ರಾಜ್ಯದಲ್ಲಿ ಸದ್ಯ ಬಹಳ ಟ್ರೆಂಡಿಂಗ್ ಇರೋ ವಿಷ್ಯ ಅಂದ್ರೆ ಅದು ಹೈ ಸೆಕ್ಯೂರಿಟಿ ರಿಜಿಸ್ಟ್ರೇಷನ್ ನಂಬರ್ ಪ್ಲೇಟ್(HSRP). ಈ HSRP ಪ್ಲೇಟ್ ಗೆ ಸರ್ಕಾರ ಕೊನೆಯ ದಿನಾಂಕ ನಿಗದಿ ಪಡಿಸಿದೆ. ಈ ಹೊಸ HSRP ಪ್ಲೇಟ್ ಗೆ ಸರ್ಕಾರ ದರವನ್ನೂ ನಿಗದಿಪಡಿಸಿದೆ. ರಾಜ್ಯದಲ್ಲಿ ಎಲ್ಲಾ ಹಳೆಯ ವಾಹನಗಳಿಗೆ (Old Vehicles) ಅತೀ ಸುರಕ್ಷಿತ ನೋಂದಣಿ ಫಲಕ (ಹೈ ಸೆಕ್ಯುರಿಟಿ ರಿಜಿಸ್ಪ್ರೇಷನ್ ನಂಬರ್ ಪ್ಲೇಟ್-High Security Registration Number Plate- HSRP) ಕಡ್ಡಾಯವಾಗಿ ಅಳವಡಿಸಬೇಕು ಎಂದು ಈಗಾಗಲೇ ರಾಜ್ಯ ಸರ್ಕಾರ ಅಧಿಸೂಚನೆ ಹೊರಡಿಸಿದೆ. ಈ ಬಗ್ಗೆ ರಾಜ್ಯದ ಜನತೆ ಕೊಂಚ ತಲೆಕೆಡಿಸಿಕೊಂಡಿದ್ದು, ಹೆಚ್ಎಸ್ಆರ್ಪಿ ನೋಂದಣಿಗೆ ಮುಂದಾಗಿದೆ. ಹಾಗಾಗಿ, ಇದರ ರೇಟು ಹೇಗಿದೆ ಅನ್ನೋದನ್ನ ಇಲ್ಲಿ ನೋಡೋಣ ಬನ್ನಿ…
ವಾಹನ ವಿವರ, ಶುಲ್ಕ
* ದ್ವಿಚಕ್ರ – 450 ರಿಂದ 550
* ತ್ರಿಚಕ್ರ – 450 ರಿಂದ 550
* 4 ವೀಲ್ಹರ್ – 650 ರಿಂದ 780
* ಲಾರಿ, ಬಸ್ & 10 ವೀಲ್ಹರ್ – 650 ರಿಂದ 800
ಈ ಸುದ್ದಿ ಓದಿ:- ಹೊಸದಾಗಿ ಮದುವೆಯಾಗುವ ದಂಪತಿಗಳಿಗೆ ಸರ್ಕಾರದಿಂದ ಸಿಗಲಿದೆ 50,000 ಸಹಾಯಧನ.!
ಹೀಗೆ, ಸರ್ಕಾರವೇ ನಿಗದಿಪಡಿಸಿದ ಈ ಮೊತ್ತವನ್ನು ಪಾವತಿಸುವ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಸದ್ಯ ಸರಕಾರವು HSRP ನಂಬರ್ ಪ್ಲೇಟ್ಗೆ ಅರ್ಜಿ ಸಲ್ಲಿಸಲು ಫೆಬ್ರವರಿ 17 ಕೊನೆಯ ದಿನ ಎಂದು ಘೋಷಿಸಿದೆ. HSRP ಅಳವಡಿಕೆ ಕಡ್ಡಾಯವಾಗಿದ್ದು, ಈ ನಂಬರ್ ಪ್ಲೇಟ್ ಅಳವಡಿಕೆಗೆ ಸಾರಿಗೆ ಇಲಾಖೆ ಡೆಡ್ಲೈನ್ ನೀಡಿದೆ. ಹಾಗಾದರೆ, ಅದನ್ನು ಪಡೆಯೋದು ಹೇಗೆ ಅಂತಾ ಇಲ್ಲಿ ನೋಡೋಣ ಬನ್ನಿ….
ಹೀಗೆ ಭರ್ತಿ ಮಾಡಿ
ಅಲ್ಲಿ ಬುಕ್ ಮೈ ಹೆಚ್ಎಸ್ಆರ್ಪಿ ಮೇಲೆ ಕ್ಲಿಕ್ ಮಾಡಿ. ಅಲ್ಲಿ ನಿಮ್ಮ ವಾಹನದ ಕಂಪೆನಿಯನ್ನು ಆಯ್ಕೆ ಮಾಡಿಕೊಳ್ಳಬೇಕು. ಬಳಿಕ ಅಲ್ಲಿ ನಿಮ್ಮ ವಾಹನದ ಡಿಟೇಲ್ಸ್ ಕೇಳಿರುವುದನ್ನು ಭರ್ತಿ ಮಾಡಿ ಅದಾದ ನಂತರದಲ್ಲಿ ಬಳಿಕ ಡೀಲರ್ ಲೊಕೇಶನ್ ಅನ್ನು ನಿಮ್ಮ ಅನುಕೂಲಕ್ಕೆ ತಕ್ಕಂತೆ ಸೆಲೆಕ್ಟ್ ಮಾಡಿಕೊಳ್ಳಿ.
ಆನ್ಲೈನ್ನಲ್ಲೇ ಪಾವತಿ
ನಿಮ್ಮ ಹೆಚ್ಎಸ್ಆರ್ಪಿಯನ್ನು ಪಡೆಯಲು ಡೀಲರ್ ಲೊಕೇಶನ್ ಸೆಲೆಕ್ಟ್ ಮಾಡಬೇಕು ನಂತರದಲ್ಲಿ ಹೆಚ್ಎಸ್ಆರ್ಪಿಗೆ ಶುಲ್ಕವನ್ನು ಆನ್ಲೈನ್ ಮೂಲಕವೇ ಪಾವತಿಸಬೇಕು. ನಿಮ್ಮ ಗೂಗಲ್ PAY ಫೋನ್ ಪೆ ಹಾಗೂ ವಿವಿಧ ಒನ್ಲೈನ್ PAYMNET ಕೂಡಾ ಮಾಡಬಹುದಾಗಿದೆ. ಇದೆಲ್ಲ ಆದ ನಂತರದಲ್ಲಿ ವಾಹನದ ಮಾಲೀಕರ ಮೊಬೈಲ್ ನಂಬರ್ಗೆ ಅಥವಾ ನೀವು ಯಾವ ಅಂಗಡಿಯಲ್ಲಿ HSRP ಪಡೆಯಲು ಬಯಸುತ್ತೀರಾ ಆ ಅಂಗಡಿಯ ಮಾಲೀಕರ ನಂಬರ್ ಕೊಟ್ಟರು ಅವರಿಗೆ ಒಟಿಪಿ ಬರುತ್ತದೆ.
ಶೋರೂಂ ನಲ್ಲಿ ಅಳವಡಿಕೆ
ಮಾಲೀಕರು ತಮ್ಮ ಸಮಯ ನೋಡಿಕೊಂಡು ನಂಬರ್ ಪ್ಲೇಟ್ ಅನ್ನು ವಾಹನಕ್ಕೆ ಪಡೆಯಲು ದಿನಾಂಕ ಮತ್ತು ಸಮಯವನ್ನು ಆಯ್ಕೆ ಮಾಡಬಹುದಾಗಿದೆ. ಅದಾದ ಬಳಿಕ ವಾಹನದ ಮಾಲೀಕರು ನಿಗದಿ ಮಾಡಿಕೊಂಡ ದಿನಾಂಕ ಮತ್ತು ಸಮಯಕ್ಕೆ ಅವರ ವಾಹನದ ಶೋ ರೂಮ್ ಅಥವಾ ಡೀಲರ್ ಬಳಿ ಹೋಗಿ ಹೆಚ್ಎಸ್ಆರ್ಪಿ ನಂಬರ್ ಪ್ಲೇಟ್ಗಳನ್ನು ವಾಹನಕ್ಕೆ ಅಳವಡಿಸಬಹುದಾಗಿದೆ.
HSRP ನಂಬರ್ ಪ್ಲೇಟ್ ಎಂದರೇನು?
ಎಚ್ಎಸ್ಆರ್ಪಿ ಎಂದರೆ ಅತಿ ಸುರಕ್ಷಿತ ನೋಂದಣಿ ಫಲಕವಾಗಿದೆ. ಇವುಗಳನ್ನು ಅಲ್ಯೂಮಿನಿಯಂ ಲೋಹದಿಂದ ಮಾಡಿರುತ್ತಾರೆ. ಈ ಪ್ಲೇಟ್ನ ಮೇಲ್ಭಾಗದ ಎಡಬದಿಯಲ್ಲಿ ಅಶೋಕ ಚಕ್ರ ಮುದ್ರೆಯ 20X20 ಮಿ.ಮೀ ಅಳತೆಯ ಕ್ರೋಮಿಯಂ ಹೋಲೋಗ್ರಾಮ್ ಇರುತ್ತದೆ. ಇಂಗ್ಲಿಷ್ ಅಕ್ಷರಗಳು ಹಾಗೂ ನಂಬರ್ಗಳು ಉಬ್ಬಿಕೊಂಡಿರುವ ರೀತಿ ಅಚ್ಚಾಗಿರುತ್ತವೆ. ಈ ನಂಬರ್ ಪ್ಲೇಟ್ಗಳನ್ನು ಎರಡು ಲಾಕ್ ಪಿನ್ಗಳನ್ನು ಬಳಸಿ ಅಳವಡಿಸುತ್ತಾರೆ. ಇದರಿಂದ ಒರಿಜಿನಲ್ ಯಾವುದು, ನಕಲಿ ಯಾವುದು ಎಂದು ಸುಲಭವಾಗಿ ಗುರುತಿಸಬಹುದು.
HSRP ನಂಬರ್ ಪ್ಲೇಟ್ ಪಡೆಯುವುದು ಹೇಗೆ?
– ಕರ್ನಾಟಕದಲ್ಲಿ ಹೆಚ್ಎಸ್ಆರ್ಪಿ ಅಥವಾ ಹೈ-ಸೆಕ್ಯುರಿಟಿ ರಿಜಿಸ್ಟ್ರೇಷನ್ ಪ್ಲೇಟ್ಸ್ ಅನ್ನು ಪಡೆಯಲು ಕರ್ನಾಟಕ ಸಾರಿಗೆ ಇಲಾಖೆಯ ವೆಬ್ಸೈಟ್ https://transport.karnataka.gov.in ಅಥವಾ www.siam.in ಅಥವಾ book my hsrp web ಅಥವಾ KARANATAKA RTO ವೆಬ್ಸೈಟ್ ಗೆ ಭೇಟಿ ನೀಡಬೇಕು.
ಈ ಸುದ್ದಿ ಓದಿ:- ಹೊಸ ಪಡಿತರ ಚೀಟಿ ವಿತರಣೆ.! ಈ ದಿನ ಸಿಗಲಿದೆ ಹೊಸ ರೇಷನ್ ಕಾರ್ಡ್.!
– ನಿಮ್ಮ ವಾಹನ ತಯಾರಕರನ್ನು ಆಯ್ಕೆ ಮಾಡಿ.
– ವಾಹನದ ಮೂಲ ವಿವರಗಳನ್ನು ಭರ್ತಿ ಮಾಡಿ.
– HSRP ಅಳವಡಿಕೆಗಾಗಿ ನಿಮ್ಮ ಅನುಕೂಲಕ್ಕೆ ತಕ್ಕಂತೆ ಡೀಲರ್ ಸ್ಥಳವನ್ನು ಆಯ್ಕೆ ಮಾಡಿ.
– HSRP ಶುಲ್ಕವನ್ನು ಅನ್ಲೈನ್ನಲ್ಲಿ ಪಾವತಿಸಿ, ಶುಲ್ಕ ಪಾವತಿಯನ್ನು ನಗದು ರೂಪದಲ್ಲಿ ಮಾಡುವಂತಿಲ್ಲ.
– ವಾಹನ ಮಾಲೀಕರ ಮೊಬೈಲ್ ಸಂಖ್ಯೆಗೆ ಒ.ಟಿ.ಪಿ ರವಾನಿಸಲಾಗುವುದು.
– ನಿಮ್ಮ ಅನುಕೂಲಕ್ಕೆ ತಕ್ಕಂತಹ HSRP ಅಳವಡಿಕೆಯ ದಿನಾಂಕ ಮತ್ತು ಸಮಯವನ್ನು ಆಯ್ಕೆ ಮಾಡಿ.
– ನಿಮ್ಮ ವಾಹನದ ಯಾವುದೇ ತಯಾರಕ/ಡೀಲರ್ ಸಂಸ್ಥೆಗೆ ಭೇಟಿ ನೀಡಿ.
– ವಾಹನ ಮಾಲೀಕರ ಕಚೇರಿ ಆವರಣ / ಮನೆಯ ಸ್ಥಳದಲ್ಲಿ HSRP ಅಳವಡಿಕೆಗಾಗಿ ಆಯ್ಕೆಯನ್ನು ಹೊಂದಬಹುದು.
HSRP ವಿಶೇಷತೆ ಏನು?
-HSRP ನೋಂದಣಿ ಫಲಕಗಳು ಅತ್ಯಂತ ಸುರಕ್ಷಿತವಾಗಿದ್ದು ಇವುಗಳನ್ನು ಬದಲಿಸುವುದು, ವಿರೂಪಗೊಳಿಸುವುದು ಸಾಧ್ಯವಿಲ್ಲ.
– ನಂಬರ್ ಪ್ಲೇಟ್ನ ಒಂದು ಬದಿಯಲ್ಲಿ ನೀಲಿ ಬಣ್ಣದ ಚಕ್ರವನ್ನು ಹೋಲುವ ಹಾಲೋಗ್ರಾಮ್ ಇರುತ್ತದೆ. ಇದರ ಕೆಳಗಡೆ 10 ನಂಬರಿನ ವಿಶಿಷ್ಟ ಗುರುತಿನ ಸಂಖ್ಯೆ ಇರುತ್ತದೆ. ಅಂಕಿಗಳ ಮೇಲೆ ಆಂಗ್ಲಭಾಷೆಯಲ್ಲಿ ‘ಇಂಡಿಯಾ’ ಎಂಬ ಪದ ಹಲವೆಡೆ ಇರುತ್ತದೆ.
– ಸುರಕ್ಷಿತ ನಂಬರ್ ಪ್ಲೇಟ್ನಲ್ಲಿ ನಂಬರ್ ಪ್ಲೇಟ್ ನಕಲು ಮಾಡುವುದು ಸಾಧ್ಯವಿಲ್ಲ.
ಈ ಸುದ್ದಿ ಓದಿ:- ಫೈನಾನ್ಸ್, ಹೋಂ ಲೋನ್, ವೆಹಿಕಲ್ ಲೋನ್, ಪರ್ಸನಲ್ ಲೋನ್, ಇನ್ನಿತರ ಸಾಲ ತೆಗೆದುಕೊಂಡಿದ್ದೀರಾ.? ಚಿಂತೆ ಮಾಡ್ಬೇಡಿ ಕಾನೂನಾತ್ಮಕ ಪರಿಹಾರ ಇಲ್ಲಿದೆ ನೋಡಿ.!
– ವಾಹನಗಳ ಕಳವು, ಅವುಗಳನ್ನು ಬಳಸಿ ಅಪರಾಧ ಚಟುವಟಿಕೆ ಮಾಡಿದಾಗ ಪರಿಶೀಲಿಸಲು ಎಚ್ಎಸ್ಆರ್ಪಿ ಸಹಕಾರಿಯಾಗಲಿದೆ.
– ರಸ್ತೆಗಳಲ್ಲಿ ಸಂಚರಿಸುವ ಎಲ್ಲ ವಾಹನಗಳನ್ನು ಗುರುತಿಸಲು ಸಹಕಾರಿ.
ನೋಂದಣಿ ಫಲಕಗಳಲ್ಲಿ ಏಕರೂಪತೆ ಖಚಿತಪಡಿಸಿಕೊಳ್ಳಲು ಸಹಾಯ ಮಾಡುತ್ತವೆ.