ಕರ್ನಾಟಕದ (Karnataka ) ಆಡಳಿತ ವಹಿಸಿಕೊಂಡಿರುವ ಕಾಂಗ್ರೆಸ್ ಪಕ್ಷವು (Congress party) ಚುನಾವಣೆ ಪೂರ್ವವಾಗಿ ನೀಡಿದ್ದ ಮಾತಿನಂತೆ ಐದು ಗ್ಯಾರಂಟಿ ಯೋಜನೆಗಳ (Guarantee Scheme) ಪೈಕಿ ಈಗ ನಾಲ್ಕು ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿದೆ.
ಇದರಲ್ಲಿ ಮಹತ್ವಕಾಂಕ್ಷಿಯ ಯೋಜನೆಯಾದ ಗೃಹಲಕ್ಷ್ಮಿ ಯೋಜನೆ (Gruhalakshmi Scheme) ಜಾರಿಯಾಗಿ ರಾಜ್ಯದ ಕೋಟ್ಯಂತರ ಮಹಿಳೆಯರು ಗೃಹಲಕ್ಷ್ಮಿ ಯೋಜನೆಯ ಸಹಾಯಧನವನ್ನು ಪಡೆಯುತ್ತಿದ್ದಾರೆ. ಕರ್ನಾಟಕ ರಾಜ್ಯದಲ್ಲಿ ಒಟ್ಟು 1.1 0 ಕೋಟಿ ಮಹಿಳೆಯರು ಗೃಹಲಕ್ಷ್ಮಿ ಯೋಜನೆಗೆ ನೋಂದಾಯಿಸಿಕೊಂಡದ್ದಾರೆ.
ಮೊದಲನೇ ಸಮಯದಲ್ಲಿ ಇದರಲ್ಲಿ ಶೇಕಡ 80% ರಷ್ಟು ಮಹಿಳೆಯರು ಮತ್ತು ಎರಡನೇ ಕಂತಿನ ಹಣ ಬಿಡುಗಡೆ ಸಮಯದಲ್ಲಿ 90% ಮಹಿಳೆಯರಿಗೆ ಹಣ ತಲುಪಿಸಲಾಗಿದೆ. ಈಗ ಮೂರನೇ ಕಂತಿನ ಹಣ ಕೊಡ ವರ್ಗಾವಣೆ ಆಗುತ್ತಿದ್ದು ಈ ಬಾರಿ ನೂರಕ್ಕೆ ನೂರರಷ್ಟು ಎಲ್ಲಾ ಫಲಾನುಭವಿಗಳು ಹಣ ಪಡೆಯುವಂತಾಗಬೇಕು ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ (KWCWD) ಕೂಡ ಶ್ರಮ ಪಡುತ್ತಿದೆ.
ಗೃಹಲಕ್ಷ್ಮಿ ಯೋಜನೆಗೆ ಮೂರು ತಿಂಗಳು ಸಮೀಸುತ್ತಿರುವ ಸಂದರ್ಭದಲ್ಲಿ ಮಾನ್ಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆಯಾದ ಲಕ್ಷ್ಮಿ ಹೆಬ್ಬಾಳಕರ್ (Minister Lakshmi Hebbalkar ) ಅವರು ಕೂಡ ಇಲಾಖೆ ಅಧಿಕಾರಿಗಳೊಂದಿಗೆ ಗೃಹಲಕ್ಷ್ಮಿ ಯೋಜನೆ ಪರಿಶೀಲನ ಸಭೆ ಕೂಡ ನಡೆಸಿದ್ದಾರೆ.
ಈ ಸಂದರ್ಭದಲ್ಲಿ ಗೃಹಲಕ್ಷ್ಮೀ ಯೋಜನೆ ಕುರಿತು ಅನೇಕ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ತಿಳಿದು ಬಂದಿದೆ ಯಾರಿಗೆಲ್ಲ ಅರ್ಜಿ ಸಲ್ಲಿಸಿದರು ಕೂಡ ಗೃಹಲಕ್ಷ್ಮಿ ಯೋಜನೆಯ ಹಣ ಪಡೆಯಲಾಗಿಲ್ಲ ಅವರು ಮೂರನೇ ಕಂತಿನ ವೇಳೆಗೆ ಒಟ್ಟು ಮೂರು ಕಂತುವಿನ ಹಣವಾದ ರೂ.6,000 ನ್ನು ಪಡೆಯಲಿದ್ದಾರೆ.
ಪ್ರತಿ ಮನೆ ಮನೆಗೂ ಕೂಡ ಇಲಾಖೆ ಅಧಿಕಾರಿಗಳು ಮತ್ತು ಆಯಾ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುವ ಅಂಗನವಾಡಿ ಕಾರ್ಯಕರ್ತೆಯರು ಬಂದು ಸರ್ವೆ ನಡೆಸಿ ಹಣ ಪಡೆದುಕೊಳ್ಳಲು ಯಾರಿಗೆಲ್ಲ ಸಮಸ್ಯೆ ಆಗಿದೆ ಅದಕ್ಕೆ ಪರಿಹಾರ ಸೂಚಸಲ್ಲಿದ್ದಾರೆ ಇದರ ಬಗ್ಗೆ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಆದೇಶ ನೀಡಲಾಗಿದೆ ಎಂದು ತಿಳಿದು ಬಂದಿದೆ.
ಈಗ ಮತ್ತೊಮ್ಮೆ ಗೃಹಲಕ್ಷ್ಮಿ ಯೋಜನೆ ಕುರಿತು ಮತ್ತೊಂದು ಬಿಗ್ ಅಪ್ಡೇಟ್ ಇದೆ. ಅದೇನೆಂದರೆ ಗೃಹಲಕ್ಷ್ಮಿ ಯೋಜನೆಯ ಮೂರನೇ ಕಂತಿನ ಹಣ ಕೂಡ ವರ್ಗಾವಣೆ ಆಗಿದೆ. ನವೆಂಬರ್ 15ನೇ ತಾರೀಕಿನಂದು ಮೂರನೇ ಕಂತಿರ ಹಣ ಬಿಡುಗಡೆ ಆಗಿದ್ದು ಹಂತ ಹಂತವಾಗಿ ಇದು ಎಲ್ಲರಿಗೂ ತಲುಪಲಿದೆ.
ಜಿಲ್ಲಾವಾರು ಅಥವಾ ಇನ್ಯಾವುದೇ ಮಾನದಂಡವನ್ನು ಸರ್ಕಾರ ತೆಗೆದುಕೊಂಡಿಲ್ಲ ನೇರವಾಗಿ ಮಹಿಳೆಯರ ಖಾತೆಗೆ ಹಣ ವರ್ಗಾವಣೆ ಮಾಡಿದೆ ಆದರೆ ಫಲಾನುಭವಿಗಳ ಸಂಖ್ಯೆ ಹೆಚ್ಚಾಗಿರುವುದರಿಂದ ಎಲ್ಲರಿಗೂ ಯೋಜನೆ ಸಂಪೂರ್ಣವಾಗಿ ತಲುಪಲು ಕೆಲ ಸಮಯ ಹಿಡಿಯಬಹುದು. ಇನ್ನು ಮುಂದೆ ಗೃಹಲಕ್ಷ್ಮಿ ಯೋಜನೆಯ ಹಣವು ಒಂದು ನಿಗದಿತ ದಿನಾಂಕದಂದು ಬಿಡುಗಡೆ ಮಾಡಲು ಕೂಡ ಸರ್ಕಾರ ಚಿಂತನೆ ನಡೆಸುತ್ತಿದೆ.
ಯಾಕೆಂದರೆ ಗೃಹಲಕ್ಷ್ಮಿ ಯೋಜನೆ ಹಣ ಬಿಡುಗಡೆ ಆದಾಗ ಮಹಿಳೆಯರು ಹಣ ಬಂದಿದೆಯೋ ಇಲ್ಲವೋ ಎಂದು ಗೊಂದಲಕ್ಕೊಳಗಾಗಿ ಅದನ್ನು ಚೆಕ್ ಮಾಡಿಸಲು ಬ್ಯಾಂಕ್ ಗಳ ಮುಂದೆ ಸರದಿ ನಿಲ್ಲುತ್ತಾರೆ. ಈ ಸಮಸ್ಯೆ ತಪ್ಪಿಸಲು ಒಂದು ನಿಗದಿತ ದಿನಾಂಕವನ್ನು ಗೊತ್ತು ಪಡಿಸಿ ಹಣ ಬಿಡುಗಡೆ ಮಾಡಿದರೆ ಅನುಕೂಲವಾಗುತ್ತದೆ ಎಂದು ಯೋಚಿಸಲಾಗಿದೆ.
ಪ್ರತಿ ತಿಂಗಳ 15ರಿಂದ 20ರ ಒಳಗೆ ಸಂಪೂರ್ಣವಾಗಿ ಎಲ್ಲಾ ಮಹಿಳೆಯರ ಖಾತೆಗೂ ಹಣ ತಲುಪಿಸಬೇಕು ಎಂದು ಸರ್ಕಾರ ಚಿಂತನೆ ನಡೆಸುತ್ತಿದೆ, ಮುಂದೆ ಯಾವ ರೀತಿ ಕ್ರಮ ಕೈಗೊಳ್ಳಲಿದೆಯೋ ಕಾದು ನೋಡೋಣ. ಸದ್ಯಕ್ಕೆ ಮೂರನೇ ಕಂತಿನ ಹಣ ಬಿಡುಗಡೆ ಆಗಿದ್ಯೋ ಇಲ್ಲವೋ ಎಂದು ನಿಮಗೆ ಗೊಂದಲದಿದ್ದರೆ, ಬ್ಯಾಂಕ್ ಶಾಖೆಗೆ ಭೇಟಿ ಕೊಟ್ಟು ತಪ್ಪದೇ ಮಾಹಿತಿ ಪಡೆದುಕೊಳ್ಳಿ.