ಜಿಮ್ ಸ್ಥಾಪನೆಗೆ ಸರ್ಕಾರದಿಂದ ಸಹಾಯಧನ ಧನ ಆಸಕ್ತರು ಈ ಕಛೇರಿಗೆ ಭೇಟಿ ನೀಡಿ.!

 

ಇತ್ತೀಚಿಗೆ ಜಿಮ್ (Gym) ಗಳಿಗೆ ಹೋಗುವ ಬಗ್ಗೆ ಯುವಜನತೆ ಹೆಚ್ಚು ಆಕರ್ಷಿತರಾಗುತ್ತಿದ್ದಾರೆ. ಆರೋಗ್ಯ ವೃದ್ಧಿಗಾಗಿ ಹಾಗೂ ದೇಹದ ದಾಢ್ಯತೆ ಸಂಪಾದಿಸಲು, ಕ್ರೀಡಾ ಮನೋಭಾವದಿಂದ ಇವುಗಳನ್ನು ರೂಢಿಸಿಕೊಂಡಿದ್ದಾರೆ. ಹಾಗಾಗಿ ಜಿಮ್ ಸ್ಥಾಪನೆ (Gym establishments) ಕೂಡ ಉತ್ತಮವಾದ ಆದಾಯವನ್ನು ತರುವಂತಹ ಉದ್ಯಮವೇ ಆಗಿದೆ ಎಂದರೆ ತಪ್ಪಾಗಲಾರದು.

ಈಗ ಹಳ್ಳಿ ಹಳ್ಳಿಯವರೆಗು ಕೂಡ ಜಿಮ್ ಗಳ ಕ್ರೇಝ್ ಹೆಚ್ಚಾಗಿದೆ. ಪಟ್ಟಣ ಪ್ರದೇಶಗಳಲ್ಲಿ, ನಗರ ಪ್ರದೇಶಗಳಲ್ಲಿ ಆಥವಾ ಹೆಚ್ಚು ಜನಸಂದಣಿ ಇರುವ ಆರಿಸಿದ ಪ್ರದೇಶಗಳಲ್ಲಿ ಜಿಮ್ ಸ್ಥಾಪನೆ ಮಾಡಿ ಹೊಸ ಉದ್ಯಮ ಆರಂಭಿಸಬೇಕು ಎಂದು ಇಚ್ಛೆಪಡುವ ಯುವ ಜನತೆಗೆ ಸರ್ಕಾರವು ಕೂಡ ಕೈ ಜೋಡಿಸುತಿದೆ. ಹಲವು ವರ್ಷಗಳಿಂದ ಯುವಜನತೆ ಕಡೆಯಿಂದ ನಾಯಕರುಗಳಿಗೆ ಈ ರೀತಿಯ ಒಂದು ಕೋರಿಕೆ ಎದುರಾಗುತ್ತಲೇ ಇತ್ತು.

ನಿಮ್ಮ ಮೇಲೆ ಯಾರದ್ರೂ ಕೇಸ್ ಹಾಕಿದ್ರೆ ಅಥವಾ ನೀವೇ ಬೇರೆ ಅವರ ಮೇಲೆ ಕೇಸ್ ಹಾಕಿ ಇದನ್ನು ಕೋರ್ಟ್ ನಲ್ಲಿ ಮುನ್ನಡೆಸುವುದಕ್ಕೆ ಆರ್ಥಿಕವಾಗಿ ಕಷ್ಟ ಇದ್ರೆ ಪರಿಹಾರ ಏನು‌.?

ಈಗ ಇದರ ಮೇಲ್ವಿಚಾರಣೆಯ ಕ್ರೀಡಾ ಇಲಾಖೆಗೆ (Sports department) ವಹಿಸಿಕೊಡಲಾಗಿದ್ದು, ಈಗ ಜಿಮ್ ಸ್ಥಾಪನೆ ಮಾಡುವವರಿಗೆ ಸಹಾಯಧನವನ್ನು ನೀಡಿ ಪ್ರೋತ್ಸಾಹಿಸುತ್ತಿದೆ. ಇವರು ಸಬ್ಸಿಡಿ ರೂಪದಲ್ಲಿ (Subsidy loan) ಸಾಲ ಸೌಲಭ್ಯವನ್ನು ಪಡೆದು ತಮ್ಮ ಉದ್ಯಮವನ್ನು ಯಶಸ್ವಿಯಾಗಿ ಆರಂಭಿಸಬಹುದು ಆದರೆ ಈ ಯೋಜನೆಗೆ ಕೆಲ ಕಂಡೀಷನ್ ಗಳು ಇವೆ.

ಇವುಗಳನ್ನು ಪೂರೈಸಿದವರಿಗೆ ಮಾತ್ರ ಯೋಜನೆಯ ಫಲಾನುಭವಿಗಳಾಗಲು ಸಾಧ್ಯ ಅದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಅಂಕಣವನ್ನು ಕೊನೆಯ ತನಕ ಓದಿ. ಸ್ವಯಂ ಉದ್ಯೋಗ ಸಹಾಯಕ ಯೋಜನೆ 2023-24 ನೇ ಸಾಲಿನಲ್ಲಿ ಕರ್ನಾಟಕ ಸರ್ಕಾರ (Karnataka government) ಜಿಮ್ ಸ್ಥಾಪನೆ ಮಾಡುವ ಯುವ ಜನತೆಗೂ ಕೂಡ ಸಾಲ ಸೌಲಭ್ಯ ನೀಡಬೇಕು ಎಂದು ನಿರ್ಧಾರ ಮಾಡಿದೆ.

BECIL ನಲ್ಲಿ ವಿದ್ಯುತ್ ಮೇಲ್ವಿಚಾರಕ ಹುದ್ದೆಗಳಿಗೆ ಅರ್ಜಿ ಆಹ್ವಾನ ಆಸಕ್ತರು ಅರ್ಜಿ ಸಲ್ಲಿಸಿ ವೇತನ 42,000/-

ಆದರೆ ಎಲ್ಲರಿಗೂ ಕೂಡ ಕ ಯೋಜನೆಯಡಿ ಸಾಲ ಸೌಲಭ್ಯ ಸಿಗುವುದಿಲ್ಲ. ಕ್ರೀಡಾ ಇಲಾಖೆಯು ಕೆಲ ಮನದಂಡಗಳನ್ನು ರೂಪಿಸಿದ್ದು ಅದನ್ನು ಪೂರೈಸಿದಂತಹ ಅರ್ಹರಿಗೆ ಮಾತ್ರ ಸರ್ಕಾರದಿಂದ ಈ ಸಹಾಯಧನ ಸಿಗುತ್ತದೆ. ನಂತರ ಅವರು ಈ ನೆರವಿನೊಂದಿಗೆ ಕನಸಿನ ಉದ್ಯೋಗವನ್ನು ಆರಂಭಿಸಬಹುದು.

ಈ ಯೋಜನೆ ಕುರಿತು ಪ್ರಮುಖ ಮಾಹಿತಿಗಳು:-

● ಕರ್ನಾಟಕ ರಾಜ್ಯ ಸರ್ಕಾರದ ಈ ಯೋಜನೆಗೆ ಪರಿಶಿಷ್ಟ ಜಾತಿಗೆ ಸೇರಿದ ಯುವಕರು ಮಾತ್ರ ಅರ್ಜಿ ಸಲ್ಲಿಸಲು ಅರ್ಹರು.
● ಯುವ ಸ್ವಯಂ ಉದ್ಯೋಗ ಸಹಾಯಕ ಯೋಜನೆ 2023-24 ಸಾಲಿನಲ್ಲಿ ಈ ಯೋಜನೆಯ ಮೂಲಕ ಪರಿಶಿಷ್ಟ ಜಾತಿಗೆ ಸೇರಿದ ಕ್ರೀಡಾಪಟುಗಳು ಮಾತ್ರ ಅರ್ಜಿ ಸಲ್ಲಿಸಬಹುದು.

ವಿದ್ಯಾರ್ಥಿಗಳಿಗೆ ಸಿಹಿಸುದ್ದಿ, ಉಚಿತ ಲ್ಯಾಪ್ ಟಾಪ್ ವಿತರಣೆಗೆ ಅರ್ಜಿ ಆಹ್ವಾನ.! C.M ಸಿದ್ದರಾಮಯ್ಯ ಅವರಿಂದ ಅಧಿಕೃತ ಘೋಷಣೆ.! ಆಸಕ್ತರು ಅರ್ಜಿ ಸಲ್ಲಿಸಿ.!

● ಅಂತಾರಾಷ್ಟ್ರೀಯ ಮತ್ತು ರಾಷ್ಟ್ರೀಯ ಅಧಿಕೃತ ಕ್ರೀಡಾಕೂಟಗಳಲ್ಲಿ ಪದಕ ಗಳಿಸಿದ ವಿಜೇತರಾಗಿರಬೇಕು. ಅವರು ಮಾತ್ರ ಸ್ವಯಂ ಉದ್ಯೋಗ ಹೊಂದಲು ಸರ್ಕಾರದ ಈ ಹೊಸ ಯೋಜನೆಯಿಂದ ಜಿಮ್ ಸ್ಥಾಪನೆಗಾಗಿ ಸಹಾಯಧನ ಪಡೆಯಬಹುದು.
● ಈ ಯೋಜನೆಗೆ ಅರ್ಹತಾ ಮಾನದಂಡ ಪೂರೈಸುವ ಕ್ರೀಡಾಪಟುಗಳು ನಿಗದಿತ ನಮೂನೆಯ ಅರ್ಜಿಯನ್ನು ಸಲ್ಲಿಸಬೇಕು.

ಅರ್ಜಿ ಸಲ್ಲಿಸಬೇಕಾದ ವಿಳಾಸ:-

ಸಹಾಯಕ ನಿರ್ದೇಶಕರು,
ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ,
ಕಸ್ತೂರ ಬಾ ರಸ್ತೆ,
ಶ್ರೀ ಕಂಠೀರವ ಹೊರಾಂಗಣ ಕ್ರೀಡಾಂಗಣದ ಕೊಠಡಿ ಸಂಖ್ಯೆ 17 ಮತ್ತು 18,
ಬೆಂಗಳೂರು.

● ಬೆಂಗಳೂರು ನಗರ ಜಿಲ್ಲೆಯ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ಈ ಯೋಜನೆ ಕುರಿತು ಮಾಹಿತಿ ತಿಳಿಸಿದ್ದಾರೆ.
● ಅರ್ಜಿ ಸಲ್ಲಿಸಲು ಸೆಪ್ಟೆಂಬರ್ 7 ಕೊನೆಯ ದಿನಾಂಕ.
● ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಬಹುದಾದ ಮೊಬೈಲ್ ಸಂಖ್ಯೆಗಳು: 7204266766, 9480886545.

Leave a Comment

%d bloggers like this: