PF ಚಂದಾದಾರರಿಗೆ ಗುಡ್ ನ್ಯೂಸ್, ಬಡ್ಡಿ ಮೊತ್ತವನ್ನು ಖಾತೆಗಳಿಗೆ ಜಮೆ ಮಾಡಲಾಗುತ್ತಿದೆ, ಮನೆಯಲ್ಲಿ ಕುಳಿತು ಅಕೌಂಟ್ ಬ್ಯಾಲೆನ್ಸ್ ಚೆಕ್ ಮಾಡಬಹುದು ಹೇಗೆ ಅಂತ ನೋಡಿ.!
ದೀಪಾವಳಿಯ ಶುಭ ಸಂದರ್ಭದಲ್ಲಿ ನೌಕರರ ಭವಿಷ್ಯ ನಿಧಿ ಸಂಘಟನೆ (EPFO) ಖಾತೆ ಹೊಂದಿರುವವರಿಗೆ ಸಿಹಿ ಸುದ್ದಿ ಇದೆ. EPFO ತನ್ನ ಚಂದಾದಾರರ ಖಾತೆಗಳಿಗೆ ಬಡ್ಡಿಯನ್ನು ಪಾವತಿಸುವ ಕೆಲಸ ಆರಂಭಿಸಿದೆ. 2022-23 ರ ಹಣಕಾಸು ವರ್ಷದ ಬಡ್ಡಿ ದರವು 8.15% ಹೆಚ್ಚಳವಾಗಿದ್ದು, ಕೇಂದ್ರ ಕಾರ್ಮಿಕ ಸಚಿವ ಭೂಪೇಂದ್ರ ಯಾದವ್ ದೇಶದ 24 ಕೋಟಿಗೂ ಹೆಚ್ಚು PF ಖಾತೆಗಳಲ್ಲಿ ಬಡ್ಡಿ ಹಣ ಜಮೆಯಾಗಿದೆ ಎಂದು ಹೇಳಿದ್ದಾರೆ.
ಸಂಘಟಿತ ವಲಯದಲ್ಲಿ ಕೆಲಸ ಮಾಡುವ ಉದ್ಯೋಗಿಯ ಮೂಲ ವೇತನದಲ್ಲಿ 12% ರಷ್ಟು ಹಣ ಕಡಿತ ಮಾಡಿ ಅದನ್ನು ಅವರ EPF ಖಾತೆಗೆ ಜಮಾ ಮಾಡಲಾಗುತ್ತದೆ. ಉದ್ಯೋಗದಾತರು ಮಾಡಿದ 12% ಕಡಿತದಲ್ಲಿ, 8.33% ನೌಕರ ಪಿಂಚಣಿ ಯೋಜನೆಗೆ (EPS) ಹೋಗುತ್ತದೆ, ಆದರೆ ಉಳಿದ 3.67% EPF ಗೆ ಹೋಗುತ್ತದೆ.
ಖಾತೆಯಲ್ಲಿ ಠೇವಣಿ ಇಡಲಾದ ಖಾತೆದಾರರ ಮೊತ್ತವನ್ನು EPFO ಸಂಸ್ಥೆಯು ಹಲವು ಕಡೆ ಹೂಡಿಕೆ ಮಾಡಿರುತ್ತದೆ, ಈ ಹೂಡಿಕೆಯಿಂದ ಬಂದ ಲಾಭದಲ್ಲೂ ಒಂದು ಭಾಗವನ್ನು ಖಾತೆದಾರರಿಗೆ ಬಡ್ಡಿಯ ರೂಪದಲ್ಲಿ ನೀಡುತ್ತದೆ. ಪ್ರಸ್ತುತವಾಗಿ 1 ಲಕ್ಷ ರೂಪಾಯಿಗೆ 8,150 ರೂ. ಬಡ್ಡಿ ಸಿಗಲಿದೆ.
EPF ಖಾತೆ ಬ್ಯಾಲೆನ್ಸ್ ಚೆಕ್ ಮಾಡುವ ವಿಧಾನ:-
1. EPFO ನ ಅಧಿಕೃತ ವೆಬ್ಸೈಟ್ epfindia.gov.in ಗೆ ಭೇಟಿ ನೀಡುವ ಮೂಲಕ ಬ್ಯಾಲೆನ್ಸ್ ಚೆಕ್ ಮಾಡಬಹುದು.
* ಈ ಸೈಟ್ಗೆ ಭೇಟಿ ನೀಡ, e-passbook ಆಕ್ಷನ್ ನ್ನು ಕ್ಲಿಕ್ ಮಾಡಿ.
* ನಂತರ, ನಿಮ್ಮ UAN ಸಂಖ್ಯೆ, Password ಕೇಳಲಾಗುತ್ತದೆ ಅದನ್ನು ನಮೂದಿಸಿ ಮತ್ತು Captcha ಎಂಟ್ರಿ ಮಾಡಿ, ನಿಮ್ಮ PF ಖಾತೆಗೆ ಸಂಬಂಧಿಸಿದ ಮಾಹಿತಿಯನ್ನು ನೋಡಬಹುದು.
* ಇಲ್ಲಿ ನೀವು ನಿಮ್ಮ IDಯನ್ನು ಕಾಣುವಿರಿ, ನೀವು ಅದನ್ನು ಕ್ಲಿಕ್ ಮಾಡಿ e-passbook ನಲ್ಲಿ PF ಬ್ಯಾಲೆನ್ಸ್ ನೋಡಬಹುದು.
2. ಮಿಸ್ ಕಾಲ್ ಕೊಡುವ (through Missed call) ಮೂಲಕ ಕೂಡ ತಿಳಿದುಕೊಳ್ಳಬಹುದು.
* ನಿಮ್ಮ PF ಖಾತೆಗೆ ಲಿಂಕ್ ಆಗಿರುವ ಮೊಬೈಲ್ ಸಂಖ್ಯೆಯಿಂದ ನೀವು 011-22901406 ಗೆ ಮಿಸ್ಡ್ ಕಾಲ್ ಮಾಡಿದರೆ, ಮಿಸ್ಡ್ ಕಾಲ್ ಮಾಡಿದ ತಕ್ಷಣವೇ ಆ ಮೊಬೈಲ್ ಸಂಖ್ಯೆಗೆ ನಿಮ್ಮ ಪಿಎಫ್ ಬ್ಯಾಲೆನ್ಸ್ ಮಾಹಿತಿಯ ಸಂದೇಶ ಬರುತ್ತದೆ.
3. ನೀವು SMS ಮೂಲಕ PF ಖಾತೆಯ ಬ್ಯಾಲೆನ್ಸ್ ಅನ್ನು ಪರಿಶೀಲಿಸಬಹುದು.
* ನಿಮ್ಮ UAN ಸಂಖ್ಯೆಯನ್ನು EPFO ನಲ್ಲಿ ನೋಂದಾಯಿಸಿಕೊಂಡಿರಬೇಕು.
* ನೋಂದಾಯಿತ ಮೊಬೈಲ್ ಸಂಖ್ಯೆಯಿಂದ EPFOHO UAN ಸಂಖ್ಯೆಯನ್ನು 7738299899 ಗೆ SMS ಮಾಡಿ.
* ನಿಮ್ಮ EPF ಖಾತೆಗೆ ಸಂಬಂಧಿತ ಮಾಹಿತಿಯನ್ನು ಯಾವ ಭಾಷೆಯಲ್ಲಿ ಪಡೆಯಲು ಬಯಸುತ್ತೀರಾ ಎಂದು ಆರಿಸಬೇಕು. ಉದಾಹರಣೆಗೆ, ಹಿಂದಿ ನಿಮ್ಮ ಆಯ್ಕೆ ಆಗಿದ್ದರೆ ನೀವು EPFOHO UAN HIN ಅನ್ನು ಬರೆಯುವ ಮೂಲಕ ಸಂದೇಶವನ್ನು ಕಳುಹಿಸಬೇಕಾಗುತ್ತದೆ.
* ಆಗ ನೀವು ಆರಿಸಿದ ಭಾಷೆಯಲ್ಲಿ ಖಾತೆಯ ವಿವರ ಬರುತ್ತದೆ.
4. ಉಮಾಂಗ್ ಆಪ್ (through UMANG App) ಮೂಲಕ ಕೂಡ ತಿಳಿದುಕೊಳ್ಳಬಹುದು.
* ಮೊದಲಿಗೆ ಉಮಾಂಗ್ ಆಪ್ ಅನ್ನು ಡೌನ್ಲೋಡ್ ಮಾಡಿ.
* ನಿಮ್ಮ ಫೋನ್ ಸಂಖ್ಯೆಯನ್ನು ನೋಂದಾಯಿಸಿ ಅಪ್ ಗೆ ಲಾಗಿನ್ ಆಗಿ.
* ಪೇಜ್ ಎಡಭಾಗದಲ್ಲಿರುವ ಮನುವಿನ ಸೇವಾ ಡೈರೆಕ್ಟರಿ ಗೆ ಹೋಗಿ.
* EPFO ಆಯ್ಕೆಯನ್ನು ಹುಡುಕಿ ಮತ್ತು ಕ್ಲಿಕ್ ಮಾಡಿ, ಪಾಸ್ ಬುಕ್ ವೀಕ್ಷಿಸಿ ಆಯ್ಕೆ ಕ್ಲಿಕ್ ಮಾಡಿ ನಿಮ್ಮ UAN ಸಂಖ್ಯೆ ಮತ್ತು OTP ನಮೂದಿಸುವ ಮೂಲಕ ಬ್ಯಾಲೆನ್ಸ್ ಪರಿಶೀಲಿಸಬಹುದು.