ಅತ್ತೆ ಸೊಸೆ ಬೇರೆ ಬೇರೆ ಮನೆಯಲ್ಲಿ ಇದ್ದರೆ ಗೃಹಲಕ್ಷ್ಮಿ ಯೋಜನೆಯ 2000 ಹಣ ಇಬ್ಬರಿಗೂ ಸಿಗುತ್ತ.? ಸರ್ಕಾರ ಈ ಬಗ್ಗೆ ಹೇಳಿದ್ದೇನು ನೋಡಿ.!

 

ಕರ್ನಾಟಕ ರಾಜ್ಯದ ಮಹಿಳೆಯರಿಗೆ ಕರ್ನಾಟಕದಲ್ಲಿ ಸ್ಥಾಪನೆ ಆಗಿರುವ ಕಾಂಗ್ರೆಸ್ ಸರ್ಕಾರವು ವಿಶೇಷವಾದ ಗ್ಯಾರಂಟಿ ಕಾರ್ಡ್ ಯೋಜನೆಗಳನ್ನು ಜಾರಿಗೆ ತರುವ ಮೂಲಕ ಗುಡ್ ನ್ಯೂಸ್ ನೀಡಿದೆ. ಯಾಕೆಂದರೆ ಇನ್ನು ಮುಂದೆ ಕರ್ನಾಟಕದಾದ್ಯಂತ ಕರ್ನಾಟಕ ರಾಜ್ಯದ ಮಹಿಳೆಯರು ಐಷಾರಾಮಿ ಬಸ್ ಗಳನ್ನು ಹೊರತುಪಡಿಸಿ ಕರ್ನಾಟಕದ ಎಲ್ಲಾ ಸರ್ಕಾರಿ ಬಸ್ ಗಳಲ್ಲಿ ಉಚಿತ ಪ್ರಯಾಣ ಮಾಡಬಹುದು.

ಇದರ ಜೊತೆ ಗೃಹಲಕ್ಷ್ಮಿ ಯೋಜನೆಯಡಿ ಮನೆಯ ಯಜಮಾನಿಗೆ ಸರ್ಕಾರದಿಂದ ಮನೆ ನಿರ್ವಹಣೆಗಾಗಿ ಸಹಾಯಧನವು ಪ್ರತಿ ತಿಂಗಳು ಕೂಡ ಅವರ ಖಾತೆಗೆ DBT ಮೂಲಕ ನೇರ ವರ್ಗಾವಣೆ ಆಗಲಿದೆ. ಇದು ಕಾಂಗ್ರೆಸ್ ಪಕ್ಷವು ಚುನಾವಣೆಯ ಪ್ರಚಾರದ ವೇಳೆ ಮಹಿಳೆಯರಿಗೆ ನೀಡಿದ್ದ ಭರವಸೆ ಆಗಿತ್ತು, ಈಗ ಇದನ್ನು ಅನುಷ್ಠಾನಕ್ಕೆ ತರುವ ಮೂಲಕ ಸರ್ಕಾರ ಕೊಟ್ಟ ಮಾತನ್ನು ಉಳಿಸಿಕೊಂಡಿದೆ.

ಈ ಗೃಹಲಕ್ಷ್ಮಿ ಸ್ಕೀಮ್ ನ 2000ರೂ. ಸಹಾಯಧನವನ್ನು ಕೊಡುವುದು ಸರ್ಕಾರ ಪೋಷಿಸಿದ ಉಳಿದ ಎಲ್ಲಾ ಸ್ಕೀಮ್ ಗಳಿಗಿಂತಲೂ ಹೆಚ್ಚು ಹೊರೆ ಹಾಗೂ ಗೊಂದಲವನ್ನುಂಟು ಮಾಡಿದೆ. ಯಾಕೆಂದರೆ ಆಗಸ್ಟ್ 15 ರಂದು ಈ ಯೋಜನೆ ಲಾಂಚ್ ಆಗುವ ಬಗ್ಗೆ ಮುಖ್ಯಮಂತ್ರಿಗಳು ಹೇಳಿಕೆ ಕೊಟ್ಟಿದ್ದಾರೆ. ಆದರೆ ಫಲಾನುಭವಿಗಳು ಇನ್ನು ನಿರ್ಧಾರ ಆಗಿಲ್ಲ.

ಜೂನ್ 15ರಿಂದ ಜುಲೈ 15 ರವರೆಗೆ ಅರ್ಜಿ ಸಲ್ಲಿಸಲು ತಿಳಿಸಲಾಗಿದ್ದು, ಜುಲೈ 15 ರಿಂದ ಆಗಸ್ಟ್ 15 ರವರೆಗೆ ಅವುಗಳ ಪರಿಶೀಲನೆ ನಡೆದು ಆಗಸ್ಟ್ 15 ರಂದು ಕುಟುಂಬಗಳ ಯಜಮಾನಿ ಖಾತೆಗೆ ಹಣ ಜಮೆ ಮಾಡಲಾಗುತ್ತದೆ ಎಂದು ಮುಖ್ಯಮಂತ್ರಿಗಳು ತಿಳಿಸಿದ್ದಾರೆ. ಆದರೆ ಕುಟುಂಬದ ಯಜಮಾನಿ ಅತ್ತೆ ಆಗುತ್ತಾರಾ ಸೊಸೆ ಆಗುತ್ತಾರಾ ಎನ್ನುವುದೇ ಬಹಳ ಗೊಂದಲದ ವಿಚಾರ.

ಈ ಬಗ್ಗೆ ಸಾಧಕ ಬಾಧಕಗಳನ್ನು ಪಟ್ಟಿ ಮಾಡಿಕೊಂಡು ಗೃಹಲಕ್ಷ್ಮಿ ಯೋಜನೆಯ ಬಗ್ಗೆ ಸರ್ಕಾರಕ್ಕೆ ವಿವರ ಕೊಟ್ಟ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು ನಮ್ಮ ಸಂಸ್ಕೃತಿಯ ಪ್ರಕಾರ ಅತ್ತೆಯೇ ಮನೆ ಯಜಮಾನಿ ಹಾಗಾಗಿ ಅವರ ಖಾತೆಗೆ ನೀಡಲಾಗುತ್ತದೆ, ಒಂದು ವೇಳೆ ಅತ್ತೆ ಪ್ರೀತಿಯಿಂದ ಸೊಸೆಗೆ ಬಿಟ್ಟುಕೊಟ್ಟರೆ ಯಾವುದೇ ಅಡ್ಡಿ ಇರುವುದಿಲ್ಲ ಎಂದಿದ್ದಾರೆ.

ಈ ವಿಚಾರದ ಬಗ್ಗೆ ಮಹಿಳೆಯರಿಗೆ ಮತ್ತೊಂದು ಗುಡ್ ನ್ಯೂಸ್ ಏನಂದರೆ ಅತ್ತೆ ಸೊಸೆ ಇಬ್ಬರಿಗೂ ಕೂಡ ಈ ಯೋಜನೆಯ ಸಹಾಯಧನ ಸಿಗಲಿದೆ. ಯಾಕೆಂದರೆ ಬಹುತೇಕ ಕುಟುಂಬಗಳಲ್ಲಿ ಈಗ ಅತ್ತೆ ಮತ್ತು ಸೊಸೆ ಪ್ರತ್ಯೇಕವಾಗಿ ವಾಸಿಸುತ್ತಿದ್ದಾರೆ ಹಾಗಾಗಿ ಬೇರೆ ಬೇರೆ ಕಡೆಗಳಲ್ಲಿ ಅಥವಾ ಬೇರೆ ಮನೆಗಳಲ್ಲಿ ಅತ್ತೆ ಸೊಸೆ ವಾಸ ಮಾಡುತ್ತಿದ್ದರೆ.

ಆ ಕುಟುಂಬಗಳಿಗೆ ಅವರೇ ಯಜಮಾನಿ ಹಾಗಾಗಿ ಇಬ್ಬರು ಕೂಡ ಅರ್ಜಿ ಸಲ್ಲಿಸಿ ಈ ಸಹಾಯಧನವನ್ನು ಪಡೆದುಕೊಳ್ಳಬಹುದು ಎಂದು ಅನುಮತಿಯನ್ನು ನೀಡಲಾಗಿದೆ. ಬಲವಾದ ಮೂಲಗಳ ಪ್ರಕಾರ ಈ ಯೋಜನೆಗೆ 20,000 ದಿಂದ 30,000 ಕೋಟಿ ವರೆಗೆ ಆದಾಯ ಬೇಕಾಗಬಹುದು ಎಂದು ಊಹಿಸಲಾಗಿದ್ದು ಈ ಹೊರೆ ಸರ್ಕಾರದ ಮೇಲಿದೆ.

ಇದರ ಜೊತೆಗೆ ಇದು BPL ಕುಟುಂಬದವರಿಗೆ ಮಾತ್ರ ಅಲ್ಲದೆ APL ಕುಟುಂಬಗಳ ಮನೆಯ ಯಜಮಾನಿಗೂ ಕೂಡ ಸಿಗುವುದರಿಂದ ಕರ್ನಾಟಕದಲ್ಲಿರುವ 18 ವರ್ಷ ಮೇಲ್ಪಟ್ಟ ಎಲ್ಲಾ ಮಹಿಳೆಯರಿಗೂ ಫಲಾನುಭವಿಗಳಾಗುವ ಅವಕಾಶ ಇದೆ. ಹಾಗೆಯೇ ಸಾಮಾಜಿಕ ಭದ್ರತಾ ಪಿಂಚಣಿಗಳನ್ನು ಪಡೆಯುವವರೂ ಕೂಡ ಈ ಯೋಜನೆ ಸೌಲಭ್ಯವನ್ನು ಪಡೆಯಲು ಅರ್ಹರಿರುವುದರಿಂದ ರಾಜ್ಯದ ಎಲ್ಲಾ ಮಹಿಳೆಯರಿಗೂ ಕೂಡ ಇದು ಸಂತಸದ ಸುದ್ದಿ ಆಗಿದೆ. ಇದರ ಬಗ್ಗೆ ನಿಮ್ಮ ಅಭಿಪ್ರಾಯ ಏನು ಎನ್ನುವುದನ್ನು ತಪ್ಪದೆ ಕಾಮೆಂಟ್ ಮಾಡಿ ತಿಳಿಸಿ.

Leave a Comment

%d bloggers like this: