ರಾಜ್ಯದಲ್ಲಿ ನೂತನ ಸರ್ಕಾರ ಜಾರಿಗೆ ತಂದಿರುವ ಗ್ಯಾರಂಟಿ ಯೋಜನೆಗಳ (Gyaranty Scheme) ಪ್ರಭಾವದಿಂದ ರೇಷನ್ ಕಾರ್ಡ್ ಗೆ ಇನ್ನೆಲ್ಲಿಲ್ಲದ ಡಿಮ್ಯಾಂಡ್ ಶುರುವಾಗಿದೆ. ರೇಷನ್ ಕಾರ್ಡ್ ನಲ್ಲಿ ಕುಟುಂಬದ ಮುಖ್ಯಸ್ಥೆಯ ಸ್ಥಾನದಲ್ಲಿರುವ ಹಿರಿಯ ಮಹಿಳೆ ಮಾತ್ರ ಗೃಹಲಕ್ಷ್ಮಿ ಯೋಜನೆ (Gruhalakshmi) ರೂ.2,000 ಮತ್ತು ರೇಷನ್ ಕಾರ್ಡ್ ನಲ್ಲಿ ಸದಸ್ಯರಾಗಿರುವವರು ಮಾತ್ರ ಅನ್ನಭಾಗ್ಯ ಯೋಜನೆ (Annabhagya) ಹೆಚ್ಚುವರಿ 5Kgಅಕ್ಕಿ ಹಣವನ್ನು ಪಡೆಯಬಹುದು. (ಅನ್ನಭಾಗ್ಯ ಫಲಾನುಭವಿಗಳ ಹಣವು ಕೂಡ ಕುಟುಂಬದ ಮುಖ್ಯಸ್ಥ ಖಾತೆಗೆ ಹೋಗುತ್ತದೆ).
ಹಾಗಾಗಿ ರೇಷನ್ ಕಾರ್ಡ್ ಗಳಲ್ಲಿ ಇರುವ ಸಮಸ್ಯೆಗಳನ್ನು ತಿದ್ದುಪಡಿ ಮಾಡಿಕೊಂಡು ಈ ಕಲ್ಯಾಣ ಯೋಜನೆಗಳ ಪ್ರಯೋಜನ ಪಡೆಯಲು ಮತ್ತು ರೇಷನ್ ಕಾರ್ಡ್ ಇಲ್ಲದವರು ಹೊಸ ರೇಷನ್ ಕಾರ್ಡ್ ಗಳಿಗೆ ಅರ್ಜಿ ಸಲ್ಲಿಸಿ ರೇಷನ್ ಕಾರ್ಡ್ ಗಳನ್ನು ಪಡೆದುಕೊಳ್ಳಲು ಸರ್ಕಾರಕ್ಕೆ ಮೇಲಿಂದ ಮೇಲೆ ಮನವಿ ಸಲ್ಲಿಸುತ್ತಿದ್ದಾರೆ.
ಫೈನಾನ್ಸ್, ಹೋಂ ಲೋನ್, ವೆಹಿಕಲ್ ಲೋನ್, ಪರ್ಸನಲ್ ಲೋನ್, ಇನ್ನಿತರ ಸಾಲ ತೆಗೆದುಕೊಂಡಿದ್ದೀರಾ.? ಚಿಂತೆ ಮಾಡ್ಬೇಡಿ ಕಾನೂನಾತ್ಮಕ ಪರಿಹಾರ ಇಲ್ಲಿದೆ ನೋಡಿ.!
ತಿದ್ದುಪಡಿಗೆ ಮೂರ್ನಾಲ್ಕು ಬಾರಿ ಸರ್ಕಾರ ಅವಕಾಶ ನೀಡಿದ್ದರು ಹೊಸ ರೇಷನ್ ಕಾರ್ಡ್ ಗಳಿಗೆ ಅರ್ಜಿ ಸ್ವೀಕಾರ ಮತ್ತು ಚುನಾವಣೆ ನೀತಿ ಸಂಹಿತೆ (Code of Conduct) ಕಾರಣದಿಂದಾಗಿ ತಡೆ ಹಿಡಿಯಲಾಗಿದ್ದ ರೇಷನ್ ಕಾರ್ಡ್ ವಿಲೇವಾರಿ ಕಾರ್ಯ ನಡೆದಿಲ್ಲ. ಈಗ ವಿಧಾನಸಭಾ ಕಲಾಪದಲ್ಲಿ ಕೂಡ ಇದೇ ವಿಚಾರ ಚರ್ಚೆ ಆಗಿದೆ ಮತ್ತು ಇದು ಬಹಳ ದಿನಗಳಿಂದ ರಾಜ್ಯದಲ್ಲಿ ಚರ್ಚೆ ವಿಷಯ ಕೂಡ ಆಗಿದೆ.
ಅಂತಿಮವಾಗಿ ಈ ಬಗ್ಗೆ ಅಧಿಕೃತವಾಗಿ ಆಹಾರ ಸಚಿವರೇ (Food Minister) ರೇಷನ್ ಕಾರ್ಡ್ ನಿರೀಕ್ಷೆಯಲ್ಲಿರುವವರಿಗೆ ಸಿಹಿ ಸುದ್ದಿ ಕೊಟ್ಟಿದ್ದಾರೆ. BPL ರೇಷನ್ ಕಾರ್ಡ್ ಅರ್ಜಿ ಸಲ್ಲಿಕೆ ಆರಂಭವಾಗದೇ ಇರುವುದು & ತಿದ್ದುಪಡಿಗೆ ಅವಕಾಶ ನೀಡಿದ್ದರು ಪ್ರತಿ ಬಾರಿ ತಾಂತ್ರಿಕ ಸಮಸ್ಯೆಗಳಾಗಿ ನಾಗರಿಕರಿಗೆ ಸಮಸ್ಯೆಯಾಗುತ್ತಿದೆ.
ಈ ಸುದ್ದಿ ಓದಿ:- ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ವತಿಯಿಂದ ಮಹಿಳೆಯರಿಗೆ ಮತ್ತೊಂದು ಗುಡ್ ನ್ಯೂಸ್, ತಪ್ಪದೇ ಇಂದೇ ಅರ್ಜಿ ಸಲ್ಲಿಸಿ.!
ಅರ್ಹರಾಗಿದ್ದರು ಹಲವರ ಆಧಾರ್ ಸಂಖ್ಯೆ ಬ್ಯಾಂಕ್ ಖಾತೆ ಜೊತೆ ಲಿಂಕ್ ಆಗದೇ ಇರುವುದು, ಮತ್ತಿತರ ಸಣ್ಣ ಪುಟ್ಟ ದೋಷ ಇರುವುದು ಅಕ್ಕಿಯ ಹಣ ತಲುಪದೇ ಇರುವುದಕ್ಕೆ ಕಾರಣವಾಗಿದೆ. ಹಾಗಾಗಿ ರಾಜ್ಯದಲ್ಲಿ ಅರ್ಹ ಫಲಾನುಭವಿಗಳಿಗೆ ಹೊಸ ರೇಷನ್ ಕಾರ್ಡ್ ಮತ್ತು ತಿದ್ದುಪಡಿಗೆ ಅವಕಾಶ ಮಾಡಿಕೊಡಬೇಕೆಂದು ಶಾಸಕಿ ನಯನ ಮೋಟಮ್ಮ (MLA Nayana Motamma) ಮತ್ತು ವಿರೋಧಪಕ್ಷದ ನಾಯಕ ಆರ್ ಅಶೋಕ್ (R.Ashok) ಅವರು ಪ್ರಶ್ನೆ ಕೇಳಿದ್ದರು.
ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಸಚಿವ ಮುನಿಯಪ್ಪರವರು (Minister Muniyappa) ರವರು ಉತ್ತರಿಸಿ ವಿಧಾಸಭೆ ಚುನಾವಣೆ – 2023 (Assembly Election) ಸಮಯದಲ್ಲಿ ನೀತಿ ಸಂಹಿತೆ ಕಾಣದಿಂದಾಗಿ ರೇಷನ್ ಕಾರ್ಡ್ ಗಳ ವಿಲೇವಾರಿಯಾಗಿಲ್ಲ. ಈ ಹಿಂದೆ ಇದ್ದ ಸರ್ಕಾರ 2.95 ಲಕ್ಷ ಕಾರ್ಡ್ಗಳನ್ನು ವಿತರಿಸದೆ ಬಾಕಿ ಉಳಿಸಿಕೊಂಡಿದೆ ಆದರೆ ನಾವು ಇಲ್ಲಿಯವರೆಗೆ 57 ಸಾವಿರ ಹೊಸ ಕಾರ್ಡ್ ವಿತರಿಸಿದ್ದೇವೆ.
ಈ ಸುದ್ದಿ ಓದಿ:- Ayushman mitra recruitment: PUC ಪಾಸ್ ಆದವರಿಗೆ ಆಯುಷ್ಮಾನ್ ಭಾರತ್ ಯೋಜನೆಯಲ್ಲಿ ಉದ್ಯೋಗ, ಆಸಕ್ತರು ಅರ್ಜಿ ಸಲ್ಲಿಸಿ.! ವೇತನ 30,000/-
ಆರೋಗ್ಯ ಚಿಕಿತ್ಸೆಗಾಗಿ ಅರ್ಜಿ ಸಲ್ಲಿಸಿದವರಿಗೆ ತಕ್ಷಣ ಕಾರ್ಡ್ ವಿತರಿಸಲು ಸೂಚಿಸಲಾಗಿದೆ. ಆರೋಗ್ಯ ತುರ್ತು ಕಾರಣಕ್ಕೆ 744 ಜನರಿಗೆ BPL ಕಾರ್ಡ್ ಕೊಟ್ಟಿದ್ದೇವೆ ಎಂದು ಉತ್ತರಿಸಿದ್ದಾರೆ. ಇದರ ಜೊತೆ ಮುಂದಿನ ಮಾರ್ಚ್ 31 ರೊಳಗೆ ಸಲ್ಲಿಕೆಯಾಗಿರುವ ಅರ್ಜಿಗಳನ್ನು ಪರಿಶೀಲಿಸಿ ಕಾರ್ಡ್ಗಳನ್ನು ವಿತರಿಸುವ ತೀರ್ಮಾನವನ್ನು ತೆಗೆದುಕೊಳ್ಳಲಾಗಿದೆ, ಈ ಕುರಿತು ಆದೇಶ ಹೊರಡಿಸಲಾಗಿದೆ.
ಈ ಕೆಲಸ ಮುಗಿದ ನಂತರ ಹೊಸ BPL ಕಾರ್ಡ್ಗಳನ್ನು ವಿತರಿಸಲು ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಹೇಳಿದ್ದಾರೆ. ನೀವೇನಾದರೂ ಹೊಸ ರೇಷನ್ ಕಾರ್ಡ್ ಗೆ ಈಗಾಗಲೇ ಅರ್ಜಿ ಸಲ್ಲಿಸಿದ್ದರೆ ಬರುವ ಮಾರ್ಚ್ 31ರ ನಂತರ ಹೊಸ ರೇಷನ್ ಕಾರ್ಡ್ ನಿಮಗೆ ಸಿಗಲಿದೆ.