ಅಂಚೆ ಕಚೇರಿ (Post office) ಈಗ ಅಂಚೆ ಬ್ಯಾಂಕ್ (Indian Bank) ಆಗಿ ಕೂಡ ಕಾರ್ಯನಿರ್ವಹಿಸುತ್ತಿದೆ. ಮೊಬೈಲ್ ಎಲ್ಲರ ಕೈಗೂ ಬರುವ ಮೊದಲು ಒಬ್ಬರಿಂದ ಮತ್ತೊಬ್ಬರಿಗೆ ಸೇತುವಾಗಿ ಕಾರ್ಯನಿರ್ವಹಿಸುತ್ತಿದ್ದ ಅಂಚೆ ಇಲಾಖೆ ಟೆಕ್ನಾಲಜಿ ಬೆಳದಂತೆ ಕಾಲಕ್ಕೆ ತಕ್ಕ ಹಾಗೆ ಅಪ್ಡೇಟ್ ಆಗಿದ್ದು ಈಗ ಅಂಚೆ ಸೇವೆ ಜೊತೆಗೆ ಬ್ಯಾಂಕಿಂಗ್ ಸೇವೆಯನ್ನು ಕೂಡ ನೀಡುತ್ತಿದೆ.
ನೀವು ದೇಶದ ಇತರ ಬ್ಯಾಂಕ್ ಅಥವಾ ಹಣಕಾಸು ಸಂಸ್ಥೆಗಳಲ್ಲಿ ಪಡೆಯಬಹುದಾದ ಅನೇಕ ಸೇವೆಗಳನ್ನು ಪೋಸ್ಟ್ ಆಫೀಸ್ ನ ಪೋಸ್ಟ್ ಬ್ಯಾಂಕ್ ನಲ್ಲೂ ಕೂಡ ಪಡೆಯಬಹುದು. ಉಳಿತಾಯ ಖಾತೆ (Saving Account), ಹಣದ ಠೇವಣಿ ಇಡುವುದು (Fixed Deposits ) ಕೇಂದ್ರ ಸರ್ಕಾರ ಯೋಜನೆಗಳಲ್ಲಿ ಹೂಡಿಕೆ ಮಾಡುವುದು (Invest Schemes) ಸೇರಿದಂತೆ ಕ್ರೆಡಿಟ್ ಕಾರ್ಡ್ ಡೆಬಿಟ್ ಕಾರ್ಡ್ ಸೌಲಭ್ಯ, ಇಂಟರ್ನೆಟ್ ಬ್ಯಾಂಕಿಂಗ್ ಇನ್ನು ಮುಂತಾದ ಅನೇಕ ಸವಲತ್ತುಗಳು ಸಿಗುತ್ತಿದೆ.
ಅಂಚೆ ಇಲಾಖೆಯಲ್ಲಿ ಲಭ್ಯವಿರುವ ಯೋಜನೆಗಳ ಬಗ್ಗೆ ಹೇಳುವುದಾದರೆ ಕೇಂದ್ರ ಸರ್ಕಾರದ ಅಧೀನದಲ್ಲಿ ಕಾರ್ಯನಿರ್ವಹಿಸುತ್ತಿರುವುದರಿಂದ ಅಂಚೆ ಇಲಾಖೆಗಳಲ್ಲಿ ಕೇಂದ್ರ ಸರ್ಕಾರವು ದೇಶದ ಜನತೆಗಾಗಿ ಜಾರಿಗೆ ತರುವ ಯೋಜನೆಗಳಿಗೆ ಹೂಡಿಕೆ ಮಾಡಲು ಅವಕಾಶ ಇದೆ.
ಅದೇ ಪ್ರಕಾರವಾಗಿ ಕಿಸಾನ್ ಸಮೃದ್ಧಿ ಯೋಜನೆ, ಹಿರಿಯ ನಾಗರಿಕರ ಉಳಿತಾಯ ಯೋಜನೆ, ಪೋಸ್ಟ್ ಆಫೀಸ್ ಮಾಸಿಕ ಉಳಿತಾಯ ಯೋಜನೆ, ಮಹಿಳಾ ಸಮ್ಮಾನ್ ಉಳಿತಾಯ ಪ್ರಮಾಣ ಪತ್ರ, ಕಿಸಾನ್ ವಿಕಾಸ್ ಪತ್ರ ಯೋಜನೆ ಸೇರಿದಂತೆ ಹತ್ತು ಹಲವು ಯೋಜನೆಗಳಲ್ಲಿ ಹೂಡಿಕೆ ಮಾಡುವುದಕ್ಕೆ ವೇದಿಕೆಯಾಗಿದೆ.
ಈ ವಿಚಾರವಾಗಿ ಗುಡ್ ನ್ಯೂಸ್ ಏನೆಂದರೆ ಪ್ರತಿ ಗ್ರಾಮ ಪಂಚಾಯಿತಿಯಲ್ಲೂ ಕೂಡ ಅಂಚೆ ಕಚೇರಿ ಇರುತ್ತದೆ ಹಾಗಾಗಿ ಜನರಿಗೆ ಇದು ಹೆಚ್ಚು ಹತ್ತಿರವಾಗಿದೆ. ಜನರು ಬ್ಯಾಂಕ್ಗಳಿಗೆ ಹೋಗುವ ಸಮಯ ಹಾಗೂ ಹಣ ಉಳಿತಾಯ ಆಗುತ್ತದೆ ಮತ್ತು ಅಂಚೆ ಕಚೇರಿಯಲ್ಲಿ ಹೂಡಿಕೆ ಹಣಕ್ಕೆ ಖಚಿತ ಆದಾಯ ಮತ್ತು ಭದ್ರತೆಯು ಇರುತ್ತದೆ.
ಎದೆಲ್ಲದರ ಜೊತೆ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಅಂಚೆ ಇಲಾಖೆ ಈಗ ಗ್ರಾಹಕರಿಗೆ ಇನ್ನಷ್ಟು ಹತ್ತಿರವಾಗುತ್ತಿದೆ. ಇನ್ನು ಮುಂದೆ ಅಂಚೆ ಕಚೇರಿಯ ಕೆಲವು ಯೋಜನೆಗಳಿಗೆ ಆನ್ಲೈನ್ ನಲ್ಲಿ ಖಾತೆ ತೆರೆದು ಹೂಡಿಕೆ ಮಾಡಬಹುದು. ದೇಶದ ಖಾಸಗಿ ವಲಯದ ಬ್ಯಾಂಕ್ ಗಳು ನೀಡುತ್ತಿರುವ ಈ ಇಂಟರ್ನೆಟ್ ಬ್ಯಾಂಕಿಂಗ್ ಸೌಲಭ್ಯವನ್ನು ಅಂಚೆ ಕಚೇರಿ ಕೂಡ ಅನ್ವಯಿಸಿಕೊಂಡಿದ್ದು.
ಆ ಪ್ರಕಾರವಾಗಿ ಅಂಚೆ ಕಚೇರಿಯಲ್ಲಿ ಪೋಸ್ಟ್ ಆಫೀಸ್ ಮಾಸಿಕ ಉಳಿತಾಯ ಯೋಜನೆ (POMSS) ಮಹಿಳಾ ಸಮ್ಮನ್ ಉಳಿತಾಯ ಪ್ರಮಾಣ ಪತ್ರ (MSSC) ಮತ್ತು ಹಿರಿಯ ನಾಗರಿಕರ ಉಳಿತಾಯ ಯೋಜನೆ ಖಾತೆ (SCSS)ತೆರೆಯಲು ಬಯಸಿದರೆ ಮನೆಯಲ್ಲಿಯೇ ಕುಳಿತು ಈ ಯೋಜನೆಯನ್ನು ಆರಂಭಿಸಬಹುದು. ಅದು ಹೇಗೆ ಎನ್ನುವ ವಿವರ ಹೇಗಿದೆ ನೋಡಿ.
* ಮೊದಲಿಗೆ ನೀವು ಪೋಸ್ಟ್ ಆಫೀಸ್ನಲ್ಲಿ ಸೇವಿಂಗ್ ಅಕೌಂಟ್ ಓಪನ್ ಮಾಡಿರಬೇಕು ಹಾಕಿದ್ದಲ್ಲಿ ಮಾತ್ರ ನಿಮಗೆ ಇಂಟರ್ನೆಟ್ ಬ್ಯಾಂಕಿಂಗ್ ಸೌಲಭ್ಯ ಸಿಗುತ್ತದೆ.
* ನಂತರ ಅಂಚೆ ಇಲಾಖೆಯ ಅಧಿಕೃತ ವೆಬ್ ಸೈಟ್ ನಲ್ಲಿ ಜನರಲ್ ಸರ್ವಿಸ್ ಟ್ಯಾಬ್ ಕ್ಲಿಕ್ ಮಾಡಿ, ಮುಂದೆ ಸೇವಾ ವಿನಂತಿ ಆಪ್ಷನ್ ನಲ್ಲಿ ಹೊಸ ವಿನಂತಿ ಸೆಲೆಕ್ಟ್ ಮಾಡಿ ಕೊನೆಯದಾಗಿ ಸರಿ ಮೇಲೆ ಕ್ಲಿಕ್ ಮಾಡಿ ಮುಂದುವರೆಯಿರಿ.
* ಹಿರಿಯ ನಾಗರಿಕರ ಉಳಿತಾಯ ಯೋಜನೆ, ಮಾಸಿಕ ಆದಾಯ ಯೋಜನೆ, ಮತ್ತು ಮಹಿಳಾ ಸಮ್ಮಾನ್ ಉಳಿತಾಯ ಪ್ರಮಾಣ ಪತ್ರ ನಿಮ್ಮ ಆಯ್ಕೆಯನ್ನು ಆರಿಸಿ.
* ನಂತರ ನೀವು ಸೆಲೆಕ್ಟ್ ಮಾಡುವ ಮೊತ್ತವನ್ನು ಆರಿಸಿ ಮೊತ್ತವನ್ನು ನಮೂದಿಸಿ, ಅಂಚೆ ಕಚೇರಿಯ ಡೆಬಿಟ್ ಖಾತೆಯನ್ನು ಸೆಲೆಕ್ಟ್ ಮಾಡಿ, ನಿಯಮ ಹಾಗೂ ಷರತ್ತುಗಳಿಗೆ ಅಗ್ರಿ ಎಂದು ಕ್ಲಿಕ್ ಮಾಡಿ.
* ವಹಿವಾಟು ಪಾಸ್ ವಾರ್ಡ್ ಅನ್ನು ನಮೂದಿಸಿ, ಸಬ್ಮಿಟ್ ಮೇಲೆ ಕ್ಲಿಕ್ ಮಾಡಿದರೆ ಠೇವಣಿ ರಸೀದಿಯನ್ನು ಕೂಡ ನೀವು ಸುಲಭವಾಗಿ ಪಡೆಯಬಹುದು.