ಪ್ರತಿಯೊಬ್ಬರೂ ಕೂಡ ಹೊಂದಿರುವ ಬ್ಯಾಂಕ್ ಖಾತೆಗಳಿಗೆ ನಾಮಿನಿ ಮಾಡಬೇಕು. ಈ ಸೌಲಭ್ಯಕ್ಕಾಗಿ ಖಾತೆ ತೆರೆದ ಸಮಯದಲ್ಲಿಯೇ ನೀಡುವ ಅರ್ಜಿ ಫಾರ್ಮಲ್ಲಿ ಸ್ಥಳವನ್ನು ಕೂಡ ಬಿಡಲಾಗಿರುತ್ತದೆ. ಅದರಲ್ಲಿ ನಾಮ ನಿರ್ದೇಶನ ಮಾಡಿದವರ ಅಂದರೆ ನಾಮಿನಿ ಮಾಡುವವರ ಹೆಸರು ಹಾಗೂ ಅವರ ಜೊತೆಗಿರುವ ಸಂಬಂಧ ಏನು ಎಂದು ಬರೆಯಲಾಗಿರುತ್ತದೆ.
ಪ್ರತಿಯೊಂದು ಬ್ಯಾಂಕಲ್ಲಿ ಕೂಡ ಬ್ಯಾಂಕ್ ಖಾತೆಗೆ ನಾಮಿನಿ ಮಾಡುವ ಸೌಲಭ್ಯ ಇದೆ ಇದಲ್ಲದೆ ಬ್ಯಾಂಕ್ ಖಾತೆಗಳೊಂದಿಗೆ ಬ್ಯಾಂಕಲ್ಲಿ ನೀಡುವ ಇತರೆ ಸೌಲಭ್ಯಗಳಾದ FD ಮತ್ತು ಮತ್ತಿತರ ಹೂಡಿಕೆಗಳ ಅಥವಾ ಇನ್ನಿತರ ಯಾವುದೇ ಹಣಕಾಸಿಗೆ ಸಂಬಂಧಿಸಿದ ಯೋಜನೆಗಳ ಸೌಲಭ್ಯ ಇನ್ನು ಮುಂತಾದ ಎಲ್ಲದಕ್ಕೂ ಕೂಡ ಪ್ರತ್ಯೇಕವಾಗಿ ನಾಮಿನಿಗಳನ್ನು ಮಾಡಬಹುದು ಆದರೆ ಒಂದು ಬ್ಯಾಂಕ್ ಖಾತೆಗೆ ಒಬ್ಬರನ್ನಷ್ಟೇ ನಾಮಿನಿ ಮಾಡಲು ಅವಕಾಶವಿದೆ.
ಒಂದು ವೇಳೆ ನೀವು ಬೇರೆ ಬೇರೆ ಬ್ಯಾಂಕ್ ಗಳಲ್ಲಿ ಅಥವಾ ಬೇರೆ ಬೇರೆ ಬ್ಯಾಂಕ್ಗಳಲ್ಲಿ ಖಾತೆಗಳನ್ನು ಹೊಂದಿದ್ದರೆ ಅದಕ್ಕೆ ಬೇರೆ ಬೇರೆ ಹೆಸರಿನವರನ್ನು ನಾಮನಿರ್ದೇಶನ ಮಾಡಬಹುದು. ನಾಮಿನಿಯಾಗಿ ಸಂಗಾತಿ, ಪೋಷಕರು ಅಥವಾ ಕುಟುಂಬದ ಯಾವುದೇ ಸಂಬಂಧಿಕರು ಅಥವಾ ಕುಟುಂಬದ ಹೊರಗಿನವರನ್ನು ಕೂಡ ನಿರ್ದೇಶನ ಮಾಡಬಹುದು.
ಈ ರೀತಿ ನಾಮಿನೇಷನ್ ಮಾಡುವುದರಿಂದ ಆಗುವ ಪ್ರಯೋಜನ ಏನು ಎಂದರೆ ಒಂದು ವೇಳೆ ಖಾತೆ ಹೊಂದಿರುವ ವ್ಯಕ್ತಿ ಮೃತಪಟ್ಟಲ್ಲಿ ಆತ ನಾಮಿನಿ ಮಾಡಿದವರಿಗೆ ಬ್ಯಾಂಕುಗಳಲ್ಲಿದ್ದ ಅವರ ಉಳಿತಾಯ, ವಿಮೆ ಮತ್ತು ಹಣಕಾಸು ವ್ಯವಸ್ಥೆಯ ಸ್ವತ್ತುಗಳು, ನಿಧಿಗಳು ಮತ್ತು ಹೂಡಿಕೆಗಳು ಹೋಗುತ್ತದೆ ಬ್ಯಾಂಕುಗಳು ನೇರವಾಗಿ ನಾಮಿನಿ ಖಾತೆಗೆ ಈ ಎಲ್ಲಾ ಹಣದ ಮೊತ್ತವನ್ನು ವರ್ಗಾವಣೆ ಮಾಡುತ್ತವೆ. ಈ ರೀತಿ ನಾಮಿನಿಗಳು ಠೇವಣಿ ಮತ್ತು ಹೂಡಿಕೆಗಳನ್ನು ಕ್ಲೈಮ್ ಮಾಡಿಕೊಳ್ಳಬಹುದು.
ಒಂದು ವೇಳೆ ಖಾತೆದಾರರು ತಮ್ಮ ಖಾತೆಗಳಿಗೆ ನಾಮಿನಿ ಮಾಡದೆ ಹೋದ ಪಕ್ಷದಲ್ಲಿ ಅವರ ಮರಣದ ನಂತರ ಇರುವ ಹಕ್ಕುಗಳ ಬಗ್ಗೆ ಯಾರಿಗೂ ವಿಲ್ ಮಾಡದೆ ಹೋಗಿದ್ದ ಪಕ್ಷದಲ್ಲಿ ಅವರ ಮರಣಹಣ ನಂತರ ಬ್ಯಾಂಕುಗಳಿಗೆ ಹೋಗುತ್ತದೆಯೇ ಅಥವಾ ಸರ್ಕಾರಕ್ಕೆ ಹೋಗುತ್ತದೆಯೇ ಅಥವಾ ಇನ್ನೇನಾಗುತ್ತದೆ ಎಂದು ಅನುಮಾನ ಇದ್ದರೆ ಅದಕ್ಕೂ ಕೂಡ ಉತ್ತರವನ್ನು ಅಂಕಣದಲ್ಲಿ ತಿಳಿಸಲಾಗಿದೆ.
ಒಂದು ವೇಳೆ ಬ್ಯಾಂಕುಗಳಲ್ಲಿ ಖಾತೆ ಹೊಂದಿರುವ ವ್ಯಕ್ತಿಯು ಅಥವಾ ಇನ್ಯಾವುದೇ ರೂಪದಲ್ಲಿ ಹೂಡಿಕೆ ಮಾಡಿರುವ ವ್ಯಕ್ತಿಯು ಆತನ ಖಾತೆಗೆ ಯಾರನ್ನು ನಾಮಿನಿ ಮಾಡದೆ ಮೃತರಾಗಿದ್ದ ಪಕ್ಷದಲ್ಲಿ ಆ ಹಣವೆಲ್ಲ ಅವರ ಉತ್ತರಾಧಿಕಾರಿಗೆ ಸೇರುತ್ತದೆ. ಆದರೆ ಈ ಪ್ರೊಸೀಜರ್ ಅಷ್ಟು ವೇಗವಾಗಿ ಸಾಲುವುದಿಲ್ಲ. ಯಾಕೆಂದರೆ ಅವರು ಕೋರ್ಟ್ ಗಳು ಮೂಲಕ ತಮ್ಮ ಉತ್ತರಾಧಿಕತ್ವವನ್ನು ಸಾಬೀತು ಮಾಡಬೇಕಾಗುತ್ತದೆ. ಆ ಕಾರಣಕ್ಕಾಗಿ ಕುಟುಂಬಕ್ಕೆ ಅವಶ್ಯಕತೆ ಇದ್ದ ಸನ್ನಿವೇಶದಲ್ಲಿ ತಕ್ಷಣ ಈ ಹಣ ಕೈ ಸೇರುವುದಿಲ್ಲ.
ಕೋರ್ಟ್ ನೀಡುವ ಉತ್ತರಾಧಿಕಾರದ ಪ್ರಮಾಣ ಪತ್ರ ವನ್ನು ಅಗತ್ಯ ದಾಖಲೆಯಾಗಿ ನೀಡಬೇಕಾಗುತ್ತದೆ. ಕೋರ್ಟಿನಲ್ಲಿ ಉತ್ತರಾಧಿಕಾರಿಗಳು ತಮ್ಮ ಹಕ್ಕುವನ್ನು ಸಾಬೀತುಪಡಿಸಬೇಕಾಗುತ್ತದೆ. ಬ್ಯಾಂಕ್ ಗಳು ಅದರ ಸತ್ಯಾನುಸತ್ಯತೆಯನ್ನು ಪರಿಶೀಲಿಸಿ ನಂತರ ಉತ್ತರಾಧಿಕಾರಿಗಳ ಖಾತೆಗೆ ಹಣವನ್ನು ವರ್ಗಾವಣೆ ಮಾಡುತ್ತಾರೆ. NRI ಗಳನ್ನು ಕೂಡ ಬ್ಯಾಂಕ್ ಖಾತೆಗಳಿಗೆ ಆಗಲಿ ಬ್ಯಾಂಕಗಳ ಇನ್ಯಾವುದೇ ಹಣಕಾಸಿನ ವ್ಯವಹಾರದ ಹೂಡಿಕೆಗಳಿಗೆ ಆಗಲಿ ನಾಮಿನಿ ಮಾಡಬಹುದು.
ಆದರೆ ಹಣ ಹಿಂತಿರುಗಿಸುವಾಗ ರಿಸರ್ವ್ ಬ್ಯಾಂಕಿನ ಅನುಮತಿಯನ್ನು ಪಡೆದು ಅವರ ಖಾತೆಗಳಿಗೆ ಹಣ ವರ್ಗಾವಣೆ ಮಾಡಲಾಗುತ್ತದೆ. ಈ ಉಪಯುಕ್ತ ಮಾಹಿತಿಯನ್ನು ನಿಮ್ಮ ಕುಟುಂಬದವರು ಹಾಗೂ ಸ್ನೇಹಿತರ ಜೊತೆಗೂ ಹಂಚಿಕೊಂಡು, ಬ್ಯಾಂಕ್ ಗಳಲ್ಲಿ ಖಾತೆಗಳಿಗೆ ನಾಮಿನಿ ಮಾಡುವುದು ಎಷ್ಟು ಮುಖ್ಯ ಎನ್ನುವುದನ್ನು ತಿಳಿಸಿಕೊಡಿ.