ಸಾರ್ವಜನಿಕ ವಲಯದ ಬೃಹತ್ ಬ್ಯಾಂಕ್ ಗಳಲ್ಲಿ ಒಂದಾಗಿರುವ ಕೆನರಾ ಬ್ಯಾಂಕ್ (CANARA bank) ತನ್ನಲ್ಲಿ ಠೇವಣಿ (fixed deposit) ಇಡುವ ಗ್ರಾಹಕರ ಬಡ್ಡಿ ದರವನ್ನು (hike interest rate) ಹೆಚ್ಚಳ ಮಾಡಿ ಸಿಹಿಸುದ್ದಿ ನೀಡಿದೆ.
ಕೆನರಾ ಬ್ಯಾಂಕ್ ನಲ್ಲಿ ಏಳು ದಿನಗಳಿಂದ 10 ವರ್ಷಗಳವರೆಗೂ ಕೂಡ ಗ್ರಾಹಕರು ಡೆಪಾಸಿಟ್ ಹೇಳಬಹುದು. ಈವರೆಗೂ ಕನಿಷ್ಠ 4% ನಿಂದ ಗರಿಷ್ಠ 6.70% ಸಿಗುತ್ತಿತ್ತು, ಪರಿಷ್ಕರಣೆಯ ಬಳಿಕ 7.75% ವರೆಗೂ ಕೂಡ ಇದು ಏರಿಕೆಯಾಗಲಿದೆ. ಈ ಆರ್ಥಿಕ ವರ್ಷದಲ್ಲಿ ಇದು ಎರಡನೇ ತ್ರೈಮಾಸಿಕ ಪರೀಷ್ಕರಣೆಯಾಗಿದೆ.
ಪ್ರತಿ ತ್ರೈ ಮಾಸಿಕಕ್ಕೂ ಕೂಡ ಬ್ಯಾಂಕ್ ಗಳು ತಮ್ಮ ಬಡ್ಡಿದರವನ್ನು ಪರಿಷ್ಕರಿಸುತ್ತವೆ. ಕೆನರಾ ಬ್ಯಾಂಕ್ನ ಅಧಿಕೃತ ವೆಬ್ಸೈಟ್ ಪ್ರಕಾರ, ಕೆನರಾ ಬ್ಯಾಂಕ್ ಪರಿಷ್ಕೃತ FD ದರಗಳು ಅಕ್ಟೋಬರ್ 27, 2023 ರಿಂದ ಜಾರಿಗೆ ಬರುತ್ತಿದೆ.
ಕೆನರಾ ಬ್ಯಾಂಕ್ ನಲ್ಲಿ ಸದ್ಯದ ಬಡ್ಡಿದರದ ವಿವರ ಹೀಗಿದೆ :-
* ಕೆನರಾ ಬ್ಯಾಂಕ್ 7 ರಿಂದ 45 ದಿನಗಳ ವರೆಗೂ ಹಣವನ್ನು ಡೆಪಾಸಿಟ್ ಇಡಬಹುದು. ಇದು ಕಡಿಮೆ ಅವಧಿಯ ಡೆಪಾಸಿಟ್ ಆಗಿರುವುದರಿಂದ ಇವುಗಳ ಮೇಲೆ 4%ರಷ್ಟು ಬಡ್ಡಿದರ ನೀಡುತ್ತಿದೆ.
* ಹಾಗೆಯೇ ಕೆನರಾ ಬ್ಯಾಂಕ್ ನ 46 ರಿಂದ 90 ದಿನಗಳಲ್ಲಿ ಮೆಚ್ಯೂರ್ ಆಗುವ ಡೆಪಾಸಿಟ್ಗಳ ಮೇಲೆ ಶೇಕಡ 5.25% ಬಡ್ಡಿದರ ಸಿಗುತ್ತಿದೆ.
* ಕೆನರಾ ಬ್ಯಾಂಕ್ ನಲ್ಲಿ 91 ಮತ್ತು 179 ದಿನಗಳ ನಡುವಿನ ಅವಧಿಯ ಡೆಪಾಸಿಟ್ಗಳಿಗೆ 5.50% ಬಡ್ಡಿದರ ಸಿಗುತ್ತದೆ.
* 180 ರಿಂದ 269 ದಿನಗಳ ಅವಧಿಗೆ ಮಾಡಿದ ಠೇವಣಿಗಳಿಗೆ 6.15% ಬಡ್ಡಿದರ ಸಿಗುತ್ತಿದೆ.
* 270 ದಿನಗಳಿಂದ 1 ವರ್ಷದ ಅವಧಿಯ ಠೇವಣಿಗಳಿಗೆ 6.25% ಬಡ್ಡಿದರ ಅನ್ವಯವಾಗುತ್ತಿದೆ.
* ನಿಖರವಾಗಿ ಒಂದು ವರ್ಷಕ್ಕೆ ಕೊನೆಯಾಗುವ ಡೆಪಾಸಿಟ್ಗಳ ಮೇಲಿನ ಬಡ್ಡಿ ದರವು 6.90% ಆಗಿದೆ.
* ಈ ಹೊಸ ಘೋಷಣೆಯ ಪ್ರಕಾರ, 444 ದಿನಗಳಲ್ಲಿ ಮೆಚ್ಯೂರ್ ಆಗುವ ಠೇವಣಿಗಳ ಮೇಲೆ ಕೆನರಾ ಬ್ಯಾಂಕ್ ಗರಿಷ್ಠ 7.25% ಬಡ್ಡಿದರ ನೀಡಲಿದೆ.
* ಕೆನರಾ ಬ್ಯಾಂಕ್ ನಲ್ಲಿ 1 ವರ್ಷದಿಂದ 3 ವರ್ಷಕ್ಕಿಂತ ಕಡಿಮೆ ಅವಧಿ ಡೆಪಾಸಿಟ್ಗೆ 6.85% ಬಡ್ಡಿದರವನ್ನು ನೀಡುತ್ತಿದೆ.
* 3 ವರ್ಷ ಮತ್ತು 3 – 5 ವರ್ಷಕ್ಕಿಂತ ಕಡಿಮೆ ಅವಧಿಯ ಠೇವಣಿಗಳ ಮೇಲೆ 6.80% ರಷ್ಟು ಬಡ್ಡಿದರ ಸಿಗುತ್ತದೆ.
* 5 ವರ್ಷ ಮತ್ತು 5 – 10 ವರ್ಷಗಳಿಗಿಂತ ಕಡಿಮೆ ಅವಧಿಯ ಠೇವಣಿ ಮೇಲೆ ಕೆನರಾ ಬ್ಯಾಂಕ್ 6.70% ಬಡ್ಡಿದರವನ್ನು ಜಮೆ ಮಾಡುತ್ತದೆ.
* ಕೆನರಾ ಬ್ಯಾಂಕ್ ಮಾತ್ರವಲ್ಲದೇ ಎಲ್ಲಾ ಬ್ಯಾಂಕ್ ಗಳು ಹಿರಿಯ ನಾಗರಿಕರಿಗೆ 0.50% ರಷ್ಟು ಹೆಚ್ಚಿನ ಬಡ್ಡಿದರವನ್ನು ನೀಡುತ್ತವೆ. * * ಕೆನರಾ ಬ್ಯಾಂಕ್ ನಲ್ಲಿ ಹಿರಿಯ ನಾಗರಿಕರು 2 ಕೋಟಿ ಮತ್ತು 180 ದಿನಗಳು ಅಥವಾ ಅದಕ್ಕಿಂತ ಹೆಚ್ಚಿನ ಅವಧಿಗೆ FD ಇಟ್ಟರೆ ಹಿರಿಯ ನಾಗರಿಕರಿಗೆ ಸಾಮಾನ್ಯ ನಾಗರಿಕರಿಗಿಂತ ಅಧಿಕ ಬಡ್ಡಿ ಸಿಗುತ್ತದೆ.
* ಸದ್ಯಕ್ಕೆ ಅತಿ ಹೆಚ್ಚು ಆಕರ್ಷಣೀಯವಾಗಿರುವ ಸ್ಕೀಮ್ ಎಂದರೆ ಕೆನರಾ ಬ್ಯಾಂಕ್ ನ 444 ದಿನಗಳ FD. ಇದರ ಮೇಲೆ ಕೆನರಾ ಬ್ಯಾಂಕ್ 80 ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ಸೂಪರ್ ಸೀನಿಯರ್ ಸಿಟಿಜನ್ಗಳಿಗೆ ಹೆಚ್ಚವರಿಯಾಗಿ ಶೇಕಡ 0.6% ರಷ್ಟು ಬಡ್ಡಿದರವನ್ನು ನೀಡುತ್ತಿದೆ.
* ಕಾಲೇಬಲ್ ಡೆಪಾಸಿಟ್ಗಳಿಗೆ 7.85%, ನಾನ್ ಕಾಲೇಬಲ್ ಡೆಪಾಸಿಟ್ಗಳಿಗೆ 8%ರಷ್ಟು ಬಡ್ಡಿದರ ಸಿಗುತ್ತಿದೆ.