ಯುವನಿಧಿ ಯೋಜನೆಯ 3000 ಹಣ ಪ್ರತಿ ತಿಂಗಳು ಹಣ ಪಡೆಯಲು ತಪ್ಪದೆ ಈ ದಾಖಲೆಗಳನ್ನು ಸಿದ್ಧಪಡಿಸಿಕೊಳ್ಳಿ.!

 

ಜೂನ್ 2ರಂದು ಕಾಂಗ್ರೆಸ್ ಸರ್ಕಾರದ ನೂತನ ಮುಖ್ಯಮಂತ್ರಿಗಳು ಕರ್ನಾಟಕ ಜನತೆ ಭಾರಿ ನಿರೀಕ್ಷೆಯಿಂದ ಕಾಯುತ್ತಿದ್ದ 5 ಗ್ಯಾರಂಟಿ ಕಾರ್ಡ್ ಯೋಜನೆಗಳಿಗೆ ಆದೇಶ ಹೊರಡಿಸಿದ್ದಾರೆ. ಚುನಾವಣಾ ಪ್ರಚಾರದ ವೇಳೆ ಕಾಂಗ್ರೆಸ್ ಪಕ್ಷ ಅಧಿಕಾರ ಸ್ಥಾಪನೆ ಮಾಡಿದರೆ ಕೊಡುವುದಾಗಿ ಹೇಳಿದ್ದ ಗ್ಯಾರಂಟಿ ಕಾರ್ಡ್ ಗಳು ಇನ್ನು ಮುಂದೆ ಕರ್ನಾಟಕದಲ್ಲಿ ಜಾರಿಗೆ ಬರುವುದು ಸ್ಪಷ್ಟ ಆಗಿದೆ.

ಇದರ ಪ್ರಯುಕ್ತ ಗೃಹಜೋತಿ ಯೋಜನೆತಡಿ ಕರ್ನಾಟಕದ ಪ್ರತಿ ಕುಟುಂಬಗಳಿಗೂ 200 ಯೂನಿಟ್ ಉಚಿತ ವಿದ್ಯುತ್, ಗೃಹಲಕ್ಷ್ಮಿ ಯೋಜನೆಯಡಿ ಪ್ರತಿ ಕುಟುಂಬದ ಒಡತಿಗೆ ಕುಟುಂಬ ನಿರ್ವಹಣೆಗಾಗಿ 2,000ರೂ. ಸಹಾಯಧನ ಮತ್ತು BPL & AAY ಕಾರ್ಡ್ ಪ್ರತಿ ಸದಸ್ಯರಿಗೆ 10kg ಉಚಿತ ಪಡಿತರ ಅಕ್ಕಿ ಮತ್ತು ಶಕ್ತಿ ಯೋಜನೆ ಅಡಿ ಕರ್ನಾಟಕದ ಎಲ್ಲಾ ಮಹಿಳೆಯರಿಗೂ KSRTC ಹಾಗೂ BMTC ಬಸ್ ಗಳಲ್ಲಿ ಉಚಿತ ಪ್ರಯಾಣ ಮತ್ತು ಯುವನಿಧಿ ಯೋಜನೆಯಡಿ ಪದವಿ ಪಡೆದವರಿಗೆ ರೂ. 3000 ಹಾಗೂ ಡಿಪ್ಲೊಮಾ ಪಡೆದವರಿಗೆ 1500 ನಿರುದ್ಯೋಗ ಭತ್ಯೆ ನೀಡುವುದಾಗಿ ಸರ್ಕಾರ ಹೇಳಿದೆ.

ಇದರಲ್ಲಿ ಯುವಜನತೆ ಸಮಸ್ಯೆಯನ್ನು ಅರಿತುಕೊಂಡು ಉದ್ಯೋಗ ಸಿಗುವುದವರೆಗೂ ಕೂಡ ಬದುಕಿನ ನಿರ್ವಹಣೆಗಾಗಿ ನಿರುದ್ಯೋಗ ಭತ್ಯೆ ನೀಡುತ್ತಿರುವುದು ಯುವಜನತೆಯ ಮುಖದಲ್ಲಿ ಮಂದಹಾಸ ಮೂಡಿಸಿ ಬದುಕಿನಲ್ಲಿ ಭರವಸೆಯನ್ನು ತುಂಬಿದೆ. ಕರ್ನಾಟಕದ ರಾಜಕೀಯ ಇತಿಹಾಸದಲ್ಲಿ ಮೊದಲ ಬಾರಿಗೆ ಇಂತಹದೊಂದು ನಿರ್ಣಯ ಮಾಡಲಾಗಿದ್ದು.

ಈ ಯೋಜನೆಗೆ ಅರ್ಜಿ ಸಲ್ಲಿಸುವ ವಿಧಾನ ಹಾಗೂ ಯಾವೆಲ್ಲ ದಾಖಲೆಗಳನ್ನು ನೀಡಬೇಕು ಎಲ್ಲಿಯವರೆಗೆ ಎಷ್ಟು ಸಹಾಯಧನ ಸಿಗುತ್ತದೆ ಎನ್ನುವ ಎಲ್ಲಾ ವಿಚಾರವನ್ನು ಕೂಡ ಸವಿವರಾಗಿ ಮಾನ್ಯ ಮುಖ್ಯಮಂತ್ರಿಗಳು ಹಂಚಿಕೊಂಡಿದ್ದಾರೆ. ಈ ಯೋಜನೆ ಬಗ್ಗೆ ಕೆಲ ಪ್ರಮುಖ ಅಂಶಗಳನ್ನು ಕೂಡ ಈ ಅಂಕಣದಲ್ಲಿ ತಿಳಿಸುವ ಪ್ರಯತ್ನವನ್ನು ಮಾಡುತ್ತಿದ್ದೇವೆ. ನೀವು ಸಹ ನಿರೀಕ್ಷೆಯಲ್ಲಿದ್ದರೆ ಪೂರ್ತಿ ಮಾಹಿತಿಯನ್ನು ಓದಿ.

● 2022-23ನೇ ಸಾಲಿನಲ್ಲಿ ಪದವಿ ಪೂರೈಸಿದ ಮತ್ತು ಡಿಪ್ಲೋಮಾ ಪೂರೈಸಿದ ವಿದ್ಯಾರ್ಥಿಗಳು ಮಾತ್ರ ಈ ಯೋಜನೆಗೆ ಅರ್ಹರು.
● ವಿದ್ಯಾರ್ಥಿಗಳು, ವಿದ್ಯಾರ್ಥಿನಿಯರು ಮತ್ತು ತೃತೀಯ ಲಿಂಗದವರು ಕೂಡ ಅರ್ಜಿ ಸಲ್ಲಿಸಬಹುದು
● 2022-23ನೇ ಸಾಲಿನಲ್ಲಿ ಪದವಿ ಪಡೆದವರಿಗೆ ಪ್ರತಿ ತಿಂಗಳು 3000 ಮತ್ತು ಡಿಪ್ಲೋಮಾ ಪದವಿ ಪಡೆದವರಿಗೆ 1500 ನಿರುದ್ಯೋಗ ಭತ್ಯೆ ಸಿಗಲಿದೆ.
● ಈ ಯೋಜನೆಗೆ ಅರ್ಜಿ ಹಾಕಲು ಆನ್ಲೈನ್ ಮೂಲಕ ಮತ್ತು ಆಫ್ಲೈನ್ ಮೂಲಕವೂ ವ್ಯವಸ್ಥೆ ಮಾಡಿಕೊಡಲಾಗುತ್ತದೆ, ಆನ್ಲೈನ್ ಮೂಲಕ ಅರ್ಜಿ ಸಲ್ಲಿಸುವವರಿಗೆ ಸರ್ಕಾರದಿಂದ ಶೀಘ್ರದಲ್ಲೇ ಹೊಸ ವೆಬ್ಸೈಟ್ ಓಪನ್ ಆಗಲಿದೆ.

● ಈ ಸಹಾಯಧನವು ವಿದ್ಯಾರ್ಥಿಯು ನೋಂದಣಿ ಮಾಡಿಕೊಂಡ ತಿಂಗಳಿಂದ 24 ತಿಂಗಳವರೆಗೆ ಪ್ರತಿ ತಿಂಗಳು ಸಿಗಲಿದೆ. ಒಂದು ವೇಳೆ ಮಧ್ಯದಲ್ಲಿ ಫಲಾನುಭವಿಯು ಸರ್ಕಾರಿ ಅಥವಾ ಖಾಸಗಿ ಕ್ಷೇತ್ರದಲ್ಲಿ ಉದ್ಯೋಗ ಪಡೆದುಕೊಂಡರೆ ಅದನ್ನು ಘೋಷಿಸಿಕೊಳ್ಳಬೇಕು ಆಗ ಕಡಿತಗೊಳಿಸಲಾಗುತ್ತದೆ.
● ಆರು ತಿಂಗಳವರೆಗೆ ಅರ್ಜಿ ಸಲ್ಲಿಸಲು ಕಾಲವಕಾಶ ನೀಡಲಾಗಿದೆ.
● ಕರ್ನಾಟಕದ ವಿದ್ಯಾರ್ಥಿಗಳಿಗೆ ಮಾತ್ರ ಈ ಅನುಕೂಲತೆ ಸಿಗಲಿದೆ, ಅದಕ್ಕಾಗಿ ಕೆಲ ಪ್ರಮುಖ ದಾಖಲೆಗಳನ್ನು ಕೂಡ ಅರ್ಜಿ ಸಲ್ಲಿಸುವ ವೇಳೆ ಕೇಳಲಾಗುತ್ತದೆ.

ಅರ್ಹರು ಈ ಕೆಳಕಂಡ ದಾಖಲೆಗಳನ್ನು ಸಿದ್ಧಪಡಿಸಿಕೊಳ್ಳುವುದು ಸೂಕ್ತ.
1. ಆಧಾರ್ ಕಾರ್ಡ್
2. ಕರ್ನಾಟಕ ರಾಜ್ಯ ಶಾಶ್ವತ ನಿವಾಸಿ ಪ್ರಮಾಣಪತ್ರ
3. ಆದಾಯ ಪ್ರಮಾಣಪತ್ರ
4. ಶೈಕ್ಷಣಿಕ ಅರ್ಹತೆಯ ದಾಖಲೆಗಳು
5. ಬ್ಯಾಂಕ್ ಖಾತೆ
6. ಪಾಸ್‌ಪೋರ್ಟ್ ಗಾತ್ರದ ಫೋಟೋ
7. ಮೊಬೈಲ್ ನಂಬರ್‌
8. ಹೆಚ್ಚುವರಿಯಾಗಿ ನಂತರ ಇನ್ನೂ ಕೆಲವು ದಾಖಲೆಗಳನ್ನು ಕೇಳಬಹುದು.

Leave a Comment

%d bloggers like this: