ಗೃಹಲಕ್ಷ್ಮಿಗೆ ಹಣ ಹಾಕಲು ಡೇಟ್ ಫಿಕ್ಸ್ ಆದ್ರೆ ಈ ಮಹಿಳೆಯರಿಗೆ ಮಾತ್ರ ಗೃಹಲಕ್ಷ್ಮಿ ಯೋಜನೆಯ 2000 ಹಣ ಪಡೆಯುವ ಭಾಗ್ಯ ಇಲ್ಲ.!

 

ಗೃಹಲಕ್ಷ್ಮಿ ಯೋಜನೆ (Gruhalashmi Scheme) ಅರ್ಜಿ ಸ್ವೀಕೃತಿ ಪ್ರಕ್ರಿಯೆ ಮತ್ತು ಯೋಜನೆ ಲಾಂಚ್ (launch date postponed) ಆಗುವ ಹಲವಾರು ಕಾರಣಗಳಿಗಾಗಿ ಮುಂದೂಡುತ್ತಲೇ ಇದೆ. ಮೊದಲಿಗೆ ಆಗಸ್ಟ್ 15 ರ ಸ್ವತಂತ್ರ ದಿನಾಚರಣೆ ಪ್ರಯುಕ್ತ ಯೋಜನೆಯನ್ನು ಮಾನ್ಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರು ಲಾಂಚ್ ಮಾಡಲಿದ್ದಾರೆ ಎಂದು ತಿಳಿಸಲಾಗಿತ್ತಾದರೂ ಕಾರಣಾಂತರಗಳಿಂದ ಇದು ಮುಂದೆ ಹೋಗಿದೆ.

ಬೆಳಗಾವಿಯಲ್ಲಿ (Belagavi) ಅದ್ದೂರಿ ಕಾರ್ಯಕ್ರಮ ನಡೆಸಿ ರಾಷ್ಟ್ರೀಯ ನಾಯಕರುಗಳ ಮುಂದಾಳತ್ವದಲ್ಲಿ ಯೋಜನೆಯನ್ನು ಲಾಂಚ್ ಮಾಡಲು ಸರ್ಕಾರ ನಿರ್ಧರಿಸಿದೆ. ಇದರ ಬಗ್ಗೆ 76ನೇ ಸ್ವತಂತ್ರ ಮಹೋತ್ಸವ ಕಾರ್ಯಕ್ರಮದಲ್ಲಿ (Independence day celebration) ಮಾತನಾಡಿದ್ದ ಸಿ.ಎಂ ಸಿದ್ದರಾಮಯ್ಯ (C.M Siddaramaih) ಅವರೇ ಯೋಜನೆ ಕುರಿತು ಬಹಳಷ್ಟು ಮುಖ್ಯ ವಿಷಯಗಳನ್ನು ಹಂಚಿಕೊಂಡಿದ್ದಾರೆ.

ಎದೆಯಲ್ಲಿ ಈ ಲಕ್ಷಣಗಳು ಇದ್ದರೆ ಖಂಡಿತ ಅದು ಖಂಡಿತ ಬ್ರೆಸ್ಟ್ ಕ್ಯಾನ್ಸರ್, ಇದಕ್ಕೆ ಪರಿಹಾರವೇನು ಗೊತ್ತಾ.? ಡಾ.ಅಂಜನಪ್ಪ ಅವರ ಈ ಸಲಹೆ ಅನುಸರಿಸಿ ಸಾಕು.!

ಈ ಯೋಜನೆಯ ಲಾಂಚಿಂಗ್ ದಿನಾಂಕ, ಮತ್ತು ಯಾರಿಗೆಲ್ಲ ಫಲಾನುಭವಿಗಳ ಅವಕಾಶ ಇದೆ ಎನ್ನುವ ಮಹತ್ವದ ಸುದ್ದಿಯನ್ನು ತಿಳಿಸಿದ್ದಾರೆ. ಸ್ವತಂತ್ರ ದಿನಾಚರಣೆಯ ಪ್ರಯುಕ್ತ ಮಾಣಿಕ್ ಶಾ ಪರೇಡ್ ಮೈದಾನದಲ್ಲಿ ನಡೆದ ಸ್ವತಂತ್ರ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗಿಯಾಗಿ ದ್ವಜಾರೋಹಣ ನಡೆಸಿಕೊಟ್ಟ ಮುಖ್ಯಮಂತ್ರಿಗಳು ತಮ್ಮ ಸರ್ಕಾರವು ಬಡತನ ನಿರ್ಮೂಲನೆಗೆ ಜಾರಿಗೆ ತಂದಿರುವ ಗ್ಯಾರಂಟಿ ಕಾರ್ಡ್ ಯೋಜನೆಗಳ ಬಗ್ಗೆ ಕೂಡ ಮಾತನಾಡಿದರು.

ಈಗಾಗಲೇ ನಾಲ್ಕು ಗ್ಯಾರಂಟಿ ಕಾರ್ಡ್ ಯೋಜನೆಗಳನ್ನು ಜಾರಿಗೆ ತಂದಿದ್ದೇವೆ. ಗೃಹಲಕ್ಷ್ಮಿ ಯೋಜನೆಯು ಈಗಾಗಲೇ ಲಾಂಚ್ ಆಗಬೇಕಿತ್ತು ಇದನ್ನು ಅರ್ಥಪೂರ್ಣವಾಗಿ ಸೆಲೆಬ್ರೇಟ್ ಮಾಡಿ ದೇಶಕ್ಕೆ ಸಂದೇಶ ಕೊಡಬೇಕು ಎಂದು ನಿರ್ಧರಿಸಿದ್ದೇವೆ. ಹಾಗಾಗಿ ಆಗಸ್ಟ್ 27ರಂದು ಈ ಕಾರ್ಯಕ್ರಮದ ಚಾಲನೆ ಸಿಗಲಿದೆ, ಅಂದು ಫಲಾನುಭವಿಗಳ ಖಾತೆಗೆ ಹಣ ವರ್ಗಾವಣೆ ಆಗಲಿದೆ ಎಂದು ತಿಳಿಸಿದ ಮುಖ್ಯಮಂತ್ರಿಗಳು BPL ಕಾರ್ಡ್ ಕುಟುಂಬದ ಯಜಮಾನಿ ಮಹಿಳೆಗೆ (BPL card head of the family women only eligible for Gruhalakshmi Scheme) ಮಾತ್ರ ಹಣ ವರ್ಗಾವಣೆ ಆಗುವುದು ಎನ್ನುವ ಶಾ’ಕಿಂ’ಗ್ ವಿಷಯವನ್ನು ತಿಳಿಸಿದ್ದಾರೆ.

SBI ಬ್ಯಾಂಕ್ ಗ್ರಾಹಕರಿಗೆ ಗುಡ್ ನ್ಯೂಸ್ ವಿಚಾರ ತಿಳಿಯುತ್ತಿದ್ದ ಹಾಗೇ ಬ್ಯಾಂಕ್ ನತ್ತ ಮುನ್ನುಗಿ ಬರುತ್ತಿರುವ ಜನ.!

ಈ ಹಿಂದೆ ಕರ್ನಾಟಕದ ಎಲ್ಲಾ ಕುಟುಂಬದ ಯಜಮಾನಿ ಸ್ಥಾನದಲ್ಲಿರುವ ಮಹಿಳೆಯ ಬ್ಯಾಂಕ್ ಖಾತೆಗೆ ಪ್ರತಿ ತಿಂಗಳು ಕೂಡ ಗೃಹಲಕ್ಷ್ಮಿ ಯೋಜನೆ 2,000ರೂ. ಹಣವನ್ನು DBT ಮೂಲಕ ವರ್ಗಾವಣೆ ಮಾಡಲಾಗುವುದು ಎಂದು ಹೇಳಲಾಗಿತ್ತು, ಇದಕ್ಕಾಗಿ ಮಹಿಳೆಯರು ಪಡಿತರ ಚೀಟಿ ಸಂಖ್ಯೆ, ಆಧಾರ್ ಕಾರ್ಡ್ ಸಂಖ್ಯೆ ಮತ್ತು ಆಧಾರ್ ಕಾರ್ಡ್ ಗೆ ಲಿಂಕ್ ಆಗಿರುವ ಮೊಬೈಲ್ ಸಂಖ್ಯೆ ಕೊಟ್ಟು ಸರ್ಕಾರ ಸೂಚಿಸಿರುವ ಸೇವಾಕೇಂದ್ರಗಳಲ್ಲಿ ನೋಂದಾಯಿಸಿಕೊಳ್ಳಬೇಕು ಎಂದು ತಿಳಿಸಲಾಗಿತ್ತು.

ಈ ಪ್ರಕಾರವಾಗಿ ಈವರೆಗೆ 1.30ಲಕ್ಷ ಮಹಿಳೆಯರು ನೋಂದಾಯಿಸಿಕೊಂಡಿದ್ದಾರೆ. ಆದರೆ ಈಗ ಸರ್ಕಾರಕ್ಕೆ ಹೊಣೆ ಆಗಬಾರದು ಎಂದು ಕಾರಣಕ್ಕಾಗಿ BPL ಕಾರ್ಡ್ ಹೊಂದಿರುವ ಮಹಿಳೆಯರಿಗೆ ಮಾತ್ರ ಹಣ ವರ್ಗಾವಣೆ ಆಗುವುದು ಎಂದು ಯೋಜನೆಯಲ್ಲಿ ಮಾರ್ಪಾಡು ಮಾಡಲಾಗಿದೆ. ಹಾಗಾದರೆ ಯಾರೆಲ್ಲ ಇದರಿಂದ ವಂಚಿತರಾಗುತ್ತಾರೆ ಎನ್ನುವ ಪಟ್ಟಿ ಇಲ್ಲಿದೆ ನೋಡಿ.

UPI Payments: ಗೂಗಲ್ ಪೇ, ಫೋನ್ ಪೇ, ಪೇಟಿಎಂ ಉಪಯೋಗಿಸೋರಿಗೆ ಹೊಸ ರೂಲ್ಸ್ ಜಾರಿ.!

ಮಾನದಂಡಗಳು

● ನಾಲ್ಕು ಚಕ್ರದ ವೈಟ್ ಬೋರ್ಡ್ ಕಾರ್ ಹೊಂದಿರುವ ಕುಟುಂಬದ ಮಹಿಳೆಯರು.
● ಏಳು ಎಕರೆಗಿಂತ ಹೆಚ್ಚು ಕೃಷಿ ಭೂಮಿ ಹೊಂದಿರುವ ಕುಟುಂಬದ ಮಹಿಳೆಯರು.
● ಆದಾಯ ತೆರಿಗೆ, GST ರಿಟರ್ನ್ಸ್, ಪ್ರೊಫೆಷನಲ್ ಟ್ಯಾಕ್ಸ್ ಪಾವತಿಸುವ ಕುಟುಂಬದ ಮಹಿಳೆಯರು.
● ಸರ್ಕಾರಿ ಹುದ್ದೆ ಹೊಂದಿರುವ ಮತ್ತು ಪೆನ್ಷನ್ ಪಡೆಯುವ ಕುಟುಂಬದ ಮಹಿಳೆಯರು.
● ಹಾಗೆಯೇ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಆಶಾ ಕಾರ್ಯಕರ್ತೆಯರಿಗೂ ಕೂಡ ಗೃಹಲಕ್ಷ್ಮಿ ಯೋಜನೆ ಸಹಾಯಧನ ಸಿಗುವುದಿಲ್ಲ ಎಂದು ಹೇಳಲಾಗುತ್ತಿದೆ.

ಅನ್ನಭಾಗ್ಯ ಯೋಜನೆಯ (Annanhagya Scheme beneficiary) ಫಲಾನುಭವಿಗಳಾಗಿ ಅನ್ನಭಾಗ್ಯ ಯೋಜನೆ ಹೆಚ್ಚುವರಿ ಅಕ್ಕಿ ಹಣ ಪಡೆದಿರುವ ಮಹಿಳೆಯರು ಗೃಹಲಕ್ಷ್ಮಿ ಯೋಜನೆಯ ಸಹಾಯಧನವನ್ನು ಕೂಡ ಅದೇ ಬ್ಯಾಂಕ್ ಖಾತೆಗೆ ನಿಖರವಾಗಿ ಪಡೆಯುತ್ತಾರೆ ಎಂದು ಹೇಳಬಹುದು. ಒಂದು ವೇಳೆ ಅರ್ಹರಾಗಿದ್ದು ಹಣ ವರ್ಗಾವಣೆ ಆಗಿಲ್ಲ ಎಂದರೆ ಇಲಾಖೆ ನೀಡಿರುವ ಸೂಚನೆ ಪ್ರಕಾರ ಸಮಸ್ಯೆಯನ್ನು ಸರಿಪಡಿಸಿಕೊಂಡರೆ ಗೃಹಲಕ್ಷ್ಮಿ ಯೋಜನೆ ಹಣವನ್ನು ಪಡೆಯಲು ಅರ್ಹರಾಗಿರುತ್ತಾರೆ.

1 ಲಕ್ಷ ವಸತಿಗೆ ಅಸ್ತು ಎಂದ ಸರ್ಕಾರ ಈ ಯೋಜನೆಗೆ ಯಾರು ಅರ್ಹರು ಅರ್ಜಿ ಸಲ್ಲಿಸೋದು ಹೇಗೆ.? ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.!

ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ (Food and Civil supply website) ಅಧಿಕೃತ ವೆಬ್ ಸೈಟ್ ಗೆ ಭೇಟಿಕೊಟ್ಟು ಅನ್ನಭಾಗ್ಯ ಯೋಜನೆಯ ಹಣ ವರ್ಗಾವಣೆ ಆಗಿರುವ ಡೀಟೇಲ್ಸ್ ಚೆಕ್ ಮಾಡುವ ಮೂಲಕ ನೀವು ಗೃಹಲಕ್ಷ್ಮಿ ಯೋಜನೆಯ ಹಣ ನಿಮ್ಮ ಯಾವ ಬ್ಯಾಂಕ್ ಖಾತೆಗೆ ವರ್ಗಾವಣೆ ಆಗಿದೆ ಎಂದು ತಿಳಿದುಕೊಳ್ಳಬಹುದು. ಒಂದು ವೇಳೆ ನೀವೇನಾದರೂ ಅರ್ಜಿ ಸಲ್ಲಿಸುವ ವೇಳೆ ಬೇರೆ ಬ್ಯಾಂಕ್ ಖಾತೆ ನೀಡಿದ್ದರೆ ಆ ಬ್ಯಾಂಕ್ ಖಾತೆಗೆ ಹಣ ವರ್ಗಾವಣೆ ಆಗಲಿದೆ.

Leave a Comment

%d bloggers like this: