ಈ ಹಿಂದೆ ಜಮೀನ ಆಸ್ತಿ ಹಕ್ಕು ವರ್ಗಾವಣೆಯು ನೋಂದಣಿ ಯಾದ ದಿನದಿಂದ ಮತ್ತೊಬ್ಬರ ಹೆಸರಿಗೆ ಬದಲಾಗಲು 30 ರಿಂದ 45 ದಿನಗಳ ಕಾಲಾವಕಾಶ ತೆಗೆದುಕೊಳ್ಳುತ್ತಿತ್ತು. ಇದರಲ್ಲಿ ತಕರಾರು ಅರ್ಜಿ ಸಲ್ಲಿಸಲು 30 ದಿನಗಳ ಅವಕಾಶ ನೀಡಲಾಗುತ್ತಿತ್ತು. ಇದನ್ನು ಅನೇಕರು ಸದುಪಯೋಗ ಪಡಿಸಿಕೊಳ್ಳುತ್ತಿದ್ದರೆ ದುರುಪಯೋಗ ಪಡಿಸಿಕೊಳ್ಳುವವರ ಸಂಖ್ಯೆಯೂ ಹೆಚ್ಚು ಇತ್ತು.
ದುರುದ್ದೇಶದಿಂದ ತಕರಾರು ಅರ್ಜಿ ಸಲ್ಲಿಸಿ ಸಮಸ್ಯೆ ಮಾಡುತ್ತಿದ್ದರು. ಆದ್ದರಿಂದ ಸರ್ಕಾರವು ನಂತರ ಒಂದು ನಿರ್ಧಾರಕ್ಕೆ ಬಂದು ಸಾರ್ವಜನಿಕರ ಹಿತಾಸಕ್ತಿ ಹಾಗೂ ಸರ್ಕಾರದ ಆರ್ಥಿಕ ಪರಿಸ್ಥಿತಿಯ ಸುಧಾರಣೆಗಾಗಿ ಈ ಮ್ಯುಟೇಶನ್ ಪ್ರಕ್ರಿಯ ಕುರಿತಾಗಿ ನಿಯಮವನ್ನು ಬದಲಾಯಿಸಿತು ಆ ಪ್ರಕಾರವಾಗಿ ಇನ್ನು ಮುಂದೆ ನೋಟೇಶನ್ ಪ್ರಕ್ರಿಯೆ ಕೇವಲ 7 ದಿನಗಳಲ್ಲಿ ನಡೆಯಲಿದೆ.
ಮ್ಯೂಟೇಶನ್ ಪ್ರಕ್ರಿಯೆ ಕುರಿತ ಪ್ರಮುಖ ಮಾಹಿತಿ :-
* ಜಮೀನು ರಿಜಿಸ್ಟರ್ ಆದಮೇಲೆ ಭೂಮಿ ಕೇಂದ್ರದ ಮೂಲಕ ಆಸ್ತಿ ಹಕ್ಕು ವರ್ಗಾವಣೆಯಾಗುವುದನ್ನು ಮ್ಯೂಟೇಶನ್ ಪ್ರಕ್ರಿಯೆ ಎನ್ನುತ್ತಾರೆ.
* ಯಾವುದೇ ಆಸ್ತಿ ಆಗಿದ್ದರೂ ಕ್ರಯ, ವಿಭಾಡ, ದಾನ ಅಥವಾ ಪೌತಿ ಖಾತೆ ಮೂಲಕ ಮಾತ್ರ ಆಸ್ತಿ ಹಕ್ಕಿನ ವರ್ಗಾವಣೆ ಆಗುತ್ತದೆ.
1. ಕ್ರಯ ಪತ್ರ(Sale deed):-
ಆಸ್ತಿ ಮಾರಾಟವಾಗಿದ್ದ ಸಂದರ್ಭಗಳಲ್ಲಿ ಕ್ರಯ ಪತ್ರದ ಮೂಲಕ ಆಸ್ತಿ ಹಕ್ಕನ್ನು ವರ್ಗಾವಣೆ ಮಾಡಲಾಗುತ್ತದೆ. ಖರೀದಿದಾರರ ಹೆಸರಿಗೆ ಮಾರಾಟಗಾರನಿಂದ ಆಸ್ತಿ ಹಕ್ಕಿನ ವರ್ಗಾವಣೆಯಾಗಲು 30-45 ದಿನ ಸಮಯ ತೆಗೆದುಕೊಳ್ಳುತ್ತಿತ್ತು. ಇಲ್ಲಿ 30 ದಿನಗಳ ವರೆಗೆ ತಕರಾರು ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗುತ್ತಿತ್ತು ಈಗ ಇದನ್ನು 7 ದಿನಗಳವರೆಗೆ ಇಳಿಸಲಾಗಿದೆ.
2. ದಾನ ಪತ್ರ ಅಥವಾ ವಿಭಾಗದ ಮೂಲಕ(Gift deed or Patition deed):-
ಕುಟುಂಬದೊಳಗೆ ಆಸ್ತಿ ಹಂಚಿಕೆ ಆದಾಗ ಈ ಮ್ಯೂಟೇಶನ್ ಪ್ರಕ್ರಿಯೆಗೆ 30 ರಿಂದ 35 ದಿನ ತೆಗೆಯುತ್ತಿತ್ತು ಈಗ ಇದು ಸಹ 7 ದಿನಗಳೊಂದಿಗೆ ಪೂರ್ತಿಗೊಳ್ಳುತ್ತಿದೆ.
3. ಪೌತಿ ಖಾತೆ:-
ಆಸ್ತಿ ಹೊಂದಿರುವ ಕುಟುಂಬದ ಮುಖ್ಯಸ್ಥರು ಮರಣ ಹೊಂದಿದಾಗ ಅವರ ವಾರಸುದಾರರ ಹೆಸರಿಗೆ ಆಸ್ತಿ ಹಕ್ಕು ವರ್ಗಾವಣೆ ಮಾಡುವುದಕ್ಕೆ ಪೌತಿ ಖಾತೆ ಮೂಲಕ ಮಾಡಲಾಗುತ್ತಿದೆ. ಇದು ಸಹ 30ರಿಂದ 45 ದಿನಗಳು ತೆಗೆದುಕೊಳ್ಳುತ್ತಿತ್ತು, ಈಗ 15 ದಿನಗಳಲ್ಲಿಯೇ ಪೂರ್ತಿಗೊಳ್ಳುತ್ತಿದೆ.
ಇದನ್ನು ನೋಡಿ:- ರೈಲ್ವೆ ನೇಮಕಾತಿ 5,696 ಹುದ್ದೆಗಳಿಗೆ ಅರ್ಜಿ ಆಹ್ವಾನ.! ITI SSLC ಪಾಸ್ ಆಗಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿ.!
ಈ ರೀತಿ ಬದಲಾವಣೆಯಿಂದ ಆಸ್ತಿ ಹಕ್ಕು ವರ್ಗಾವಣೆ ಪ್ರಕ್ರಿಯೆ ಬೇಗ ನಡೆಯುವುದರಿಂದ ಅನುಕೂಲತೆಯಷ್ಟೇ, ಅನಾನುಕೂಲತೆಗಳು ಕೂಡ ಇವೆ ಎನ್ನುವುದನ್ನು ಅಲ್ಲಗಳೆಯುವಂತಿಲ್ಲ. ಬಹಳ ಬೇಗ ಪ್ರಕ್ರಿಯೆ ಮುಗಿಯುತ್ತಿರುವುದರಿಂದ ತಕರಾರು ಅರ್ಜಿ ಸಲ್ಲಿಕೆ ಮಾಡುವವರಿಗೆ ಸಮಯವಕಾಶ ಬಹಳ ಕಡಿಮೆ ಇರುತ್ತದೆ.
ಮತ್ತು ಅವುಗಳಿಗೆ ಸಂಬಂಧಪಟ್ಟ ದಾಖಲೆಗಳನ್ನು ಕ್ರೋಡೀಕರಣ ಮಾಡುವುದಕ್ಕೆ ಸಮಯ ಸಾಕಾಗುವುದಿಲ್ಲ. ಇದು ಮಾತ್ರ ಅಲ್ಲದೆ ಮೋಸ ಅಥವಾ ವಂಚನೆ ಮೂಲಕ ಆಸ್ತಿ ಮಾರಾಟ ಮಾಡುವ ಅಥವಾ ಮೋಸ ಮಾಡಿ ಆಸ್ತಿ ಪಡೆದುಕೊಳ್ಳುವ ಸಾಧ್ಯತೆಗಳು ಹೆಚ್ಚಾಗಬಹುದು.
ಇದನ್ನು ಓದಿ:- ಗ್ಯಾಸ್ ಸಿಲಿಂಡರ್ ಸಬ್ಸಿಡಿ ಹಣ ಪಡೆಯುವವರ ಪಟ್ಟಿ ಬಿಡುಗಡೆ, ಇದರಲ್ಲಿ ನಿಮ್ಮ ಹೆಸರು ಇದೆಯಾ ಚೆಕ್ ಮಾಡಿ.!
ಈ ರೀತಿ ಮೋಟೇಶನ್ ಅವಧಿ ಕಡಿಮೆ ಇರುವುದರಿಂದ ನ್ಯಾಯಾಲಯಗಳಲ್ಲಿ ಆಸ್ತಿ ಸಂಬಂಧಿತ ವಾಜ್ಯಗಳು ಹೆಚ್ಚಾಗಬಹುದು. ಹಾಗಾಗಿ ಯಾವುದೇ ದಾಖಲೆ ಪತ್ರಗಳಿಗೆ ಸಹಿ ಹಾಕುವ ಮುನ್ನ ನಾವೇ ಮುಂಜಾಗ್ರತೆಯಿಂದ ಓದಿ ತಿಳಿದುಕೊಂಡು ಅರ್ಥೈಸಿಕೊಂಡು ಮುಂದುವರಿಯೋದು ಉತ್ತಮ.
ಇಲ್ಲವಾದಲ್ಲಿ ಮುಂದೆ ತಕರಾರು ಅರ್ಜಿ ಸಲ್ಲಿಸಲು ಆಗದೆ ಇರಬಹುದು. ಇದು ಬಹಳ ಉಪಯುಕ್ತ ಮಾಹಿತಿಯಾಗಿದ್ದು ಜಮೀನು ಅಥವಾ ಆಸ್ತಿ ಹೊಂದಿರುವ ಪ್ರತಿಯೊಬ್ಬರು ಇದನ್ನು ತಿಳಿದುಕೊಳ್ಳಬೇಕು ಹಾಗಾಗಿ ತಪ್ಪದೆ ಈ ಮಾಹಿತಿಯನ್ನು ನಿಮ್ಮ ಕುಟುಂಬದವರು ಹಾಗೂ ಸ್ನೇಹಿತರ ಜೊತೆಗೂ ಕೂಡ ಹಂಚಿಕೊಳ್ಳಿ.