ಪ್ರತಿಯೊಬ್ಬರಿಗೂ ಜೀವನದಲ್ಲಿ ಹಣಕಾಸಿನ ಅವಶ್ಯಕತೆ ಇದ್ದೇ ಇರುತ್ತದೆ. ಕೆಲವರಿಗೆ ಅಗತ್ಯಕ್ಕೆ ತಕ್ಕ ಹಾಗೆ ಉಳಿತಾಯ ಇದ್ದರೆ ಹಲವರಿಗೆ ಅದು ಸಾಲದೆ ಸಾಲ ಮಾಡುವ ಪರಿಸ್ಥಿತಿ ಬರುತ್ತದೆ. ಯಾವುದೋ ಒಂದು ಹೊಸ ಪ್ರಯತ್ನದಲ್ಲಿ ನಮ್ಮ ಬಳಿ ಇರುವ ಬಂಡವಾಳ ಸಾಕಾಗದೆ ಇದ್ದಾಗ ಸಾಲಕ್ಕೆ ಕೈ ಹಾಕಲೇಬೇಕು.
ಜನಸಾಮಾನ್ಯರು ಸಾಲಗಳಿಗೆ ಬ್ಯಾಂಕ್ ಗಳ ಅಥವಾ ಹಣಕಾಸು ಸಂಸ್ಥೆಗಳ ಮೊರೆ ಹೋಗುತ್ತಾರೆ. ಗೃಹ ಸಾಲ, ಶೈಕ್ಷಣಿಕ ಸಾಲ, ವಾಹನ ಸಾಲ, ವಾಣಿಜ್ಯ ಸಾಲ, ವೈಯಕ್ತಿಕ ಸಾಲ ಇನ್ನಿತರ ಸಾಲಗಳನ್ನು ಪಡೆದು ತಮ್ಮ ಉದ್ದೇಶವನ್ನುಪೂರೈಸಿಕೊಳ್ಳಳುತ್ತಾರೆ. ಸಾಲ ತೆಗೆದುಕೊಳ್ಳುವ ಸಮಯದಲ್ಲಿಯೇ ಸಾಲ ಮರುಪಾವತಿಯ ಬಗ್ಗೆ ನಿಬಂಧನೆಗಳು ಇರುತ್ತವೆ.
ಆದರೆ ಕೆಲವು ಸಂದರ್ಭಗಳಲ್ಲಿ ಸರಿಯಾದ ಸಮಯಕ್ಕೆ ಸಾಲಕ್ಕೆ ಬಡ್ಡಿ ಅಥವಾ ವಂತಿಕೆಗಳನ್ನು ಕಟ್ಟಲು ಆಗುವುದಿಲ್ಲ ಅಂತಹ ಸಮಯಗಳಲ್ಲಿ ಬ್ಯಾಂಕ್ ಗಳು ವಿಳಂಬ ಶುಲ್ಕವನ್ನು ವಿಧಿಸುವುದು ಬಿಟ್ಟು ಅವರು ಪಾವತಿಸಬೇಕಾಗಿದ್ದ ಬಡ್ಡಿಗೂ ಕೂಡ ಚಕ್ರಬಡ್ಡಿ ಹಾಕಿ ಅಥವಾ EMI ಗಳ ಮೇಲೂ ಕೂಡ ಚಕ್ರ ಬಡ್ಡಿ ಹಾಕಿ ರಕ್ತ ಹೀರುತ್ತವೆ.
ಇವುಗಳಿಂದ ಗ್ರಾಹಕರು ಸಾಕಷ್ಟು ರೋಸಿ ಹೋಗಿದ್ದರು ಮತ್ತು ಇವುಗಳಿಂದ ಪರಿಹಾರ ಕೊಡಿಸುವಂತೆ RBI ಮೊರೆ ಹೋಗಿದ್ದರು. ಇವುಗಳ ಪರಿಶೀಲನೆ ನಡೆಸಿದ RBI ಅಂತಿಮವಾಗಿ ಗ್ರಾಹಕರ ಪರ ನಿಂತಿದ್ದು ಈ ರೀತಿ ಬಡ್ಡಿಯ ಮೇಲೆ ಬಡ್ಡಿ ಹಾಕಿ ಹಣ ದೋಚುವ ಬ್ಯಾಂಕ್ ಗಳಿಗೆ ಎಚ್ಚರಿಕೆ ಸಂದೇಶ ನೀಡಿ ಹೊಸ ಆದೇಶವೊಂದನ್ನು ಹೊರಡಿಸಿದೆ.
ಈ ಗ್ರಾಹಕ ಸ್ನೇಹಿ ಕಾನೂನು ಇದೇ ಜನವರಿ 2024 ರಿಂದ ಈ ಕುರಿತಾದ ಹೊಸ ನಿಯಮ ರಾಜ್ಯದಾದ್ಯಂತ ಜಾರಿಗೆ ಬರಲಿದ್ದು, ಇನ್ನು ಮುಂದೆ ಬ್ಯಾಂಕ್ ಗಳು ಈ ಆದೇಶ ಮೀರಿ ನಡೆದುಕೊಂಡರೆ ಗ್ರಾಹಕರು ನೇರವಾಗಿ RBIನಲ್ಲಿ ದೂರು ದಾಖಲಿಸಬಹುದು ಮತ್ತು RBI ಆ ಬ್ಯಾಂಕ್ ಮತ್ತು ಹಣಕಾಸು ಸಂಸ್ಥೆಗಳ ಮೇಲೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುತ್ತದೆ.
RBI ನ ಹೊಸ ಆದೇಶದಲ್ಲಿರುವ ನಿಯಮಗಳು:-
* RBI ಈಗ ಹೊಸ ಅಧಿಸೂಚನೆ ಪ್ರಕಾರ, ಸಾಲಗಳು EMI ಪಾವತಿ ಒಂದೆರಡು ತಿಂಗಳು ವಿಳಂಬವಾದರೆ ಬ್ಯಾಂಕುಗಳು ಬಡ್ಡಿಯ ಮೇಲೆ ಬಡ್ಡಿ ವಿಧಿಸುವಂತಿಲ್ಲ. ಹೆಚ್ಚೆಂದರೆ ಕೆಲ ಸಂದರ್ಭದಲ್ವಿ ವಿಳಂಬ ಶುಲ್ಕ ವಿಧಿಸಬಹುದು ಅಷ್ಟೇ.
* ಸಾಲಗಳಿಗೆ ಬಡ್ಡಿಯನ್ನು ನಿಗದಿ ಮಾಡುವ ಸಮಯದಲ್ಲಿ ನಿಗದಿತ ಬಡ್ಡಿಯನ್ನ ಮಾತ್ರ ಹಾಕಬೇಕು ಎಂದು RBI ನಿಯಮ ಜಾರಿಗೆ ತಂದಿದೆ.
* ಸಾಲಗಾರನ ಒಪ್ಪಿಯನ್ನು ಪಡೆಯದೇ EMI ಮೊತ್ತ ಏರಿಸುವುದು ಅಥವಾ ಸಾಲದ ಅವಧಿಯನ್ನ ಏರಿಸುವುದು ಇಂತಹ ಯಾವುದೇ ಬದಲಾವಣೆಯನ್ನು ಅನುಮತಿ ಇಲ್ಲದೆ ಮಾಡುವಂತಿಲ್ಲ ಎಂದು RBI ಬ್ಯಾಂಕುಗಳಿಗೆ ತಿಳಿಸಿದೆ.
* ಸಾಲದ ಅವಧಿಯನ್ನು ಯಾವುದಾದರೂ ಸಂದರ್ಭದಲ್ಲಿ ವಿಸ್ತರಣೆ ಮಾಡಬೇಕಾಕಿ ಬಂದರೆ ಅಥವಾ EMI ನಲ್ಲಿ ಬದಲಾವಣೆ ಜಾರಿಗೆ ತರಬೇಕಾದ ಅನಿವಾರ್ಯತೆ ಇದ್ದರೆ ಸಾಲಗಾರರಿಗೆ ತ್ವರಿತವಾಗಿ ತಿಳಿಸಬೇಕು ಎಂದು RBI ತನ್ನ ನಿಯಮದಲ್ಲಿ ತಿಳಿಸಿದೆ.
* ಸಾಲದ ಮೊತ್ತವನ್ನ ಗ್ರಾಹಕರು ಯಾವುದೇ ಸಮಯದಲ್ಲಿ ಸಂಪೂರ್ಣವಾಗಿ ಅಥವಾ ಭಾಗಶಃ ಮರುಪಾವತಿ ಮಾಡಲು ಇಚ್ಚಿಸಿದರೆ ಬ್ಯಾಂಕುಗಳು ಅವಕಾಶವನ್ನ ಮಾಡಿಕೊಟ್ಟು ನಂತರ ಉಳಿದ ಮೊತ್ತಕ್ಕೆ ಲೆಕ್ಕಾಚಾರ ಹಾಕಬೇಕು ಎಂದು ತಿಳಿಸಿದೆ.
* EMI ಪಾವತಿ ಮಾಡುವುದು ತಡವಾದರೆ EMI ನೆಪದಲ್ಲಿ ಗ್ರಾಹಕರಿಂದ ಬಡ್ಡಿ ವಸೂಲಿ ಮಾಡುವಂತೆ ಇಲ್ಲ ಎನ್ನುವುದು ಸಹ ಈ ನಿಯಮದಲ್ಲಿ ಸೇರಿದೆ.