ದೀಪಾವಳಿ ಹಬ್ಬದ ಶುಭ ಸಂದರ್ಭದಲ್ಲಿ ತನ್ನ ಗ್ರಾಹಕರಿಗೆ ಭಾರತದ ಸಾರ್ವಜನಿಕ ವಲಯದ ಬ್ಯಾಂಕ್ಗಳಲ್ಲಿ ಒಂದು ಪ್ರಮುಖ ಬ್ಯಾಂಕ್ ಎನಿಸಿಕೊಡಿರುವ ಪಂಜಾಬ್ ನ್ಯಾಷನಲ್ ಬ್ಯಾಂಕ್ (Punjab National Bank) ಉಡುಗೊರೆ ನೀಡಿದೆ ಪಂಜಾಬ್ ನ್ಯಾಷನಲ್ ಬ್ಯಾಂಕ್ ನಲ್ಲಿ ಸ್ಥಿರ ಠೇವಣಿ ಇಡುವ ಗ್ರಾಹಕರಿಗೆ ಬಂಪರ್ ಆಫರ್ ನೀಡಿದ್ದು, 50 ಮೂಲ ಅಂಕಗಳನ್ನು ಹೆಚ್ಚಿಸಿದೆ.
ಈ ಹೊಸ ದರವು ನವೆಂಬರ್ 1, 2023 ರಿಂದಲೇ ಅನ್ವಯವಾಗುತ್ತಿತ್ತು 2 ಕೋಟಿ ಗಿಂತ ಕಡಿಮೆ ಠೇವಣಿ ಇಡುವ ಗ್ರಾಹಕರು ಮಾತ್ರ ಇದರ ಪ್ರಯೋಜನವನ್ನು ಪಡೆಯಬಹುದಾಗಿದೆ. ಪರಿಷ್ಕರಣೆಯಾಗಿರುವ ದರದ ಪ್ರಕಾರ ಎಷ್ಟು ದಿನಗಳ ಠೇವನೆ ಅವಧಿಗೆ ಎಷ್ಟು ಬಡ್ಡಿದರ ಅನ್ವಯವಾಗಲಿದೆ ಎನ್ನುವುದರ ವಿವರ ಹೀಗಿದೆ ನೋಡಿ.
* 7 ದಿನಗಳಿಂದ 14 ದಿನಗಳ ಅವಧಿಯ ಠೇವಣಿಗೆ ಸಾಮಾನ್ಯರಿಗೆ 3.50%, ಹಿರಿಯ ನಾಗರಿಕರಿಗೆ ಬಡ್ಡಿ ದರ 4%.
* 15 ದಿನಗಳಿಂದ 29 ದಿನಗಳ ಅವಧಿಗೆ ಸಾಮಾನ್ಯ ಜನರಿಗೆ 3.50%, ಹಾಗೆಯೇ ಹಿರಿಯ ನಾಗರಿಕರಿಗೆ 4%.
* 30 ದಿನಗಳಿಂದ 45 ದಿನಗಳ ಅವಧಿಯ ಠೇವಣಿಗೆ ಸಾಮಾನ್ಯ ಜನರಿಗೆ 3.50%, ಹಿರಿಯ ನಾಗರಿಕರಿಗೆ 4%.
* 46 ದಿನಗಳಿಂದ 90 ದಿನಗಳ ಅವಧಿಗೆ ಸಾಮಾನ್ಯ ಜನರಿಗೆ 4.50%, ಹಿರಿಯ ನಾಗರಿಕರಿಗೆ 5%.
* 91 ದಿನಗಳಿಂದ 179 ದಿನಗಳ ಅವಧಿಯ ಠೇವಣಿಗಳಿಗೆ ಸಾಮಾನ್ಯ ಜನರಿಗೆ 4.50%, ಹಿರಿಯ ನಾಗರಿಕರಿಗೆ 5%.
* 180 ದಿನಗಳಿಂದ 270 ದಿನಗಳ ಠೇವಣಿ ಮೇಲೆ ಸಾಮಾನ್ಯ ಜನರಿಗಗಾದರೆ 6%, ಹಿರಿಯ ನಾಗರಿಕರಿಗೆ 6.50%.
* 271 ದಿನಗಳಿಂದ 1 ವರ್ಷಕ್ಕಿಂತ ಕಡಿಮೆ ಅವಧಿಯ ಠೇವಣಿಗಳಿಗೆ ಸಾಮಾನ್ಯ ಜನರಿಗೆ 6.25%, ಹಿರಿಯ ನಾಗರಿಕರಿಗೆ 6.75%.
* 1 ವರ್ಷದ ಅವಧಿಯ ಠೇವಣಿಗೆ ಸಾಮಾನ್ಯಜನರಿಗಗೆ 6.75%, ಹಿರಿಯ ನಾಗರಿಕರಿಗೆ 7.25%.
* 1 ವರ್ಷದಿಂದ 443 ದಿನಗಳ ಅವಧಿಯ ಠೇವಣಿಗೆ ಸಾಮಾನ್ಯ ಜನರಿಗೆ 6.80%, ಹಿರಿಯ ನಾಗರಿಕರಿಗೆ 7.30%.
* 444 ದಿನಗಳ ಅವಧಿಯ ಠೇವಣಿಗೆ ಸಾಮಾನ್ಯ ಜನರಿಗೆ 7.25%, ಹಿರಿಯ ನಾಗರಿಕರಿಗೆ 7.75%.
* 445 ರಿಂದ 665 ದಿನಗಳ ಅವಧಿಯ ಠೇವಣಿಗೆ ಸಾಮಾನ್ಯ ಜನರಿಗೆ 6.80%, ಹಿರಿಯ ನಾಗರಿಕರು 7.30%.
* 666 ದಿನಗಳ ಅವಧಿಯ ಠೇವಣಿಗೆ ಸಾಮಾನ್ಯ ಜನರಿಗೆ 7.05%, ಹಿರಿಯ ನಾಗರಿಕರಿಗೆ 7.55%.
* 667 ದಿನಗಳಿಂದ 2 ವರ್ಷಗಳವರೆಗಿನ ಠೇವಣಿಗಳಿಗಾದರೆ ಸಾಮಾನ್ಯ ಜನರಿಗೆ 6.80%, ಹಿರಿಯ ನಾಗರಿಕರಿಗಾದರೆ 7.30%.
* 2 ರಿಂದ 3 ವರ್ಷಗಳ ಮೇಲ್ಪಟ್ಟ ಠೇವಣಿಗಳಿಗೆ ಸಾಮಾನ್ಯ ಜನರಿಗಗಾದರೆ 7%, ಹಿರಿಯ ನಾಗರಿಕರಿಗೆ 7.50%.
* 3 ರಿಂದ 5 ವರ್ಷಗಳ ಮೇಲ್ಪಟ್ಟ ಠೇವಣಿಗಳಿಗೆ ಸಾಮಾನ್ಯ ಜನರಿಗೆ 6.50%, ಹಿರಿಯ ನಾಗರಿಕರಿಗೆ 7%.
* 5 ವರ್ಷದಿಂದ 10 ವರ್ಷಗಳ ಅವಧಿಯ ಠೇವಣಿಗಳಿಗೆ ಸಾಮಾನ್ಯ ಜನರಿಗೆ 6.50%, ಹಿರಿಯ ನಾಗರಿಕರಿಗೆ 7.30%.
* 444 ದಿನಗಳಿಗಿಂತ ಹೆಚ್ಚಿನ ಅವಧಿಯ ಠೇವಣಿಗಳಿಗೆ ಸಾಮಾನ್ಯರಿಗೆ 7.25%, ಹಿರಿಯ ನಾಗರಿಕರಿಗೆ 7.75%.ಮತ್ತು ಸೂಪರ್ ಹಿರಿಯ ನಾಗರಿಕರಿಗೆ ಅಂದರೆ 70 ವರ್ಷ ಮೇಲ್ಪಟ್ಟವರಿಗೆ 8.05% ಸಿಗಲಿದೆ ಇದಕ್ಕಿಂತಲೂ ಹೆಚ್ಚಿನ ಮಾಹಿತಿ ಬೇಕಾಗಿದ್ದಲ್ಲಿ ಬ್ಯಾಂಕ್ ನ ಅಧಿಕೃತ ವೆಬ್ಸೈಟ್ಗೆ ಭೇಟಿ ಕೊಟ್ಟು ಮಾಹಿತಿ ಪಡೆದುಕೊಳ್ಳಬಹುದು, ಅಥವಾ ಹತ್ತಿರದಲ್ಲಿರುವ PNB ಬ್ಯಾಂಕ್ ಶಾಖೆಗೆ ಭೇಟಿ ನೀಡಿ ತಿಳಿದುಕೊಳ್ಳಬಹುದು.