ಪೋಸ್ಟ್ ಆಫೀಸ್ ನಾ ಈ ಯೋಜನೆಯಲ್ಲಿ ಕೇವಲ 36 ರೂಪಾಯಿ ಹೂಡಿಕೆ ಮಾಡಿದರೆ ಸಾಕು, 6 ಲಕ್ಷ ಸಿಗಲಿದೆ

ಮಕ್ಕಳು ಎನ್ನುವ ವಿಚಾರವೇ ಜೀವನದ ಬಹಳ ದೊಡ್ಡ ಜವಾಬ್ದಾರಿ ಆಗಿದೆ. ಮಕ್ಕಳು ಹುಟ್ಟಿದ ದಿನದಿಂದಲೇ ಮಕ್ಕಳ ಭವಿಷ್ಯದ ಬಗ್ಗೆ ಯೋಚನೆ ಶುರು ಆಗುತ್ತದೆ, ನೋಡ ನೋಡುತ್ತಿದ್ದಂತೆ ಮಕ್ಕಳು ಬೆಳೆದು ಬಿಡುತ್ತಾರೆ. ಶಾಲೆಗೆ ಹೋಗುವ ಮಕ್ಕಳು ಅದ್ಯಾವಾಗ ಮದುವೆ ವಯಸಿಗೆ ಬಂದುಬಿಟ್ಟರು ಅಥವಾ ಅವರು ಸಹ ದುಡಿಮೆ ಮಾಡುವ ಹಂತಕ್ಕೆ ಬೆಳೆದರು ಎನ್ನುವುದೇ ಗೊತ್ತಾಗುವುದಿಲ್ಲ.

WhatsApp Group Join Now
Telegram Group Join Now

ಹಾಗಾಗಿ ಮಕ್ಕಳು ಹುಟ್ಟಿದ ತಕ್ಷಣವೇ ಮಕ್ಕಳ ಹೆಸರಿನಲ್ಲಿ ಅವರ ಭವಿಷ್ಯದ ಉದ್ದೇಶದಿಂದ ಉಳಿತಾಯ ಮಾಡುವುದು ಅತ್ಯಂತ ಉತ್ತಮವಾದ ಒಂದು ಯೋಜನೆ. ಆದರೆ ಇರುವ ಹಣವೇ ಕುಟುಂಬ ಸಾಕಲು ಸಾಕಾಗುತ್ತಿಲ್ಲ ಎಂದು ನಿರ್ಲಕ್ಷ ಮಾಡುವವರು ಸಹ ಇದ್ದಾರೆ. ಅವರಿಗೆ ಒಂದು ಸಲಹೆಯನ್ನು ಈ ಲೇಖನದ ಮೂಲಕ ನೀಡಲು ಬಯಸುತ್ತೇವೆ.

ಈ ಸುದ್ದಿ ಓದಿ:- ಕೇವಲ 18 ಲಕ್ಷಕ್ಕೆ ಯಾವುದೇ ಕ್ವಾಲಿಟಿ ಕಾಂಪ್ರಮೈಸ್ ಇಲ್ಲದೆ ಡುಪ್ಲೆಕ್ಸ್ ಮನೆ ಕಟ್ಟಿದ್ದರೆ ನೋಡಿ.!

ಅದೇನೆಂದರೆ, ಒಂದೇ ಬಾರಿಗೆ ಲಕ್ಷಾಂತರ ರೂಪಾಯಿ ಹಣ ಕೊಡಲು ಸಾಧ್ಯವಾಗದೆ ಇದ್ದರೆ ದಿನವೊಂದಕ್ಕೆ ಕನಿಷ್ಠ ಆರು ರೂಪಾಯಿ ಕಟ್ಟಿ ಕೂಡ ನಿಮ್ಮ ಮಕ್ಕಳ ಭವಿಷ್ಯವನ್ನು ಗಟ್ಟಿ ಮಾಡಿಕೊಡಬಹುದು. ಇದಕ್ಕೆ ಕೇಂದ್ರ ಸರ್ಕಾರದಡಿ ಕಾರ್ಯ ನಿರ್ವಹಿಸುವ ಅಂಚೆ ಕಚೇರಿಗಳು (Post Office) ನಿಮ್ಮ ಅನುಕೂಲಕ್ಕೆ ಬರುತ್ತವೆ.

ಹೆಣ್ಣು ಮಕ್ಕಳಿಗಾಗಿ ಇರುವ ಸುಕನ್ಯಾ ಸಮೃದ್ಧಿ ಯೋಜನೆ ಮಾತ್ರವಲ್ಲದೇ ಹೊಸದಾಗಿ ರೂಪಿಸಲಾಗಿರುವ ಬಾಲ ಜೀವನ ಭೀಮಾ ಯೋಜನೆ (Bala Jeevana Bhima Yojane) ಮೂಲಕ ದೀರ್ಘಾವಧಿಗೆ ಕಡಿಮೆ ಉಳಿತಾಯ ಮಾಡಿ ನಿಮ್ಮ ಮಕ್ಕಳು 20ನೇ ವಯಸ್ಸಿಗೆ ಬಂದ ನಂತರ ಅವರ ವಿದ್ಯಾಭ್ಯಾಸಕ್ಕೆ ಅಥವಾ ಮದುವೆ ಖರ್ಚಿಗೆ ಅಥವಾ ಅವರು ಸ್ವಂತ ಉದ್ಯಮ ಮಾಡಲು ಬಯಸಿದರೆ ನೀವು ನಿಮ್ಮ ಉಳಿತಾಯವನ್ನು ಅವರಿಗೆ ನೀಡಬಹುದು ಬಹಳ ವಿಶೇಷವಾದ ಈ ಯೋಜನೆ ಕುರಿತ ಇನ್ನಷ್ಟು ವಿವರ ಹೀಗಿದೆ ನೋಡಿ.

ಈ ಸುದ್ದಿ ಓದಿ:- IDBI ನೇಮಕಾತಿ 2024, ಬ್ಯಾಂಕ್ ನಲ್ಲಿ ಉದ್ಯೋಗ ಮಾಡಲು ಬಯಸುವವರಿಗೆ ಸುವರ್ಣ ಅವಕಾಶ ತಪ್ಪದೇ ಅರ್ಜಿ ಸಲ್ಲಿಸಿ. ವೇತನ 1.6 ಲಕ್ಷ
ಯೋಜನೆ ಹೆಸರು:- ಅಂಚೆ ಕಚೇರಿಯ ಬಾಲ ಜೀವನ ಭೀಮಾ ಯೋಜನೆ
ವೈಶಿಷ್ಟಗಳು

* 5 – 20 ವರ್ಷದ ಒಳಗಿನವರು ತಮ್ಮ ಮಕ್ಕಳ ಹೆಸರಿನಲ್ಲಿ ಖಾತೆ ತೆರೆಯಬಹುದು, ಮಕ್ಕಳ ಹೆಸರಿನಲ್ಲಿ ಖಾತೆ ತೆರೆದು ಪೋಷಕರು ಹೂಡಿಕೆ ಮಾಡಬೇಕು
* ಪಾಲಿಸಿಯನ್ನು ಖರೀದಿಸುವ ಸಮಯದಲ್ಲಿ ಪಾಲಿಸಿದಾರರ ವಯಸ್ಸು ಅಂದರೆ ಪೋಷಕರ ವಯಸ್ಸು 45 ವರ್ಷಗಳನ್ನು ಮೀರಬಾರದು.
* ಒಂದು ಕುಟುಂಬದಲ್ಲಿ ಗರಿಷ್ಠ ಇಬ್ಬರು ಮಕ್ಕಳು ಮಾತ್ರ ಈ ಯೋಜನೆಯ ಪ್ರಯೋಜನ ಪಡೆಯಲು ಸಾಧ್ಯ

* ಪಾಲಿಸಿದಾರನು ಪಾಲಿಸಿಯ ಮುಕ್ತಾಯದ ಮೊದಲು ಮರಣ ಹೊಂದಿದರೆ, ನಂತರ ಪಾಲಿಸಿ ಪ್ರೀಮಿಯಂ ಪಾವತಿಸುವ ಅಗತ್ಯವಿಲ್ಲ. ಪಾಲಿಸಿಯ ಅವಧಿಯ ಕೊನೆಯಲ್ಲಿ ಆ ಮಕ್ಕಳಿಗೆ ಪೂರ್ಣ ಮೆಚ್ಯೂರಿಟಿ ಮೊತ್ತವನ್ನು ಪಾವತಿಸಲಾಗುತ್ತದೆ.

ಈ ಸುದ್ದಿ ಓದಿ:- ಬರ ಪರಿಹಾರದ ಹಣ ಇನ್ನು ಬಂದಿಲ್ಲವೇ.? ಆಗಿದ್ರೆ ತಪ್ಪದೆ ಈ ಮಾಹಿತಿ ತಿಳಿದುಕೊಳ್ಳಿ.!

* ಅಂಚೆ ಕಚೇರಿಯ ಇತರೇ ಯೋಜನೆಗಳ ರೀತಿಯಲ್ಲಿ ಈ ಪಾಲಿಸಿಯಲ್ಲಿ ಯಾವುದೇ ಸಾಲ ಪಡೆದುಕೊಳ್ಳಲು ಅನುಮತಿ ಇರುವುದಿಲ್ಲ, ಒಂದು ವೇಳೆ ನೀವು ಈ ಖಾತೆ ತೆರೆದ ನಂತರ ಮಧ್ಯದಲ್ಲಿ ಪಾಲಿಸಿಯಿಂದ ಹಿಂದೆ ಸರಿಯಲು ಬಯಸಿದರೆ 5 ವರ್ಷಗಳ ನಂತರ ಸರೆಂಡರ್​ ಆಗುವ ಅವಕಾಶವಿದೆ.

* ರೂ. 1000 ಖಾತರಿ ಮೊತ್ತದ ಮೇಲೆ ಪ್ರತಿ ವರ್ಷ ರೂ. 48 ಬೋನಸ್ ನೀಡುತ್ತಾರೆ.

* ಹೂಡಿಕೆಯ ಮತ್ತು ಲಾಭದ ವಿಚಾರದ ಬಗ್ಗೆ ಹೇಳುವುದಾದರೆ
ದಿನಕ್ಕೆ ಕನಿಷ್ಠ ರೂ.6 ಮತ್ತು ಗರಿಷ್ಠ ರೂ.18 ಪಾವತಿಸಬಹುದು, ರೂ.6 ಪ್ರತಿದಿನ ಕಟ್ಟಿದರೆ ಮೆಚ್ಯೂರಿಟಿಯ ಕೊನೆಯಲ್ಲಿ ಕನಿಷ್ಠ ಖಾತರಿ ಮೊತ್ತವು ರೂ.1 ಲಕ್ಷ ರೂಪಾಯಿವರೆಗೆ ಬರುತ್ತದೆ. ಅದೇ ಗರಿಷ್ಠ ಹಣ ದಿನಕ್ಕೆ ರೂ.18 ಕಟ್ಟಿದ್ರೆ ಮೆಚ್ಯೂರಿಟಿ ನಂತರ ರೂ. 3 ಲಕ್ಷ ಹಣ ಪಡೆಯಬಹುದು. ಇಬ್ಬರು ಮಕ್ಕಳಿಗೆ ಖಾತೆ ತೆರೆಯುವ ಅವಕಾಶ ಇರುವುದರಿಂದ ಇಬ್ಬರು ಮಕ್ಕಳಿಂದ ದಿನಕ್ಕೆ ರೂ. 36 (ಪ್ರತಿ ರೂ. 18) ಪಾವತಿ ಮಾಡಿದರೆ ಮುಕ್ತಾಯದ ಸಮಯದಲ್ಲಿ ಎರಡರಿಂದ ಒಟ್ಟು ಮೊತ್ತದಲ್ಲಿ ರೂ. 6 ಲಕ್ಷದವರೆಗೂ ಲಾಭ ಸಿಗುತ್ತದೆ.

 

Leave a Comment

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now