ಒಬ್ಬ ವ್ಯಕ್ತಿ ತನ್ನ ನಂತರ ಆತನ ಆಸ್ತಿ, ಅಧಿಕಾರ ಈ ರೀತಿ ತನಗೆ ಸೇರಿದ ಎಲ್ಲವೂ ಯಾರಿಗೆ ತಲುಪಬೇಕು ಎನ್ನುವುದನ್ನು ಮರಣದ ಮುನ್ನ ಬರೆಸಿ ಇಡುವ ವಿಧಾನವನ್ನು ವಿಲ್ (Will) ಬರೆಸುವುದು ಎನ್ನುತ್ತಾರೆ. ಈ ರೀತಿ ವಿಲ್ ಅನ್ನು ಯಾವುದೇ ಒಂದು ಹಾಳೆಯಲ್ಲಿ (Any Paper) ಬರೆದರು ಅದು ಮಾನ್ಯವಾಗುತ್ತದೆ. ಇದೇ ರೀತಿಯಾದ ವಿಧಾನದಲ್ಲೇ ಬರೆಯಬೇಕು ಎನ್ನುವ ನಿಯಮ ಇಲ್ಲ. ಆದರೆ ಇದಕ್ಕೆ ಇನ್ನಷ್ಟು ಭದ್ರತೆ ಇರಲಿ ಎನ್ನುವ ಕಾರಣಕ್ಕಾಗಿ ನೋಟರಿ (Notary) ಮಾಡಿಸುವ ರೂಢಿಯಾಯ್ತು.
ಈಗ ಸಬ್ ರಿಜಿಸ್ಟರ್ (Sub register) ನಲ್ಲಿ ವಿಲ್ ಮಾಡಿಸುವ ಪದ್ಧತಿ ಇದೆ ಹಾಗಾದರೆ ಸರಿಯಾದ ವಿಧಾನ ಯಾವುದು? ವಿಲ್ ಅನ್ನು ಯಾರು ಯಾಕೆ ಯಾವಾಗ ಬಳಸುತ್ತಾರೆ? ಈ ರೀತಿ ವಿಲ್ ಕುರಿತ ಪ್ರಮುಖ ಅಂಶಗಳನ್ನು ತಿಳಿಸುತ್ತಿದ್ದೇವೆ. ಒಬ್ಬ ವ್ಯಕ್ತಿಯು ತಾನು ತನ್ನ ಸ್ವಂತ ದುಡಿಮೆಯಿಂದ ಕಾರು ಮನೆ ಅಥವಾ ಒಡವೆ ಇತ್ಯಾದಿ ಯಾವುದೇ ಬೆಲೆ ಬಾಳುವ ವಸ್ತುಗಳನ್ನು ಖರೀದಿಸಿದ್ದರೂ ಅವರ ನಂತರ ಅದಕ್ಕೆ ವಾರಸುವುದಾರರು ಯಾರು ಎಂದು ವಿಲ್ ಮಾಡಿಸಬಹುದು ಎಂದು ಈ ಮೇಲೆಯೇ ತಿಳಿಸಿದ್ದೆವು.
IDBI ಬ್ಯಾಂಕ್ ನಲ್ಲಿ ಉದ್ಯೋಗವಕಾಶ, ಪದವಿ ಆಗಿರುವವರು ಈ ಕೂಡಲೇ ಅರ್ಜಿ ಸಲ್ಲಿಸಿ ವೇತನ 65,000/-
ಇದು ಮಾತ್ರವಲ್ಲದೇ ಅದೇ ರೀತಿ ಆತನ ಪಿತ್ರಾರ್ಜಿತ ಆಸ್ತಿಯಾಗಿದ್ದರೂ ಕೂಡ ಅದು ವಿಭಾಗವಾಗದೇ ಉಳಿದಿದ್ದರೂ ಭಾಗವಾದ ನಂತರ ಈತನ ಪಾಲಿಗೆ ಬರಬಹುದಾದ ಆಸ್ತಿಯನ್ನು ಯಾರಿಗೆ ಕೊಡಬಹುದು ಎನ್ನುವುದನ್ನು ವಿಲ್ ಮಾಡಿಸಬಹುದು. ವಿಲ್ ಅನ್ನು ಯಾರು ಯಾರ ಹೆಸರಿನಲ್ಲಿ ಬೇಕಾದರೂ ಮಾಡಿಸಬಹುದು. ಒಬ್ಬ ವ್ಯಕ್ತಿಯು ತನ್ನ ಮಕ್ಕಳು, ಹೆಂಡತಿ, ಸ್ನೇಹಿತ ಅಥವಾ ಯಾವುದೇ ಸಂಸ್ಥೆ ಅಥವಾ ಕಂಪನಿಗಳಿಗೆ ಟ್ರಸ್ಟ್ ಗಳಿಗೆ ಹೀಗೆ ಯಾರಿಗೆ ಬೇಕಾದರೂ ತನ್ನ ಪಾಲಿನ ಆಸ್ತಿಯನ್ನು ವಿಲ್ ಮಾಡಿ ಇಡಬಹುದು.
ವಿಲ್ ಬರೆಸುವುದಕ್ಕೆ ಚಾರ್ಜಸ್ ಇರುವುದಿಲ್ಲ. 1961ರ ಮೊದಲು ಈ ರೀತಿ ವ್ಯಕ್ತಿ ಯಾವುದೇ ಬಿಳಿ ಹಾಳೆಯಲ್ಲಿ ವಿವರ ಅಥವಾ ಇಚ್ಛೆ ಬರೆದು ಸಹಿ ಮಾಡಿರುತ್ತಿದ್ದರು. ಇದು ಲಾಯರ್ ಬಳಿಯೇ ಇರುತ್ತಿತ್ತು. ವಿಲ್ ಮಾಡಿಸಿದ ವ್ಯಕ್ತಿಯ ಮರಣದ ನಂತರ ಅವರು ಮುಂದಿನ ಕಾನೂನಿನ ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದರು, ನಂತರ ಇದು ನೋಟರಿ ಮಾಡಿಸುವ ವಿಧಾನ ಆಯಿತು.
ಮಹಿಳೆಯರಿಗೆ ಪ್ರತಿ ತಿಂಗಳು 2500 ರೂಪಾಯಿ ಹಣ ಹಾಗೂ ಉಚಿತ ಸಿಲಿಂಡರ್ ಘೋಷಣೆ ಮಾಡಿದ ಸೋನಿಯಾ ಗಾಂಧಿ.!
ಆಗಲು ಸಹ ವಕೀಲರ ಸಮ್ಮುಖದಲ್ಲಿ ಇದೇ ರೀತಿ ಯಾವುದೇ ಹಾಳೆಯಲ್ಲಾದರೂ ಬರೆದು ಸಹಿ ಮಾಡಿ ಸಾಕ್ಷಿಗಳ ಸಹಿ ಪಡೆದು ನೋಟರಿ ಮಾಡಿಸಿ ತಮ್ಮ ಬಳಿಯೇ ಇಟ್ಟುಕೊಳ್ಳುವ ಪದ್ಧತಿ ರೂಢಿಯಾಗಿದೆ. ನೋಟರಿ ಎಂದ ಕೂಡಲೇ 200ರೂ. ಅಥವಾ 20ರೂ. ಈ ರೀತಿ ಯಾವುದೇ ಚಾಪೆಕಾಗದಲ್ಲಿ ಬರೆಯಬೇಕು ಎನ್ನುವ ನಿಯಮ ಇಲ್ಲ. ಈಗ ಅದನ್ನು ಸಬ್ ರಿಜಿಸ್ಟರ್ ನಲ್ಲಿ ಘೋಷಿಸಿಕೊಳ್ಳುವ ಪದ್ಧತಿ ಇದೆ. ಸಬ್ ರಿಜಿಸ್ಟರ್ ಮುಂದೆ ಘೋಷಿಸಿಕೊಂಡಾಗ ಅವರು ಅದನ್ನು ರಿಜಿಸ್ಟರ್ ಮಾಡಿ ನಿಮಗೆ ಒಂದು ನಂಬರ್ ಕೊಡುತ್ತಾರೆ.
ನಂತರ ನೀವು ಎಲ್ಲಾ ವಿವರವನ್ನು ಮನೆಗೆ ತೆಗೆದುಕೊಂಡು ಹೋಗಬಹುದು ಈಗಲೂ ಸಹ ಈ ರೀತಿ ವಿಲ್ ಮಾಡಿಸುವುದಕ್ಕೆ ಯಾವುದೇ ಚಾರ್ಜಸ್ ಇಲ್ಲ. ಒಬ್ಬ ವ್ಯಕ್ತಿ ಎಷ್ಟು ಬಾರಿ ಬೇಕಾದರೂ ತಮ್ಮ ಆಸ್ತಿಯನ್ನು ವಿಲ್ ಮಾಡಿಸಬಹುದು. ಉದಾಹರಣೆಗೆ ಯಾರೋ ಒಬ್ಬ ವ್ಯಕ್ತಿಯ ಮೇಲಿರುವ ನಂಬಿಕೆಯಿಂದ ಅವರ ಹೆಸರಿಗೆ ವಿಲ್ ಮಾಡಿಸಿರುತ್ತಾರೆ.
ಗೃಹಲಕ್ಷ್ಮಿ ಯೋಜನೆ 2000 ಹಣ ಪಡೆಯದವರಿಗೆ ಗುಡ್ ನ್ಯೂಸ್ ಕೊಟ್ಟ ಸರ್ಕಾರ.!
ನಂತರ ಅವರಿಗೆ ಇಷ್ಟ ಆಗಲಿಲ್ಲ ಇದ್ದರೆ ಅದನ್ನು ಅವರು ಕ್ಯಾನ್ಸಲ್ ಕೂಡ ಮಾಡಿಸಬಹುದು ಈ ರೀತಿ ಕ್ಯಾನ್ಸಲ್ ಮಾಡಲು ಹೋದಾಗ ಮಾತ್ರ 200 ರೂ. ಚಾರ್ಜಸ್ ಆಗುತ್ತದೆ. ಹೀಗೆ ವಿಲ್ ಕುರಿತು ಸಾಕಷ್ಟು ವಿಷಯಗಳಿದ್ದು ಇದನ್ನು ಪ್ರತಿಯೊಬ್ಬ ನಾಗರಿಕನು ಕೂಡ ತಿಳಿದುಕೊಂಡಿರಬೇಕು ಹಾಗಾಗಿ ಇದರ ಬಗ್ಗೆ ಪೂರ್ತಿಯಾಗಿ ತಿಳಿದುಕೊಳ್ಳಲು ಈ ವಿಡಿಯೋವನ್ನು ನೋಡಿ.