ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಕೋಟ ಎನ್ನುವ ಸ್ಥಳದಲ್ಲಿ ಕುಂದಾಪುರದಿಂದ 11 ಕಿಲೋಮೀಟರ್ ದೂರದಲ್ಲಿರುವ ಶ್ರೀ ಅಮೃತೇಶ್ವರ ಸನ್ನಿಧಾನವು ಹಲವು ಮಕ್ಕಳ ತಾಯಿ ದೇವಸ್ಥಾನ ಎಂದೇ ಪ್ರಸಿದ್ಧವಾಗಿದೆ.
ಈ ಸ್ಥಳದ ವಿಶೇಷತೆ ಏನೆಂದರೆ ಈ ದೇವಸ್ಥಾನಕ್ಕೆ ಮದುವೆಯಾಗಿ 10-15 ವರ್ಷಗಳಾಗಿದ್ದರು ಮಕ್ಕಳಾಗದ ದಂಪತಿ ಇಲ್ಲಿಗೆ ಭೇಟಿ ಕೊಟ್ಟರೆ ಸಂತಾನ ಭಾಗ್ಯವನ್ನು ಪಡೆಯುತ್ತಾರೆ ಎಂದು ಪ್ರತೀತಿ ಮತ್ತು ಯಾವುದೇ ರೀತಿಯ ವೈದ್ಯಕೀಯ ಆರೋಗ್ಯ ಸಮಸ್ಯೆಗಳು ಇದ್ದರೂ, ಚರ್ಮ ವ್ಯಾದಿ ಇದ್ದರೂ, ವಿವಾಹ ವಿಳಂಬವಾಗಿದ್ದರೂ ಕೂಡ ಈ ದೇವಸ್ಥಾನಕ್ಕೆ ಹೋಗಿ ಭಕ್ತಿಯಿಂದ ಶ್ರೀ ಅಮೃತೇಶ್ವರಿಯನ್ನು ಕೇಳಿಕೊಂಡರೆ, ನೀವಂದುಕೊಂಡ ಸಮಯದಲ್ಲಿ ಖಂಡಿತವಾಗಿಯೂ ಸಮಸ್ಯೆ ಪರಿಹಾರ ಆಗುತ್ತದೆ.
ಈ ದೇವಸ್ಥಾನದ ಸುತ್ತ ಲಿಂಗಗಳ ರೂಪದಲ್ಲಿ ಕಲ್ಲುಗಳು ಉದ್ಭವಾಗುತ್ತಿದ್ದು ಇದು ಸಾವಿರಾರು ಸಂಖ್ಯೆಯಲ್ಲಿದೆ ಮತ್ತು ಇದರ ಮೂಲ ಕಂಡು ಹಿಡಿಯಲು ಯಾರಿಗೂ ಸಾಧ್ಯವಾಗಿಲ್ಲ ಹಾಗಾಗಿ ಶ್ರೀ ಅಮೃತೇಶ್ವರಿ ಅಮ್ಮನವರನ್ನು ಹಲವು ಮಕ್ಕಳ ತಾಯಿ ಎಂದು ಕರೆಯುತ್ತಾರೆ ಹೀಗೆ ಕರೆಯಲು ಒಂದು ಕಥೆಯ ಹಿನ್ನೆಲೆ ಕೂಡ ಇದೆ.
ಇದು ತೇತ್ರಾಯುಗದ ಸನ್ನಿವೇಶ ಒಂದನ್ನು ವಿವರಿಸುತ್ತದೆ ರಾವಣನ ಆತ್ಮೀಯ ಸ್ನೇಹಿತನಾದ ಕರ ಎನ್ನುವ ರಾಕ್ಷಸನು ಕೂಡ ಲಂಕೆಯಿಂದ ಉತ್ತರದಲ್ಲಿದ್ದ ಈ ದಂಡಕಾರಣ್ಯ ಎನ್ನುವ ಪ್ರದೇಶದಲ್ಲಿ ಧರ್ಮನಿಷ್ಟನಾಗಿ ಆಳ್ವಿಕೆ ಮಾಡುತ್ತಿದ್ದ ಈತನ ಧರ್ಮಪತ್ನಿ ಕುಂಭಿಮುಖಿ ಶೂರ್ಪಣಕಿಯ ಕಾರಣದಿಂದಾಗಿ ತಪ್ಪಾಗಿ ಶಾಪಗ್ರಸ್ತಳಾಗುತ್ತಾಳೆ,
ರಿಷಿ ಕುಮಾರ ಎನ್ನುವ ಮಗನನ್ನು ಕೊಂದ ಕಾರಣಕ್ಕಾಗಿ ಆತನ ತಾಯಿ ಮಹರ್ಷಿಪತ್ನಿ ಅತಿಪ್ರಭೆ ಶೂರ್ಪಣಕಿ ಎಂದು ತಿಳಿದು ಕುಂಭಿಮುಖಿಗೆ ಮಕ್ಕಳಾಗದಿರಲಿ ಎಂದು ಶಾಪ ನೀಡುತ್ತಾಳೆ. ಬಳಿಕ ಕರಾಸುರ ಹಾಗೂ ಕುಂಭಿಮುಖಿ ಶುಕ್ರಾಚಾರ್ಯರ ಬಳಿ ಮನವಿ ಸಲ್ಲಿಸಿದಾಗ ಶುಕ್ರಾಚಾರರ್ಯರು ಮಮಾಯಾಸುರನ ಬಳಿ ಇರುವ ಜೇಷ್ಠ ಶಿವಲಿಂಗವನ್ನು ತಂದು ಪೂಜಿಸಲು ದಂಪತಿಗಳಿಗೆ ಆದೇಶಿಸುತ್ತಾರೆ.
ಈ ರೀತಿ ದಂಪತಿಗಳು ಒಂದು ವರ್ಷಗಳ ಕಾಲ ಕಠಿಣ ವ್ರತ ಕೈಗೊಂಡಾಗ ಪ್ರತ್ಯಕ್ಷವಾದ ಉಮಾಮಹೇಶ್ವರರು ಕರಾಸುರನು ವಿಷ್ಣು ಅವತಾರದಿಂದ ಸಂಹಾರನಾಗುತ್ತಾನೆ ಆತನಿಗೆ ಮೋಕ್ಷ ಸಿಗುತ್ತದೆ ಎಂದು ಹೇಳಿ ಕುಂಭೀಮುಖಿ ಈ ಸ್ಥಳದಲ್ಲಿ ಅಮೃತೇಶ್ವರಿಯನ್ನು ಪೂಜಿಸುವಂತೆ ಆದೇಶಿಸುತ್ತಾರೆ.
ಅದೇ ರೀತಿ ಅಮೃತೇಶ್ವರನ ಪೂಜಿಸುತ್ತಿದ್ದ ಕುಂಭಿಮುಖಿಗೆ ಒಂದು ದಿನ ತಾಯಿ ಪ್ರತ್ಯಕ್ಷವಾಗಿ ವರ ಕೇಳಿದಾಗ ಈಗಾಗಲೇ ಖುಷಿ ಪತ್ನಿ ಶಾಪ ಇರುವುದರಿಂದ ತನಗೆ ಮಕ್ಕಳಾಗಲಿ ಎನ್ನುವುದರ ಬದಲು ಶಿವನಂತಿರುವ ಹಲವು ಮಕ್ಕಳನ್ನು ನೀವು ಪಡೆಯಿರಿ ಎಂದು ಕೇಳಿಕೊಳ್ಳುತ್ತಾಳೆ.
ಆಗ ಅಮೃತೇಶ್ವರಿಯ ಪ್ರಸನ್ನಳಾಗಿ ಕರಾಸುರ ಸಂಹಾರವಾದ ನಂತರ ನೀನು ನನ್ನಲ್ಲಿ ಐಕ್ಯಳಾಗುತ್ತಿಯಾ ಎಂದು ತಿಳಿಸಿ ಅದೃಶ್ಯರಾಗುತ್ತಾರೆ ಎಂದು ಹೇಳಲಾಗುತ್ತದೆ. ಹೀಗೆ ಅನಾದಿ ಕಾಲದಿಂದಲೂ ಈ ಸ್ಥಳದಲ್ಲಿ ಅಮೃತೇಶ್ವರಿಯನ್ನು ಆರಾಧಿಸುತ್ತಾ ಬರಲಾಗುತ್ತಿದೆ.
ವಿರಾಜಮಾನಳಾಗಿ ಅಮೃತೇಶ್ವರಿ ಈ ಸನ್ನಿಧಾನದಲ್ಲಿ ನಿತ್ಯ ಪೂಜೆ ಪಡೆಯುತ್ತಾ ನೆಲೆಸಿದ್ದಾರೆ. ಜೊತೆಗೆ ಶ್ರೀ ಮಾರಿಕಾಂಬ, ವೀರಭದ್ರ ನಾಗ ದೇವತೆಗಳು, ಪಂಜುರ್ಲಿ ದೈವ ಸೇರಿದಂತೆ ಇನ್ನು ಅನೇಕ ದೈವಗಳಿಗೂ ಪೂಜೆ ನಡೆಯುತ್ತದೆ. ಭಕ್ತಾದಿಗಳು ಹರಕೆ ಮಾಡಿಕೊಂಡು ಹೋಗಿ ಅದು ಫಲಿಸಿದ ಬಳಿಕ ಬಂದು ಇಲ್ಲಿ ಸೇವೆ ಸಲ್ಲಿಸುತ್ತಾರೆ.
ಸಂತಾನ ಭಾಗ್ಯಕಾಗಿ ಯಕ್ಷಗಾನ ಸೇವೆ ಹೂವಿನ ತುಲಾಭಾರ ಮುಂತಾದ ಹರಕೆಗಳನ್ನು ಕಟ್ಟಿಕೊಳ್ಳುತ್ತಾರೆ. ಜನವರಿ ತಿಂಗಳಲ್ಲಿ ಅದ್ದೂರಿಯಾಗಿ ಇಲ್ಲಿ ಜಾತ್ರೆ ಕೂಡ ನಡೆಯುತ್ತದೆ. ಈ ದೇವಸ್ಥಾನದ ಕುರಿತು ಹೆಚ್ಚಿನ ಮಾಹಿತಿಗಾಗಿ ಈ ವಿಡಿಯೋವನ್ನು ನೋಡಿ.