ಇಡೀ ಭೂಮಂಡಲವನ್ನು ಬೆಳಗುತ್ತಿರುವುದು ಸೂರ್ಯ ದೇವರು ಎನ್ನುವುದು ಎಲ್ಲರಿಗೂ ಗೊತ್ತು. ಈ ಸೂರ್ಯದೇವನು ಶಕ್ತಿ, ಅಭಿವೃದ್ಧಿ ಹಾಗೂ ಸಕಾರಾತ್ಮಕತೆಯ ಸಂಕೇತ. ಸೂರ್ಯನಿಂದಲೇ ಆರೋಗ್ಯ, ಸೂರ್ಯನಿಂದಲೇ ಚೈತನ್,ಯ ಸೂರ್ಯನಿಂದಲೇ ಎಲ್ಲವೂ ಈ ಸೂರ್ಯದೇವನು ಏಳು ಕುದುರೆಗಳ ರಥವನ್ನು ಏರಿ ಬರುತ್ತಾನೆ ಎನ್ನುವುದು ನಮ್ಮ ಪುರಾಣಗಳ ನಂಬಿಕೆ.
ಹಾಗಾಗಿ ಅನೇಕ ಮನೆಗಳಲ್ಲಿ ಏಳು ಕುದುರೆಗಳ ಫೋಟೋ ಹಾಕಿದರೆ ಮನೆಗೆ ಒಳ್ಳೆಯದಾಗುತ್ತದೆ, ಕಚೇರಿಗಳಲ್ಲಿ ಹಾಕಿದರೆ ವ್ಯಾಪಾರ ವ್ಯವಹಾರ ಅಭಿವೃದ್ಧಿ ಆಗುತ್ತದೆ ಎಂದು ಏಳು ಕುದುರೆಗಳ ಫೋಟೋಗಳನ್ನು ಹಾಕಿರುತ್ತಾರೆ. ಇದನ್ನು ಹಾಕುವುದು ಒಳ್ಳೆಯದೇ ಆದರೆ ಹಾಕುವ ವಿಧಾನದಲ್ಲಿ ತಪ್ಪಾದರೆ ಇದರಿಂದಲೇ ನಿಮ್ಮ ನೆಮ್ಮದಿ ಹಾಳಾಗುತ್ತದೆ ಹಾಗಾಗಿ ಇದನ್ನು ಹಾಕುವ ಸರಿಯಾದ ವಿಧಾನದ ಬಗ್ಗೆ ಕೆಲ ಪ್ರಮುಖ ಅಂಶಗಳನ್ನು ತಿಳಿದುಕೊಳ್ಳಿ.
* ನೀವು ಮನೆಗೆ ಅಥವಾ ಕಚೇರಿಗೆ ಹಾಕಲು ತೆಗೆದುಕೊಳ್ಳಲಾಗುವ ಈ ಏಳು ಓಡುವ ಕುದುರೆಗಳ ಚಿತ್ರಪಟದಲ್ಲಿ ಕುದುರೆಗಳಿಗೆ ಲಗಾಮು ಹಾಕಿರಬಾರದು.
* ಕುದುರೆಗಳ ಮುಖದಲ್ಲಿ ಆಕ್ರೋಶ, ಕೋಪ ಇಲ್ಲದೆ ಶಾಂತವಾಗಿರುವಮಂದಸ್ಮಿತದಿಂದಿರುವವಂತೆ ಕಾಣುವ ಅಶ್ವಗಳಿರುವ ಫೋಟೋವನ್ನು ಹಾಕಬೇಕು.
* ಏಳು ಕುದುರೆಗಳು ಕೂಡ ಸರಳ ರೇಖೆಯಲ್ಲಿ ಅಥವಾ ಸಮ್ಮಿತಿಯಿಂದ ಯಾವುದೇ ಅಡೆತಡೆ ಇಲ್ಲದೆ ಓಡುತ್ತಿರುವ ರೀತಿ ಇರುವ ಫೋಟೋವಾಗಿರಬೇಕು.
* ಕುದುರೆಗಳು ತೆರೆದ ನೆಲದ ಮೇಲೆ ಓಡುತ್ತಿರುವಂತಿರಬೇಕು ಆದಷ್ಟು ನೀರಿನ ಮೇಲೆ ಓಡುತ್ತಿರುವಂತೆ ಇರುವ ಫೋಟೋಗಳನ್ನು ಹಾಕದಿರುವುದು ಒಳ್ಳೆಯದು.
* ಸಾಮಾನ್ಯವಾಗಿ ಬಿಳಿ ಹವಗಳ ಫೋಟೋ ಖರೀದಿಸುತ್ತಾರೆ ಆದರೂ ಕೆಂಪು ಮಿಶ್ರಿತ ಕಂದು ಬಣ್ಣದಲ್ಲಿರುವ ಫೋಟೋಗಳು ಕೂಡ ಸಿಗುತ್ತವೆ ಇದು ಮಂಗಳ ಗ್ರಹದ ಪ್ರಭಾವವನ್ನು ಸೂಚಿಸುತ್ತದೆ. ಇದು ವ್ಯಕ್ತಿಯ ಸ್ಥಾಭಿಮಾನವನ್ನು ಹೆಚ್ಚಿಸುವುದಕ್ಕೆ ಸಹಾಯ ಮಾಡುತ್ತದೆ.
* ನೀಲಿ ಬಣ್ಣದಲ್ಲಿ ಚಿಂತಿಸಿರುವ ಅಶ್ವಗಳು ಶನಿ ಗ್ರಹವನ್ನು ಪ್ರತಿಬಿಂಬಿಸುತ್ತವೆ. ಸಾಮರಸ್ಯ ಹಾಗೂ ಶಾಂತಿಯನ್ನು ಆಹ್ವಾನಿಸುತ್ತದೆ.
* ಬಿಳಿ ಬಣ್ಣದ ಅಶ್ವಗಳು ಶಾಂತಿ ಹಾಗೂ ಪರಿಶುದ್ಧತೆಯನ್ನು ಸಂಕೇತಿಸುತ್ತವೆ ಮತ್ತು ಧನಾರ್ಕರ್ಷಣೆ ಉಂಟು ಮಾಡುತ್ತವೆ.
* ಕುದುರೆ ಫೋಟೋವನ್ನು ವ್ಯಾಪಾರ ವ್ಯವಹಾರ ಕಚೇರಿ ಮುಂತಾದ ಕಡೆ ಹಾಕುವಾಗ ದಕ್ಷಿಣದ ಗೋಡೆಗೆ ಹಾಕಬೇಕು, ಕುದುರೆಗಳು ಯಾವಾಗಲೂ ಉತ್ತರ ದಿಕ್ಕನ್ನು ನೋಡುತ್ತಿರುವ ರೀತಿ ಇರಬೇಕು.
* ಮನೆಯಲ್ಲಿ ಕುದುರೆ ಪಟವನ್ನು ಹಾಕುವುದಾದರೆ ವಾಸ್ತು ಶಾಸ್ತ್ರಜ್ಞರನ್ನು ಕೇಳಿ ನಿಮ್ಮ ಮನೆಯ ವಾಸ್ತು ಪ್ರಕಾರವಾಗಿ ಈ ಚಿತ್ರವನ್ನು ಹಾಕಬೇಕು.
* ಓಡುವ ಬಿಳಿ ಕುದುರೆಗಳ ಫೋಟೋ ಹಾಕಲು ಸೂಕ್ತ ಸ್ಥಳ ಎಂದರೆ ಮನೆಯ ಹಾಲ್.
* ಯಾವುದೇ ಕಾರಣಕ್ಕೂ ಮನೆಯಲ್ಲಿನ ಯಾವುದೇ ಕಿಟಕಿ ಅಥವಾ ಬಾಗಿಲುಗಳ ಮೇಲೆ ಈ ಚಿತ್ರವನ್ನು ಹಾಕಬಾರದು.
* ಅಡುಗೆ ಮನೆ, ವಾಶ್ ರೂಂ, ದೇವರ ಕೋಣೆ, ಓದುವ ಕೋಣೆ, ಬೆಡ್ರೂಮ್ ಈ ಗೋಡೆಗಳಿಗೆ ಅಥವಾ ಇವುಗಳ ಬಾಗಿಲಿಗೆ ಮತ್ತು ಮನೆಯ ಮುಖ್ಯದ್ವಾರದ ಎದುರಿಗೆ ಕೂಡ ಏಳು ಅಶ್ವಗಳು ಓಡುವ ಫೋಟೋವನ್ನು ಹಾಕಬಾರದು.
* ವ್ಯಾಪಾರ ಸ್ಥಳಗಳಲ್ಲಿ ಈ ಫೋಟೋವನ್ನು ಹಾಕುವುದಾದರೆ ದಕ್ಷಿಣದ ಮುಖ್ಯ ದ್ವಾರದ ಮಧ್ಯದಲ್ಲಿ, ಹೊರಗಿನಿಂದ ಒಳಗೆ ಬರುತ್ತಿರುವ ರೀತಿ ಮತ್ತು ಉತ್ತರದ ಕಡೆಗೆ ಕುದುರೆಗಳು ನೋಡುತ್ತಿರುವ ರೀತಿಯಲ್ಲಿ ಹಾಕಬೇಕು, ಹಾಗಿದ್ದಾಗ ಮಾತ್ರ ಆದರೆ ಶುಭ ಫಲಗಳು ಸಿಗುತ್ತವೆ.
* ವೃತ್ತಿಜೀವನದಲ್ಲಿ ಬೆಳವಣಿಗೆಯನ್ನು ಬಳಸುತ್ತಿರುವವರು ಮಾತ್ರ ಪೂರ್ವ ದಿಕ್ಕಿನಲ್ಲಿ ಈ ಫೋಟೋವನ್ನು ಹಾಕಬಹುದು.
* ಉದ್ಯೋಗ ಹಾಗೂ ಹಣಕಾಸಿನ ಅಭಿವೃದ್ಧಿಗಾಗಿ ಉತ್ತರ ದಿಕ್ಕಿನಲ್ಲಿ ಈ ಫೋಟೋವನ್ನು ಹಾಕಿದರೆ ಅದೃಷ್ಟ ಬರುತ್ತದೆ ಎಂದು ಹೇಳಲಾಗುತ್ತದೆ.
* ಜೋಡಿ ಕುದುರೆಗಳು ಇರುವ ಫೋಟೋವನ್ನು ಬೆಡ್ರೂಮ್ ನಲ್ಲಿ ಹಾಕಬಹುದು, ಆಗ ದಾಂಪತ್ಯದಲ್ಲಿನ ಕಡಿಮೆ ಆಗುತ್ತದೆ ಎಂದು ಹೇಳಲಾಗುತ್ತದೆ.