ವಯಸ್ಸಾದ ಬಳಿಕ ದೇಹದಲ್ಲಿ ದುಡಿಯಲು ಶಕ್ತಿ ಇರುವುದಿಲ್ಲ ಆಗ ಯಾರೂ ಕೆಲಸ ಕೂಡ ಕೊಡುವುದಿಲ್ಲ, ಜೀವನ ನಿರ್ವಹಣೆಗೆ ಹಣದ ಅವಶ್ಯಕತೆ ಇದ್ದೇ ಇರುತ್ತದೆ. ನಮ್ಮ ಜೀವನದ ಹೊಣೆಯನ್ನು ಸಂಪೂರ್ಣವಾಗಿ ಮತ್ತೊಬ್ಬರ ಮೇಲೆ ಹಾಕುವುದು ಕೂಡ ಕ’ಷ್ಟ. ಏಕೆಂದರೆ ಪ್ರತಿಯೊಬ್ಬರಿಗೂ ಅವರದ್ದೇ ಆದ ತಾಪತ್ರಯಗಳಿರುತ್ತವೆ. ಹಾಗಾಗಿ ದುಡಿಯುವ ವಯಸ್ಸಿನಿಂದಲೇ ವಿಶ್ರಾಂತಿ ಜೀವನದ ಬಗ್ಗೆ ಚಿಂತೆ ಮಾಡಿ ಯೋಜನೆ ರೂಪಿಸಿಕೊಂಡಿರಬೇಕು.
ಹಣ ಸಂಪಾದನೆ ಮಾಡುತ್ತಾ ಇರುವಾಗಲೇ ಒಂದು ಸಣ್ಣದಾದ ಉಳಿತಾಯ (Saving) ಮಾಡಿ ವಯಸ್ಸಾದ ನಂತರ ಅವಶ್ಯಕತೆಗೆ ಬರುವಂತೆ ಪ್ಲಾನ್ ಹೊಂದಿರಬೇಕು. ಬಡಜನರು ಹಾಗೂ ಮಧ್ಯಮ ವರ್ಗದವರು ಉದ್ಯೋಗದಲ್ಲಿ ಇರುವಾಗಲೇ ಈ ರೀತಿ ಪ್ಲಾನ್ ಮಾಡಿದರೆ ವಯಸ್ಸಾದ ಕಾಲಕ್ಕೆ ಹೆಚ್ಚು ಒದ್ದಾಡುವ ಪರಿಸ್ಥಿತಿ ಇರುವುದಿಲ್ಲ.
ಈಗ ಉಳಿಸಿದ ಹಣವನ್ನು ಆದಾಯವಾಗಿ ಮಾಡಿಕೊಂಡು ಜೀವನ ನಡೆಸಬಹುದು. ಇತ್ತೀಚಿಗೆ ಸರ್ಕಾರಗಳು ಕೂಡ ಮುಂದಿನ ಜೀವನದ ಬಗ್ಗೆ ಪ್ಲಾನ್ ಮಾಡುವವರಿಗೆ ಅನೇಕ ಪೆನ್ಷನ್ ಯೋಜನೆಗಳನ್ನು ರೂಪಿಸಿದೆ. LIC (Life Insurance Corporation) ನಂತಹ ಕಂಪನಿಗಳು ಕೂಡ ಇಂತಹ ಯೋಜನೆಗಳಿಗೆ ಪೂರಕವಾಗಿದೆ. ಇವುಗಳಲ್ಲಿ ನೀವು ಸಣ್ಣ ಮೊತ್ತದ ಹಣವನ್ನು ಹೂಡಿಕೆ ಮಾಡುತ್ತಾ ಬಂದರೆ 60 ವರ್ಷ ಬಳಿಕ ನಿಮಗೆ ಅದೇ ಆದಾಯವನ್ನು ತರುವ ಮೂಲವಾಗುತ್ತದೆ.
ಇಂತಹ ಹೊಸ ಪೆನ್ಷನ್ ಯೋಜನೆಯೊಂದನ್ನು LIC ಜಾರಿಗೆ ತಂದಿದೆ. LIC ಜೀವನ್ ನಿಧಿ ಯೋಜನೆ (LIC Jeevan Nidhi Scheme) ಎನ್ನುವ ಈ ಯೋಜನೆಯು 60 ವರ್ಷ ಆದ ಬಳಿಕ ನಿಮಗೆ ಖಚಿತ ಮಾಸಿಕ ಆದಾಯ ನೀಡುವ ಪೆನ್ಷನ್ ಯೋಜನೆ ಆಗಿದೆ. ಈ ಯೋಜನೆ ಬಗ್ಗೆ ಪ್ರಮುಖ ಅಂಶಗಳನ್ನು ಈ ಅಂಕಣದಲ್ಲಿ ತಿಳಿಸುತ್ತಿದ್ದೇನೆ ಓದಿ.
ಜಿಮ್ ಸ್ಥಾಪನೆಗೆ ಸರ್ಕಾರದಿಂದ ಸಹಾಯಧನ ಧನ ಆಸಕ್ತರು ಈ ಕಛೇರಿಗೆ ಭೇಟಿ ನೀಡಿ.!
● 20 ರಿಂದ 58 ವರ್ಷದ ಒಳಗಿನ ವಯಸ್ಸಿನವರು ಈ ಯೋಜನೆಯಡಿ ಹೂಡಿಕೆ ಮಾಡಬಹುದು.
● ಈ ಯೋಜನೆಯ ಮೆಚ್ಯುರಿಟಿ ಅವಧಿ 7 ವರ್ಷದಿಂದ 35 ವರ್ಷದವರೆಗೂ ಇರುತ್ತದೆ.
● ಈ ಮೆಚ್ಯುರಿಟಿ ಅವಧಿ ಮುಗಿದ ಮೇಲೆ ವರ್ಷಾಸನ ರೀತಿಯಲ್ಲಿ ಗ್ರಾಹಕರಿಗೆ ಹಣ ಸಿಗುತ್ತದೆ. ಮಾಸಿಕವಾಗಿ, ತ್ರೈಮಾಸಿಕವಾಗಿ ಅಥವಾ ಅರ್ಧವಾರ್ಷಿಕವಾಗಿ ಕೂಡ ನೀವು ಪೆನ್ಷನ್ ಪಡೆಯುವ ಆಯ್ಕೆ ಆರಿಸಬಹುದು.
● ಈ ಯೋಜನೆಯಡಿ ಹೂಡಿಕೆ ಮಾಡುವ ಹಣಕ್ಕೆ ತೆರಿಗೆ ವಿನಾಯಿತಿ ಇರುತ್ತದೆ.
● ಆರು ವರ್ಷಗಳಿಗೆ ಒಮ್ಮೆ ಹೂಡಿಕೆ ಮಾಡುವ ಮೊತ್ತದ ಆಧಾರದ ಮೇಲೆ ಬೋನಸ್ ಕೂಡ ಸಿಗುತ್ತದೆ.
● ಉದಾಹರಣೆಯೊಂದಿಗೆ ಈ ಯೋಜನೆ ಬಗ್ಗೆ ವಿವರಿಸುವುದಾದರೆ ನೀವು ಈಗ 20 ವರ್ಷದ ವ್ಯಕ್ತಿಯಾಗಿದ್ದು ಪ್ರತಿದಿನವೂ 72 ಗಳನ್ನು ಉಳಿತಾಯ ಮಾಡುತ್ತಾ ಬಂದರೆ 2,160 ರೂ ಆಗುತ್ತದೆ. ನೀವು 60 ವರ್ಷಗಳಾದ ಬಳಿಕ ಪ್ರತಿ ತಿಂಗಳು 25,000 ಪೆನ್ಷನ್ ಮತ್ತು 10 ಲಕ್ಷ ಲೈಫ್ ಇನ್ಸೂರೆನ್ಸ್ ಕವರೇಜ್ ಕೂಡ ಪಡೆಯಬಹುದು.
BECIL ನಲ್ಲಿ ವಿದ್ಯುತ್ ಮೇಲ್ವಿಚಾರಕ ಹುದ್ದೆಗಳಿಗೆ ಅರ್ಜಿ ಆಹ್ವಾನ ಆಸಕ್ತರು ಅರ್ಜಿ ಸಲ್ಲಿಸಿ ವೇತನ 42,000/-
● ಈ ಯೋಜನೆಯನ್ನು ಖರೀದಿಸುವವರಿಗೆ ಉಳಿದ ಇನ್ಸೂರೆನ್ಸ್ ಯೋಜನೆಗಳ ರೀತಿಯೇ ನಾಮಿನಿ ಫೆಸಿಲಿಟಿ ಕೂಡ ಲಭ್ಯವಿರುತ್ತದೆ. ಹೂಡಿಕೆದಾರರು ಮೃ’ತ ಪಟ್ಟರೆ ವಾರಸುದಾರರಿಗೆ ಕಾನೂನು ಪ್ರಕಾರವಾಗಿ ಸೇರಬೇಕಾದ ಹಣ ಸೇರುತ್ತದೆ.
● ಆನ್ಲೈನ್ ಮತ್ತು ಆಫ್ಲೈನ್ ನಲ್ಲಿ ಯೋಜನೆ ಖರೀದಿಸುವ ಆಯ್ಕೆ ಕೊಡಲಾಗಿದೆ.
● ಈ ಯೋಜನೆ ಬಗ್ಗೆ ಹೆಚ್ಚಿನ ಮಾಹಿತಿ ಬೇಕಾದಲ್ಲಿ LIC ಅಧಿಕೃತ ವೆಬ್ಸೈಟ್ ಗೆ ಭೇಟಿ ಕೊಟ್ಟು ಮಾಹಿತಿ ಪಡೆದುಕೊಳ್ಳಬಹುದು, ಅಥವಾ ಹತ್ತಿರದಲ್ಲಿರುವ LIC ಕಚೇರಿಗೆ ಭೇಟಿ ಕೊಟ್ಟು ಮಾಹಿತಿ ಪಡೆಯಬಹುದು.