ರೇಷನ್ ಕಾರ್ಡ್ ತಿದ್ದುಪಡಿಗೆ ಕೊನೆ ದಿನಾಂಕ ವಿಸ್ತರಣೆ.! ಇನ್ನು ಎಷ್ಟು ದಿನಗಳವರೆಗೆ ಸಿಗಲಿದೆ ಅವಕಾಶ.? ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.!

 

ಕರ್ನಾಟಕ ರಾಜ್ಯ ಸರ್ಕಾರವು ಗ್ಯಾರಂಟಿ ಯೋಜನೆಗಳನ್ನು (Guarantee Scheme) ಘೋಷಣೆ ಮಾಡಿದ ಮೇಲೆ ರೇಷನ್ ಕಾರ್ಡ್ ತಿದ್ದುಪಡಿ (Ration card correction) ಮಾಡಿಕೊಳ್ಳುವ ಮತ್ತು ಹೊಸ ರೇಷನ್ ಕಾರ್ಡ್ ಗಾಗಿ ಅರ್ಜಿ (new ration card apply) ಸಲ್ಲಿಸುವವರ ಸಂಖ್ಯೆ ಹೆಚ್ಚಾಗುತ್ತಿದೆ. ಯಾಕೆಂದರೆ, ಸರ್ಕಾರದ ಮಹತ್ವಕಾಂಕ್ಷೆ ಯೋಜನೆಗಳಾದ ಗೃಹಲಕ್ಷ್ಮಿ ಯೋಜನೆ (Gruhalakshmi) ಮತ್ತು ಅನ್ನಭಾಗ್ಯ ಯೋಜನೆ (Annabhagya) ಫಲಾನುಭವಿಗಳಾಗಲು ರೇಷನ್ ಕಾರ್ಡ್ ಹೊಂದಿರಬೇಕಾದದ್ದು ಕಡ್ಡಾಯವಾಗಿದೆ.

ಅಲ್ಲದೆ ರೇಷನ್ ಕಾರ್ಡ್ ನಲ್ಲಿ ಕುಟುಂಬದ ಮುಖ್ಯಸ್ಥರ ಸ್ಥಾನದಲ್ಲಿ ಆ ಕುಟುಂಬದ ಹಿರಿಯ ಮಹಿಳೆ ಹೆಸರು ಇದ್ದರೆ ಮಾತ್ರ ಅವರು ಈ ಯೋಜನೆಗಳಿಗೆ ಅರ್ಜಿ ಸಲ್ಲಿಸಲು ಸಾಧ್ಯವಾಗುವುದು. ಇದಕ್ಕಾಗಿ ಇವುಗಳನ್ನು ಸರಿಪಡಿಸಿಕೊಳ್ಳಲು ಪ್ರತಿದಿನವೂ ಸಂಬಂಧ ಪಟ್ಟ ಕಚೇರಿಗಳ ಮುಂದೆ ಜನರು ಸರತಿ ಸಾಲಿನಲ್ಲಿ ಕಾಯುತ್ತಿದ್ದಾರೆ. ಕಳೆದ ವಾರವಷ್ಟೇ ಈ ಬಗ್ಗೆ ಮಾನ್ಯ ಆಹಾರ ಮತ್ತು ನಾಗರಿಕ ಸರಬರಾಜು ಸಚಿವರಾದ ಕೆ.ಎಚ್ ಮುನಿಯಪ್ಪ ಅವರು ಮಾತನಾಡಿ ಶೀಘ್ರವಾಗಿ ತಿದ್ದುಪಡಿಗೆ ಅನುಮತಿ ಕೊಡುವುದಾಗಿ ಹೇಳಿದ್ದರು.

ಗೃಹಲಕ್ಷ್ಮಿ ಯೋಜನೆ ಹಣ ಜಮಾ ದಿನಾಂಕ ಮತ್ತಷ್ಟು ಮುಂದೂಡಿಕೆ. ಈ ದಿನ ಕುಟುಂಬದ ಯಜಮಾನಿ ಖಾತೆಗೆ ಹಣ ವರ್ಗಾವಣೆಯಾಗುವುದು ಪಕ್ಕಾ.!

ರೇಷನ್ ಕಾರ್ಡ್ ನಲ್ಲಿ ಆಗಿರುವ ಸಮಸ್ಯೆಯಿಂದ ಜುಲೈ ತಿಂಗಳ ಅನ್ನಭಾಗ್ಯ ಯೋಜನೆಯ ಹೆಚ್ಚುವರಿ ಹಣದಿಂದ ಹಲವರು ವಂಚಿತರಾಗಿದ್ದಾರೆ ಮತ್ತು ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಲಾಗದೆ ಸಮಸ್ಯೆ ಪಡುತ್ತಿದ್ದಾರೆ. ಅದಕ್ಕಾಗಿ ಸದ್ಯಕ್ಕೆ ನಾಲ್ಕು ದಿನಗಳ ವರೆಗೆ ರೇಷನ್ ಕಾರ್ಡ್ ಸಮಸ್ಯೆಗಳನ್ನು ಸರಿಪಡಿಸಿಕೊಳ್ಳಲು ಅವಕಾಶ ನೀಡಲಾಗಿತ್ತು.

ಪಡಿತರ ಚೀಟಿಯಲ್ಲಿ ಕುಟುಂಬದ ಮುಖ್ಯಸ್ಥೆಯ ಮಹಿಳೆಯ ಹೆಸರು ಬದಲಾಯಿಸಬೇಕಿದ್ದರೆ, ಒಂದು ವೇಳೆ ಅವರು ಮೃ’ತ ಪಟ್ಟಿದ್ದರೆ ಅವರ ಹೆಸರನ್ನು ತೆಗೆದುಹಾಕಿ ಆ ಸ್ಥಾನಕ್ಕೆ ಬೇರೆಯವರ ಹೆಸರನ್ನು ಹಾಕಬೇಕಿದ್ದರೆ ಅಥವಾ ಹೊಸ ಸದಸ್ಯರ ಹೆಸರನ್ನು ಸೇರ್ಪಡೆ ಮಾಡಬೇಕಿದ್ದರೆ ಅಥವಾ ನ್ಯಾಯಬೆಲೆ ಅಂಗಡಿಯನ್ನು ಬದಲಾಯಿಸಬೇಕಿದ್ದರೆ ಅಥವಾ ಕುಟುಂಬದ ಸದಸ್ಯರ ಹೆಸರಲ್ಲಿ ತಿದ್ದುಪಡಿ ಮಾಡಬೇಕಾಗಿದ್ದರೆ ಅಥವಾ ಸದಸ್ಯರ ಹೆಸರನ್ನು ಬದಲಾವಣೆ ಮಾಡಿಸಬೇಕಾಗಿದ್ದರೆ ಇವುಗಳನ್ನು ಸರಿಪಡಿಸಿಕೊಳ್ಳಲು 18 ಆಗಸ್ಟ್ 2023 ರಿಂದ 21 ಆಗಸ್ಟ್ 2023 ರವರೆಗೆ ಅವಕಾಶ ನೀಡಿತ್ತು.

ವಾಹನ ಸವಾರರಿಗೆ ಗುಡ್ ನ್ಯೂಸ್ ಕೊಟ್ಟ ಸಾರಿಗೆ ಇಲಾಖೆ.! ಇನ್ಮುಂದೆ RC ಮತ್ತು DL ಗಾಗಿ ಅಲೆದಾಡಬೇಕಿಲ್ಲ. ಮನೆ ಬಾಗಿಲಿದೆ ಪೋಸ್ಟಲ್ ಮೂಲಕ ಬರಲಿದೆ.!

ಸರ್ಕಾರ ಸೂಚಿಸಿದ್ದ ಸೇವಾ ಕೇಂದ್ರಗಳಾದ ಗ್ರಾಮ ಒನ್, ಕರ್ನಾಟಕ ಒನ್, ಬೆಂಗಳೂರು ಒನ್ ಅಥವಾ ಬಾಪೂಜಿ ಸೇವಾ ಕೇಂದ್ರಗಳಲ್ಲಿ ಸೂಚಿಸಿರುವ ಪೂರಕ ದಾಖಲೆಗಳನ್ನು ಕೊಟ್ಟು ತಿದ್ದುಪಡಿ ಮಾಡಿಸಿಕೊಳ್ಳಲು ಸೂಚಿಸಲಾಗಿತ್ತು. ಆದರೆ ಕೊಟ್ಟಿದ್ದ ಈ ಕಾಲಾವಕಾಶದಲ್ಲಿ ಎಲ್ಲೆಡೆ ಸರ್ವರ್ ಸಮಸ್ಯೆ (Server problem) ತಲೆದೋರಿ ಅನೇಕರಿಗೆ ತಮ್ಮ ರೇಷನ್ ಕಾರ್ಡ್ ಸಮಸ್ಯೆ ಸರಿಪಡಿಸಿಕೊಳ್ಳಲು ಆಗಿಲ್ಲ.

ಹಾಗಾಗಿ ಮತ್ತಷ್ಟು ದಿನಗಳ ಅವಕಾಶ ನೀಡಬೇಕು ಎಂದು ಜನಸಾಮಾನ್ಯರು ಸರ್ಕಾರವನ್ನು ಕೋರಿದ್ದರು ಈಗ ಅದಕ್ಕೆ ಅನುಮತಿ ಸಿಕ್ಕಿದೆ. ಪಡಿತರ ಚೀಟಿಯಲ್ಲಿ ಹೊಸದಾಗಿ ಹೆಸರು ಸೇರ್ಪಡೆ, ವಿಳಾಸ ಬದಲಾವಣೆ ಮುಂತಾದ ತಿದ್ದುಪಡಿಗೆ ಗಡುವು ವಿಸ್ತರಿಸಿರುವುದಾಗಿ (date extend) ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ತಿಳಿಸಿದೆ.

ಇನ್ಮುಂದೆ ಕೈ ಬರಹದ ಅರ್ಜಿ ಬಂದ್, ಇ-ಸ್ವತ್ತು, ಖಾತೆ ಬದಲಾವಣೆಗೆ ಆನ್ಲೈನ್ ನಲ್ಲೇ ಅರ್ಜಿ ಸಲ್ಲಿಸಲು ಅವಕಾಶ.! ಈ ಸೇವೆ ಆರಂಭ ಯಾವಾಗ ಅರ್ಜಿ ಸಲ್ಲಿಸೋದು ಹೇಗೆ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.!

ಸೋಮವಾರದವರೆಗೆ ಮಾತ್ರ ತಿದ್ದುಪಡಿಗೆ ಇದ್ದ ಅವಕಾಶವನ್ನು ಗ್ರಾಹಕರ ಒತ್ತಾಯದ ಮೇರೆಗೆ ಇನ್ನು ಕೆಲವು ದಿನಗಳವರೆಗೆ ಮುಂದುವರಿಸುವುದಾಗಿ ಆ ಸಮಯದಲ್ಲಿ ಗ್ರಾಹಕರು ತಮ್ಮ ಸಮಸ್ಯೆಯನ್ನು ಸರಿಪಡಿಸಿಕೊಳ್ಳಬೇಕಾಗಿ ಸೂಚಿಸಿದ್ದಾರೆ. ಸರ್ವರ್‌ ಸಮಸ್ಯೆ ನಿವಾರಿಸುವ ಕಡೆ ಕೂಡ ಹಂತ-ಹಂತವಾಗಿ ಗಮನ ನೀಡಲಾಗುವುದು.

CSC ಸೆಂಟರ್ ಹಾಗೂ ಹತ್ತಿರದ ನ್ಯಾಯಬೆಲೆ ಅಂಗಡಿಗಳಲ್ಲಿಯೂ ಹೆಸರು ಸೇರ್ಪಡೆ, ತಿದ್ದುಪಡಿ, ವಿಳಾಸ ಬದಲಾವಣೆ ಸೇವೆ ಪಡೆಯಬಹುದು ಎಂದು ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಸಾರ್ವಜನಿಕ ವಿತರಣೆ ಹೆಚ್ಚುವರಿ ನಿರ್ದೇಶಕ ಜ್ಞಾನೇಂದ್ರಕುಮಾರ್‌ ಗಂಗ್ವಾರ ಅವರು ತಿಳಿಸಿದ್ದಾರೆ.

Leave a Comment

%d bloggers like this: