ಬಾಡಿಗೆ ಮನೆಯಲ್ಲಿ ಇರುವವರು ಯಾವಾಗಲು ಮಾಲೀಕರಿಂದ ಕಿರಿಕಿರಿ ಎನ್ನುವುದನ್ನು ಕೇಳಿರುತ್ತೇವೆ. ಮಾಲಿಕರಿಂದ ಮಾತ್ರವಲ್ಲದೆ ಬಾಡಿಗೆದಾರರಿಂದಲೂ ಓನರ್ ಗಳಿಗೂ ಅಷ್ಟೇ ಸಮಸ್ಯೆಗಳು ಆಗುತ್ತಿರುತ್ತವೆ. ಇದು ಯಾವ ಮಟ್ಟಕ್ಕೆ ಎಂದರೆ ಮುಂದೊಂದು ದಿನ ಈ ಒಂದು ನಿಯಮ ನೀವು ಪಾಲಿಸದಿದ್ದರೆ ನಿಮ್ಮ ಮನೆಯಲ್ಲಿ ಬಾಡಿಗೆಗೆ ಇರುವವರೆ ಆ ಮನೆಯನ್ನು ಅವರ ವಶಕ್ಕೆ ಪಡೆದುಕೊಳ್ಳಬಹುದು.
ಹಾಗಾಗಿ ತಪ್ಪದೆ ಇಂದು ತಿಳಿಸುತ್ತಿರುವ ಮಾಹಿತಿಯಗೆ ಗಮನ ಕೊಡಿ ಮತ್ತು ಆ ಪ್ರಕಾರವಾಗಿ ಭದ್ರತೆ ಮಾಡಿಕೊಳ್ಳಿ. ಅದೇನೆಂದರೆ, ಯಾರೇ ಮನೆಗೆ ಬಾಡಿಗೆಗೆ ಬಂದರು ಬಾಡಿಗೆಗೆ ಬಂದವರಿಗೆ ಮನೆ ಒಪ್ಪಿಗೆಯಾಗಿ ಇಬ್ಬರ ನಡುವೆ ಬಾಡಿಗೆ, ಅಡ್ವಾನ್ಸ್ ವಿಷಯ ಹಾಗೂ ನೀರಿನ ಬಿಲ್ ಕರೆಂಟ್ ಬಿಲ್ ಇತ್ಯಾದಿ ಏನೇ ವಿಷಯಗಳು ಚರ್ಚೆ ಆಗಿ ಒಪ್ಪಿಗೆ ಆಗಿದ್ದರು ಅದನ್ನು ಪತ್ರ ರೂಪದಲ್ಲಿ ಅಗ್ರಿಮೆಂಟ್ ಮಾಡಿಕೊಂಡು ಬಾಡಿಗೆದಾರ ಹಾಗೂ ಮಾಲೀಕರು ಸಹಿ ಹಾಕಿರಬೇಕು.
ಈ ಪತ್ರದಲ್ಲಿ ಅವರು ಬಾಡಿಗೆಗೆ ಬಂದ ದಿನಾಂಕ ಅವರ ಹೆಸರು ವಿಳಾಸ ಮತ್ತು ಮನೆಯ ವಿಳಾಸ ಮಾಲೀಕರ ಹೆಸರು ಮನೆ ಯಾವ ಸ್ವರೂಪದಲ್ಲಿದೆ ಮತ್ತು ಮನೆಯಲ್ಲಿ ಏನೆಲ್ಲಾ ಫೆಸಿಲಿಟಿ ಇದೆ ತಿಂಗಳ ಬಾಡಿಗೆ ಎಷ್ಟು ಕರೆಂಟ್, ವಾಟರ್ ಬಿಲ್ ಹೇಗೆ ಪಾವತಿ ಮಾಡಬೇಕು ಮತ್ತು ಮನೆ ಖಾಲಿ ಮಾಡಿಕೊಂಡು ಹೋಗುವಾಗ ಇರುವ ನಿಯಮಗಳೇನು ಎನ್ನುವುದರ ಬಗ್ಗೆ ದಾಖಲೆ ಇರುತ್ತದೆ.
ಈ ಸುದ್ದಿ ನೋಡಿ:- ಜಮೀನು, ಮನೆ, ಸೈಟ್, ಇನ್ನಿತರ ಆಸ್ತಿಗೆ ತಕರಾರು ಅರ್ಜಿ ಸಲ್ಲಿಸುವುದು ಹೇಗೆ.? ತಕರಾರು ಪ್ರಕ್ರಿಯೆ ಹೇಗೆ ಇರುತ್ತೆ ಸಂಪೂರ್ಣ ಮಾಹಿತಿ.!
ಇಬ್ಬರೂ ಕೂಡ ಸಹಿ ಮಾಡಿರುತ್ತಾರೆ ಮತ್ತು ಸಾಕ್ಷಿಗಳು ಕೂಡ ಸಹಿ ಹಾಕಿರುತ್ತಾರೆ ಇಂತಹ ಅಗ್ರಿಮೆಂಟ್ ಗಳನ್ನು ರೆಂಟ್ ಅಗ್ರಿಮೆಂಟ್ ಎನ್ನುತ್ತೇವೆ. ಈ ರೆಂಟ್ ಅಗ್ರಿಮೆಂಟ್ ಮನೆಯ ಬಾಡಿಗೆದಾರನಿಗೆ ಸಾಲ ತೆಗೆದುಕೊಳ್ಳುವಾಗ ಗ್ಯಾಸ್ ಸಂಪರ್ಕ ಪಡೆಯುವಾಗ ಇನ್ನಿತರ ಅನೇಕ ಸಂದರ್ಭ ಗಳಲ್ಲಿ ಅಗತ್ಯ ದಾಖಲೆಯಾಗಿ ಬೇಕು ಮತ್ತು ಇದಕ್ಕೆಲ್ಲಕ್ಕಿಂತ ಮುಖ್ಯವಾಗಿ ಮನೆ ಮಾಲೀಕರಿಗೆ ತಮ್ಮ ಭದ್ರತೆಗಾಗಿ ಬೇಕು.
ಈ ರೀತಿ ರೆಂಟ್ ಅಗ್ರಿಮೆಂಟ್ ಇಲ್ಲದೆ ಅವರು ಹಣದ ರೂಪದಲ್ಲಿ ಬಾಡಿಗೆ ಕೊಡುತ್ತಿದ್ದರು ನೀವು ತೆಗೆದುಕೊಂಡು ಸುಮ್ಮನಾಗುತ್ತಿದ್ದೀರಿ ಎಂದರೆ 12 ವರ್ಷ ತುಂಬಿದ ಬಳಿಕ ಅವರು ಅದೇ ಮನೆಯಲ್ಲಿ ಇದ್ದರೆ 13ನೇ ವರ್ಷ ಹೋಗಿ ಆ ಮನೆಯನ್ನು ತಮ್ಮ ವಶಕ್ಕೆ ಪಡೆದುಕೊಳ್ಳುವುದಕ್ಕೆ ಹಕ್ಕು ಸ್ವಾಧೀನತೆ ಕೇಸ್ ಹಾಕಬಹುದು.
ಕಾನೂನಿನಲ್ಲಿ ಇದಕ್ಕೆ ಅವಕಾಶ ಇದೆ ಇಂತಹ ಸಂದರ್ಭಗಳಲ್ಲಿ ಅವರು ಕೆಲವು ಸಂಗತಿಗಳನ್ನು ಸಾಬೀತುಪಡಿಸಿದ್ದಲ್ಲಿ 12 ವರ್ಷ ಅವರು ಅದೇ ಮನೆಯಲ್ಲಿ ಇದ್ದಿದ್ದು ರುಜುವಾತು ಆದರೆ ಮತ್ತು ನಿಮ್ಮ ನಡುವೆ ಅದು ಬಾಡಿಗೆ ಎಂದು ಹೇಳುವುದಕ್ಕೆ ಯಾವುದೇ ದಾಖಲೆ ಇಲ್ಲದೆ ಇದ್ದರೆ ಆ ಮನೆಗೆ ಅವರದ್ದೇ ಆಗಿ ಬಿಡಬಹುದು ಹಾಗಾಗಿ ತಪ್ಪದೆ ಈ ರೆಂಟ್ ಅಗ್ರಿಮೆಂಟ್ ಮಾಡಿಸಿ.
ಈ ಸುದ್ದಿ ನೋಡಿ:- ರೈತರ ಖಾತೆಗೆ ಬಂತು ಬರ ಪರಿಹಾರ ಉಚಿತ ರೂ.2,000 ಹಣ, ನಿಮ್ಮ ಮೊಬೈಲ್ ನಲ್ಲೇ ಚೆಕ್ ಮಾಡಿ.! ಹಣ ಬರದೇ ಇದ್ದವರು ಚಿಂತೆ ಮಾಡಬೇಡಿ ಈ ದಿನಾಂಕದಂದು ನಿಮಗೂ ಬರುತ್ತೆ.!
ರೆಂಟ್ ಅಗ್ರಿಮೆಂಟ್ ಯಾವಾಗಲೂ 11 ತಿಂಗಳಿಗೆ ಮಾಡಲಾಗುತ್ತದೆ. ಯಾಕೆ ಈ ರೀತಿ 11 ತಿಂಗಳಿಗೆ ಮಾಡುತ್ತಾರೆ ಮತ್ತು ನೀವೇನಾದರೂ ಅದಕ್ಕಿಂತ ಹೆಚ್ಚು ದಿನಗಳು ಅಲ್ಲಿ ಇರಬೇಕಾದಲ್ಲಿ ಏನು ಮಾಡಬೇಕು ಎಂದರೆ 11 ತಿಂಗಳಿಗಿಂತ ಹೆಚ್ಚಿನ ಸಮಯಕ್ಕೆ ರೆಂಟ್ ಅಗ್ರಿಮೆಂಟ್ ಮಾಡಿಸಿದಾಗ ಅದನ್ನು ರಿಜಿಸ್ಟರ್ ಮಾಡಿಸಬೇಕಾಗುತ್ತದೆ.
ಹಾಗಾಗಿ ಅದನ್ನು 11 ತಿಂಗಳಿಗೆ ಮಾಡಿಕೊಂಡು ಮುಂದೆ ಅದೇ ಮನೆಯಲ್ಲಿ ಮುಂದುವರೆಯುವುದಾದರೆ ಅದನ್ನು ರಿನಿವಲ್ ಮಾಡಿಕೊಳ್ಳಬಹುದು ಅಥವಾ ಹೊಸದಾಗಿ ಇನ್ನಷ್ಟು ಕಂಡೀಶನ್ ಗಳನ್ನು ಸೇರಿಸಬೇಕಿದ್ದರೆ ಹೊಸದಾಗಿ ರೆಂಟ್ ಅಗ್ರಿಮೆಂಟ್ ಮಾಡಿಕೊಳ್ಳಬೇಕು. ಮನೆ ಮಾಲೀಕ ಹಾಗೂ ಮನೆ ಬಾಡಿಗೆದಾರ ಇಬ್ಬರಿಗೂ ಕೂಡ ಈ ಒಂದು ಒಪ್ಪಂದ ಪತ್ರ ಬಹಳ ಮುಖ್ಯ ಹಾಗಾಗಿ ತಪ್ಪದೆ ಈ ಕೆಲಸ ಮಾಡಿ.