ರಾಜ್ಯಮಟ್ಟದಲ್ಲಿ ನಡೆದ ಜಂಟಿ ಸಮಾಲೋಚನಾ ಸಭೆಯಲ್ಲಿ ಸರ್ಕಾರಿ ನೌಕರರ ಬಹುದಿನಗಳ ಬೇಡಿಕೆಗಳ ಮೇಲೆ ಚರ್ಚೆ ನಡೆಸಿ ತೀರ್ಮಾನಗಳನ್ನು ಮಾಡಲಾಗಿದೆ. ಈ ಪ್ರಯುಕ್ತವಾಗಿ ಸರ್ಕಾರಿ ನೌಕರರಿಗೆ ಶೀಘ್ರವಾಗಿ ಸಿಹಿ ಸುದ್ದಿಯೊಂದು ಸಿಗಲಿದೆ ಎಂದೇ ಹೇಳಬಹುದು.
ನೌಕರರು ಆಸ್ತಿ ಖರೀದಿ ಮಾಡುವ ಪ್ರಕ್ರಿಯೆಯಲ್ಲಿ ಇದ್ದ ಹಲವು ಜಟಿಲತೆಗಳನ್ನು ನಿವಾರಿಸಿ ಅನುಕೂಲ ಮಾಡಿಕೊಡುವ ಬಗ್ಗೆ ನಿರ್ಧರಿಸಲಾಗಿದೆ ಈ ವಿಚಾರದ ಬಗ್ಗೆಯೇ ಹೆಚ್ಚು ಕೋರಿಕೆ ಬರುತ್ತಿತ್ತು ಅಂತಿಮವಾಗಿ ಇದಕ್ಕೆ ಪರಿಹಾರ ಸಿಕ್ಕಿದೆ ಎಂದು ಹೇಳಬಹುದು.
ಇದುವರೆಗೂ ಇದ್ದ ನಿಯಮದ ಪ್ರಕಾರ ಸರ್ಕಾರಿ ನೌಕರರು ಅವರ ಸೇವಾಕಾಲದಲ್ಲಿ ಚರ ಅಥವಾ ಸ್ಥಿರ ಆಸ್ತಿ ಖರೀದಿ ಮಾಡುವುದಕ್ಕೆ ಮೊದಲೇ ಪ್ರಾಧಿಕಾರ ಅನುಮತಿಯನ್ನು ಪಡೆಯಬೇಕಿತ್ತು, ಈಗ ಪ್ರಾಧಿಕಾರದ ಸಹಕಾರದೊಂದಿಗೆ ನಿಯಮಿತವಾದ ಕಾಲಮಿತಿಯಲ್ಲಿ ಪ್ರಕ್ರಿಯೆಗಳನ್ನು ಸುಲಭಗೊಳಿಸಲಾಗುತ್ತಿದೆ.
ಪ್ರಾಧಿಕಾರದ ಅಧಿಕೃತ ಘೋಷಣೆ ಬಳಿಕ ನೌಕರರು ಆಸ್ತಿಯನ್ನು ಪಡೆಯಲು ಸುಲಭವಾಗುತ್ತದೆ. ಕರ್ನಾಟಕ ಸರ್ಕಾರದ ನಾಗರಿಕ ಸೇವಾ (ನಡತೆ) ನಿಯಮಗಳ ಪ್ರಕಾರ, ಸರ್ಕಾರಿ ನೌಕರರು ಚರ ಅಥವಾ ಸ್ಥಿರ ಆಸ್ತಿ ಖರೀದಿ, ವಿಲೇ ಮಾಡಲು ಸಂಬಂಧಿಸಿದ ನಿಯಮ 24 ಯಲ್ಲಿ ಕೆಲವು ಕಟ್ಟುನಿಟ್ಟಿನ ನಿಯಮಗಳನ್ನು ಹೇರಿಕೆ ಮಾಡಲಾಗಿದೆ.
ಸರ್ಕಾರಿ ನೌಕರರು ಚರ ಅಥವಾ ಸ್ಥಿರ ಆಸ್ತಿ ಖರೀದಿ ಹಾಗೂ ವಿಲೇ ಮಾಡಬೇಕಾದರೆ ಅವರು ಅಧಿಕೃತ ಪ್ರಾಧಿಕಾರಕ್ಕೆ ವಿವರವನ್ನು ಆ ಸಮಯದಲ್ಲಿ ಸಲ್ಲಿಸಬೇಕು. ಆ ಆಸ್ತಿ ಖರೀದಿ ಅಥವಾ ವಿಲೇವಾರಿ ಬಗ್ಗೆ ವಿವರಗಳನ್ನು ಪತ್ರದ ಮೂಲಕ ಸರ್ಕಾರಕ್ಕೆ ಸಲ್ಲಿಸಿದರೆ ನಂತರ ಸರ್ಕಾರವು ಆ ಪತ್ರದ ಮೇಲ್ವಿಚಾರಣೆಯನ್ನು ನಡೆಸಿ ಅದರ ಮೇಲೆ ಪ್ರಕ್ರಿಯೆಯನ್ನು ಕೈಗೊಳ್ಳುತಿತ್ತು.
ಇದರ ಜೊತೆಗೆ ಸರ್ಕಾರಿ ನೌಕರರು ತಾವು ಹುದ್ದೆಗೆ ನೇಮಕವಾಗುವಾಗ ಸಮಯದಲ್ಲಿ ತಮ್ಮ ಹೆಸರಿನಲ್ಲಿ ಮತ್ತು ಕುಟುಂಬದ ಸದಸ್ಯರ ಹೆಸರಿನಲ್ಲಿ ಇರುವ ಪಿತೃಾರ್ಜಿತ ಅಥವಾ ಸ್ಥಿರಾಸ್ತಿಯ ವಿವರಗಳನ್ನು ಇದರೊಂದಿಗೆ ಹೆಸರು, ಜಾತಿ, ಹುದ್ದೆ, ಸ್ಥಿರಾಸ್ತಿಗೆ ಸಂಬಂಧಿಸಿದ ಮಾಹಿತಿ ಮತ್ತು ಅವುಗಳ ಪುರಾವೆಗಳೊಂದಿಗೆ ನಿಯಮ 24 ರ ಅನುಸಾರವಾಗಿ ಸಂಪೂರ್ಣ ವಿವರಗಳನ್ನು ನೀಡಬೇಕಾಗಿತ್ತು.
ಸರ್ಕಾರಿ ನೌಕರರು ತಮ್ಮ ಆಸ್ತಿ ಮತ್ತು ಹೊಣೆಗಾರಿಕೆ ವಿವರಗಳನ್ನು ನಿಗದಿತ ಸಮಯದಲ್ಲಿ ಸಲ್ಲಿಸಬೇಕು ಎನ್ನುವುದು ಅವರ ನೌಕರಿ ನಿಯಮಗಳಲ್ಲಿ ಒಂದಾಗಿದೆ. ಒಂದು ವೇಳೆ ಈ ನಿಯಮಗಳಿಗೆ ವಿರುದ್ಧ ನಡೆದಲ್ಲಿ, ಶಿಸ್ತು ಕ್ರಮ ಜರುಗಿಸಲು ಅವಕಾಶ ಇತ್ತು. ಹೆಚ್ಚಿನ ಸಂಖ್ಯೆಯ ಸರ್ಕಾರಿ ನೌಕರರು ಈ ವಿಷಯದಲ್ಲಿ ನಿಯಮಾನುಸಾರವಾಗಿ ನಡೆಯದೇ ಇದ್ದಲ್ಲಿ.
ಸರಕಾರ ನೌಕರರ ವಿರುದ್ಧ ಕ್ರಮವನ್ನು ಜರುಗಿಸಿರುವ ಉದಾಹರಣೆಗಳು ಕೂಡ ಇವೆ ಆದ್ದರಿಂದ, ಎಲ್ಲಾ ಸರ್ಕಾರಿ ನೌಕರರಿಗೂ ಕೂಡ ತಮ್ಮ ಆಸ್ತಿ ಮತ್ತು ಹೊಣೆಗಾರಿಕೆಗಳ ಸರಿಯಾದ ವಿವರವನ್ನು ನಿಗದಿತ ಸಮಯಕ್ಕೆ ಸಲ್ಲಿಸುತ್ತಾರೆ.
ಇಷ್ಟಿದ್ದರೂ ಕೂಡ ಆರ್ಥಿಕ ಖರೀದಿ ಸಮಯದಲ್ಲಿ ಆಗುತ್ತಿದ್ದ ತೊಡಕುಗಳು ಸರ್ಕಾರಿ ನೌಕರರಿಗೆ ಬಹಳ ದೊಡ್ಡ ಸಮಸ್ಯೆಯನ್ನು ನೀಡುತ್ತಿತ್ತು ಈಗ ಅದರ ನಿವಾರಣೆಗೆ ಕ್ರಮ ಕೈಗೊಳ್ಳಲಾಗಿದೆ. ಇದರ ಜೊತೆಗೆ ಸರ್ಕಾರಿ ನೌಕರರ ಪಾಸ್ಪೋರ್ಟ್ಗಳ ನಿರಾಕ್ಷೇಪಣಾ ಪ್ರಮಾಣ ಪತ್ರವನ್ನು ಕಛೇರಿಯ ಮುಖ್ಯಸ್ಥರಿಂದ ಪಡೆಯುವ ಅವಕಾಶವನ್ನು ಒದಗಿಸುವುದರ ಬಗ್ಗೆ.
ಮತ್ತು GPF ಖಾತೆಗಳಿಂದ ಮುಂಗಡ ಅಥವಾ ಭಾಗಶಃ ವಾಪಾಸಾತಿ ಪಡೆಯುವ ಸಂದರ್ಭದಲ್ಲಿ ನಿಯಮಗಳನ್ನು ಸರಳ ಗೊಳಿಸಲಾಗುತ್ತದೆ ಎನ್ನುವ ಶುಭ ಸುದ್ದಿ ಕೂಡ ಕೇಳಿ ಬಂದಿದೆ. ಇದರ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿ ಬೇಕಾದಲ್ಲಿ ಕರ್ನಾಟಕ ಸರ್ಕಾರದ ನಾಗರಿಕ ಸೇವಾ ನಿರ್ದೇಶಕರ ಕಛೇರಿಯನ್ನು ಸಂಪರ್ಕಿಸಬಹುದು.