ಸರ್ಕಾರಿ ಭೂಮಿಗಳು ಎಂದು ಗೋಮಾಳಗಳನ್ನು, ಗೈರಾಣ ಪರಂಪೋಕ, ಭೂ ಪರಿವರ್ತನೆ ಜಮೀನುಗಳು ಇವುಗಳನ್ನು ಕರೆಯುತ್ತೇವೆ. ನಮ್ಮ ಕರ್ನಾಟಕ ರಾಜ್ಯದಲ್ಲಿ ಸುಮಾರು 60 ಲಕ್ಷ ಗಿಂತ ಹೆಚ್ಚಾಗಿ ಸರ್ಕಾರಿ ಭೂಮಿಗಳು ಇವೆ ಎನ್ನುವುದನ್ನು ಸರ್ಕಾರದ ಅಂಕಿ ಅಂಶಗಳು ತಿಳಿಸುತ್ತವೆ.
ಅದಕ್ಕಿಂತ ಮುಖ್ಯವಾದ ವಿಷಯ ಏನೆಂದರೆ ಎಲ್ಲಾ ಜಮೀನುಗಳು ಕೂಡ ಸರ್ಕಾರಕ್ಕೆ ಸೇರುತ್ತದೆ, ಜಮೀನು ಎನ್ನುವುದು ಯಾರಿಗೂ ಕೂಡ ಶಾಶ್ವತ ಅಲ್ಲ, ಎಲ್ಲವೂ ಸರ್ಕಾರದ್ದೇ ಆಗಿರುತ್ತದೆ ಆದರೆ ನಾವು ಜಮೀನಿನ ಮೇಲೆ ಹಕ್ಕನ್ನು ಹೊಂದಿರುತ್ತೇವೆ ಅಷ್ಟೇ. ಉದಾಹರಣೆಯೊಂದಿಗೆ ಹೇಳುವುದಾದರೆ ನೀವು ಇಷ್ಟು ವರ್ಷ ಕಾಲ ಉಳಿಮೆ ಮಾಡಿ ಬೆಳೆ ತೆಗೆಯುತ್ತಿದ್ದ ಜಮೀನಿನಲ್ಲಿ ಒಂದು ಬಾರಿ ಉಳಿಮೆ ಮಾಡುವಾಗ ಗಣಿ ಅಥವಾ ಪೆಟ್ರೋಲಿಯಂ ಉತ್ಪನ್ನಗಳ ನಿಕ್ಷೇಪ ಸಿಕ್ಕಿತು ಎಂದರೆ ತಕ್ಷಣ ಸರ್ಕಾರ ಅದನ್ನು ಮುಟ್ಟುಗೋಲು ಹಾಕಿಕೊಳ್ಳುತ್ತದೆ.
ಕರ್ನಾಟಕ ಅರಣ್ಯ ಇಲಾಖೆ ನೇಮಕಾತಿ, 10ನೇ ತರಗತಿ ಆಗಿದ್ರೆ ಸಾಕು ಅರ್ಜಿ ಸಲ್ಲಿಸಬಹುದು.!
ಜಮೀನಿನ ಮೇಲ್ಭಾಗ ಮಾತ್ರ ನಮ್ಮದು, ಉಳಿದದ್ದು ಸರ್ಕಾರದ್ದು ಎಂದು ಇದರಿಂದ ಸುಲಭವಾಗಿ ಅರ್ಥೈಸಿಕೊಳ್ಳಬಹುದು. ಈ ಮಾಹಿತಿಯನ್ನು ನೀವು ತಿಳಿದುಕೊಳ್ಳಬೇಕು ಎಂದಿದ್ದರೆ ನಿಮ್ಮ ಗ್ರಾಮ ಲೆಕ್ಕಾಧಿಕಾರಿ ಕಚೇರಿಗೆ ಭೇಟಿ ಕೊಟ್ಟು ಅದರ ಮಾಹಿತಿ ಪಡೆಯಬಹುದು ತಾಲೂಕಿನ ಸರ್ವೆ ಕಚೇರಿಯಲ್ಲಿ ಕೂಡ ಈ ಮಾಹಿತಿ ಸಿಗುತ್ತದೆ.
ಸೂಕ್ತ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಿದರೆ ಈ ರೀತಿ ಸರ್ಕಾರಿ ಜಮೀನಿಗೆ ಸಂಬಂಧಪಟ್ಟ ದಾಖಲೆಗಳಾದ ಟಿಪ್ಪಣಿ, ನಕ್ಷೆ, ಪಹಣಿ ಇವುಗಳನ್ನು ಪಡೆಯಬಹುದು. ಸರ್ಕಾರ ಬಿಡುಗಡೆ ಮಾಡಿರುವ ದಿಶಾಂಕ್ ಆಪ್ ಅನ್ನು ನಿಮ್ಮ ಮೊಬೈಲ್ ಫೋನ್ನಲ್ಲಿ ಡೌನ್ಲೋಡ್ ಮಾಡಿಕೊಳ್ಳುವ ಮೂಲಕ ಕೂಡ ಆನ್ಲೈನ್ ನಲ್ಲಿ ಈ ಮಾಹಿತಿಗಳನ್ನು ಪಡೆಯಬಹುದು.
ಈ ಸರ್ಕಾರಿ ಜಾಗದ ಒತ್ತುವರಿ ಕೂಡ ಆಗುತ್ತದೆ. ರಾಜ್ಯದಲ್ಲಿ ಕೂಡ ಸುಮಾರು 13 ಲಕ್ಷ ಎಕರೆಗಿಂತ ಹೆಚ್ಚು ಸರ್ಕಾರಿ ಭೂಮಿಯನ್ನು ಖಾಸಗಿ ಅವರು ಅಕ್ರಮವಾಗಿ ಒತ್ತುವರಿ ಮಾಡಿಕೊಂಡಿದ್ದಾರೆ ಎನ್ನುವ ಅಂಶವು ಸರ್ವೇ ಮೂಲಕ ಬೆಳಕಿಗೆ ಬಂದಿದೆ. ಇದನ್ನು ತಡೆಗಟ್ಟಲು ಸರ್ಕಾರ ಕರ್ನಾಟಕ ಸಾರ್ವಜನಿಕ ಭೂಮಿ ನಿಗಮ ಎನ್ನುವ ನಿಗಮವನ್ನು ಕೂಡ ನಿಯೋಜನೆ ಮಾಡಿದ್ದು ಪ್ರತಿ ಜಿಲ್ಲೆಯಲ್ಲೂ ಇದು ಕಾರ್ಯ ನಿರ್ವಹಿಸುತ್ತಿದೆ.
ಜಿಲ್ಲೆಯಾದ್ಯಂತ ಕಾರ್ಯಾಚರಣೆ ನಡೆಸಿ ಅಕ್ರಮವಾಗಿ ಸರ್ಕಾರಿ ಭೂಮಿಯನ್ನು ಒತ್ತುವರಿ ಮಾಡಿಕೊಂಡಿರುವುದನ್ನು ತೆರವು ಮಾಡಿಸುವ ಕಾರ್ಯವನ್ನು ಇವುಗಳು ಮಾಡುತ್ತವೆ. ಇದರ ಜೊತೆಗೆ ಕರ್ನಾಟಕ ಭೂ ಕಬಳಿಕೆ ನಿಷೇಧ ಕಾಯ್ದೆ ಕೂಡ ಜಾರಿಯಲ್ಲಿ ಇದೆ. ಹೀಗಿದ್ದರೂ ಕೂಡ ಪರಿಣಾಮಕಾರಿಯಾಗಿ ಪ್ರಕ್ರಿಯೆ ನಡೆಯುತ್ತಿಲ್ಲ ಹಾಗಾಗಿ ಈ ಕಾಯ್ದೆಗೆ ತಿದ್ದುಪಡಿ ತರಲು ವಿಧಾನ ಮಂಡಲ ಅಧಿವೇಶನದಲ್ಲಿ ಚರ್ಚೆ ಕೂಡ ಮಾಡಲಾಗಿದೆ.
ವಿಲ್ ಎಂದರೇನು.? ವಿಲ್ ಬರೆಯೋದು ಹೇಗೆ.? ವಿಲ್ ಕುರಿತು ಕೆಲ ಪ್ರಮುಖ ಮಾಹಿತಿ.!
ಪ್ರತಿಯೊಬ್ಬರ ಕೂಡ ಅವರ ಗ್ರಾಮದ ವ್ಯಾಪ್ತಿಯಲ್ಲಿ ಬರುವ ಸರ್ಕಾರಿ ಜಮೀನಿನ ಮಾಹಿತಿ ತಿಳಿದುಕೊಂಡಿದ್ದರೆ ಅಕ್ರಮವಾಗಿ ಅದನ್ನು ಬೇರೊಬ್ಬರು ಕಬಳಿಕೆ ಮಾಡಿಕೊಂಡಾಗ ಮಾಹಿತಿ ತಿಳಿಸಲು ಸುಲಭವಾಗುತ್ತದೆ. ಸರ್ಕಾರಿ ಭೂಮಿಗಳನ್ನು ಸರ್ಕಾರವು ಸರ್ಕಾರಿ ಶಾಲೆ ಅಥವಾ ಸರ್ಕಾರಿ ಆಸ್ಪತ್ರೆ ಅಥವಾ ಕೈಗಾರಿಕೆ ನಿರ್ಮಾಣಕ್ಕೆ ಅಥವಾ ಕೃಷಿ ಚಟುವಟಿಕೆಗೆ ನೀಡುವುದಾದರೆ ಗೇಣಿ ರೂಪದಲ್ಲಿ ನೀಡುತ್ತದೆ. ಇದರ ಫಲ ಸರ್ಕಾರಕ್ಕೆ ಸಲ್ಲುವುದರಿಂದ ಪರೋಕ್ಷವಾಗಿ ಇದು ರಾಜ್ಯದ ಆದಾಯದ ಭಾಗವಾಗುತ್ತದೆ ಹಾಗಾಗಿ ಈ ಉದ್ದೇಶದಿಂದಾದರು ಪ್ರತಿಯೊಬ್ಬರು ಇಂತಹ ಮಾಹಿತಿಗಳನ್ನು ತಿಳಿದುಕೊಂಡಿರಬೇಕು.