ಇನ್ನು ಸಹ ಗ್ರಾಮೀಣ ಪ್ರದೇಶದಲ್ಲಿರುವ ಎಷ್ಟೋ ಜನರು ತಮ್ಮ ಆಸ್ತಿಗಳಿಗೆ ಸಂಬಂಧಪಟ್ಟ ಹಾಗೆ ಸರಿಯಾದ ಕಾನೂನು ಬದ್ಧವಾದ ದಾಖಲೆ ಹೊಂದಿಲ್ಲ. ಕೆಲವರು ಪಿತ್ರಾಜಿತವಾಗಿ ಬಂದ ಆಸ್ತಿಯನ್ನು ತಮ್ಮ ಹೆಸರಿಗೆ ಬದಲಾವಣೆ ಮಾಡಿಕೊಳ್ಳದೆ ಇನ್ನು ಸಹ ಗತಿಸಿದ ಹಿರಿಯರ ಹೆಸರಿನಲ್ಲಿಯೇ ಬಿಟ್ಟಿದ್ದಾರೆ ಮತ್ತು ಇನ್ನು ಕೆಲವರು ಅದರ ಮಹತ್ವವನ್ನೇ ಮರೆತಿಲ್ಲ ಯಾರ ಹೆಸರಿನಲ್ಲಿದೆ ಎನ್ನುವುದರ ಗೋಜಿಗೂ ಹೋಗದೆ ಬದುಕುತ್ತಿದ್ದಾರೆ.
ಆದರೆ ಯಾವುದೋ ಸಂದರ್ಭದಲ್ಲಿ ನಿಮ್ಮ ಹೆಸರಿಗೆ ದಾಖಲೆ ಇರಬೇಕಾದ ಪರಿಸ್ಥಿತಿ ಬರುತ್ತದೆ ಸದ್ಯಕ್ಕಿಗೆ ಸರ್ಕಾರದಿಂದ ಯಾವುದೇ ಒಂದು ಯೋಜನೆಗಳ ಅನುದಾನವನ್ನು ನಿಮ್ಮ ಆಸ್ತಿಗೆ ಸಂಬಂಧಪಟ್ಟ ಆಧಾರದಲ್ಲಿ ಪಡೆದುಕೊಳ್ಳಬೇಕು ಎಂದರೆ ಆಸ್ತಿ ನಿಮ್ಮ ಹೆಸರಿನಲ್ಲಿ ಇರಬೇಕು ಹಾಗಾಗಿ ಹೇಗೆ ಇದನ್ನು ಪಡೆದುಕೊಳ್ಳುವುದು ಎನ್ನುವ ಮಾಹಿತಿಯನ್ನು ಈ ಅಂಕಣದಲ್ಲಿ ತಿಳಿಸುತ್ತಿದ್ದೇವೆ.
A ಖಾತಾ B ಖಾತಾ ಎಂದರೇನು ಗೊತ್ತಾ.? ಸೈಟ್ ಖರೀದಿಸುವಾಗ ಗೊತ್ತಿಲ್ಲದೆ ಮೋಸ ಹೋಗಬೇಡಿ.!
ಗ್ರಾಮೀಣ ಪ್ರದೇಶದ ಮನೆ ಸೈಟು ಜಮೀನು ಎಲ್ಲವೂ ಕೂಡ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುತ್ತದೆ. ಈ ಗ್ರಾಮ ಠಾಣದ ಒಳಗಡೆ ಬರುವ ಆಸ್ತಿ ಎಲ್ಲವೂ GPS ಕವರ್ ಆಗಿರುತ್ತವೆ. ಈ ಆಸ್ತಿಗಳಿಗೆ form 9 ಮತ್ತು form 11a ಎನ್ನುವ ದಾಖಲೆ ಪತ್ರಗಳು ಸಿಗುತ್ತವೆ. ಈ ದಾಖಲೆಯನ್ನು ಪಡೆದುಕೊಳ್ಳುವುದು ಹೇಗೆಂದರೆ ಮೊದಲಿಗೆ ಆ ಆಸ್ತಿಯನ್ನು ಅಳತೆ ಮಾಡಿಸಬೇಕು.
ಮೊದಲಿಗೆ ನಿಮ್ಮ ಗ್ರಾಮ ಪಂಚಾಯಿತಿಗೆ ಮನವಿ ಸಲ್ಲಿಸಿದರೆ ಅವರು ಒಂದು ಫಾರ್ಮೆಟ್ ಕೊಡುತ್ತಾರೆ ಅದನ್ನು ಹೋಬಳಿ ಮಟ್ಟದ R.O ಕಛೇರಿಗೆ ಕೊಟ್ಟರೆ ಅವರು ಮೋಜಣಿ ಮಾಡಿಸಲು ಅನುಮತಿ ಕೊಡುತ್ತಾರೆ ಮತ್ತು ನಿಗದಿತ ದಿನಾಂಕದಂದು ಸರ್ವೇ ಮಾಡುವವರು ಬಂದು ಅಳತೆ ಮಾಡುತ್ತಾರೆ.
ಅಳತೆಯಲ್ಲಿ ನಿಮಗೆ ಗ್ರಾಮ ಪಂಚಾಯಿತಿಯಿಂದ ಕೊಟ್ಟ ಮಾಹಿತಿ ಪ್ರಕಾರ ಇದೆಯೋ ಅಥವಾ ವ್ಯತ್ಯಾಸವಾಗಿದ್ಯೋ ಎನ್ನುವುದು ತಿಳಿಯುತ್ತದೆ. ಸರಿಯಾಗಿದ್ದರೆ ಅಂದೇ ಅಳತೆ ಸ್ಕೆಚ್ ಕೊಡುತ್ತಾರೆ ಹೆಚ್ಚು ಕಡಿಮೆ ವ್ಯತ್ಯಾಸವಾಗಿದೆ amend ಮಾಡುತ್ತಾರೆ. ಈಗ ನೀವು ಗ್ರಾಮ ಪಂಚಾಯಿತಿ ಸಿಬ್ಬಂದಿ ಕೊಟ್ಟ ದಾಖಲೆ ಹಾಗೂ ಸರ್ವೆ ಅವರು ನೀಡಿದ ದಾಖಲೆ ಎರಡನ್ನು ತೆಗೆದುಕೊಂಡು ನಿಮ್ಮ PDO ಗೆ ಅರ್ಜಿ ಸಲ್ಲಿಸಬೇಕು.
ಇದನ್ನು ಓದಿ:- ರೈಲ್ವೆ ನೇಮಕಾತಿ 5,696 ಹುದ್ದೆಗಳಿಗೆ ಅರ್ಜಿ ಆಹ್ವಾನ.! ITI SSLC ಪಾಸ್ ಆಗಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿ.!
ಅವರು ಈ ಎರಡೂ ದಾಖಲೆಗಳನ್ನು ಪರಿಶೀಲಿಸಿ ಮತ್ತು ಕಂದಾಯ ಪಾವತಿ ಮಾಡಿರುವ ದಾಖಲೆಗಳನ್ನು ಕೂಡ ಪರಿಶೀಲಿಸಿ ಫಾರ್ಮ್ 9 ಮತ್ತು 11a ಸಂಬಂಧಿಸಿದಂತೆ ಅನುಮೋದಿಸಿ ನೋಟಿಸ್ ಬೋರ್ಡ್ ಗೆ ಹಾಕುತ್ತಾರೆ. ಈ ರೀತಿ ನೋಟಿಸ್ ಬೋರ್ಡ್ ಗೆ ಹಾಕಿದ 30 ದಿನಗಳ ನಂತರ ನಿಮಗೆ ಫಾರ್ಮ್ 9 ಮತ್ತು 11 ಎ ಸಿಗುತ್ತದೆ.
ಈ ನಮೂನೆ 9 ಮತ್ತು ನಮೂನೆ 11ಎ ಸಿಕ್ಕಿದ ಮೇಲೆ ಮುಂದಿನ ಪ್ರಕ್ರಿಯೆಗಳು ಸರಾಗವಾಗಿ ಆಗುತ್ತದೆ. ನೀವು ನಂತರ ಆಸ್ತಿ ರಿಜಿಸ್ಟರ್ ಮಾಡಿಸಬಹುದು. ಒಂದು ವೇಳೆ ನಿಮ್ಮ ತಂದೆ ಹೆಸರಿನಲ್ಲಿ ಫಾರ್ಮ್ 9 ಮತ್ತು ಫಾರ್ಮ್ 11 ಸಿಕ್ಕಿದರೆ ಹೆಂಡತಿ ಹೆಸರಿಗೆ ಅಥವಾ ಮಕ್ಕಳ ಹೆಸರಿಗೆ ದಾನಪತ್ರ ಅಥವಾ ಕ್ರಯಾ ಪತ್ರದ ಮೂಲಕ ಅದನ್ನು ನಂತರ ಬದಲಾವಣೆ ಮಾಡಿಕೊಳ್ಳಬಹುದು.
ಇದನ್ನು ಓದಿ:- ಗ್ಯಾಸ್ ಸಿಲಿಂಡರ್ ಸಬ್ಸಿಡಿ ಹಣ ಪಡೆಯುವವರ ಪಟ್ಟಿ ಬಿಡುಗಡೆ, ಇದರಲ್ಲಿ ನಿಮ್ಮ ಹೆಸರು ಇದೆಯಾ ಚೆಕ್ ಮಾಡಿ.!
ಒಂದು ವೇಳೆ ಗ್ರಾಮ ಠಾಣಾ ವ್ಯಾಪ್ತಿ ಹೊರಗೆ ಇದ್ದರೆ ಪಡೆಯುವುದು ಕಷ್ಟವಾಗುತ್ತದೆ. ಇಂತಹ ಸಂದರ್ಭಗಳಲ್ಲಿ ನೀವು ತೆರಿಗೆ ಪಾವತಿ ಮಾಡುವುದಕ್ಕಾಗಿ ಗ್ರಾಮ ಪಂಚಾಯಿತಿಯಲ್ಲಿ ಆ ಆಸ್ತಿಯನ್ನು ಗ್ರಾಮತಾಣ ವ್ಯಾಪ್ತಿಗೆ ಸೇರಿಸುವಂತೆ ಡಿಮ್ಯಾಂಡ್ ಮಾಡಬಹುದು, ನಂತರ ದಿನಗಳಲ್ಲಿ ಅದು ಗ್ರಾಮ ಠಾಣ ವ್ಯಾಪ್ತಿಗೆ ಸೇರಿದ ಮೇಲೆ ಈ ದಾಖಲೆ ಪತ್ರಗಳನ್ನು ಪಡೆಯಬಹುದು.