ಹೆಣ್ಣು ಮಕ್ಕಳು ಆಸ್ತಿಯಲ್ಲಿ ಪಾಲು ಕೇಳಿ ಕೇಸ್ ಹಾಕಿದ್ರೆ ವರದಕ್ಷಿಣೆಯಾಗಿ ಪಡೆದ ಆಸ್ತಿಯನ್ನು ಸೇರಿಸಬೇಕು.! ಕೋರ್ಟ್ ಆರ್ಡರ್.!

 

WhatsApp Group Join Now
Telegram Group Join Now

ಹಿಂದೂ ಉತ್ತರಾಧಿಕಾರ ಕಾಯ್ದೆ 2005ರ ಪ್ರಕಾರ ಹೆಣ್ಣು ಮಕ್ಕಳು ಕೂಡ ಗಂಡು ಮಕ್ಕಳಷ್ಟೇ ತಂದೆ ಆಸ್ತಿಯಲ್ಲಿ ಸಮಾನ ಹಕ್ಕು ಹೊಂದಿರುತ್ತಾರೆ. ಈ ಪ್ರಕಾರವಾಗಿ ಕೂಡು ಕುಟುಂಬದ ಆಸ್ತಿ ವಿಭಜನೆ ಆಗುವ ಸಮಯದಲ್ಲಿ ಹೆಣ್ಣು ಮಕ್ಕಳಿಗೂ ಕೂಡ ಸಮಾನವಾದ ಪಾಲು ನೀಡಬೇಕಾಗುತ್ತದೆ.

ಇಂತಹ ಸಂದರ್ಭಗಳಲ್ಲಿ ಹೆಣ್ಣು ಮಕ್ಕಳೇ ತಮ್ಮ ಸಹೋದರರಿಗಾಗಿ ಅದನ್ನು ಬಿಟ್ಟುಕೊಟ್ಟು ಹಕ್ಕು ಬಿಡುಗಡೆ ಮಾಡಿಕೊಟ್ಟರೆ ಅಥವಾ ಮಾತ್ರ ಸಹೋದರರು ಆ ಪಾಲನ್ನು ಮತ್ತೆ ಸಮಾನವಾಗಿ ಹಂಚಿಕೊಳ್ಳಬಹುದು ಇಲ್ಲವಾದಲ್ಲಿ ತಂದೆಯ ಪಿತ್ರಾರ್ಜಿತ ಹಾಗೂ ಸ್ವಯಾರ್ಜಿತ ಆಸ್ತಿಯಲ್ಲಿ ಆಕೆಗೂ ಒಂದು ಪಾಲು ಮೀಸಲಿಡಬೇಕು ಇದರಲ್ಲಿ ಅನ್ಯಾಯವಾದಾಗ ಹೆಣ್ಣು ಮಕ್ಕಳು ಹಿಂದೂ ಉತ್ತರಾಧಿಕಾರ ಕಾಯಿದೆ ಸೆಕ್ಷನ್ 6 ರ ಅಡಿಯಲ್ಲಿ ನ್ಯಾಯಾಲಯಗಳಲ್ಲಿ ದಾವೆ ಹೂಡಿ ನ್ಯಾಯ ಪಡೆಯಬಹುದು.

ಆದರೆ ಈ ಸಮಯದಲ್ಲಿ ಕುಟುಂಬದ ಯಾವ ಆಸ್ತಿಗಳ ಮೇಲೆ ಕೇಸ್ ಹಾಕಬಹುದು ಎನ್ನುವುದನ್ನು ತಿಳಿದುಕೊಂಡಿರಬೇಕು. ಈ ಮೇಲೆ ತಿಳಿಸಿದಂತೆ ತಂದೆಯ ಪಿತ್ರಾರ್ಜಿತ ಆಸ್ತಿ ಹಾಗೂ ತಂದೆಯು ಸ್ವಯಾರ್ಜಿತವಾಗಿ ಆಸ್ತಿ ಹೊಂದಿ ಯಾವ ಮಕ್ಕಳ ಹೆಸರಿಗೂ ದಾನ ವಿಭಾಗ ಅಥವಾ ವೀಲ್ ಮೂಲಕ ಆ ಆಸ್ತಿಯನ್ನು ಮಾಡಿಕೊಡದೆ ಮ’ರ’ಣ ಹೊಂದಿದ್ದರೆ ಆ ಆಸ್ತಿ ಮೇಲೆ ಕೇಸ್ ಹಾಕಬಹುದು ಎನ್ನುವುದನ್ನು ಎಲ್ಲರೂ ತಿಳಿದಿದ್ದಾರೆ.

ಆದರೆ ಇತ್ತೀಚೆಗೆ ಬೆಂಗಳೂರಿನ ಮಹಿಳೆ ಒಬ್ಬರ ಪ್ರಕರಣದಲ್ಲಿ ವರದಕ್ಷಿಣೆ ರೂಪದಲ್ಲಿ ಪಡೆದ ಆಸ್ತಿಯನ್ನು ಈ ಪಟ್ಟಿಯಲ್ಲಿ ಸೇರಿಸಬಹುದು ಎಂದು ನ್ಯಾಯಾಲಯ ತೀರ್ಪು ನೀಡಿದೆ. ಬೆಂಗಳೂರಿನ ಮಹಿಳೆಯೊಬ್ಬರು ಸಲ್ಲಿಸಿದ್ದ ರಿಟ್ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ನ ಏಕಪೀಠ ಸದಸ್ಯ ಇಂತಹ ಮಹತ್ವದ ತೀರ್ಪು ನೀಡಿದೆ.

ಈ ಬಗ್ಗೆ ವಿವರವಾಗಿ ನೋಡುವುದಾದರೆ ಬೆಂಗಳೂರಿನ ಸಿಟಿ ಸಿವಿಲ್ ಕೋರ್ಟ್ ನಲ್ಲಿ ಮಹಿಳೆಯೊಬ್ಬರು ತನ್ನ ಸಹೋದರನ ವಿರುದ್ಧ ತನಗೂ ಕೂಡ ಕುಟುಂಬದ ಆಸ್ತಿಯಲ್ಲಿ ಪಾಲು ಬರಬೇಕು ಎಂದು ದಾವೆ ಹೂಡಿದ್ದರು.

ಆ ಮಹಿಳೆಯ ಸಹೋದರನು ಆಕೆಗೆ ಮದುವೆ ಸಮಯದಲ್ಲಿ ವರದಕ್ಷಿಣೆ ರೂಪದಲ್ಲಿ ಜಮೀನನ್ನು ನೀಡಲಾಗಿದೆ ಇದನ್ನು ಕೂಡ ಆಸ್ತಿ ವಿಭಜನೆ ಕೇಸ್ ನಲ್ಲಿ ಸೇರಿಸಬೇಕು ಎಂದು ಮನವಿ ಸಲ್ಲಿಸಿದರು. ಇದರ ವಿಚಾರಣೆ ನಡೆಸಿದ ಕೋರ್ಟ್ ಮಹಿಳೆಗೆ ಅರ್ಜಿ ಮಾರ್ಪಡಿಸುವಂತೆ ಆದೇಷಿಸಿತ್ತು. ಈ ಆದೇಶ ರದ್ದು ಕೋರಿ ಮಹಿಳೆಯು ಹೈಕೋರ್ಟ್ ಗೆ ಮೇಲ್ಮನವಿ ಸಲ್ಲಿಸಿದ್ದರು.

ಹೈಕೋರ್ಟ್ ನಲ್ಲಿ ಮಹಿಳೆ ಪರ ವಕೀಲರು ಈಗ ವರದಕ್ಷಿಣೆ ರೂಪದಲ್ಲಿ ಪಡೆದಿದ್ದಾರೆ ಎಂದು ಹೇಳಲಾಗುತ್ತಿರುವ ಆಸ್ತಿಯು ಮಹಿಳೆಯ ಪತಿ ಮತ್ತು ಮಾವ ಸ್ವಯಾರ್ಜಿತವಾಗಿ ಸಂಪಾದನೆ ಮಾಡಿರುವ ಆಸ್ತಿ ಹಾಗಾಗಿ ಸಿಟಿ ಸಿವಿಲ್ ಕೋಟ್ ನೀಡಿರುವ ಆದೇಶ ನ್ಯಾಯ ಸಮ್ಮತವಲ್ಲ ಎಂದು ವಾದ ಮಂಡಿಸಿದ್ದರು.

ಎರಡು ಕಡೆಯ ವಾದ ಹಾಗೂ ಪ್ರತಿಪಾದಗಳನ್ನು ಆಲಿಸಿದ ಪೀಠವು ಅವಿಭಕ್ತ ಕುಟುಂಬದ ಆಸ್ತಿಯಲ್ಲಿ ಯಾವುದೇ ಸದಸ್ಯರು ಈಗಾಗಲೇ ಪಾಲು ಪಡೆದಿದ್ದರೆ ಆಸ್ತಿ ವಿಭಜನೆ ಆಗುವ ಸಮಯದಲ್ಲಿ ಅದನ್ನು ಕೂಡ ಪರಿಗಣನೆಗೆ ತೆಗೆದುಕೊಳ್ಳಬೇಕು ಎನ್ನುವ ತೀರ್ಪು ನೀಡಿದೆ. ಒಂದು ವೇಳೆ ಕುಟುಂಬದ ಸದಸ್ಯರು ತಮ್ಮ ಸ್ವಂತ ಪರಿಶ್ರಮದಿಂದ ಆಸ್ತಿಯನ್ನು ಸಂಪಾದನೆ ಮಾಡಿದರೆ ಅದನ್ನು ಪರಿಗಣಿಸುವ ಅಗತ್ಯ ಇಲ್ಲ ಎಂದು ಕೂಡ ಈ ತೀರ್ಪಿನಲ್ಲಿ ಘನ ನ್ಯಾಯಾಲಯವು ಸ್ಪಷ್ಟವಾಗಿ ತಿಳಿಸಿದೆ.

Leave a Comment

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now