ಈ ಕಾರ್ಡ್ ಇದ್ರೆ ಆಸ್ಪತ್ರೆ ಬಿಲ್ ಫ್ರೀ, ಪ್ರತಿಯೊಬ್ಬರ ಬಳಿಯೂ ಕೂಡ ಈ ಕಾರ್ಡ್ ಇರಲೇಬೇಕು.!

 

WhatsApp Group Join Now
Telegram Group Join Now

ಈಗಿನ ಕಾಲದಲ್ಲಿ ಯಾರಿಗೆ ಯಾವಾಗ ಆರೋಗ್ಯ ಸಮಸ್ಯೆ ಬರುತ್ತದೆ ಎಂದು ಊಹಿಸಲು ಸಾಧ್ಯವಿಲ್ಲ. ಅನಿರೀಕ್ಷಿತ ಸಮಯದಲ್ಲಿ ಬರುವ ತೊಂದರೆಗಳಿಂದ ನಮ್ಮನ್ನು ಕಾಪಾಡಿಕೊಳ್ಳುವುದಕ್ಕೆ ನಮ್ಮ ಬಳಿ ಸದಾ ಕಾಲ ಹಣ ಇರುವುದಿಲ್ಲ, ಅದಕ್ಕಾಗಿ ನಾವು ಇನ್ಸೂರೆನ್ಸ್ ಗಳನ್ನು ನಂಬುತ್ತೇವೆ.

ಹಾಗೆ ಆರೋಗ್ಯ ಸಮಸ್ಯೆಗೂ ಕೂಡ ಹೆಲ್ತ್ ಇನ್ಸೂರೆನ್ಸ್ (Health Insurance) ಎನ್ನುವುದು ಬಹಳ ಮುಖ್ಯವಾಗುತ್ತದೆ. ಈ ರೀತಿ ಆರೋಗ್ಯ ವಿಮೆ ಮಾಡಿಸಿಕೊಳ್ಳುವುದರಿಂದ ನಮಗೆ ಆರೋಗ್ಯ ಸಮಸ್ಯೆಗಳಾದಾಗ ಉಚಿತವಾಗಿ ಚಿಕಿತ್ಸೆ ಪಡೆದುಕೊಳ್ಳಬಹುದು.

ಅದರಲ್ಲೂ ಈಗಿನ ಕಾಲದಲ್ಲಿ ತಪಾಸಣೆ, ಪರೀಕ್ಷೆಗಳು, ಮೆಡಿಸಿನ್, ಚಿಕಿತ್ಸೆ ಎಲ್ಲವೂ ಬಹಳ ದುಬಾರಿ ಆಗಿರುವುದರಿಂದ ಪ್ರತಿಯೊಬ್ಬರ ಬಳಿಯೂ ಆರೋಗ್ಯ ವಿಮೆ ಇದ್ದರೆ ಒಳ್ಳೆಯದು. ಇಂತಹ ಸಮಯದಲ್ಲಿ ನೀವು ಹೆಲ್ತ್ ಇನ್ಸೂರೆನ್ಸ್ ಮಾಡಿಸಿಕೊಂಡ ಕಂಪನಿಯು ನಿಮ್ಮ ವೆಚ್ಚವನ್ನು ಬರಿಸುತ್ತದೆ.

ಇಲ್ಲವಾದಲ್ಲಿ ಅಸಹಾಯಕರಾಗಿ ಸಾಲದ ಮೊರೆ ಹೋಗಬೇಕಾಗುತ್ತದೆ ಅಥವಾ ಉಳಿತಾಯ ಮಾಡಿದ ಹಣವನ್ನು ಕೊಟ್ಟು ಇನ್ನಷ್ಟು ಮಾನಸಿಕ ಸಮಸ್ಯೆಗೆ ಸಿಲುಕಬೇಕಾಗುತ್ತದೆ. ಹಾಗಾಗಿ ಯಾವ ರೀತಿ ಹೆಲ್ತ್ ಇನ್ಸೂರೆನ್ಸ್ ಬೇಕು ಮತ್ತು ಯಾಕೆ ಖರೀದಿಸಬೇಕು ಮತ್ತು ಹೇಗೆ ಖರೀದಿಸಬೇಕು ಎನ್ನುವುದರ ಬಗ್ಗೆ ಕೆಲ ಪ್ರಮುಖ ವಿಷಯಗಳನ್ನು ಈ ಅಂಕಣದಲ್ಲಿ ಹಂಚಿಕೊಳ್ಳುತ್ತಿದ್ದೇವೆ.

ಹೆಲ್ತ್ ಇನ್ಶೂರೆನ್ಸ್ ಮಾಡಿಸಿದಾಗ ಹಲವಾರು ಮಾಹಿತಿಗಳನ್ನು ಗಮನಿಸಲೇಬೇಕು. ಇಲ್ಲವಾದಲ್ಲಿ ಕ್ಲೈಮ್ ಆಗುವಾಗ ಸಮಸ್ಯೆ ಆಗಬಹುದು. ಈ ನಿಟ್ಟಿನಲ್ಲಿ ಗಮನಿಸಲೇಬೇಕಾದ ಅಂಶಗಳೇನೆಂದರೆ, ಕೆಲವೊಂದು ಕಂಪನಿಗಳು ತಮ್ಮ ವಿಮೆಗಳು ಯಾವ ಆಸ್ಪತ್ರೆಗಳಲ್ಲಿ ಭರಿಸುತ್ತವೆ ಎನ್ನುವುದನ್ನು ಮೊದಲೇ ನಿರ್ಧರಿಸುತ್ತವೆ.

ಹಾಗಾಗಿ ನೀವು ಸೆಲೆಕ್ಟ್ ಮಾಡುವಾಗ ನಿಮ್ಮ ಮನೆಯ ಹತ್ತಿರದ ಆಸ್ಪತ್ರೆಗಳು ಸೇರುವಯೇ ಎನ್ನುವುದನ್ನು ಗಮನಿಸಿ ಆರಿಸಬೇಕು, ಕೆಲವೊಮ್ಮೆ ರಿಸ್ಟ್ರಕ್ಷನ್ ಇರುತ್ತದೆ. ಉದಾಹರಣೆಗೆ ಈ ಪ್ರದೇಶಗಳಲ್ಲಿ ಚಿಕಿತ್ಸೆ ಪಡೆದರೆ ಮಾತ್ರ ಇಲ್ಲವಾದಲ್ಲಿ ಬೇರೆ ಪ್ರದೇಶಗಳಿಗೆ ಹೋಗಿ ಪಡೆದ ಚಿಕಿತ್ಸೆಗೆ ಗ್ರಾಹಕನು ಹಣ ಭರಿಸಬೇಕು ಎನ್ನುವುದಿರುತ್ತದೆ ಇದರ ಬಗ್ಗೆ ಎಚ್ಚರದಿಂದಿರಲೇಬೇಕು.

ಕೆಲವೊಂದು ಕಂಪನಿಗಳು Co-pay ಎನ್ನುವ ಆಪ್ಷನ್ ನೀಡುತ್ತವೆ, ಹಾಗೆಂದರೆ ನಿಮಗೆ ಒಂದು ವೇಳೆ ಆರೋಗ್ಯ ಸಮಸ್ಯೆಯಾಗಿ ಚಿಕಿತ್ಸೆಗೆ ದಾಖಲಾದಾಗ ನೀವು ಕೂಡ ಸ್ವಲ್ಪ ಪ್ರಮಾಣದ ಹಣವನ್ನು ಅಂದರೆ 10% – 25% ಎನ್ನುವ ಆಪ್ಷನ್ ಇರುತ್ತದೆ ಇದನ್ನು ಕೆಲವರು ಒಪ್ಪುತ್ತಾರೆ. ಆದರೆ ಚಿಕಿತ್ಸೆಯ ವೆಚ್ಚವೇ ಹೆಚ್ಚಾಗಿದ್ದಾಗ ನಿಮಗೆ ದೊಡ್ಡ ಹೊರೆಯೇ ಆಗಬಹುದು, ಹಾಗಾಗಿ ಇದನ್ನು ಒಪ್ಪದಿರುವುದೇ ಉತ್ತಮ.

ಕೆಲವೊಂದು ಹೆಲ್ತ್ ಇನ್ಸೂರೆನ್ಸ್ ಖರೀದಿಸಿದಾಗ ಆಸ್ಪತ್ರೆಗೆ ದಾಖಲಾಗುವ ಮುನ್ನದ ವೆಚ್ಚವನ್ನು ಬರಿಸುವ ಆಪ್ಶನ್ ಇರುತ್ತದೆ, ಜೊತೆಗೆ ಆಸ್ಪತ್ರೆಯ ಬೆಡ್ ಚಾರ್ಜ್ ವಿಚಾರವಾಗಿ ರಿಸ್ಟ್ರಿಕ್ಷನ್ ವಿಚಾರಗಳು ಇರುತ್ತವೆ ಇವುಗಳ ಬಗ್ಗೆ ಗಮನಹರಿಸಬೇಕು.

ಕೆಲವೊಂದು ಆರೋಗ್ಯ ಕಂಪನಿಗಳು ಮನೆಯಲ್ಲಿ ಚಿಕಿತ್ಸೆ ನೀಡಿದರು ಅದನ್ನು ಕೂಡ ಭರಿಸುತ್ತವೆ, ಅಂಬುಲೆನ್ಸ್ ಚಾರ್ಜ್ ಏರ್ ಅಂಬುಲೆನ್ಸ್ ಚಾರ್ಜ್ ಇವುಗಳನ್ನು ಒಳಗೊಂಡಿರುವ ಆ ಆಯ್ಕೆಗಳಿದ್ದರೆ ಗಮನಿಸಿ. ಇನ್ನು ಕೆಲವು ಕಂಪನಿಗಳಲ್ಲಿ ವಿಮೆ ಮಾಡಿಸಿದ ಮೇಲೂ ನಂತರದ ದಿನಗಳಲ್ಲಿ ವಿಮೆ ಮೊತ್ತ ಹೆಚ್ಚಿಸಿಕೊಳ್ಳುವ ಆಪ್ಷನ್ ನೀಡಲಿಗಿರುತ್ತದೆ, ಆ ರೀತಿ ಇದ್ದರೆ ಅದನ್ನು ಸೆಲೆಕ್ಟ್ ಮಾಡಿ.

ಯಾವ ಕಂಪನಿ ಉತ್ತಮ ಎನ್ನುವುದನ್ನು ಸೆಲೆಕ್ಟ್ ಮಾಡುವಾಗ ಇದುವರೆಗೂ ಎಷ್ಟು ಕೇಸ್ ಗಳಲ್ಲಿ ಕ್ಲೇಮ್ ಆಗಿದೆ ಎನ್ನುವುದನ್ನು ಗಮನಿಸಿ ಹಾಗೆ ಎಷ್ಟು ಪರ್ಸೆಂಟ್ ಕೇಸ್ ಗಳಲ್ಲಿ ಕ್ಲೇಮ್ ಆಗಿಲ್ಲ ಎನ್ನುವುದು ಕೂಡ ಮುಖ್ಯ. ಯಾಕೆಂದರೆ ಈಗಾಗಲೇ ಕ್ಲೇಮ್ ಆಗಿರುವ ಮೊತ್ತ ಹೆಚ್ಚಾದಾಗ ಕಂಪನಿ ದಿವಾಳಿಯಾಗಿ ನಿಮ್ಮ ಹಣಕ್ಕೆ ಅ’ನ್ಯಾ’ಯ’ವಾಗಬಹುದು ಅದಕ್ಕಾಗಿ ಎಚ್ಚರಿಕೆವಹಿಸಿ.

ನೀವು ಆರೋಗ್ಯ ವಿಮೆ ಮಾಡಿಸುವಾಗ ಕೇಳಲಾಗುವ ಮಾಹಿತಿಗಳಲ್ಲಿ ನಿಮಗೆ ಈಗಾಗಲೇ ಇರುವ ಕಾಯಿಲೆಗಳ ಬಗ್ಗೆ ದು’ಶ್ಚ’ಟಗಳ ಬಗ್ಗೆ ಸರಿಯಾಗಿ ವಿವರಿಸಿ, ಇಲ್ಲವಾದಲ್ಲಿ ಮುಂದೆ ಸಿಕ್ಕಿಬಿದ್ದರೆ ಕ್ಲೈಮ್ ಆಗುವುದು ಸಮಸ್ಯೆಯಾಗಬಹುದು ಅಥವಾ ತಡವಾಗಬಹುದು.

ಅತಿ ಕಡಿಮೆ ವಯಸ್ಸಿಗೆ ಆರೋಗ್ಯ ವಿಮೆ ಮಾಡಿಸುವುದರಿಂದ ನಿಮಗೆ ಬೀಳುವ ಪ್ರೀಮಿಯಂ ಮೊತ್ತ ಕೂಡ ಕಡಿಮೆ ಇರುತ್ತದೆ, ಹಾಗಾಗಿ 21 ವರ್ಷದ ವಯಸ್ಸಿನಿಂದಲೇ ಈ ಬಗ್ಗೆ ಚಿಂತಿಸಿ ಕನಿಷ್ಠ 5 ಲಕ್ಷದ ವಿಮೆ ಆದರೂ ಇರುವಂತೆ ಆರೋಗ್ಯ ವಿಮೆಯನ್ನು ಕಳುಹಿಸಿ.

ನಿಮ್ಮ ಕಂಪನಿಯ ಆರೋಗ್ಯ ವಿಮೆ ಸೌಲಭ್ಯ ಕೊಟ್ಟಿದ್ದರು ಕೆಲಸ ಬಿಟ್ಟ ಸಮಯದಲ್ಲಿ ನಿಮಗೆ ತೊಂದರೆ ಆಗಬಹುದು ಹಾಗಾಗಿ ವೈಯಕ್ತಿಕವಾಗಿ ಒಂದು ಆರೋಗ್ಯ ವಿಮೆ ಇರುವುದು ಉತ್ತಮ. ಬಹು ಮುಖ್ಯ ವಿಚಾರ ಏನೆಂದರೆ ನೀವು ಆರೋಗ್ಯ ವಿಮೆಗೆ ಪಾವತಿಸುವ ಪ್ರೀಮಿಯಂ ಒಂದು ವೇಳೆ ನೀವು ಯಾವುದೇ ರೀತಿ ಚಿಕಿತ್ಸೆಗೆ ಒಳಪಡದೆ ಇದ್ದಾಗ ಹಿಂತಿರುಗಿ ಬರುವುದಿಲ್ಲ ಎನ್ನುವುದು ನೆನಪಿರಬೇಕು, ಆರೋಗ್ಯ ವಿಮೆ ಕುರಿತು ಇನ್ನಷ್ಟು ಹೆಚ್ಚಿನ ಮಾಹಿತಿ ತಿಳಿದುಕೊಳ್ಳಲು ಈ ವಿಡಿಯೋವನ್ನು ಪೂರ್ತಿಯಾಗಿ ನೋಡಿ.

https://youtu.be/bxBPHq7mfAQ?si=YXO_t2vG-NqjNrzw

Leave a Comment

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now