ಈಗ ಮೊಬೈಲ್ ಕಳ್ಳತನದ ಪ್ರಕರಣಗಳು ಹೆಚ್ಚಾಗುತ್ತಿವೆ. ಈ ಬಗ್ಗೆ ಪ್ರತಿನಿತ್ಯವೂ ಪೊಲೀಸ್ ಠಾಣೆಗಳಲ್ಲಿ ಮೊಬೈಲ್ಗಳು ಕಳೆದು ಹೋಗಿರುವ ಬಗ್ಗೆ ಮತ್ತು ಕಳ್ಳತನವಾದ ಬಗ್ಗೆ ದೂರು ದಾಖಲಾಗುತ್ತಿದೆ. ಆದರೂ ಕೂಡ ಇದನ್ನು ನಿಯಂತ್ರಿಸಲು ಸಾಧ್ಯವಾಗಿಲ್ಲ. ಕಳ್ಳರು ಕದ್ದ ಫೋನ್ ಇಂದ ಸಿಮ್ ಕಾರ್ಡ್ ತೆಗೆದು ಬಿಸಾಕಿ, ಪೊಲೀಸರ ಟ್ರ್ಯಾಕ್ ಇಂದ ತಪ್ಪಿಸಿಕೊಂಡು ಬೇರೆ ಸಿಮ್ ಕಾರ್ಡ್ ಹಾಕಿ ಬಳಸುತ್ತಿದ್ದಾರೆ.
ದಿನೇ ದಿನೇ ಇಂತಹ ದೂರುಗಳು ಹೆಚ್ಚಾಗುತ್ತಿರುವುದರಿಂದ ಕೇಂದ್ರ ದೂರ ಸಂಪರ್ಕ ಇಲಾಖೆ ಇದಕ್ಕೆ ಕಡಿವಾಣ ಹಾಕಲು ಸಂಚಾರ್ ಸಾಥಿ ಎನ್ನುವ ಪೋರ್ಟಲ್ ಒಂದನ್ನು ಬಿಡುಗಡೆ ಮಾಡಿದೆ. ಇದನ್ನು ಬಳಸಿ ನಿಮ್ಮ ಮೊಬೈಲ್ ಫೋನ್ ಕಳ್ಳತನವಾದಾಗ ಅಥವಾ ಕಳೆದು ಹೋದಾಗ ಮತ್ತೊಬ್ಬರು ಅದನ್ನು ಬಳಸದಂತೆ ಬ್ಲಾಕ್ ಮಾಡಬಹುದು.
ಈ ಪೋರ್ಟಲ್ ಅಲ್ಲಿ ಲಾಗಿನ್ ಆಗಿ ಬ್ಲಾಕ್ ಮಾಡಿದರೆ ಭಾರತದಾತ್ಯಂತ ಯಾವುದೇ ಕಂಪನಿಯ ಸಿಮ್ ಅನ್ನು ಆ ವ್ಯಕ್ತಿ ಬಳಸಿದರೂ ನಿಮ್ಮ ಫೋನ್ ವರ್ಕ್ ಆಗುವುದಿಲ್ಲ. ಜೊತೆಗೆ ಅದು ಟ್ರ್ಯಾಕ್ ಆಗುತ್ತಲೇ ಇರುವುದರಿಂದ ಮೊಬೈಲ್ ಫೋನ್ ನಿಮ್ಮ ಕೈಗೆ ಸಿಕ್ಕ ಮೇಲೆ ಬೇಕಾದರೆ ನೀವು ಇದನ್ನು ಅನ್ಲಾಕ್ ಮಾಡಿ ನಿಮ್ಮ ಸಿಮ್ ಕಾರ್ಡ್ ಹಾಕಿಕೊಂಡು ಬಳಸಬಹುದು. ಇಂತಹ ಒಂದು ಅನುಕೂಲತೆಯಿಂದ ಶೀಘ್ರವಾಗಿ ಇದಕ್ಕೆಲ್ಲಾ ಕಡಿವಾಳ ಬೀಳಲೂಬಹುದು ಎಂದು ಊಹಿಸಲಾಗಿದೆ.
ಹೇಗೆ ಆಪಲ್ ಫೋನ್ ಅಲ್ಲಿ ಫೈಂಡ್ ಮೈ ಫೋನ್ ಎನ್ನುವ ಆಪ್ಷನ್ ಇರುತ್ತದೋ ಅದೇ ಮಾದರಿಯಲ್ಲಿ ಎಲ್ಲಾ ಆಂಡ್ರಾಯ್ಡ್ ಫೋನ್ ಗಳಲ್ಲೂ ಕೂಡ ಈ ಸಂಚಾರ್ ಸಾಥಿ ಪೋರ್ಟಲ್ ವರ್ಕ್ ಮಾಡಲಿದೆ. ದೇಶದಲ್ಲಿ ಮೊಬೈಲ್ ಫೋನ್ ಗಳನ್ನು ಬಳಸುವ ಪ್ರತಿಯೊಬ್ಬರೂ ಕೂಡ ಈ ಪೋರ್ಟಲ್ ಬಳಸುವುದರ ಬಗ್ಗೆ ತಿಳಿದುಕೊಳ್ಳಲೇಬೇಕು. ಅದಕ್ಕಾಗಿ ಈ ಅಂಕಣದಲ್ಲಿ ಇದರ ಬಗ್ಗೆ ತಿಳಿಸುವ ಪ್ರಯತ್ನವನ್ನು ಮಾಡುತ್ತಿದ್ದೇವೆ.
● ಸಂಚಾರ್ ಸಾಥಿ ಪೋರ್ಟಲ್ ಮೂಲಕ ಮೊಬೈಲ್ ಬ್ಲಾಕ್ ಮಾಡುವ ವಿಧಾನ:-
ಮೊದಲಿಗೆ https://sancharsaathi.gov.in ಮೂಲಕ ಸಂಚಾರ್ ಸಾಥಿ ಪೋರ್ಟಲ್ ಗೆ ಭೇಟಿಕೊಡಿ.
● ವೆಬ್ಸೈಟ್ ಓಪನ್ ಆದ ಮೇಲೆ ಸ್ಕ್ರಾಲ್ ಮಾಡುತ್ತಾ ಹೋದಂತೆ ನಾಗರಿಕರ ನಾಗರಿಕ ಕೇಂದ್ರಿತ ಸೇವೆಗಳ ವಿಭಾಗ ಸಿಗುತ್ತದೆ. ಅದರಲ್ಲಿ ನಿಮ್ಮ ಕಳೆದು ಹೋದ ಅಥವಾ ಕಳ್ಳತನ ಹಾಗಿರುವ ಮೊಬೈಲ್ ಫೋನನ್ನು ಬ್ಲಾಕ್ ಮಾಡಿದ ಆಪ್ಷನ್ ಸಿಗುತ್ತದೆ ಅದನ್ನು ಕ್ಲಿಕ್ ಮಾಡಿ.
● ಹೊಸ ಪೇಜ್ ಓಪನ್ ಆಗುತ್ತದೆ ಅದರಲ್ಲಿ ಮೊಬೈಲ್ ಗೆ ಸಂಬಂಧಿಸಿದ ಎಲ್ಲ ವಿವರಗಳನ್ನು ಪಟ್ಟಿ ಮಾಡಿ
● ನಿಮ್ಮ ಮೊಬೈಲ್ ಫೋನಿನ ಮಾಹಿತಿಗಳು ನಿಮ್ಮ ವೈಯುಕ್ತಿಕ ವಿವರಗಳ ಜೊತೆಗೆ ಮೊಬೈಲ್ ಕಳೆದುಹೋದ ಮಾಹಿತಿ ಎಲ್ಲವನ್ನು ಭರ್ತಿ ಮಾಡಿ.
● ನೀವು ಮೊಬೈಲ್ ಕಳೆದು ಹೋಗಿರುವ ಬಗ್ಗೆ ಪೊಲೀಸ್ ಠಾಣೆಯಲ್ಲಿ ದೂರು ಕೊಟ್ಟಿದ್ದರೆ ಆ ದೂರಿನ ಪ್ರತಿಯನ್ನು ಕೂಡ ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡಬೇಕು.
● ಕಳೆದು ಹೋಗಿರುವ ಅಥವಾ ಕಳ್ಳತನವಾಗಿರುವ ಮೊಬೈಲ್ ಮತ್ತು ದೂರು ದಾಖಲಿಸುತ್ತಿರುವ ಮೊಬೈಲ್ ಸಂಖ್ಯೆಗಳ IMEI ಸಂಖ್ಯೆಗಳನ್ನು ಹಾಕಬೇಕು. ದೂರು ದಾಖಲಿಸುತ್ತಿರುವ ಸಂಖ್ಯೆಗೆ ಒಂದು OTP ಬರುತ್ತದೆ. ಅದನ್ನು ಕೂಡ ಎಂಟ್ರಿ ಮಾಡಬೇಕು.
● ಈ ಮಾಹಿತಿಗಳನ್ನು ಪೂರ್ತಿ ಮಾಡಿದ ನಂತರ ಮತ್ತೊಮ್ಮೆ ಚೆಕ್ ಮಾಡಿ ಕೊನೆಯಲ್ಲಿ ಸಬ್ಮಿಟ್ ಬಟನ್ ಕ್ಲಿಕ್ ಮಾಡಿದರೆ ನಿಮ್ಮ ಕಳೆದು ಹೋದ ಮೊಬೈಲ್ ಬ್ಲಾಕ್ ಆಗುತ್ತದೆ.
● ಮೊಬೈಲ್ ಸಿಕ್ಕ ಮೇಲೆ ಅನ್ಲಾಕ್ ಮಾಡುವುದಕ್ಕೂ ಕೂಡ ಇದೇ ರೀತಿ ಪೋರ್ಟಲ್ ಗೆ ಹೋಗಿ ಲಾಗಿನ್ ಆಗಿ ಅನ್ ಬ್ಲಾಕ್ ಮಾಡಬಹುದು. ಇಂತಹ ಉಪಯುಕ್ತ ಮಾಹಿತಿಯನ್ನು ನಿಮ್ಮ ಸ್ನೇಹಿತರು ಹಾಗೂ ಕುಟುಂಬದ ಜೊತೆಗೂ ಕೂಡ ಹಂಚಿಕೊಳ್ಳಿ.