ರೇಷನ್ ಕಾರ್ಡ್ ತಿದ್ದುಪಡಿ ಪ್ರಾರಂಭ ಕೇವಲ 4 ದಿನಗಳು ಮಾತ್ರ ಅವಕಾಶ, ಈ ದಾಖಲೆಗಳು ಕಡ್ಡಾಯವಾಗಿ ಇರಲೇಬೇಕು ಇಲ್ಲಿದೆ ನೋಡಿ ಕಂಪ್ಲೀಟ್ ಮಾಹಿತಿ.!

 

ಸರ್ಕಾರದ (government Schemes) ಹಲವು ಯೋಜನೆಗಳಿಗೆ ಕಡ್ಡಾಯ ದಾಖಲೆಯಾಗಿ ರೇಷನ್ ಕಾರ್ಡ್ (Ration card) ಕೇಳಲಾಗುತ್ತದೆ. ಸದ್ಯಕ್ಕೆ ಈಗ ರಾಜ್ಯ ಸರ್ಕಾರ ಜಾರಿಗೆ ತಂದಿರುವ ಗ್ಯಾರಂಟಿ ಯೋಜನೆಗಳಾದ (Guarantee Schemes) ಅನ್ನಭಾಗ್ಯ ಯೋಜನೆ (Annabhagya) ಮತ್ತು ಗೃಹಲಕ್ಷ್ಮಿ ಯೋಜನೆಗೆ (Gruhalakshmi) ಕಡ್ಡಾಯವಾಗಿ ರೇಷನ್ ಕಾರ್ಡ್ ಬೇಕು ಹಾಗೂ ರೇಷನ್ ಕಾರ್ಡ್ ಪಟ್ಟಿಯಲ್ಲಿ ಕುಟುಂಬದ ಮುಖ್ಯಸ್ಥೆ ಸ್ಥಾನದಲ್ಲಿ ಮಹಿಳೆ (for these schemes head of the family women is beneficier) ಇರುವುದು ಕೂಡ ಅಷ್ಟೇ ಮುಖ್ಯವಾದ ಸಂಗತಿಯಾಗಿದೆ.

ರೇಷನ್ ಕಾರ್ಡ್ ನಲ್ಲಿರುವ ಮಾಹಿತಿ ತಪ್ಪಾದ ಕಾರಣ ತಪ್ಪಾದ ಮಾಹಿತಿಗಳನ್ನು ತಿದ್ದುಪಡಿ ಮಾಡಿಸಿಕೊಳ್ಳುವವರೆಗೂ ಅವರಿಗೆ ಅನ್ನಭಾಗ್ಯ ಯೋಜನೆಯ ಹೆಚ್ಚುವರಿ ಅಕ್ಕಿ ಹಣ ಹಾಗೂ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಿ ಪ್ರತಿತಿಂಗಳು 2000ರೂ. ಸಹಾಯಧನ ಪಡೆಯಲು ಸಾಧ್ಯವಾಗುತ್ತಿಲ್ಲ. ಆದರೆ ಈ ಕುರಿತು ಸಮಧಾನಕರ ಸಂಗತಿ ಏನೆಂದರೆ ಈ ಯೋಜನೆಗಳಿಗೆ ಅರ್ಜಿ ಸಲ್ಲಿಸಲು ಕಡೆಯ ದಿನಾಂಕ ನಿಗಧಿಯಾಗಿಲ್ಲ.

ಗೃಹಲಕ್ಷ್ಮಿಗೆ ಹಣ ಹಾಕಲು ಡೇಟ್ ಫಿಕ್ಸ್ ಆದ್ರೆ ಈ ಮಹಿಳೆಯರಿಗೆ ಮಾತ್ರ ಗೃಹಲಕ್ಷ್ಮಿ ಯೋಜನೆಯ 2000 ಹಣ ಪಡೆಯುವ ಭಾಗ್ಯ ಇಲ್ಲ.!

ರೇಷನ್ ಕಾರ್ಡ್ ತಿದ್ದುಪಡಿ (ration card correction) ಮಾಡಿಸಿಕೊಂಡ ನಂತರ ಕೂಡ ಅರ್ಜಿಗಳನ್ನು ಸಲ್ಲಿಸಿ ಮುಂದಿನ ತಿಂಗಳಿನಿಂದ ಫಲಾನುಭವಿಗಳಾಗಬಹುದು. ಈ ಹಿಂದಿಗಿಂತ ಸರ್ಕಾರದ ಗ್ಯಾರಂಟಿ ಕಾರ್ಡ್ ಯೋಜನೆಗಳು ಘೋಷಣೆಯಾದ ಮೇಲೆ ಆಧಾರ್ ಕಾರ್ಡ್ ಹಾಗೂ ರೇಷನ್ ಕಾರ್ಡ್ ತಿದ್ದುಪಡಿ ಮತ್ತು ಬ್ಯಾಂಕ್ ಮಾಹಿತಿ ತಿದ್ದುಪಡಿಗಾಗಿ ಪ್ರತಿನಿತ್ಯವೂ ಕಚೇರಿಗಳಿಗೆ ಓಡಾಡುತ್ತಿರುವ ಸಂಖ್ಯೆ ಹೆಚ್ಚಾಗಿದೆ.

ಆದ್ದರಿಂದ ಈ ವಿಷಯಕ್ಕೆ ಸಂಬಂಧಪಟ್ಟ ಹಾಗೆ ಈಗ ಆಹಾರ ಇಲಾಖೆಯಿಂದ (Food and Civil Supply department updates) ಸಿಹಿ ಸುದ್ದಿ ಸಿಕ್ಕಿದೆ. ಅದೇನೆಂದರೆ ಆಹಾರ ಮತ್ತು ನಾಗರಿಕ ಸರಬರಾಜು ಸಚಿವರಾದ ಕೆ.ಎಚ್ ಮುನಿಯಪ್ಪ (Minister K.H Muniyappa) ಅವರು ಇತ್ತೀಚಿಗೆ ಒಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಚುನಾವಣೆ ನೀತಿ ಸಂಹಿತೆಯಿಂದ ಕಾರಣದಿಂದಾಗಿ ತಡೆಹಿಡಿಯಲಾಗಿದ್ದ ರೇಷನ್ ಕಾರ್ಡ್ ವಿತರಣೆ ಹಾಗೂ ಹೊಸ ರೇಷನ್ ಕಾರ್ಡ್ ಪಡೆಯಲು ಅರ್ಜಿ ಸಲ್ಲಿಸುವುದು ಹಾಗೂ ತಿದ್ದುಪಡಿ ಕಾರ್ಯಕ್ಕೆ ಶೀಘ್ರವೇ ಚಾಲನೆ ನೀಡಲಾಗುವುದು ಎಂದು ತಿಳಿಸಿದ್ದರು.

ಎದೆಯಲ್ಲಿ ಈ ಲಕ್ಷಣಗಳು ಇದ್ದರೆ ಖಂಡಿತ ಅದು ಖಂಡಿತ ಬ್ರೆಸ್ಟ್ ಕ್ಯಾನ್ಸರ್, ಇದಕ್ಕೆ ಪರಿಹಾರವೇನು ಗೊತ್ತಾ.? ಡಾ.ಅಂಜನಪ್ಪ ಅವರ ಈ ಸಲಹೆ ಅನುಸರಿಸಿ ಸಾಕು.!

ಅದರ ಪ್ರಯುಕ್ತ ಈಗ ದಿನಾಂಕ 18 ಆಗಸ್ಟ್ 2023 ರಿಂದ 21 ಆಗಸ್ಟ್ 2023 ರವರೆಗೆ ತಿದ್ದುಪಡಿಗೆ ಅವಕಾಶ ಮಾಡಿಕೊಡಲಾಗಿದೆ. ಹೆಸರಿನಲ್ಲಿ ತಿದ್ದುಪಡಿ, ಕುಟುಂಬದ ಮುಖ್ಯಸ್ಥರ ಸ್ಥಾನದಲ್ಲಿ ಬದಲಾವಣೆ, ಹೊಸ ನ್ಯಾಯಬೆಲೆ ಅಂಗಡಿಗೆ ವರ್ಗಾವಣೆ, ಹೊಸ ಸದಸ್ಯರ ಸೇರ್ಪಡೆ ಅಥವಾ ಹಳೆ ಸದಸ್ಯ ಹೆಸರನ್ನು ತೆಗೆದುಹಾಕುವುದು ಇನ್ನು ಮುಂತಾದ ಯಾವುದೇ ತಿದ್ದುಪಡಿ ಇದ್ದರು ಕೂಡ ಈಗ ಕೊಟ್ಟಿರುವ 4 ದಿನದ ಅವಕಾಶದ ಒಳಗೆ ಸರಿಪಡಿಸಿಕೊಳ್ಳಬಹುದು.

ಆದರೆ ಆಹಾರ ಇಲಾಖೆಯ ಪೋರ್ಟಲ್ ನಲ್ಲಿ (not possible in Food department portal) ತಿದ್ದುಪಡಿಗೆ ಅವಕಾಶ ಕೊಟ್ಟಿರುವ ಬಗ್ಗೆ ಮಾಹಿತಿ ಇಲ್ಲ, ಆದರೆ ಸೇವಾ ಕೇಂದ್ರಗಳಾದ (government given permission to Gram one, Karnataka one bengaluru one Sevakendra) ಗ್ರಾಮ ಒನ್, ಕರ್ನಾಟಕ ಒನ್ ಅಥವಾ ಬೆಂಗಳೂರು ಒನ್ ಕೇಂದ್ರಗಳಿಗೆ ತೆರಳಿ ಪೂರಕ ದಾಖಲೆಗಳನ್ನು ಕೊಟ್ಟು ಅರ್ಜಿ ಸಲ್ಲಿಸಬಹುದು.

SBI ಬ್ಯಾಂಕ್ ಗ್ರಾಹಕರಿಗೆ ಗುಡ್ ನ್ಯೂಸ್ ವಿಚಾರ ತಿಳಿಯುತ್ತಿದ್ದ ಹಾಗೇ ಬ್ಯಾಂಕ್ ನತ್ತ ಮುನ್ನುಗಿ ಬರುತ್ತಿರುವ ಜನ.!

ಅರ್ಜಿ ಸಲ್ಲಿಕೆ ಪೂರ್ತಿಯಾದ ಬಳಿಕ ಅವರು ಕೊಡುವ ಸ್ವೀಕೃತಿ ಪತ್ರವನ್ನು ಆಹಾರ ಇಲಾಖೆಗೆ ಸಂಬಂಧಪಟ್ಟ ವಿಭಾಗಕ್ಕೆ ಸಲ್ಲಿಸಿದರೆ ಅವರು ಕೂಡ ಕೆಲ ದಾಖಲೆಗಳನ್ನು ಕೇಳುತ್ತಾರೆ. ಅದನ್ನು ಸಲ್ಲಿಸಿದರೆ ನಿಮಗೆ ಹೊಸ ರೇಷನ್ ಕಾರ್ಡ್ ಸಿಗುತ್ತದೆ.

ರೇಷನ್ ಕಾರ್ಡ್ ತಿದ್ದುಪಡಿಗೆ ಬೇಕಾಗುವ ಪ್ರಮುಖ ದಾಖಲೆಗಳು:-

● ಕುಟುಂಬದ ಎಲ್ಲಾ ಸದಸ್ಯರ ಆಧಾರ್ ಕಾರ್ಡ್
● ಕುಟುಂಬದ ಎಲ್ಲ ಸದಸ್ಯರ ಬಯೋಮೆಟ್ರಿಕ್ ಮಾಹಿತಿ (5 ವರ್ಷದ ಒಳಗಿನ ಮಕ್ಕಳನ್ನು ಹೊರತುಪಡಿಸಿ)
● 5 ವರ್ಷದ ಒಳಗಿನ ಮಕ್ಕಳಿದ್ದರೆ ಅವರ ಜನನ ಪ್ರಮಾಣ ಪತ್ರ
● ಕುಟುಂಬದ ಆದಾಯ ಪ್ರಮಾಣ ಪತ್ರ
● ಕುಟುಂಬದ ಯಾವುದಾದರು ಒಬ್ಬರು ಸದಸ್ಯರ ಮೊಬೈಲ್ ಸಂಖ್ಯೆ
● ಇತ್ಯಾದಿ ದಾಖಲೆಗಳು.

Leave a Comment

%d bloggers like this: