ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್, ಹಳೆ ಬಸ್ ಪಾಸ್ ಮೂಲಕವೇ ಪ್ರಯಾಣಿಸಲು ಅವಕಾಶ ಮಾಡಿಕೊಟ್ಟ ನೂತನ ಸರ್ಕಾರ.!

 

ಕರ್ನಾಟಕದಲ್ಲಿ 2023-24 ನೇ ಸಾಲಿನ ಶೈಕ್ಷಣಿಕ ತರಗತಿಗಳು ಆರಂಭವಾಗಿವೆ. ದೂರದ ಶಾಲಾ ಕಾಲೇಜುಗಳಿಗೆ ಪ್ರಯಾಣ ಮಾಡುವ ಮಕ್ಕಳಿಗೆ ಕರ್ನಾಟಕ ಸರ್ಕಾರದ ಸಾರಿಗೆ ಸಂಸ್ಥೆ ವಾಹನಗಳಲ್ಲಿ ಉಚಿತವಾಗಿ ಅಥವಾ ರಿಯಾಯಿತಿ ದರದಲ್ಲಿ ಬಸ್ ಪಾಸುಗಳನ್ನು ನೀಡಲಾಗುತ್ತಿತ್ತು ಇದಕ್ಕಾಗಿ ಸೇವಾ ಸಿಂಧು ತಂತ್ರಾಂಶದ ಮೂಲಕ ಅರ್ಜಿ ಸಲ್ಲಿಸಿ ಪಾಸ್ ಪಡೆದುಕೊಳ್ಳಲು ವ್ಯವಸ್ಥೆ ಮಾಡಲಾಗುತ್ತಿತ್ತು.

ಆದರೆ 2023-24ನೇ ಸಾಲಿನ ಶೈಕ್ಷಣಿಕ ತರಗತಿಗಳು ಆರಂಭವಾಗಿದ್ದರೂ ಕೂಡ ಬಸ್ ಪಾಸ್ ಬಗ್ಗೆ ಆನ್ಲೈನ್ ಅರ್ಜಿ ಆಹ್ವಾನಿಸುವ ಪ್ರಕ್ರಿಯೆ ಆರಂಭಗೊಂಡಿಲ್ಲ, ಇದಕ್ಕಾಗಿ ವೆಬ್ ಸೈಟನ್ನು ಸಿದ್ಧಪಡಿಸಲಾಗುತ್ತಿದೆ. ಆನ್ಲೈನ್ ಅಲ್ಲಿ ಈ ವರ್ಷದ ಬಸ್ ಪಾಸ್ ಗೆ ಅರ್ಜಿ ಆಹ್ವಾನ ಮಾಡುವವರೆಗೂ ಕೂಡ ವಿದ್ಯಾರ್ಥಿಗಳಿಗೆ ಆಗುವ ಅನಾನುಕೂಲತೆ ತಪ್ಪಿಸುವ ಉದ್ದೇಶದಿಂದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಯಮ ಈ ಸಂಬಂಧ ಸುತ್ತೋಲೆಯೊಂದನ್ನು ಹೊರಡಿಸಿದೆ.

ವಿದ್ಯಾರ್ಥಿಗಳ ಉಚಿತ ಅಥವಾ ರಿಯಾಯಿತಿ ಪಾಸ್ ಮಾನ್ಯತೆ ಬಗ್ಗೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಯಮ
ಸೂಕ್ತಾಧಿಕಾರಿಗಳಿಂದ ಸುತ್ತೋಲೆ ಹೊರ ಬಿದ್ದಿದ್ದು ತಂತ್ರಾಶವು ಸಿದ್ಧವಾಗಿ ಹೊಸ ಪಾಸ್ ಸಿಗುವವರೆಗೂ ಅಂದರೆ ದಿನಾಂಕ 15.06.2023 ರವರೆಗೆ ಕರ್ನಾಟಕ ರಾಜ್ಯ ಸರ್ಕಾರಿ ಬಸ್ಗಳಲ್ಲಿ ಓಡಾಡುವ ವಿದ್ಯಾರ್ಥಿಗಳಿಗೆ ಪಾಸ್ ಇಲ್ಲದೆಯೇ ಓಡಾಡಲು ಅವಕಾಶ ಕಲ್ಪಿಸಲಾಗಿದೆ.

ಆದರೆ ಕಂಡಕ್ಟರ್ಗಳ ಬಳಿ ಅವರು ದಾಖಲೆ ಕೇಳಿದಾಗ ಕಳೆದ ವರ್ಷ 2022-23ನೇ ಸಾಲಿನಲ್ಲಿ ಪಾಸ್ ಮಾಡಿಸಿರುವ ವಿದ್ಯಾರ್ಥಿಗಳು ಆ ಪಾಸ್ ಅನ್ನು ತೋರಿಸಬಹುದು, ಒಂದು ವೇಳೆ ಅದು ಇಲ್ಲ ಎಂದರೆ 2023-24ನೇ ಶೈಕ್ಷಣಿಕ ವರ್ಷಕ್ಕೆ ದಾಖಲಾಗಿರುವ ಮಾಹಿತಿಗಾಗಿ ಕಾಲೇಜಿನಲ್ಲಿ ನೀಡಿರುವ ಗುರುತಿನ ಚೀಟಿಯನ್ನು ಕೂಡ ತೋರಿಸಿ ಉಚಿತವಾಗಿ ಪ್ರಯಾಣ ಮಾಡಬಹುದು ಎಂದು ತಿಳಿಸಿದ್ದಾರೆ.

ಆದರೆ ಇದು ಸುತ್ತೋಲೆಯಲ್ಲಿ ಹೊರಡಿಸಿರುವ ದಿನಾಂಕದವರೆಗೆ ಮಾತ್ರ ಮಾನ್ಯ ವಾಗಿರುತ್ತದೆ. ವಿದ್ಯಾರ್ಥಿಗಳು ದಿನಾಂಕ 15.06.2023 ರವರೆಗೆ ಮೇಲ್ಕಂಡ ದಾಖಲೆಗಳನ್ನು ನಿರ್ಗಮದ ಬಸ್ಸುಗಳಲ್ಲಿ ತೋರಿಸಿ ನಿಗಮದ ನಗರ ಹೊರವಲಯ ಸಾಮಾನ್ಯ ಹಾಗೂ ವೇಗದೂತ ಬಸ್ಗಳಲ್ಲಿ ಉಚಿತವಾಗಿ ಪ್ರಯಾಣ ಮಾಡಬಹುದು.

ತಂತ್ರಾಂಶ ಸಿದ್ಧವಾದ ಬಳಿಕ ಸರ್ಕಾರ ಸೂಚಿಸದ ಮೇಲೆ ವಿದ್ಯಾರ್ಥಿಗಳು ಉಚಿತ ಬಸ್ ಪಾಸ್ ಅಥವಾ ರಿಯಾಯಿತಿ ಬಸ್ ಪಾಸ್ ಗಾಗಿ ಇರುವ ಶುಲ್ಕವನ್ನು ಪಾವತಿಸಿ ಸೇವಾ ಸಿಂಧು ತಂತ್ರಾಂಶದ ಮೂಲಕ ಅರ್ಜಿ ಸಲ್ಲಿಸಿ ಹೊಸ ಪಾಸ್ ಅನ್ನು ಪಡೆದುಕೊಂಡು ನಂತರ ಪ್ರಯಾಣಿಸಬೇಕು ಎನ್ನುವ ಪ್ರಮುಖ ಅಂಶವನ್ನು ತಿಳಿಸಿದ್ದಾರೆ.

ಈಗ ಕರ್ನಾಟಕ ಸರ್ಕಾರದ ನೂತನ ಮುಖ್ಯಮಂತ್ರಿಗಳಾಗಿರುವ ಸಿದ್ದರಾಮಯ್ಯ ಅವರು ಪೋಷಿಸಿರುವ ಗ್ಯಾರಂಟಿ ಕಾರ್ಡ್ ಗಳಲ್ಲಿ ಒಂದಾಗಿ ಶಕ್ತಿ ಯೋಜನೆ ಅಡಿ ಕರ್ನಾಟಕದಲ್ಲಿರುವ ಎಲ್ಲಾ ಮಹಿಳೆಯರಿಗೂ ಕೂಡ ಸರಕಾರಿ ಬಸ್ ಗಳಲ್ಲಿ ಉಚಿತ ಪ್ರಯಾಣಕ್ಕೆ ಅವಕಾಶ ಕಲ್ಪಿಸಿರುವ ಕಾರಣ ವಿದ್ಯಾರ್ಥಿನಿಯರು ಸಹ ಇದಕ್ಕೆ ಒಳಪಡುತ್ತಾರೆ.

ಕರ್ನಾಟಕ ರಾಜ್ಯದಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಕರ್ನಾಟಕ ರಾಜ್ಯದ ವಿದ್ಯಾರ್ಥಿನಿಯರು ಜೂನ್ 11ರಿಂದ ಈ ಪ್ರಯೋಜನವನ್ನು ಪಡೆದುಕೊಳ್ಳುವ ಕಾರಣ ಅವರಿಗೆ ಪಾಸ್ ಪಡೆಯುವ ಅವಶ್ಯಕತೆ ಇರುವುದಿಲ್ಲ. ಆದರೆ ಸರ್ಕಾರ ಗ್ಯಾರಂಟಿ ಕಾರ್ಡ್ ಶಕ್ತಿ ಯೋಜನೆ ಫಲಾನುಭವಿಗಳಿಗೆ ಸೂಚಿಸುವ ಮಾರ್ಗಸೂಚಿಗಳನ್ನು ಪಾಲಿಸಿ ಈ ಉಚಿತ ಸೌಲಭ್ಯ ಪಡೆದುಕೊಳ್ಳಬೇಕಾಗುತ್ತದೆ. ಇದು ಉಪಯುಕ್ತ ಮಾಹಿತಿ ಆಗಿರುವುದರಿಂದ ನಿಮ್ಮ ಕುಟುಂಬದವರು ಹಾಗೂ ಸ್ನೇಹಿತರ ಜೊತೆಗೂ ಕೂಡ ಈ ಮಾಹಿತಿ ಹಂಚಿಕೊಳ್ಳಿ. ಅವರ ಕುಟುಂಬದಲ್ಲೂ ಶಾಲಾ-ಕಾಲೇಜುಗಳಿಗೆ ಪ್ರಯಾಣಿಸುವ ವಿದ್ಯಾರ್ಥಿಗಳು ಇದ್ದರೆ ಅನುಕೂಲವಾಗುತ್ತದೆ.

Leave a Comment

%d bloggers like this: