ರಾಜ್ಯ ಸರ್ಕಾರದಿಂದ 5 ಗ್ಯಾರಂಟಿ ಯೋಜನೆಗಳು (Gyaranty Scheme) ಜಾರಿಯಲ್ಲಿದೆ. ಇದರಲ್ಲಿ ಗೃಹಲಕ್ಷ್ಮಿ ಮತ್ತು ಅನ್ನಭಾಗ್ಯ ಯೋಜನೆಯು (Gruhalakshmi and Annabhagya) ಕುಟುಂಬದ ಮುಖ್ಯಸ್ಥೆ (HOF) ಖಾತೆಗೆ DBT ಮೂಲಕ ಹಣ ತಲುಪಿಸುವ ಯೋಜನೆಗಳಾಗಿವೆ.
ಲಿಂಗ ಸಮಾನತೆ ಮತ್ತು ಆರ್ಥಿಕ ಸಮಾನತೆ ಸಾಧಿಸುವ ಕಾರಣದಿಂದ ಸರ್ಕಾರವು ಕುಟುಂಬದ ಮುಖ್ಯಸ್ಥೆಗೆ ಕುಟುಂಬ ನಿರ್ವಹಣೆಗಾಗಿ ಗೃಹಲಕ್ಷ್ಮಿ ಯೋಜನೆಯಡಿ ಪ್ರತಿ ತಿಂಗಳು ರೂ.2000 ಹಣ ವರ್ಗಾವಣೆ ಮಾಡುತ್ತಿದೆ. ಹಾಗೆಯೇ ಅನ್ನಭಾಗ್ಯ ಯೋಜನೆ ಮೂಲಕ ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳ ಸದಸ್ಯನಿಗೆ (BPL) 10KG ಪಡಿತರ ನೀಡಬೇಕಿತ್ತು.
ಆದರೆ ಸದ್ಯಕ್ಕೆ ದಾಸ್ತಾನು ಕೊರತೆ ಇರುವುದರಿಂದ ಪ್ರತಿಸದಸ್ಯನಿಗೆ 5KG ಅಕ್ಕಿಯನ್ನು ಮತ್ತು ಉಳಿದ 5KG ಬದಲಾಗಿ ರೂ.170 ನ್ನು ಆ ಕುಟುಂಬದ ಮುಖ್ಯಸ್ಥರ ಖಾತೆಗೆ ವರ್ಗಾವಣೆ ಮಾಡಲಾಗುತ್ತಿದೆ. ಈಗಾಗಲೇ ರಾಜ್ಯದಾದ್ಯಂತ 6 ಕಂತುಗಳ ಗೃಹಲಕ್ಷ್ಮಿ ಹಾಗೂ ಅನ್ನಭಾಗ್ಯ ಯೋಜನೆ ಹಣ ಪಡೆದ ಮಹಿಳೆಯರು 7ನೇ ಕಂತಿನ ನಿರೀಕ್ಷೆಯಲ್ಲಿದ್ದಾರೆ.
ಈ ಸುದ್ದಿ ಓದಿ:- ರಾಗಿ ಬೆಳೆದ ರೈತರಿಗೆ ಗುಡ್ ನ್ಯೂಸ್ ರಾಗಿ ಕ್ವಿಂಟಾಲ್ ಗೆ 3486.ರೂ ಬೆಂಬಲ ಬೆಲೆ ನಿಗದಿ.!
ಆದರೆ ಸರ್ಕಾರದಿಂದ ಈ ಕುರಿತಾಗಿ ಒಂದು ಬಿಗ್ ಅಪ್ಡೇಟ್ (update about 7th Installment) ಹೊರ ಬಿದ್ದಿದೆ ಅದೇನೆಂದರೆ, ಮೊದಲೇ ತಿಳಿಸಿದಂತೆ ಈ ಎರಡು ಯೋಜನೆಗಳು ಕೂಡ ರೇಷನ್ ಕಾರ್ಡ್ ಆಧಾರಿತ ಯೋಜನೆಗಳಾಗಿವೆ. ಅನ್ನಭಾಗ್ಯ ಯೋಜನೆಗೆ BPL & AAY ಕಾರ್ಡ್ ದಾರರು ಅರ್ಹರಾಗಿದ್ದರೆ ಗೃಹಲಕ್ಷ್ಮಿ ಯೋಜನೆಗೆ APL ಸೇರಿದಂತೆ ರೇಷನ್ ಕಾರ್ಡ್ ನಲ್ಲಿ ಮುಖ್ಯಸ್ಥೆ ಸ್ಥಾನದಲ್ಲಿರುವ ಅರ್ಹರಾಗಿದ್ದಾರೆ.
ಆ ಪ್ರಕಾರವಾಗಿ ಗೃಹಲಕ್ಷ್ಮಿ ಯೋಜನೆಗೆ ರಾಜ್ಯದ 1.17 ಕೋಟಿ ಮಹಿಳೆಯರು ಅರ್ಹರಾಗಿದ್ದು ಶೇಕಡ 95% ಕ್ಕಿಂತ ಹೆಚ್ಚು ಮಹಿಳೆಯರು ಈಗ ಯಶಸ್ವಿಯಾಗಿ ಪ್ರತಿ ತಿಂಗಳು ಹಣ ಪಡೆಯುತ್ತಿದ್ದಾರೆ ಹಣ ಪಡೆಯಲು ಸಮಸ್ಯೆ ಆಗಿರುವ ಮಹಿಳೆಯರಿಗೆ ಸರ್ಕಾರದಿಂದ ಸಮಸ್ಯೆ ಬಗೆ ಹರಿಸುವ ಪ್ರಯತ್ನಗಳು ಆಗಿವೆ, ಹೇಗೆ ಹಣ ಪಡೆಯಬಹುದು ಎನ್ನುವುದಾಗಿ ಸಲಹೆಗಳನ್ನು ಕೂಡ ನೀಡಲಾಗಿದೆ.
ಸದ್ಯಕ್ಕಿರುವ ವಿಷಯ ಏನೆಂದರೆ ನಿಮಗೆ ಇದುವರೆಗೂ ಕೂಡ ನಿಮಗೆ ಈ ಯೋಜನೆಗಳ ಹಣ ಬಂದಿದ್ದರು ಕೂಡ ಈ ಒಂದು ತಪ್ಪು ನೀವು ಮಾಡಿದರೆ ಇನ್ನು ಮುಂದೆ ನಿಮಗೆ ಗೃಹಲಕ್ಷ್ಮಿ ಹಣ ಬರುವುದಿಲ್ಲ. ನೀವು ಕೂಡಲೇ ಇದನ್ನು ತಿದ್ದುಪಡಿ (Correction) ಮಾಡಿಸಿಕೊಳ್ಳಲೇ ಬೇಕಾಗುತ್ತದೆ.
ಈ ಸುದ್ದಿ ಓದಿ:- ಗೃಹಲಕ್ಷ್ಮಿ ಯೋಜನೆ 7ನೇ ಕಂತಿನ ಹಣ ಸಿಗದೇ ಇದ್ದವರು ಈ ರೀತಿ ಮಾಡಿ.! ಹಣ ಜಮೆ ಆಗುತ್ತೆ.!
ಅದೇನೆಂದರೆ, ನಮ್ಮ ರಾಜ್ಯದಲ್ಲಿ BPL ರೇಷನ್ ಕಾರ್ಡ್ ಮಾನದಂಡಗಳನ್ನು ಮೀರಿ ಅನೇಕರು BPL ರೇಷನ್ ಕಾರ್ಡ್ ಪಡೆದು ಸರ್ಕಾರಕ್ಕೆ ವಂ’ಚಿ’ಸುತ್ತಿದ್ದಾರೆ ಎಂದು ಆರ್ಥಿಕ ಇಲಾಖೆ ಮಾಹಿತಿ ನೀಡಿದೆ ಇಂತಹ ಕಾರ್ಡುಗಳನ್ನು ವಶಕ್ಕೆ ಪಡೆಯಲು ಸರ್ಕಾರ ಕ್ರಮ ಕೈಗೊಂಡಿದೆ ಆ ಪ್ರಕಾರವಾಗಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಹಾಗೂ ಆಹಾರ ಇಲಾಖೆ ವತಿಯಿಂದ ಇಂತಹ ರೇಷನ್ ಕಾರ್ಡ್ ಗಳ ಪರಿಶೀಲನೆ ನಡೆಯುತ್ತಿದೆ.
ಇದಕ್ಕಾಗಿ ಮನೆ ಮನೆ ಸರ್ವೆ ಕೂಡ ನಡೆಸುತ್ತಿದ್ದಾರೆ, ಅಲ್ಲದೆ RTO ಸೇರಿದಂತೆ ಅನೇಕ ಇಲಾಖೆಗಳು ಇದರಲ್ಲಿ ಭಾಗಿಯಾಗಿ ಸರ್ಕಾರಕ್ಕೆ ಮಾಹಿತಿ ನೀಡಿ ಸ್ಪಂದಿಸುತ್ತಿವೆ. ಯಾವುದಾದರೂ ಮೂಲದಿಂದ ನೀವು BPL ರೇಷನ್ ಕಾರ್ಡ್ ಮನದಂಡಗಳನ್ನು ಮೀರಿ ರೇಷನ್ ಕಾರ್ಡ್ ಬರೆದಿದ್ದೀರಿ ಕೂಡ ಅಂತಹ ರೇಷನ್ ಕಾರ್ಡ್ ಗಳನ್ನು ಕ್ಯಾನ್ಸಲ್ ಮಾಡಲಾಗುತ್ತದೆ ಆಗ ನಿಮಗೆ ಅನ್ನ ಭಾಗ್ಯ ಯೋಜನೆ ಮಾತ್ರವಲ್ಲದೆ ಗೃಹಲಕ್ಷ್ಮಿ ಯೋಜನೆ ಹಣ ಕೂಡ ಬರುವುದಿಲ್ಲ.
ಹಾಗಾಗಿ ಕೂಡಲೇ BPL ರೇಷನ್ ಕಾರ್ಡ್ ನ್ನು APL ಆಗಿ ಬದಲಾಯಿಸಿಕೊಂಡರೆ ಗೃಹಲಕ್ಷ್ಮಿ ಹಣವನ್ನು ಪಡೆಯಬಹುದು. ಈ ಸಮಸ್ಯೆ ಜೊತೆಗೆ ರೇಷನ್ ಕಾರ್ಡ್ ಇ-ಕೆವೈಸಿ (e-KYC) ಮಾಡಿಸದೆ ಇದ್ದರೆ ಮತ್ತು ರೇಷನ್ ಕಾರ್ಡ್ ಪಡೆದು 10 ವರ್ಷಗಳಾಗಿದ್ದು ಕಳೆದ ಹತ್ತು ವರ್ಷಗಳಲ್ಲಿ ಒಮ್ಮೆ ಕೂಡ ರೇಷನ್ ಕಾರ್ಡ್ ಅಪ್ಡೇಟ್ ಮಾಡಿಸಿಲ್ಲ ಎಂದರೆ ಅವರು ಸಹ ಕೂಡಲೇ ನಿಯಮದಂತೆ ರಿನೀವಲ್ (Renewal) ಮಾಡಿಕೊಳ್ಳಬೇಕು ಇಲ್ಲವಾದರೆ ಅವರಿಗೂ ಈ ಯೋಜನೆಗಳ ಹಣ ಬರುವುದಿಲ್ಲ.