ನಿಮ್ಮ ಮೇಲೆ ಯಾರದ್ರೂ ಕೇಸ್ ಹಾಕಿದ್ರೆ ಅಥವಾ ನೀವೇ ಬೇರೆ ಅವರ ಮೇಲೆ ಕೇಸ್ ಹಾಕಿ ಇದನ್ನು ಕೋರ್ಟ್ ನಲ್ಲಿ ಮುನ್ನಡೆಸುವುದಕ್ಕೆ ಆರ್ಥಿಕವಾಗಿ ಕಷ್ಟ ಇದ್ರೆ ಪರಿಹಾರ ಏನು‌.?

 

ಇತ್ತೀಚಿನ ದಿನಗಳಲ್ಲಿ ಪೊಲೀಸ್ ಠಾಣೆ, ಕೇಸು, ಕೋರ್ಟು ಎಂದು ಅಲೆಯುವುದು ಸರ್ವೆ ಸಾಮಾನ್ಯ ವಿಚಾರವಾಗಿದೆ. ಪ್ರತಿಯೊಬ್ಬರೂ ಕೂಡ ಒಂದಲ್ಲ ಒಂದು ಕಾರಣಕ್ಕಾಗಿ ಈ ರೀತಿ ಕೋರ್ಟಿನ (Court) ಮೊರೆ ಹೋಗಲೇ ಬೇಕಾಗಿದೆ. ಕೌಟುಂಬಿಕ ಪ್ರಕರಣಗಳು ಅಥವಾ ಸಿವಿಲ್ ಮೊಕದ್ದಮೆಗಳು ಈ ರೀತಿ ಕೇಸ್ ಗಳಿಗೆ ಒಮ್ಮೆ ನಾವು ವಾದಿಗಳಾಗಿ ಕೋರ್ಟ್ ಗೆ ಹೋದರೆ ಕೆಲವೊಮ್ಮೆ ನಮ್ಮ ಕೇಸ್ ಬಿದ್ದಾಗ ಪ್ರತಿವಾದಿಗಳಾಗಿ ಹೋಗಲೇಬೇಕಾಗುತ್ತದೆ.

ಆದರೆ ಎಲ್ಲರಿಗೂ ಕೂಡ ಈ ರೀತಿ ತಮ್ಮ ಮೇಲೆ ಆಗುವ ಕೇಸ್ ಅನ್ನು ನಿಭಾಯಿಸಿಕೊಂಡು ಹೋಗುವ ಶಕ್ತಿ ಇರುವುದಿಲ್ಲ. ಕೆಲವರು ಆರ್ಥಿಕವಾಗಿ ಬಹಳ ಕ’ಷ್ಟದಲ್ಲಿ ಇರುತ್ತಾರೆ ಹೀಗಾಗಿ ಅಂತವರ ಮೇಲೆ ಯಾವುದಾದರೂ ಕೇಸು ಬಿದ್ದಾಗ ಅವರು ಹಣಕಾಸಿನ ಸಮಸ್ಯೆಯಿಂದಾಗಿ ಕೇಸ್ ಏನಾದರೂ ಆಗಲಿ ಎಂದು ಬಿಡುವ ಹಾಗಿಲ್ಲ.

ವಿದ್ಯಾರ್ಥಿಗಳಿಗೆ ಸಿಹಿಸುದ್ದಿ, ಉಚಿತ ಲ್ಯಾಪ್ ಟಾಪ್ ವಿತರಣೆಗೆ ಅರ್ಜಿ ಆಹ್ವಾನ.! C.M ಸಿದ್ದರಾಮಯ್ಯ ಅವರಿಂದ ಅಧಿಕೃತ ಘೋಷಣೆ.! ಆಸಕ್ತರು ಅರ್ಜಿ ಸಲ್ಲಿಸಿ.!

ಕಾನೂನು ಎಲ್ಲರಿಗೂ ರಕ್ಷಣೆ ಕೊಡುತ್ತದೆ, ನ್ಯಾಯ ಎಂದರೆ ಎಲ್ಲರಿಗೂ ಒಂದೇ ಇಲ್ಲಿ ನೀವು ಹಣಕಾಸಿನ ತೊಂದರೆ ಇದೆ, ವಕೀಲರಿಗೆ (lawyer) ಕೊಡಲು ಹಣವಿಲ್ಲ. ಹೀಗಾಗಿ ಕೇಸ್ ನಡೆಸಿಕೊಂಡು ಹೋಗಲು ಆಗುವುದಿಲ್ಲ ಎಂದು ಬಿಡುವ ಅವಶ್ಯಕತೆ ಇಲ್ಲ. ನೀವು ಕೋರ್ಟಿನಲ್ಲಿ ಅರ್ಜಿ ಹಾಕುವ ಮೂಲಕ ಉಚಿತವಾಗಿ ನಿಮ್ಮ ಪರವಾಗಿ ವಾದ ಮಾಡುವುದಕ್ಕೆ ವಕೀಲರನ್ನು ಪಡೆದುಕೊಳ್ಳಲು.

ನೀವು ಒಂದು ರೂಪಾಯಿ ಖರ್ಚು ಮಾಡದೆ ನಿಮ್ಮ ಕೇಸ್ ನಡೆಸಿಕೊಂಡು ಈ ವಕೀಲರ ಸಹಾಯದಿಂದ ಮುಂದಕ್ಕೆ ತೆಗೆದುಕೊಂಡು ಹೋಗಬಹುದು. ಆದರೆ ಇದಕ್ಕೆ ಕೆಲ ನಿಯಮಗಳು ಇದೆ ಇದನ್ನು ಪ್ರತಿಯೊಬ್ಬ ನಾಗರಿಕರು ಕೂಡ ತಿಳಿದುಕೊಳ್ಳಬೇಕು ಅದಕ್ಕಾಗಿ ಈ ಅಂಕಣದಲ್ಲಿ ಇಂತಹ ಉಪಯುಕ್ತ ಮಾಹಿತಿಯ ಬಗ್ಗೆ ತಿಳಿಸಿಕೊಡುತ್ತಿದ್ದೇವೆ.

ರೇಷನ್ ಕಾರ್ಡ್ ತಿದ್ದುಪಡಿಗೆ ಕೊನೆ ದಿನಾಂಕ ವಿಸ್ತರಣೆ.! ಇನ್ನು ಎಷ್ಟು ದಿನಗಳವರೆಗೆ ಸಿಗಲಿದೆ ಅವಕಾಶ.? ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.!

ವಿ’ಚ್ಛೇ’ದ’ನ, ಕ್ರಿಮಿನಲ್ ಅಥವಾ ಆಸ್ತಿಗೆ ಸಂಬಂಧಪಟ್ಟ ಕೇಸ್ ಗಳು ಇನ್ನು ಮುಂತಾದ ಯಾವುದೇ ರೀತಿ ಸಿವಿಲ್ ಅಥವಾ ಕ್ರಿಮಿನಲ್ ಕೇಸ್ ಗಳು ಆಗಿದ್ದರು ಕೂಡ ನಿಮ್ಮ ಕೇಸ್ಗಳು ನಡೆಯುತ್ತಿರುವಾಗ ಇನ್ನು ಮುಂದೆ ಅವುಗಳನ್ನು ನಡೆಸಲು ಆಗುವುದಿಲ್ಲ ವಕೀಲರಿಗೆ ಹಣ ಕೊಡಲು ಆಗುವುದಿಲ್ಲ ಎನ್ನುವ ಪರಿಸ್ಥಿತಿ ಬಂದಾಗ ನೀವು ಯಾವ ಕೋರ್ಟ್ ಅಲ್ಲಿ ಕೇಸ್ ನಡೆಸುತ್ತಿದ್ದೀರಾ ಅಲ್ಲಿರುವ DLSA (District legal service authority) ಅಥಾರಿಟಿ ಹೋಗಿ ಮನವಿ ಸಲ್ಲಿಸಬೇಕು.

ನೀವು ಯಾವ ಕಾರಣಕ್ಕಾಗಿ ಉಚಿತವಾಗಿ ವಕೀಲರನ್ನು ಕೇಳುತ್ತಿದ್ದೀರಾ ಎನ್ನುವುದಕ್ಕೆ ಅವರಿಗೆ ದಾಖಲೆಯನ್ನು ಕೊಡಬೇಕು, ಆರ್ಥಿಕವಾಗಿ ಹಿಂದುಳಿದ ವರ್ಗದವರಿಗೆ ಮಾತ್ರ ಈ ರೀತಿ ಉಚಿತವಾಗಿ (free charge lawyer) ನಿಮ್ಮ ಪರ ವಾದ ಮಾಡಲು ವಕೀಲರು ಸಿಗುತ್ತಾರೆ. ನೀವು ಸ್ವಾವಲಂಬಿಗಳಾಗಿಲ್ಲ, ನಿಮಗೆ ಆದಾಯದ ಮೂಲ ಇಲ್ಲ ಎನ್ನುವುದಕ್ಕೆ ಸಂಬಂಧಪಟ್ಟ ಸಾಕ್ಷಿಗಳನ್ನು ಕೊಟ್ಟು ಅರ್ಜಿ ಸಲ್ಲಿಸಿ ಮನವಿ ಮಾಡಿಕೊಂಡರೆ ಅಥಾರಿಟಿಯು ಅವರ ಟೀಮ್ ನಲ್ಲಿರುವ ಲಾಯರ್ ಕೊಡುತ್ತಾರೆ.

ಗೃಹಲಕ್ಷ್ಮಿ ಯೋಜನೆ ಹಣ ಜಮಾ ದಿನಾಂಕ ಮತ್ತಷ್ಟು ಮುಂದೂಡಿಕೆ. ಈ ದಿನ ಕುಟುಂಬದ ಯಜಮಾನಿ ಖಾತೆಗೆ ಹಣ ವರ್ಗಾವಣೆಯಾಗುವುದು ಪಕ್ಕಾ.!

ಜಿಲ್ಲಾ ಕೋರ್ಟಿಂದ ಹೈಕೋರ್ಟ್ ವರೆಗೂ ಪ್ರತಿಯೊಂದಕ್ಕೂ ನ್ಯಾಯಾಲಯದಲ್ಲೂ DLSA ಇರುತ್ತದೆ. ಈ ರೀತಿ ನೇಮಕವಾದ ವಕೀಲರಿಗೆ ನೀವು ನೀವು ಪೇ ಮಾಡದೇ ಇದ್ದರೂ ಕೂಡ ಅಥಾರಿಟಿ ಪೇ ಮಾಡುತ್ತಾ ಇರುತ್ತದೆ ಹಾಗಾಗಿ ಅವರು ಉಚಿತವಾಗಿ ಬರುವ ಕಾರಣ ಕೇಸ್ ಅನ್ನು ಸರಿಯಾಗಿ ನಡೆಸಿಕೊಂಡು ಹೋಗುತ್ತಿಲ್ಲ ಎಂದು ತಪ್ಪು ತಿಳಿಯುವ ಅವಶ್ಯಕತೆ ಇಲ್ಲ.

ತಪ್ಪದೆ ನೀವು ಕೇಸ್ ಇರುವ ದಿನ ಕೋರ್ಟ್ ಗೆ ಹೋಗಿ ಕೇಸ್ ಸ್ಥಿತಿ ಏನಾಯಿತು ಎಂದು ತಿಳಿದುಕೊಳ್ಳಬಹುದು. ನೀವು ನೇಮಕ ಮಾಡಿಕೊಂಡ ಲಾಯರ್ ಬಂದಿದ್ದರಾ ಇತ್ಯಾದಿ ವಿಚಾರಗಳನ್ನು ಖುದ್ದಾಗಿ ತಿಳಿದುಕೊಳ್ಳಬಹುದು ಇಂತಹ ಪರಿಸ್ಥಿತಿ ಬಂದರೆ ತಪ್ಪದೇ ಈ ಅನುಕೂಲತೆಯನ್ನು ಪಡೆದುಕೊಳ್ಳಿ.

Leave a Comment

%d bloggers like this: