Deprecated: strtolower(): Passing null to parameter #1 ($string) of type string is deprecated in /home/u302298408/domains/rishithepower.com/public_html/wp-content/plugins/taboola/simple_html_dom.php on line 712
ಸರ್ಕಾರ ಘೋಷಿಸಿರುವ ಗ್ಯಾರಂಟಿ ಯೋಜನೆಗಳಲ್ಲಿ ಮಹಿಳೆಯರದ್ದೇ ಮೇಲುಗೈ. ಶಕ್ತಿ ಯೋಜನೆ ಮೂಲಕ ಉಚಿತ ರಾಜ್ಯದ ಗಡಿಯೊಳಗೆ ಎಲ್ಲಾ ಮಹಿಳೆಯರಿಗೂ ಸರ್ಕಾರಿ ಬಸ್ ಗಳಲ್ಲಿ ಪ್ರಯಾಣ, ಅನ್ನಭಾಗ್ಯ ಯೋಜನೆ ಮೂಲಕ ಆಹಾರ ಇಲಾಖೆ ವತಿಯಿಂದ ಹೆಚ್ಚುವರಿ ಅಕ್ಕಿ ಹಣವು ಕುಟುಂಬದ ಮುಖ್ಯಸ್ಥೆ ಆಗಿರುವ ಮಹಿಳೆ ಖಾತೆಗೆ ಬರುತ್ತಿದೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ವತಿಯಿಂದ ಗೃಹಲಕ್ಷ್ಮಿ ಯೋಜನೆಯಡಿ ಕುಟುಂಬದ ಮುಖ್ಯಸ್ಥರಿಗೆ ಪ್ರತಿ ತಿಂಗಳು ರೂ.2000 ಸಹಾಯಧನ ಸಿಗುತ್ತಿದೆ.
ಇದರ ಜೊತೆಗೆ ಮತ್ತೊಮ್ಮೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ವತಿಯಿಂದ ಮತ್ತೊಂದು ಗುಡ್ ನ್ಯೂಸ್ ಇದೆ. ಅದೇನೆಂದರೆ, ಪ್ರಸ್ತುತ ವಿವಿಧ 6 ಜಿಲ್ಲೆಗಳಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರ ಹುದ್ದೆಗಳ ಭರ್ತಿಗೆ ನೇಮಕಾತಿ ಅಧಿಸೂಚನೆಯನ್ನು ಸರ್ಕಾರದಿಂದ ಬಿಡುಗಡೆ ಮಾಡಿದೆ. ಯಾವ್ಯಾವ ಜಿಲ್ಲೆಯಲ್ಲಿ ಹುದ್ದೆ ಖಾಲಿ ಇದೆ? ಅರ್ಜಿ ಸಲ್ಲಿಸಲು ಅರ್ಹತೆಗಳೇನು? ಅರ್ಜಿ ವಿಧಾನ ಹೇಗೆ ಇತ್ಯಾದಿ ಮಾಹಿತಿಯನ್ನು ಈ ಅಂಕಣದಲ್ಲಿ ಹಂಚಿಕೊಳ್ಳುತ್ತಿದ್ದೇವೆ.
ಈ ಸುದ್ದಿ ಓದಿ:- ಕಡಿಮೆ ಖರ್ಚಿನಲ್ಲಿ ಕನಸಿನ ಮನೆ ನಿರ್ಮಾಣಕ್ಕೆ ಇಲ್ಲಿದೆ ಸುಲಭ ಉಪಾಯ.! ಮನೆ ಕಟ್ಟುವ ಆಸೆ ಇರುವವರು ತಪ್ಪದೆ ನೋಡಿ.!
ನೇಮಕಾತಿ ಇಲಾಖೆ:- ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ
ಒಟ್ಟು ಹುದ್ದೆಗಳ ಸಂಖ್ಯೆ:- 1000+
ಹುದ್ದೆಗಳ ವಿವರ:-
* ಅಂಗನವಾಡಿ ಕಾರ್ಯಕರ್ತೆ
* ಅಂಗನವಾಡಿ ಸಹಾಯಕಿ
ಉದ್ಯೋಗ ಸ್ಥಳ:-
* ಬೆಂಗಳೂರು ಗ್ರಾಮೀಣ ಜಿಲ್ಲೆ
* ಬೆಂಗಳೂರು ನಗರ ಜಿಲ್ಲೆ
* ಬೆಳಗಾವಿ
* ಬೀದರ್
* ಹಾವೇರಿ
* ತುಮಕೂರು
ವೇತನ ಶ್ರೇಣಿ:-
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಮಾಸಿಕವಾಗಿ ರೂ.10,000 ದವರೆಗೆ ವೇತನ ಇರುತ್ತದೆ.
ಶೈಕ್ಷಣಿಕ ವಿದ್ಯಾರ್ಹತೆ:-
* ಅಂಗನವಾಡಿ ಕಾರ್ಯಕರ್ತೆ ಹುದ್ದೆಗಳಿಗೆ 12ನೇ ತರಗತಿ / ಡಿಪ್ಲೊಮ ECCE / ತತ್ಸಮಾನ ವಿದ್ಯಾರ್ಹತೆ ಹೊಂದಿರಬೇಕು
* ಅಂಗನವಾಡಿ ಸಹಾಯಕಿ ಹುದ್ದೆಗಳಿಗೆ 10ನೇ ತರಗತಿ ಉತ್ತೀರ್ಣರಾಗಿರಬೇಕು
* ಅಂಗವಿಕಲರು / ಆತ್ಮಹತ್ಯೆ ಮಾಡಿಕೊಂಡರೆ ರೈತನ ಪತ್ನಿ / ಆಸಿಡ್ ದಾಳಿಗೆ ಒಳಗಾದವರು / ವಿಧವೆಯರು / ವಿಚ್ಛೇದಿತೆ / ಯೋಜನ ನಿರಾಶ್ರಿತರಿಗೆ ಆದ್ಯತೆ ನೀಡಲಾಗುತ್ತದೆ.
ವಯೋಮಿತಿ:-
* ಅರ್ಜಿ ಸಲ್ಲಿಸಲು ಕನಿಷ್ಠ ವಯೋಮಿತಿ 18 ವರ್ಷಗಳು
* ಅರ್ಜಿ ಸಲ್ಲಿಸಲು ಗರಿಷ್ಠ ವಯೋಮಿತಿ 35 ವರ್ಷಗಳು
ಅರ್ಜಿ ಸಲ್ಲಿಸುವ ವಿಧಾನ:-
* ಆನ್‌ಲೈನ್ ನಲ್ಲಿ ಅರ್ಜಿ ಸಲ್ಲಿಸಬೇಕು
* https://anganwadirecruit.kar.nic.in ವೆಬ್ಶಸೈಟ್ ಗೆ ಭೇಟಿ ನೀಡಿ.
* ಉದ್ಯೋಗ ಬಯಸುವ ಜಿಲ್ಲೆ, ನೇಮಕಾತಿ ಬಯಸುವ ಹುದ್ದೆಯನ್ನು ಆಯ್ಕೆ ಮಾಡಿ.
* ಅರ್ಜಿ ಸಲ್ಲಿಸಲು ಬಯಸುವ ಅಂಗನವಾಡಿ ಕೇಂದ್ರವನ್ನು ಆಯ್ಕೆ ಮಾಡಿ
* ಆನ್‌ಲೈನ್ ನಲ್ಲಿ ಅರ್ಜಿ ಫಾರ್ಮ್ ಓಪನ್ ಆಗುತ್ತದೆ, ಕೇಳಿರುವ ಅಗತ್ಯ ಮಾಹಿತಿಗಳನ್ನು ಭರ್ತಿ ಮಾಡಿ, ದಾಖಲೆಗಳನ್ನು ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡಿ.
* ಕೊನೆಯಲ್ಲಿ ತಪ್ಪದೇ ಅರ್ಜಿ ಪ್ರತಿ ಪಡೆದುಕೊಳ್ಳಿ.
ಈ ಸುದ್ದಿ ಓದಿ:- ಪೋಸ್ಟ್ ಆಫೀಸ್ ನ ಈ ಸ್ಕೀಮ್ ನಲ್ಲಿ ಜಸ್ಟ್ 10 ಸಾವಿರ ಡೆಪಾಸಿಟ್ ಮಾಡಿ, 7 ಲಕ್ಷಕ್ಕಿಂತಲೂ ಅಧಿಕ ಹಣ ಪಡೆಯಿರಿ.!
ಆಯ್ಕೆ ವಿಧಾನ:-
ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳ ವಿದ್ಯಾರ್ಹತೆ ಮೆರಿಟ್ ಮತ್ತು ಮೀಸಲಾತಿಗಳ ಆಧಾರದ ಮೇಲೆ ನೇಮಕಾತಿ ಮಾಡಿಕೊಳ್ಳಲಾಗುವುದು.
ಪ್ರಮುಖ ದಿನಾಂಕಗಳು:-
* ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ – 16 ಜನವರಿ, 2024
* ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ – 15 ಫೆಬ್ರವರಿ, 2024.
ಬೇಕಾಗುವ ದಾಖಲೆಗಳು:-
* ಅಭ್ಯರ್ಥಿಯ ಜನನ ಪ್ರಮಾಣ ಪತ್ರ / ಜನ್ಮ ದಿನಾಂಕ ಇರುವ SSLC, PUC ಅಂಕಪಟ್ಟಿ.
* ವಾಸಸ್ಥಳ ದೃಢೀಕರಣ ಪತ್ರ.
* ವಿದ್ಯಾರ್ಹತೆ ಬಗ್ಗೆ ಪ್ರಮಾಣ ಪತ್ರ.
* ಮೀಸಲಾತಿ ಮತ್ತು ಜಾತಿ ಪ್ರಮಾಣ ಪತ್ರ.
* ಅಂಗವಿಕಲೆಯಾಗಿದ್ದಲಿ ಪ್ರಮಾಣ ಪತ್ರ
* ವಿಧವೆಯಾಗಿದ್ದಲ್ಲಿ ಪತಿಯ ಮರಣ ಪ್ರಮಾಣ ಪತ್ರ.
* ಆತ್ಮಹತ್ಯೆ ಮಾಡಿಕೊಂಡ ರೈತರ ಪತ್ನಿಯಾಗಿದ್ದಲ್ಲಿ ಉಪವಿಭಾಗಾಧಿಕಾರಿಗಳಿಂದ ಪಡೆದ ಪ್ರಮಾಣ ಪತ್ರ.
* ಯೋಜನಾ ನಿರಾಶ್ರಿತರಾಗಿದ್ದಲ್ಲಿ ಪ್ರಮಾಣ ಪತ್ರ.
* ವಿಚ್ಛೇದಿತರಾಗಿದ್ದಲ್ಲಿ ಪ್ರಮಾಣ ಪತ್ರ.