ನಾವು ನಮ್ಮ ನಿವಾಸದ ಬಳಿಯಿರುವ ಹಾಗೂ ಉತ್ತಮ ಬ್ಯಾಂಕ್ಗಳಲ್ಲಿ ಖಾತೆಗಳನ್ನು ಹೊಂದಿರುತ್ತೇವೆ. ಕೆಲವೊಮ್ಮೆ ಕಾರಣಾಂತರಗಳಿಂದ ನಾವು ಬೇರೆ ಸ್ಥಳಗಳಿಗೆ ಸ್ಥಳಾಂತರಗೊಂಡರೆ ಆ ಬ್ಯಾಂಕ್ ಖಾತೆಗಳನ್ನು ನಾವು ಸ್ಥಳಾಂತರಗೊಂಡಲ್ಲಿನ ಬ್ಯಾಂಕ್ಗಳಿಗೆ ವರ್ಗಾಯಿಸಿಕೊಳ್ಳಬೇಕು ಅಥವಾ ಒಂದು ಬ್ಯಾಂಕ್ನಿಂದ ಮತ್ತೊಂದು ಬ್ಯಾಂಕ್ಗೆ ಬದಲಾಯಿಕೊಳ್ಳಬೇಕೆಂಬ ಚಿಂತೆ ಕಾಡುತ್ತದೆ. ಇಂದಿನ ಈ ಲೇಖನದಲ್ಲಿ, ಬ್ಯಾಂಕ್ ಖಾತೆಗಳನ್ನು ಬೇರೆ ಶಾಖೆಗೆ ಬದಲಾಯಿಕೊಳ್ಳುವುದರ ಬಗ್ಗೆ ಮಾಹಿತಿ ನೀಡಲಿದ್ದೇವೆ. ಕೊನೆವರೆಗೂ ಈ ಓದಿ ಮಾಹಿತಿಯನ್ನು ತಿಳಿದುಕೊಳ್ಳಿ.
ದೇಶದ ಅತಿದೊಡ್ಡ ಸರ್ಕಾರಿ ಬ್ಯಾಂಕ್ ಅಂದ್ರೆ ಅದು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI). ಈಗ ತಮ್ಮ ಗ್ರಾಹಕರಿಗೆ ಸರಳ ಮತ್ತು ನೇರ ವಹಿವಾಟುಗಳಿಗಿಗಾಗಿ ವಿವಿಧ ಆನ್ಲೈನ್ ಸೇವೆಗಳನ್ನು ಒದಗಿಸುತ್ತಿದೆ. ಇದರಲ್ಲಿ SBI ಆನ್ಲೈನ್ ಬ್ಯಾಂಕಿಂಗ್ ಸೇವೆಗಳನ್ನು ಬಳಸಿಕೊಂಡು ನೀವು ನಿಮ್ಮ ಮನೆಯ ಅನುಕೂಲಕ್ಕಾಗಿ ಅನುಗುಣವಾಗಿ ನಿಮ್ಮ ಸೇವಿಂಗ್ ಖಾತೆಯ ಬ್ಯಾಂಕ್ ಶಾಖೆಯನ್ನು ಸರಳವಾಗಿ ಬದಲಾಯಿಸಿಕೊಳ್ಳಲು ಅವಕಾಶ ನೀಡುತ್ತಿದೆ. ಇದು ನಿಮಗೆ ಅನೇಕ ಅವಕಾಶಗಳನ್ನು ನೀಡುತ್ತದೆ.
SBI ಇಂಟರ್ನೆಟ್ ಬ್ಯಾಂಕಿಂಗ್ ಬಳಸಲು ಆರಂಭಿಸಿ ನೀವು ಮನೆಯಲ್ಲೇ ಕುಳಿತು ಇಂಟರ್ನೆಟ್ ಬ್ಯಾಂಕಿಂಗ್ ಮೂಲಕ ನಿಮ್ಮ SBI ಶಾಖೆಯನ್ನು ನೀವು ಸರಳವಾಗಿ ಬದಲಾಯಿಸಬಹುದು. ಆನ್ಲೈನ್ ಬ್ಯಾಂಕಿಂಗ್ ಮೂಲಕ ನಿಮ್ಮ SBI ಉಳಿತಾಯ ಖಾತೆಯ ಶಾಖೆಯನ್ನು ಬದಲಾಯಿಸಲು ವಿನಂತಿಸುವಾಗ ನೀವು ಖಾತೆಯನ್ನು ವರ್ಗಾಯಿಸಲು ಬಯಸುವ ಬ್ಯಾಂಕ್ ಶಾಖೆಯ ಕೋಡ್ ನಿಮಗೆ ಅಗತ್ಯವಿರುತ್ತದೆ. ನೀವು ಇಂಟರ್ನೆಟ್ ಬ್ಯಾಂಕಿಂಗ್ ಅನ್ನು ಬಳಸಲು ಪ್ರಾರಂಭಿಸಬೇಕು ಮತ್ತು ನಿಮ್ಮ ಮೊಬೈಲ್ ನಂಬರ್ ಅನ್ನು ಬ್ಯಾಂಕಿನಲ್ಲಿ ನೋಂದಾಯಿಸಿಕೊಳ್ಳಬೇಕು. ಹಾಗಾದ್ರೆ, ನಿಮಗಿಷ್ಟ ಬಂದ ಶಾಖೆಗೆ ಬದಲಾಯಿಕೊಳ್ಳುವುದು ಹೇಗೆ ಅಂತಾ ಈ ಕೆಳಗೆ ನೋಡೋಣ ಬನ್ನಿ…
ನಿಮಗಿಷ್ಟ ಬಂದ ಶಾಖೆಗೆ ಬದಲಾಯಿಕೊಳ್ಳುವುದು ಹೇಗೆ?
* ಮೊದಲು ಅಧಿಕೃತ SBI ವೆಬ್ಸೈಟ್ onlinesbi.com ಲಾಗ್ ಇನ್ ಮಾಡಿ.
* ಪರ್ಸನಲ್ ಬ್ಯಾಂಕಿಂಗ್ ಅನ್ನು ಆಯ್ಕೆಮಾಡಿ. ಇದರಲ್ಲಿ ಬಳಕೆದಾರ ಹೆಸರು ಮತ್ತು ಪಾಸ್ವರ್ಡ್ ಅನ್ನು ಆಯ್ಕೆಮಾಡಿ ಮುಂದೆ ಕಾಣಿಸುವ ಇ-ಸೇವೆಯ ಟ್ಯಾಬ್ ಅನ್ನು ಕ್ಲಿಕ್ ಮಾಡಿ.
* ನಂತರ ಮೆನುವಿನಿಂದ Transfer Saving Account ಅನ್ನು ಆರಿಸಿ ಯಾವ ಖಾತೆಯನ್ನು ವರ್ಗಾಯಿಸಲು ಬಯಸುತ್ತೀರಿ ಎಂಬುದನ್ನು ನಿರ್ಧರಿಸಿ.
* ನೀವು ಖಾತೆಯನ್ನು ವರ್ಗಾಯಿಸಲು ಬಯಸುವ ಆ ನಿಮ್ಮ ಹೊಸ ಶಾಖೆಯ IFSC ಕೋಡ್ ಹಾಕಿ ಎಲ್ಲವನ್ನೂ ಪರಿಶೀಲಿಸಿ ʼConfirmʼ ಬಟನ್ ಅನ್ನು ಕ್ಲಿಕ್ ಮಾಡಿ.
* ಇದರ ನಂತರ ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಗೆ OTP ಬರುತ್ತದೆ. ಅದನ್ನು ಭರ್ತಿ ಮಾಡಿ ಮತ್ತು ನಂತರ ʼConfirmʼ ಬಟನ್ ಅನ್ನು ಕ್ಲಿಕ್ ಮಾಡಿ.
* ಕೆಲವು ದಿನಗಳ ನಂತರ ನೀವು ಆಯ್ಕೆ ಮಾಡಿದ ಶಾಖೆಗೆ ನಿಮ್ಮ ಖಾತೆಯನ್ನು ವರ್ಗಾಯಿಸಲಾಗುತ್ತದೆ.
ಎಸ್ಬಿಐ YONO ಅಪ್ಲಿಕೇಶನ್
ಎಸ್ಬಿಐ YONO ಅಪ್ಲಿಕೇಶನ್ ಅಥವಾ YONO ಲೈಟ್ ಅನ್ನು ಬಳಸಿಕೊಂಡು ನೀವು ನಿಮ್ಮ ಶಾಖೆಯನ್ನು ಬದಲಾಯಿಸಬಹುದು. OTP ಇಲ್ಲದೆ ಖಾತೆಯನ್ನು ಬದಲಾಯಿಸಬೇಕಾದರೆ, ನಿಮ್ಮ ಮೊಬೈಲ್ ನಂಬರ್ ನಿಮ್ಮ ಬ್ಯಾಂಕ್ ಖಾತೆಗೆ ಲಿಂಕ್ ಆಗಿರಬೇಕು. ಕರೋನಾ ಸಾಂಕ್ರಾಮಿಕ ರೋಗದಿಂದಾಗಿ SBI ನ ಬಹುತೇಕ ಎಲ್ಲಾ ಸೇವೆಗಳನ್ನು ಈಗ ಆನ್ಲೈನ್ ಮೂಲಕವೇ ಪಡೆಯಬಹುದಾಗಿದೆ. ಆದ್ದರಿಂದ, ಗ್ರಾಹಕರು ಇನ್ನು ಮುಂದೆ ಯಾವುದೇ ಬ್ಯಾಂಕ್ ಸಂಬಂಧಿತ ಕೆಲಸಗಳನ್ನು ಮಾಡಲು ಶಾಖೆಗೆ ಭೇಟಿ ನೀಡುವ ಅಗತ್ಯವಿಲ್ಲ.