ಕಾಂಗ್ರೆಸ್ ಪಕ್ಷವು (Congress party) ಕರ್ನಾಟಕ ವಿಧಾನಸಭಾ ಚುನಾವಣೆ-2023 (Karnataka assembly election) ವೇಳೆ ಪ್ರಣಾಳಿಕೆಯಲ್ಲಿ (Manifesto) ತಮ್ಮ ಪಕ್ಷವು ಅಧಿಕಾರಕ್ಕೆ ಬಂದರೆ ಐದು ಗ್ಯಾರಂಟಿ ಕಾರ್ಡ್ ಯೋಜನೆಗಳನ್ನು (five guarantee Scheme) ಕರ್ನಾಟಕದಲ್ಲಿ ಜಾರಿಗೆ ತರುವುದಾಗಿ ಹೇಳಿತ್ತು. ಅದರಲ್ಲಿ ಮೊಟ್ಟಮೊದಲನೆಯ ಯೋಜನೆ ಗೃಹಜ್ಯೋತಿ (Gruhajyothi) ಯೋಜನೆ.
ಈ ಯೋಜನೆ ಮೂಲಕ ಕರ್ನಾಟಕದ ಪ್ರತಿ ಕುಟುಂಬಕ್ಕೂ 200 ಯೂನಿಟ್ ವರೆಗೆ ಗೃಹ ಬಳಕೆಗೆ ಉಚಿತ ವಿದ್ಯುತ್ ಸೌಲಭ್ಯ ನೀಡುವುದಾಗಿ ಭರವಸೆ ನೀಡಿದ್ದರು. ಬಹುಮತ ಬೆಂಬಲದೊಂದಿಗೆ ಸ್ಥಾಪನೆಯಾದ ಕಾಂಗ್ರೆಸ್ ಸರ್ಕಾರವು ಕೊಟ್ಟ ಮಾತಿನಂತೆ ಈಗ ಅದನ್ನು ಜಾರಿಗೆ ತಂದಿದ್ದಾರೆ. ಆದರೆ ಕೆಲವು ಕಂಡಿಷನ್ ಜೊತೆ ಆದೇಶ ಪತ್ರವನ್ನು ಹೊರಡಿಸಲಾಗಿದೆ. ಆ ಕಂಡೀಷನ್ ಮೀರಿ ಬಳಸಿದ ವಿದ್ಯುತ್ ಗೆ ಎಷ್ಟು ಬಿಲ್ ಕಟ್ಟಬೇಕಾಗುತ್ತದೆ ಎನ್ನುವುದನ್ನು ಈ ಅಂಕಣದಲ್ಲಿ ತಿಳಿಸುತ್ತಿದ್ದೇವೆ.
ಗೃಹಜ್ಯೋತಿ ಯೋಜನೆಯ ಉಚಿತ ವಿದ್ಯುತ್ ಪಡೆಯಲು ಇರುವ ನಿಯಮಗಳು:-
● ಇದರಲ್ಲಿ ಮುಖ್ಯವಾಗಿ ಮನೆಯ ವಿದ್ಯುತ್ ಖಾತೆ ಸಂಖ್ಯೆ (Acc. ID) ಮತ್ತು ಕುಟುಂಬದ ಒಬ್ಬ ಸದಸ್ಯರು ಆಧಾರ್ ಸಂಖ್ಯೆಯನ್ನು (Aadhar Number) ದಾಖಲೆಯಾಗಿ ಕೊಟ್ಟು ಸೇವಾ ಸಿಂಧು ಪೋರ್ಟಲ್ ಮೂಲಕ ಗೃಹಜೋತಿ ಯೋಜನೆಗೆ ಅರ್ಜಿ ಸಲ್ಲಿಸಿರಬೇಕು.
ಜುಲೈ ತಿಂಗಳಿನಲ್ಲಿ ಮಾಡಿರುವ ವಿದ್ಯುತ್ ಬಳಕೆಯನ್ನು ಉಚಿತವಾಗಿ ಪಡೆಯಲು ಅರ್ಜಿದಾರರು ಜುಲೈ 25ರ ಒಳಗೆ ಅರ್ಜಿ ಸಲ್ಲಿಸಿರಬೇಕು, ಜುಲೈ 25ರ ನಂತರ ಅರ್ಜಿ ಸಲ್ಲಿಸಿದವರಿಗೆ ಮುಂದಿನ ತಿಂಗಳಿಂದ ಅಪ್ಲೈ ಆಗುತ್ತದೆ.
SSC ನೇಮಕಾತಿ, 1876 ಹುದ್ದೆಗಳಿಗೆ ಅರ್ಜಿ ಆಹ್ವಾನ, ವೇತನ 1,12,400 ಆಸಕ್ತರು ಕೂಡಲೇ ಅರ್ಜಿ ಸಲ್ಲಿಸಿ.!
● ಆದರೆ ಸರ್ಕಾರದ ಮತ್ತೊಂದು ಮುಖ್ಯವಾದ ನಿಯಮ ಏನೆಂದರೆ, ಕನಿಷ್ಠ 200 ಯೂನಿಟ್ ವರೆಗೆ ಉಚಿತ ವಿದ್ಯುತ್ ಇದ್ದರೂ ಕೂಡ ಈ ಹಿಂದೆ ಆ ಕುಟುಂಬಗಳು 12 ತಿಂಗಳಿನಿಂದ ಮಾಡಿರುವ ವಿದ್ಯುತ್ ಬಳಕೆಯ ಸರಾಸರಿಯ 10% ಮಾತ್ರ ಉಚಿತ ವಿದ್ಯುತ್ ಪಡೆಯಲು ಅರ್ಹರಾಗಿರುತ್ತಾರೆ ಎನ್ನುವುದು.
ನಿಮ್ಮ ಕೃಷಿ ಭೂಮಿಗೆ ಸರ್ಕಾರದಿಂದ ಉಚಿತ ವಿದ್ಯುತ್ ಪಡೆಯಬೇಕಾ.? ಆಗಿದ್ರೆ ಈ ರೀತಿ ಮಾಡಿ.!
ಅದಕ್ಕಿಂತಲೂ ಹೆಚ್ಚಿಗೆ ವಿದ್ಯುತ್ ಬಳಕೆ ಮಾಡಿದವರು ಎಷ್ಟು ಬಿಲ್ ಕಟ್ಟಬೇಕಾಗುತ್ತದೆ ಎಂದು ಜನಸಾಮಾನ್ಯರು ಗೊಂದಲಕ್ಕೆ ಒಳಗಾಗಿದ್ದಾರೆ. ಈಗ ಉದಾಹರಣೆಗೆ ಒಂದು ಕುಟುಂಬವು, ಕಳೆದ 12 ತಿಂಗಳಿನಿಂದ ಮಾಡಿರುವ ವಿದ್ಯುತ್ ಬಳಕೆಗೆ 100 ಯೂನಿಟ್ ಆಗಿದೆ ಎಂದು ಇಟ್ಟುಕೊಳ್ಳೋಣ.
ಈಗ ಸರ್ಕಾರದಿಂದ ಗೃಹಜೋತಿ ಯೋಜನೆಯಡಿ ಕುಟುಂಬಕ್ಕೆ 10% ಮಾತ್ರ ಹೆಚ್ಚು ವಿದ್ಯುತ್ ಬಳಕೆ ಮಾಡಲು ಸಿಗುತ್ತದೆ. ಅಂದರೆ 110 ಯೂನಿಟ್ ವರೆಗೂ ಕೂಡ ಅವರು ಉಚಿತವಾಗಿ ವಿದ್ಯುತ್ ಬಳಕೆ ಮಾಡಬಹುದು. ಆದರೆ ಆ ಕುಟುಂಬ ಜುಲೈ ತಿಂಗಳಿನಲ್ಲಿ 210 ಯೂನಿಟ್ ವಿದ್ಯುತ್ ಬಳಕೆ ಮಾಡಿದರೆ ಅವರಿಗಿದ್ದ ಸರಾಸರಿಗಿಂತ 100 ಯೂನಿಟ್ ಹೆಚ್ಚು ಬಳಕೆ ಮಾಡಿದ ರೀತಿ ಆಯ್ತು.
ಆಗ ಆಗಸ್ಟ್ ತಿಂಗಳಿನಲ್ಲಿ ಅವರು ಶೂನ್ಯ ವಿದ್ಯುತ್ ಬಿಲ್ (Zero current bill) ಪಡೆಯುವ ಬದಲು ಎಂದಿನಂತೆ ಕರೆಂಟ್ ಬಿಲ್ ಪಡೆಯಲಿದ್ದಾರೆ. ಅದರಲ್ಲಿ ಗೃಹಜ್ಯೋತಿ ಯೋಜನೆಯ 110 ಯೂನಿಟ್ ಬಳಕೆಗೆ ಪ್ರತಿ ಯೂನಿಟ್ ಗೆ 4.75ರೂ. ಹೆಚ್ಚುವರಿ 100 ಯೂನಿಟ್ ಬಳಕೆಗೆ ಒಂದು ಯೂನಿಟ್ ಗೆ 7.ರೂ ಅನ್ವಯ ಬಿಲ್ ನೀಡಲಾಗಿರುತ್ತದೆ. ಈ ರೀತಿಯಾಗಿ ಗೃಹಜ್ಯೋತಿ ಯೋಜನೆಯ ನಿಯಮ ಇದೆ ಎಂದು ಇದರ ಕುರಿತು ಅಧಿಕೃತವಾಗಿ ಇಂಧನ ಸಚಿವರಾದ ಕೆ.ಜೆ ಜಾರ್ಜ್ (K.J George) ಅವರೇ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.