ಶ್ರೀ ಧರ್ಮಸ್ಥಳ ಸಂಘದಿಂದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ವಿತರಣೆ ಆಸಕ್ತರು ಅರ್ಜಿ ಸಲ್ಲಿಸಿ.!

 

WhatsApp Group Join Now
Telegram Group Join Now

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಕರ್ನಾಟಕ ದೇಶದಾದ್ಯಂತ ಬಹಳ ಹೆಸರುವಾಸಿಯಾಗಿದೆ. ಈ ಸಂಘಗಳಲ್ಲಿ ಸಿಗುವ ಯೋಜನೆಗಳ ಅನುದಾನವನ್ನು ಪಡೆದು ಅನೇಕರು ತಮ್ಮ ಬದುಕನ್ನು ಕಟ್ಟಿಕೊಂಡಿದ್ದಾರೆ. ಇದೇ ನಿಟ್ಟಿನಲ್ಲಿ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತಹ ಸ್ಕಾಲರ್ ಶಿಪ್ ನೀಡುವ ಕಾರ್ಯಕ್ರಮವನ್ನು ಕೂಡ ಸಂಸ್ಥೆಯು ಆರಂಭಿಸಿರುವುದರ ಬಗ್ಗೆ ಕೆಲ ಪ್ರಮುಖ ಮಾಹಿತಿಯನ್ನು ಈ ಅಂಕಣದಲ್ಲಿ ತಿಳಿಸುತ್ತಿದ್ದೇವೆ.

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ (ರಿ.) ನ ಬೆಳ್ಳಿಹಬ್ಬದ ಆಚರಣೆಯ ಸವಿನೆನಪಿಗಾಗಿ ಶ್ರೀ ಧರ್ಮಸ್ಥಳ ಗ್ರಾಮೀಣ ಅಭಿವೃದ್ಧಿ ಸಂಘಗಳ ಪಾಲುದಾರರಾಗಿರುವ ಆರ್ಥಿಕವಾಗಿ ಹಿಂದುಳಿದ ಕುಟುಂಬದ ಸದಸ್ಯರ ಮಕ್ಕಳಿಗೆ ತಾಂತ್ರಿಕ ಮತ್ತು ವೃತ್ತಿಪರ ಶಿಕ್ಷಣಕ್ಕೆ ನೆರವಾಗಲು ಪೂಜ್ಯ ಡಾ|| ಡಿ. ವೀರೇಂದ್ರ ಹೆಗ್ಗಡೆಯವರು 2007 ರಲ್ಲಿ ಸುಜ್ಞಾನನಿಧಿ ಶಿಷ್ಯವೇತನ ಕಾರ್ಯಕ್ರಮವನ್ನು ಪ್ರಾರಂಭಿಸಿದರು. ಅಂತೆಯೇ ಪ್ರತಿ ವರ್ಷವೂ ಕೂಡ ಇದನ್ನು ಮುಂದುವರಿಸಿಕೊಂಡು ಬರಲಾಗುತ್ತಿದೆ.

ಸುಜ್ಞಾನ ನಿಧಿ ಸ್ಕಾಲರ್ ಶಿಪ್ ಪಡೆಯಲು ಅರ್ಹತೆಗಳು:-

1. ಕಡ್ಡಾಯವಾಗಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ (ರಿ) ಪ್ರಾಯೋಜಿಸುತ್ತಿರುವ ಪ್ರಗತಿಬಂಧು ಹಾಗೂ ಸ್ವ-ಸಹಾಯ ತಂಡಗಳಲ್ಲಿ ದಿನಾಂಕ 30.06.2021 ಕ್ಕಿಂತ ಮೊದಲು ಪ್ರಾರಂಭಿಸಲಾದ ಸಂಘದಲ್ಲಿ ಸದಸ್ಯರಾಗಿರಬೇಕು. ಜೊತೆಗೆ ವ್ಯವಹಾರದಲ್ಲಿ ಗುಂಪುಗಳು S, A ಮತ್ತು B ಗ್ರೇಡ್ ನಲ್ಲಿ ಇರಬೇಕು.

* ಒಂದು ಕುಟುಂಬದಿಂದ ಒಂದು ವಿದ್ಯಾರ್ಥಿಗೆ ಮಾತ್ರ ಅರ್ಜಿ ಸಲ್ಲಿಸಲು ಅವಕಾಶ.
* ಹಳೆಯ ಸಂಘ ಬರ್ಕಾಸ್ತುಗೊಂಡು ಹೊಸ ಸಂಘಕ್ಕೆ ಸೇರ್ಪಡೆಯಾಗಿದ್ದರೆ ಒಂದು ವರ್ಷ ಪೂರ್ಣಗೊಂಡಿರಬೇಕು.
* ಶಿಷ್ಯವೇತನಕ್ಕೆ ಆಯ್ಕೆ ಮಾಡಿರುವ ಕೋರ್ಸ್ ನ ಪ್ರಥಮ ವರ್ಷದ ಮೊದಲ ಸೆಮಿಸ್ಟರ್‌ ವಿದ್ಯಾರ್ಥಿಗಳಿಗೆ ಮಾತ್ರ ಅರ್ಜಿ ಸಲ್ಲಿಸಲು ಅವಕಾಶ.

* ವಿದ್ಯಾರ್ಥಿ ಹೆಸರಲ್ಲಿಯೇ ಬ್ಯಾಂಕ್ ಖಾತೆ ತೆರೆದಿರಬೇಕು ಮತ್ತು ಆ ಅಕೌಂಟ್ ಗೆ ಆಧಾರ್ ಲಿಂಕ್ ಆಗಿ ಚಾಲ್ತಿಯಲ್ಲಿ ಇರಬೇಕು.
* ಸುಜ್ಞಾನನಿಧಿ ಶಿಷ್ಯವೇತನ ಪಡೆಯುವ ವಿದ್ಯಾರ್ಥಿಗಳು ನಂತರ ವಿನಾಕಾರಣ ಪರೀಕ್ಷೆಗಳಲ್ಲಿ ಅನುತ್ತೀರ್ಣಗೊಂಡು, ಮಧ್ಯದಲ್ಲೇ ಕೋರ್ಸ್ ಬಿಟ್ಟು ಬೇರೆ ಶಿಕ್ಷಣಕ್ಕಾಗಲಿ, ಬೇರೆ ವೃತ್ತಿಗಾಗಲಿ ಸೇರುವ ವಿದ್ಯಾರ್ಥಿಗಳಿಗೆ ಶಿಷ್ಯವೇತನವನ್ನು ಮುಂದುವರೆಸುವುದಿಲ್ಲ.
* ಯೋಜನೆಯ ಖಾಯಂ ಸಿಬ್ಬಂದಿಗಳ ಮಕ್ಕಳಿಗೆ ಸುಜ್ಞಾನನಿಧಿ ಶಿಷ್ಯವೇತನ ಲಭ್ಯವಿರುವುದಿಲ್ಲ.

* ಸುಜ್ಞಾನನಿಧಿ ಶಿಷ್ಯವೇತನವು SSLC, PUC, DEGREE ( 3 YEAR) BA, B-SC, B-COM, BBM, BCA, MA, M-SC, M-COM, MD, MCA, M-TECH, CA, POST BSC NURSING, ಒಂದು ವರ್ಷದ ಅವಧಿಯ ಹಾಗೂ CERTIFICATE ಕೋರ್ಸ್‌ಗಳ, LATERAL ENTRY ಮೂಲಕ ಎರಡನೇ ವರ್ಷದ ಕೋರ್ಸಿಗೆ ಪ್ರವೇಶ ಪಡೆಯುವ, CORESPONDENCE ಮೂಲಕ ದೂರ ಶಿಕ್ಷಣ ಪಡೆಯುವ ವಿದ್ಯಾರ್ಥಿಗಳಿಗೆ ನೀಡಲಾಗುವುದಿಲ್ಲ.

* BE, B.TECH, MBBS, BAMS, BDS, BHMS, BVA, BNYS, BVSC, MBA, D.Ed, B.Ed, NURSING(General), BSC(NURSING), ITI, LAB TECHNICIAN, DIPLOMA, LLB, PARAMEDICAL SCIENCE, BSC (HORTI), BSC (AGRI), BSC (FORESTRY), BSC (FISHERIES,) PHARM.D, PHYSIOTHERAPY, DIPLOMA AGRI, B.PHARM, D.PHARM, B.ARCHITECTURE ವಿದ್ಯಾಭ್ಯಾಸ ಪಡೆಯುತ್ತಿರುವ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು.

* ತಾಂತ್ರಿಕ ಮತ್ತು ವೃತ್ತಿಪರ ಕೋರ್ಸಿಗೆ ಒಂದು ಬಾರಿ ಶಿಷ್ಯವೇತನ ಪಡೆದವರು ಎರಡನೇ ಬಾರಿಗೆ ಇತರ ಕೋರ್ಸುಗಳ ಅಧ್ಯಯನಕ್ಕೆ ಅರ್ಜಿ ಸಲ್ಲಿಸಲಾಗುವುದಿಲ್ಲ.(ಉದಾ: DIPLOMA ಮೂಲಕ BE ಮಾಡುವ ವಿದ್ಯಾರ್ಥಿಗಳು)
* SDM ಎಜುಕೇಶನಲ್ ಟ್ರಸ್ಟ್ (ರಿ) ಉಜಿರೆ ಇಲ್ಲಿ ನೀಡುವ ಶಿಷ್ಯವೇತನ ಪಡೆಯುವ ವಿದ್ಯಾರ್ಥಿಗಳು ಸುಜ್ಞಾನನಿಧಿ ಶಿಷ್ಯವೇತನ ಪಡೆಯಲು ಸಾಧ್ಯವಿಲ್ಲ.

ಸಿಗುವ ಸಹಾಯಧನ:-

* ನಿಗದಿಪಡಿಸಿರುವ ಶೈಕ್ಷಣಿಕ ವರ್ಷಕ್ಕೆ ಅನುಗುಣವಾಗಿ 2 ರಿಂದ 5 ವರ್ಷ ಅವಧಿಯ ತಾಂತ್ರಿಕ ಮತ್ತು ವೃತ್ತಿಪರ ಶಿಕ್ಷಣಗಳಿಗೆ ಆಯ್ದ ಕೋರ್ಸಿಗೆ ಅನುಗುಣವಾಗಿ ರೂ 400 ರಿಂದ ರೂ 1000 ಸಾವಿರದವರೆಗೆ ಮಾಸಿಕ ಶಿಷ್ಯವೇತನವನ್ನು ಪಾವತಿಸಲಾಗುತ್ತಿದೆ.

ಅರ್ಜಿ ಸಲ್ಲಿಸುವ ವಿಧಾನ:-

* ವಿದ್ಯಾರ್ಥಿಗಳು Online ಮೂಲಕ Sujnananidhi App ನಲ್ಲಿ ರಿಜಿಸ್ಟ್ರೇಷನ್ ಮಾಡಿಸಿಕೊಂಡು ಅರ್ಜಿ ಸಲ್ಲಿಸಬಹುದು.
* SKDRDP ಅಧಿಕೃತ ವೆಬ್ಸೈಟ್ಗೆ ತೆರಳಿ ಕೂಡ ಅರ್ಜಿ ಸಲ್ಲಿಸಬಹುದು.

ಬೇಕಾಗುವ ದಾಖಲೆಗಳು:-

* ವಿದ್ಯಾರ್ಥಿಯ ಆಧಾರ್ ಕಾರ್ಡ್
* ಕುಟುಂಬದ ರೇಷನ್ ಕಾರ್ಡ್
* ವಿದ್ಯಾರ್ಥಿಯ ಬ್ಯಾಂಕ್ ಪಾಸ್ ಬುಕ್ ವಿವರ
* ವಿದ್ಯಾರ್ಥಿಯು ಪ್ರಸಕ್ತ ಸಾಲಿನಲ್ಲಿ ಶಿಕ್ಷಣಕ್ಕೆ ದಾಖಲಾಗಿರುವ ಬಗ್ಗೆ ಶಾಲೆ ಅಥವಾ ಕಾಲೇಜಿನಿಂದ ನೀಡಿದ ಪ್ರಮಾಣ ಪತ್ರ ಅಥವಾ ಗುರುತಿನ ಚೀಟಿ ಅಧಿಕೃತ
* ವಿದ್ಯಾರ್ಥಿಯ ಪೋಷಕರು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ(ರಿ.)ಪ್ರಾಯೋಜಿಸುತ್ತಿರುವ ಪ್ರಗತಿಬಂಧು ಹಾಗೂ ಸ್ವ-ಸಹಾಯ ತಂಡಗಳಲ್ಲಿ ಸದಸ್ಯರಾಗಿರುವ ಬಗ್ಗೆ ದಾಖಲೆ ಪತ್ರ.

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:-
ಮೊಬೈಲ್ ಸಂಖ್ಯೆ – 9591770660 6366358320

Leave a Comment

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now