ನೀವು ಡೈರಿ ಫಾರ್ಮಿಂಗ್ ಮಾಡಬೇಕು ಎಂದುಕೊಂಡಿದ್ದೀರಾ ಹಾಗಾದರೆ ನೀವು ಈ ಲೇಖನವನ್ನು ಓದಲೇಬೇಕು ಯಾಕೆಂದರೆ, ನಾವು ನಿಮಗಾಗಿ ಕೆಲ ಅನುಕೂಲಕರ ಸಂಗತಿಗಳನ್ನು ತಿಳಿಸಿಕೊಡುತ್ತಿದ್ದೇವೆ. ಇದು ನಿಮ್ಮ ಕನಸಿನ ಸಾಕಾರಕ್ಕೆ ಸಲಹೆಗಳಾಗಬಹುದು. ಈಗ ಸರ್ಕಾರದಿಂದ ಹೈನುಗಾರಿಕೆ ಮತ್ತು ಪಶುಸಂಗೋಪನೆಯಲ್ಲಿ ತೊಡೆದುಕೊಳ್ಳುವವರಿಗೆ ಸಬ್ಸಿಡಿ ರೂಪದ ಸಾಲ ಸೌಲಭ್ಯ ಸೇರಿದಂತೆ ಉಚಿತ ಯಂತ್ರೋಪಕರಣಗಳ ವರೆಗೆ ಸಹಾಯ ಸಿಗುತ್ತಿದೆ.
ಇದರಿಂದ ನಿಮ್ಮ ಹಣಕಾಸಿನ ತೊಡಕುಗಳಿಗೆ ನೆರವಾಗುತ್ತದೆ ಇವುಗಳನ್ನು ಪಡೆಯಬಹುದು ಜೊತೆಗೆ ಈ ಉದ್ಯಮದಲ್ಲಿ ಕ್ಲಿಕ್ ಆಗಬೇಕು ಎಂದುಕೊಂಡರೆ ಹಸುಗಳಿಂದ ಪಡೆದ ಹಾಲು ಮಾತ್ರವಲ್ಲದೆ ಹಾಲಿನ ಉತ್ಪನ್ನಗಳ ತಯಾರಿಕೆ ಸಾವಯವ ಗೊಬ್ಬರ ತಯಾರಿಕೆ ಮತ್ತು ಹಸುಗಳ ಬ್ರೀಡಿಂಗ್ ಮಾಡುವುದು ಹಸುಗಳ ಮಾರಾಟ ಇನ್ನು ಇಂತಹ ಆಯಾಮಗಳಲ್ಲಿ ಯೋಚಿಸಿ ಕೂಡ ಲಾಭ ಮಾಡಬಹುದು.
ಹಳ್ಳಿಯಲ್ಲಿ ಇರುವವರು ಮಾತ್ರವಲ್ಲದೇ ಹಳ್ಳಿಗಳಿಂದ ಹೋಗಿ ಪಟ್ಟಣ ಸೇರಿದವರು ಬೆಂಗಳೂರಿನಂತ ಮಹಾನಗರಗಳಲ್ಲಿ ಬದುಕಲು ಪಡಬೇಕಾಗಿರುವ ಕಷ್ಟಗಳ ಬವಣೆಗೆ ಸೋತು ಮತ್ತೆ ತಮ್ಮ ಊರುಗಳಿಗೆ ಬಂದು ಆರಾಮಾಗಿ ಹಸು ಕರು ನೋಡಿಕೊಂಡು ಸಂತೋಷವಾಗಿ ಜೀವನ ಕಳೆಯುತ್ತಿದ್ದಾರೆ.
ಇದಕ್ಕೆ ಸಾಕ್ಷಿಯಾಗಿ ಪ್ರತಿ ಗ್ರಾಮಗಳಲ್ಲಿ ಒಂದೆರಡು ಉದಾಹರಣೆಯಾದರೂ ಸಿಕ್ಕೇ ಸಿಗುತ್ತದೆ. ಡೈರಿ ಫಾರ್ಮಿಂಗ್ ಬಹಳ ಕಷ್ಟದ ಕೆಲಸವಲ್ಲ ಆದರೆ ಆಸಕ್ತಿ ಇದ್ದು ಐಡಿಯಾ ಇದ್ದರೆ ಮತ್ತು ಅಷ್ಟು ಶ್ರದ್ಧೆಯಿಂದ ನೀವು ತೊಡಗಿಕೊಳ್ಳುವುದಾದರೆ ಮಾತ್ರ ಈ ಕ್ಷೇತ್ರಕ್ಕೆ ಬರಬೇಕು ಇಲ್ಲವಾದಲ್ಲಿ ಹಾಕಿದ ಬಂಡವಾಳವು ಇಲ್ಲದಂತೆ ಕೈ ಸುಟ್ಟುಕೊಳ್ಳುವುದು ಗ್ಯಾರಂಟಿ ಇಲ್ಲಿ ಸಮಯ ಮತ್ತು ಹಸುಗಳ ಆರೋಗ್ಯ ಬಹಳ ಮುಖ್ಯವಾದ ವಿಚಾರ ಹಾಗಾಗಿ ನಿರ್ಲಕ್ಷ ತೋರುವಂತಿಲ್ಲ.
ಹೀಗೆ ಬೆಂಗಳೂರಿನಲ್ಲಿ ಕೆಲಸಕ್ಕೆ ಇದ್ದ ವ್ಯಕ್ತಿ ಒಬ್ಬರು ತಮ್ಮ ಕೆಲಸ ಬಿಟ್ಟು ನೆಲಮಂಗಲ ಸಮೀಪ ಹೋಗಿ ಹಸು ಸಾಕಲು ಶುರು ಮಾಡಿದ್ದಾರೆ. ಮೊದಮೊದಲಿಗೆ ಚಿಕ್ಕ ವಯಸ್ಸಿನಿಂದ ಇದೇ ರೀತಿ ಬೆಳೆದಿದ್ದು ಇದನ್ನು ಮುಂದುವರಿಸೋಣ ಎಂದುಕೊಂಡು ಐದಾರು ಹಸು ಸಾಕಲು ಆರಂಭಿಸಿದ ಇವರು ಇದನ್ನು ದೊಡ್ಡ ಮಟ್ಟಕ್ಕೆ ತೆಗೆದುಕೊಂಡು ಹೋಗಿ ಇಂದು ನೂರಾರು ಹಸುಗಳು ಇರುವ ಫಾರ್ಮ್ ಮಾಡಿದ್ದಾರೆ.
ಆ ಮೂಲಕ ಈ ಭಾಗದ ಹತ್ತಾರು ಜನಕ್ಕೆ ಉದ್ಯೋಗವಕಾಶವನ್ನು ಕೂಡ ಮಾಡಿಕೊಟ್ಟಿದ್ದಾರೆ. ಇಲ್ಲಿ ಜನರು ಬೆಳಿಗ್ಗೆ 4ರಿಂದ 10ರ ವರೆಗೆ ಸಂಜೆ 4ರಿಂದ 8ರ ವರೆಗೆ ಮಾತ್ರ ಕೆಲಸ ಮಾಡುತ್ತಾರೆ. ಬೆಳಗ್ಗೆ ಎದ್ದ ಕೂಡಲೇ ಹಸುಗಳಿಂದ ಹಾಲು ಹಿಂಡುವುದೇ ಮೊದಲನೇ ಕೆಲಸ.
ಇದಾದ ಬಳಿಕ ಹಸುಗಳನ್ನು ತೊಳೆಯುವುದು ಸ್ವಲ್ಪ ಹೊತ್ತು ಬಿಸಿಲಿನಲ್ಲಿ ಓಡಾಡಿಸುವುದು ನಂತರ ತಂದು ಫಾರ್ಮ್ ಒಳಗೆ ಬಿಡುವುದು, ಅವುಗಳಿಗೆ ಹುಲ್ಲು ಹಾಕುವುದು ನೀರು ಕುಡಿಸುವುದು, ಈ ರೀತಿ ಕೆಲಸಗಳನ್ನು ಮಾಡುತ್ತಾರೆ ಮತ್ತು ಹಸು ಆಚೆ ಇದ್ದ ಸಮಯದಲ್ಲಿ ಹಸು ಉಳಿದುಕೊಳ್ಳುವ ಪ್ರದೇಶವನ್ನು ತೊಳೆದು ಕ್ಲೀನ್ ಮಾಡಿಕೊಳ್ಳುತ್ತಾರೆ.
ಮೇವು ಕಟಾವು ಮಾಡಲು ಯಂತ್ರಗಳಿವೆ ತಮ್ಮ ಫಾರ್ಮ್ ಹಸುಗಳಿಗೆ ಎರಡು ಟನ್ ಗಳಷ್ಟು ಹಸಿ ಹುಲ್ಲು ಬೇಕಾಗುತ್ತದೆ ಎನ್ನುತ್ತಾರೆ ಇವರು ಮತ್ತು ಇವರು MILKGEN 5000 ಈ ಫೀಡ್ ಅನ್ನೇ ಕೊಡುತ್ತಾರಂತೆ. ಇವರು ಹೇಳುವ ಪ್ರಕಾರ ಇಂದು ಅವರ ಫಾರ್ಮ್ ನಲ್ಲಿ 20 ಹಸುಗಳು ಹಾಲು ಕೊಡುತ್ತಿವೆಯಂತೆ ಅದರಲ್ಲಿ 450 ಲೀಟರ್ ಹಾಲು ಆಗುತ್ತದೆ.
ಈ ಹಾಲಿನ ದುಡ್ಡು ಫಾರ್ಮ್ ಮೇಂಟನೆನ್ಸ್ ಗೆ ಆಗುತ್ತದೆ. ಆದರೆ ಪ್ರತಿ ವರ್ಷ ಅಕ್ಟೋಬರ್ ನಂಬರ್ ಡಿಸೆಂಬರ್ ಸಮಯದಲ್ಲಿ 25 ಹಸುಗಳನ್ನು ಮಾರಾಟ ಮಾಡುತ್ತೇವೆ. ನಮ್ಮಲ್ಲಿ ನಾವೇ ಸಾಕುವ ಹಸುಗಳು ಎರಡು ಕರು ಹಾಕಿದ ಮೇಲೆ ಅವುಗಳನ್ನು ಮಾರುತ್ತೇವೆ ಇದರಿಂದ ಕಡಿಮೆ ಅಂದರೂ ವರ್ಷಕ್ಕೆ 25 ಲಕ್ಷ ಆದಾಯ ಬರುತ್ತದೆ.
ಕೊರೋನಾ ಮುಂಚೆ ಹಾಲಿನ ಉತ್ಪನ್ನಗಳನ್ನು ಮಾಡುತ್ತಿದ್ದೆವು ಈಗ ಎಲ್ಲದಕ್ಕೂ ಸಮಯ ಸಾಲುವುದಿಲ್ಲ ಮುಂದೆ ಐಡಿಯಾ ಇದೆ. ಹಸು ನಂಬಿ ಈ ಕ್ಷೇತ್ರಕ್ಕೆ ಬಂದರೆ ಖಂಡಿತ ಸಕ್ಸಸ್ ಆಗೋದರಲ್ಲಿ ಅನುಮಾನ ಇಲ್ಲ ಎನ್ನುತ್ತಾರೆ ಇವರು. ಹಸುಗಳಿಗೆ ಕೊಡುವ ಮೇವು, ಫೀಡ್ಸ್ ಮತ್ತು ಸಾಕುವ ವಿಧಾನ ಇತ್ಯಾದಿಗಳ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಈ ವಿಡಿಯೋವನ್ನು ಪೂರ್ತಿಯಾಗಿ ನೋಡಿ.