕ್ಕೆ ಇಬ್ಬರನ್ನು ವಿಚಾರಣೆ ಮಾಡಿ ಅಂತಿಮವಾಗಿ ವಿಚಾರಣೆಯೊಂದಿಗೆ ಆದೇಶಕ್ಕಾಗಿ ಇಡಲಾಗುತ್ತದೆ, ಕೊನೆಯಲ್ಲಿ ತಹಶೀಲ್ದಾರರ ಪೀಠದಲ್ಲಿ ಚರ್ಚಿಸಿದ ವಿಷಯಗಳ ಆಧಾರದ ಮೇಲೆ ಕರ್ನಾಟಕ ಭೂ ಕಂದಾಯ ಕಾಯ್ದೆ 1964ರ ಕಾಲಂ 128 & 129ರ ಅಡಿಯಲ್ಲಿ ಮಾನ್ಯ ತಹಸೀಲ್ದಾರರು ಅಧಿಕಾರ ಚಲಾಯಿಸಿ ತಮ್ಮ ಆದೇಶವನ್ನು ಘೋಷಿಸುತ್ತಾರೆ.
* ಹೀಗೆ ತಹಶೀಲ್ದಾರರ ಆದೇಶ ಭೂಮಿ ಕೇಂದ್ರದ ಗಣಕೀಕೃತ ವಿಭಾಗಕ್ಕೆ ಹೋಗಿ ಕಾರ್ಯಗತವಾಗುತ್ತದೆ.
* ಈ ವಿಚಾರ ಕುರಿತು ಮತ್ತೊಂದು ಪ್ರಮುಖವಾದ ವಿಷಯ ಏನೆಂದರೆ, ತಹಶೀಲ್ದಾರರು ನೀಡಿದ ಈ ತೀರ್ಪು ಸಮಾಧಾನ ಎನಿಸದೆ ಇದ್ದಲ್ಲಿ ದೂರುದಾರರಾಗಲಿ ಅಥವಾ ಜಮೀನು ನೋಂದಣಿ ಮಾಡಿಸಿಕೊಂಡಿರುವವರೆ ಆಗಲಿ ಈ ಆದೇಶವನ್ನು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸುವುದಕ್ಕೆ ಕೂಡ ಅವಕಾಶ ಖಂಡಿತವಾಗಿಯೂ ಇರುತ್ತದೆ.