ಲೇಬರ್ ಕಾರ್ಡ್ ಇದ್ದವರಿಗೆ ಭರ್ಜರಿ ಗುಡ್ ನ್ಯೂಸ್: ಪ್ರತಿದಿನ ಉಚಿತವಾಗಿ ಪಡೆಯಿರಿ 300 ರೂಪಾಯಿ.! ಹೇಗೆ ಗೊತ್ತಾ.?

 

ಇಂದಿನ ಲೇಖನದಲ್ಲಿ ಕಾರ್ಮಿಕ ಕಾರ್ಡಿನಿಂದ ಒದಗುವ ಸಹಾಯಧನದ ಯೋಜನೆಯ ಬಗ್ಗೆ ನಿಮಗೆ ಮಾಹಿತಿಯನ್ನು ತಿಳಿಸಿಕೊಡಲಾಗುವುದು. ಹೌದು, ಕಾರ್ಮಿಕ ಕಾರ್ಡನ್ನು ಉಳ್ಳವರಿಗೆ ಕನಿಷ್ಠ 300 ರೂ. ರಿಂದ ಗರಿಷ್ಠ 20,000 ರೂವರೆಗೂ ಸಹಾಯಧನವನ್ನು ನೀಡಲಾಗುತ್ತದೆ. ಹಾಗಾದರೆ, ಈ ಯೋಜನೆಯಡಿಯಲ್ಲಿ ಸಹಾಯಧನವನ್ನು ಪಡೆಯುವುದು ಹೇಗೆ?, ಇದಕ್ಕೆ ಬೇಕಾದ ಅರ್ಹತೆಗಳು ಯಾವುವು?, ಈ ಯೋಜನೆಗೆ ಅರ್ಜಿಯನ್ನು ಸಲ್ಲಿಸುವುದು ಹೇಗೆ?, ಅರ್ಜಿಯನ್ನು ಸಲ್ಲಿಸಲು ಯಾವ ದಾಖಲೆಗಳು ಬೇಕಾಗುತ್ತದೆ?, ಯಾರಿಗೆ ಎಷ್ಟು ಸಹಾಯಧನ ದೊರೆಯುತ್ತದೆ? ಎಂಬುದರ ಸಂಪೂರ್ಣ ಮಾಹಿತಿಯನ್ನು ಈ ಲೇಖನದ ಮೂಲಕ ನಿಮಗೆ ತಿಳಿಸಿಕೊಡಲಾಗುವುದು.

ನಿರ್ದಿಷ್ಟ ಕಾರ್ಮಿಕ ಕುಟುಂಬದವರಿಗೆ ಉಚಿತ ಆರೋಗ್ಯ ಭಾಗ್ಯ ಕಲ್ಪಿಸುವುದು ರಾಷ್ಟ್ರೀದ ಪ್ರಮುಖ ಉದ್ದೇಶವಾಗಿದೆ. ಆದ್ದರಿಂದ, ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಮಂಡಳಿಯ ಕಡೆಯಿಂದ ಕಾರ್ಮಿಕ ಕಾರ್ಡ್ ಅಥವಾ ಲೇಬರ್ ಕಾರ್ಡನ್ನು ಹೊಂದಿದವರಿಗೆ ಈಗಾಗಲೇ ಅನೇಕ ಸೌಲಭ್ಯಗಳು ಸರ್ಕಾರದಿಂದ ಒದಗುತ್ತಿದ್ದು, ಈ ಯೋಜನೆಯೂ ಕೂಡ ಅದೇ ರೀತಿಯ ಒಂದು ವೈದ್ಯಕೀಯ ಸೌಲಭ್ಯವಾಗಿದೆ. ಕಾರ್ಮಿಕ ಕಾರ್ಡ್ ಹೊಂದಿದವರು ಆಸ್ಪತ್ರೆಗೆ ದಾಖಲಾದ ಸಂದರ್ಭದಲ್ಲಿ 300 ರಿಂದ ಗರಿಷ್ಠ 20 ಸಾವಿರದವರೆಗೂ ಸಹಾಯಧನವನ್ನು ನೀಡಲಾಗುತ್ತದೆ.

ಈ ಸೌಲಭ್ಯ ಪಡೆಯಲು ಬೇಕಾದ ಅರ್ಹತೆಗಳು?

ಮಂಡಳಿಯ ಕಾರ್ಯದರ್ಶಿಯ ಅಥವಾ ಮಂಡಳಿಯ ಪರವಾಗಿ ನೇಮಕವಾದ ಅಧಿಕೃತ ಅಧಿಕಾರಿಗಳು ನೋಂದಾಯಿತ ಫಲಾನುಭವಿ ಮತ್ತು ಅವನ ಅವಲಂಬಿತರು ರಾಜ್ಯ ಸರ್ಕಾರದ ಯಾವುದೇ ವಿಮೆ ಯೋಜನೆ ಅಡಿಯಲ್ಲಿ ಗುರುತಿಸಲ್ಪಟ್ಟ ಆಸ್ಪತ್ರೆಗಳಲ್ಲಿ ಅಥವಾ ಕರ್ನಾಟಕ ಸರ್ಕಾರಿ ನೌಕರರ (ವೈದ್ಯಕೀಯ ಹಾಜರಾತಿ) ನಿಯಮಗಳು, 1963 ರ ಷಡ್ಯೂಲ್-1 ರಲ್ಲಿ ನಮೂದಿಸಿರುವ ಆಸ್ವತ್ರೆಗಳಲ್ಲಿ ದಾಖಲಾದಾಗ ವೈದ್ಯಕೀಯ ಸಹಾಯಧನವನ್ನು ನೀಡಲಾಗುತ್ತದೆ.

ಕನಿಷ್ಠ 48 ಗಂಟೆಗಳವರೆಗೆ ಸತತವಾಗಿ ಆಸ್ಪತ್ರೆಯಲ್ಲಿ ದಾಖಲಾದಾಗ, ವೈದ್ಯಕೀಯ ಸಹಾಯಧನವನ್ನು ನೀಡಲಾಗುತ್ತದೆ. ಪ್ರತಿ ದಿನಕ್ಕೆ 300 ರೂ ನಂತೆ ಗರಿಷ್ಠ ರೂ.20,000/- (ಸರ್ಕಾರದ ಅಧಿಸೂಚನೆ ಸಂಖ್ಯೆ ಎಲ್ ಡಿ 458 ಎಲ್ ಇಟಿ 2021 ಬೆಂಗಳೂರು ದಿನಾಂಕ: 08-08-2022 ರಂತೆ ) ಮಿತಿಗೆ ಒಳಪಟ್ಟು ಸಹಾಯಧನ ಮಂಜೂರು ಮಾಡಲಾಗಿದೆ.

ಅಗತ್ಯ ದಾಖಲೆಗಳು

* ಮಂಡಳಿ ನೀಡಿರುವ ಗುರುತಿನ ಚೀಟಿ/ ಸ್ಮಾರ್ಟ್ ಕಾರ್ಡ್ (ದೃಢೀಕೃತ)
ಉದ್ಯೋಗ ದೃಡೀಕರಣ ಪತ್ರ.
* ಬ್ಯಾಂಕ್ ಖಾತೆಯ ಪುರಾವೆ.
* ಆಸ್ಪತ್ರೆಗೆ ದಾಖಲಾದ ಮತ್ತು ಬಿಡುಗಡೆಯಾದ ದಿನಾಂಕ ಹಾಗೂ
ಚಿಕಿತ್ಸಾ ವೆಚ್ಚವನ್ನು ಒಳಗೊಂಡ ಬಿಲ್ಲುಗಳ ವಿವರ.
* ಫಲಾನುಭವಿಯು/ಅವಲಂಬಿತ ಸರ್ಕಾರಿ/ಸರ್ಕಾರದಿಂದ ಮಾನ್ಯತೆ ಪಡೆದ (ಶೆಡ್ಯೂಲ್ 1ಗೆ ಸೇರಿದ ) ಖಾಸಗಿ ಆಸ್ಪತ್ರೆಗಳಲ್ಲಿ ಕನಿಷ್ಠ ಎರಡು ದಿನ ಒಳರೋಗಿಯಾಗಿ ದಾಖಲೆಯಾಗಿರುವ ಬಗ್ಗೆ ವೈದ್ಯಕೀಯ ದಾಖಲೆಯನ್ನು ಸಲ್ಲಿಸಬೇಕು.
ಆಸ್ಪತ್ರೆಗೆ ದಾಖಲಾದ ದಿನಾಂಕದಿಂದ ಆರು ತಿಂಗಳೊಳಗೆ ಅರ್ಜಿಯನ್ನು ಸಲ್ಲಿಸುವುದು.
* ಅರ್ಜಿದಾರರು ಮಂಡಳಿಯ ತಂತ್ರಾಂಶದಲ್ಲಿ ಅರ್ಜಿಯನ್ನು ಸಲ್ಲಿಸುವುದು.

ಅರ್ಜಿಯನ್ನು ಸಲ್ಲಿಸುವ ವಿಧಾನ
* ಅರ್ಜಿದಾರರು ಅರ್ಜಿಯನ್ನು ಆನ್ಲೈನ್ ಮುಖಾಂತರ ಸಲ್ಲಿಸಬೇಕಾಗುತ್ತದೆ.
* ಈ ಅರ್ಜಿಯನ್ನು ನಾವು ಸೇವಾ ಸಿಂಧು ಮೂಲಕ ಸಲ್ಲಿಸಬೇಕಾಗುತ್ತದೆ.
* ಸೇವಾ ಸಿದ್ದು ಅಥವಾ ಗ್ರಾಮ ವನ್ಗಳಿಗೆ ತೆರಳುವ ಮೊದಲು ನೀವು ನಮೂನೆ – 22- ಎ ಅರ್ಜಿಯನ್ನು ಡೌನ್ಲೋಡ್ ಮಾಡಿಕೊಂಡು ನಂತರ ಅದನ್ನು ಪೂರ್ಣವಾಗಿ ಭರ್ತಿ ಮಾಡಬೇಕು.
* ನಂತರ ಅದರ ಕೆಳಗೆ ನೀವು ವೈದ್ಯರ ಸಹಿಯನ್ನು ಮಾಡಿಸಬೇಕು. ಮುಂದುವರೆದು ಸ್ಕ್ಯಾನನ್ನು ಮಾಡಿಕೊಂಡು ನಂತರ ನೀವು ಹತ್ತಿರದ ಸೇವಾ ಸಿಂಧು ಕೇಂದ್ರಕ್ಕೆ ತೆರಳಿ ಅಲ್ಲಿ ಅರ್ಜಿಯನ್ನು ಸಲ್ಲಿಸಬೇಕು.

* ನಂತರ ಅವರು ನಿಮಗೊಂದು ಎಕನಾಲೆಜ್ಮೆಂಟ್ ಲೆಟರನ್ನು ಕೊಡುತ್ತಾರೆ ಅದನ್ನು ನೀವು ನೋಂದಣಾಧಿಕಾರಿಗಳಾದ ಹಿರಿಯ / ಕಾರ್ಮಿಕ ನಿರೀಕ್ಷಕರಿಂದ ಪರಿಶೀಲನೆ ಮಾಡಿಸಿಕೊಳ್ಳಬೇಕು. ಕಾರ್ಮಿಕ ಅಧಿಕಾರಿಯವರು ಪರಿಶೀಲನೆ ಮಾಡಿದ ನಂತರ ಅದನ್ನು ಅಪ್ರೂ ಮಾಡುತ್ತಾರೆ. ಹೀಗೆ ನೀವು ಕಾರ್ಮಿಕ ಕಾರ್ಡನ್ನು ಬಳಸಿಕೊಂಡು ವೈದ್ಯಕೀಯ ಸಹಾಯಧನವನ್ನು ಪಡೆಯಬಹುದಾಗಿದೆ.

Leave a Comment

%d bloggers like this: