ನವೋದಯ ವಿದ್ಯಾಲಯ ಸಮಿತಿಯು (NVS Recruitment – 2024) ದೇಶದಾದ್ಯಂತ ಹಲವು ಪ್ರಮುಖ ಸ್ಥಳಗಳಲ್ಲಿ ಶಿಕ್ಷಣ ಸಂಸ್ಥೆಗಳನ್ನು ಹೊಂದಿದೆ. ಇವು ವಸತಿ ಶಿಕ್ಷಣ ಶಾಲೆಗಳಾಗಿದ್ದು ಪ್ರತಿ ವರ್ಷ ಅಗತ್ಯ ಇರುವ ವಿವಿಧ ಭೋಧಕ ಹಾಗೂ ಬೋಧಕೇತರ ಹುದ್ದೆಗಳನ್ನು ಭರ್ತಿ ಮಾಡಲು ನೇಮಕಾತಿ ನಡೆಸುತ್ತದೆ.
ಅಂತೆಯೇ ಈಗ 2024ನೇ ಸಾಲಿನ ಎಂಪ್ಲಾಯ್‌ಮೆಂಟ್ ನೋಟಿಫಿಕೇಶನ್ ನ್ನು ಕೂಡ ಬಿಡುಗಡೆ ಮಾಡಿದೆ. SSLC ಇಂದ ಪದವಿ, ಸ್ನಾತಕೋತ್ತರ ಪದವಿ ಪಡೆದ ಎಲ್ಲಾ ನಿರುದ್ಯೋಗಿಗಳು ಅಥವಾ ಸರ್ಕಾರಿ ಹುದ್ದೆ ಆಕಾಂಕ್ಷಿಗಳು ಈ ಹುದ್ದೆಗಳನ್ನು ಪಡೆದುಕೊಳ್ಳಲು ಪ್ರಯತ್ನಿಸಬಹುದು.
ಅರ್ಜಿ ಸಲ್ಲಿಸುವವರಿಗೆ ಅನುಕೂಲತೆ ಮಾಡಿಕೊಡುವ ಸಲುವಾಗಿ ಈ ಲೇಖನದಲ್ಲಿ ನೋಟಿಫಿಕೇಶನ್ ನಲ್ಲಿರುವ ಪ್ರಮುಖ ಸಂಗತಿಗಳ ಬಗ್ಗೆ ವಿವರಿಸುತ್ತಿದ್ದೇವೆ. ತಪ್ಪದೇ ಈ ಉಪಯುಕ್ತ ಮಾಹಿತಿಯನ್ನು ನಿಮ್ಮ ಸ್ನೇಹಿತರ ಜೊತೆಗೂ ಹಂಚಿಕೊಳ್ಳಿ.
ಈ ಸುದ್ದಿ ಓದಿ:- ರಾಗಿ ಬೆಳೆದ ರೈತರಿಗೆ ಗುಡ್ ನ್ಯೂಸ್ ರಾಗಿ ಕ್ವಿಂಟಾಲ್ ಗೆ 3486.ರೂ ಬೆಂಬಲ ಬೆಲೆ ನಿಗದಿ.!
ಉದ್ಯೋಗ ಸಂಸ್ಥೆ:- ನವೋದಯ ವಿದ್ಯಾಲಯ ಸಮಿತಿ (NVS)
ಹುದ್ದೆ ಹೆಸರು:- ವಿವಿಧ ಭೋಧಕೇತರ ಹುದ್ದೆಗಳು
ಒಟ್ಟು ಹುದ್ದೆಗಳ ಸಂಖ್ಯೆ:- 1377 ಹುದ್ದೆಗಳು
ಹುದ್ದೆಗಳ ವಿವರ:-
* ಸ್ಟಾಫ್ ನರ್ಸ್ – 121
* ಅಸಿಸ್ಟಂಟ್ ಸೆಕ್ಷನ್ ಆಫೀಸರ್ (ASO) – 05
* ಆಡಿಟ್ ಅಸಿಸ್ಟಂಟ್ – 12
* ಜೂನಿಯರ್ ಟ್ರಾನ್ಸ್‌ಲೇಷನ್ ಆಫೀಸರ್ – 4
* ಲೀಗಲ್ ಅಸಿಸ್ಟಂಟ್ – 1
* ಸ್ಟೆನೋಗ್ರಾಫರ್ – 23
* ಕಂಪ್ಯೂಟರ್ ಆಪರೇಟರ್ – 2
* ಕ್ಯಾಟರಿಂಗ್ ಸೂಪರ್‌ವೈಸರ್ – 78
* ಜೂನಿಯರ್ ಸೆಕ್ರೇಟರಿಯಟ್ ಅಸಿಸ್ಟಂಟ್ (HQ / RO Cadre) – 21
* ಜೂನಿಯರ್ ಸೆಕ್ರೇಟರಿಯಟ್ ಅಸಿಸ್ಟಂಟ್ (JSA) – 360
* ಇಲೆಕ್ಟ್ರೀಷಿಯನ್ ಕಮ್ ಪ್ಲಂಬರ್ – 128
* ಲ್ಯಾಬ್ ಅಟೆಂಡಂಟ್ – 161
* ಮೆಸ್ ಹೆಲ್ಪರ್ – 442
* ಮಲ್ಟಿ ಟಾಸ್ಕಿಂಗ್ ಸ್ಟಾಫ್ (MTS) – 19
ಉದ್ಯೋಗ ಸ್ಥಳ:- ದೇಶದಾದ್ಯಂತ ಇರುವ 650 ಕ್ಕೂ ಹೆಚ್ಚು ನವೋದಯ ವಿದ್ಯಾಲಯ ಸಮಿತಿಯ ರೀಜನಲ್ ಆಫೀಸ್ ಗಳಲ್ಲಿ.
ವೇತನ ಶ್ರೇಣಿ:- ಆಯಾ ಹುದ್ದೆಗಳಿಗೆ ಅನುಸಾರವಾಗಿ ಉತ್ತಮವಾದ ವೇತನ ಸಿಗುತ್ತದೆ
ಈ ಸುದ್ದಿ ಓದಿ:- ಗೃಹಲಕ್ಷ್ಮಿ ಯೋಜನೆ 7ನೇ ಕಂತಿನ ಹಣ ಸಿಗದೇ ಇದ್ದವರು ಈ ರೀತಿ ಮಾಡಿ.! ಹಣ ಜಮೆ ಆಗುತ್ತೆ.!
ಶೈಕ್ಷಣಿಕ ವಿದ್ಯಾರ್ಹತೆ:-
* ಸ್ಟಾಫ್ ನರ್ಸ್ – B.Sc ನರ್ಸಿಂಗ್.
* ಅಸಿಸ್ಟಂಟ್ ಸೆಕ್ಷನ್ ಆಫೀಸರ್ (ASO) – ಯಾವುದೇ ಪದವಿ ಉತ್ತೀರ್ಣರಾಗಿರಬೇಕು
* ಆಡಿಟ್ ಅಸಿಸ್ಟಂಟ್ – B.Com
* ಜೂನಿಯರ್ ಟ್ರಾನ್ಸ್‌ಲೇಷನ್ ಆಫೀಸರ್ : ಸಂಬಂಧಿತ ವಿಷಯದಲ್ಲಿ PG
* ಲೀಗಲ್ ಅಸಿಸ್ಟಂಟ್ : ಕಾನೂನು ಪದವಿ
* ಸ್ಟೆನೋಗ್ರಾಫರ್ : ದ್ವಿತೀಯ PUC ಜತೆಗೆ ಟೈಪಿಂಗ್ ಸ್ಕಿಲ್ ಇರಬೇಕು.
* ಕಂಪ್ಯೂಟರ್ ಆಪರೇಟರ್ – CS ಅಥವಾ IT ವಿಷಯಗಳಲ್ಲಿ B.E / B.Tec / BCA / B.Sc
* ಕ್ಯಾಟರಿಂಗ್ ಸೂಪರ್‌ವೈಸರ್ – ಹೋಟೆಲ್ ಮ್ಯಾನೇಜ್ಮೆಂಟ್ ವಿಷಯದಲ್ಲಿ ಪದವಿ.
* ಜೂನಿಯರ್ ಸೆಕ್ರೇಟರಿಯಟ್ ಅಸಿಸ್ಟಂಟ್ (HQ / RO Cadre) PUC ಜತೆಗೆ ಟೈಪಿಂಗ್ ಸ್ಕಿಲ್ ಇರಬೇಕು.
* ಜೂನಿಯರ್ ಸೆಕ್ರೇಟರಿಯಟ್ ಅಸಿಸ್ಟಂಟ್ (JSA) – PUC ಜತೆಗೆ ಟೈಪಿಂಗ್ ಸ್ಕಿಲ್ ಇರಬೇಕು.
* ಇಲೆಕ್ಟ್ರೀಷಿಯನ್ ಕಮ್ ಪ್ಲಂಬರ್ – ಇಲೆಕ್ಟ್ರೀಷಿಯನ್ ಅಂಡ್ ವೈರಿಂಗ್ ವಿಭಾಗದಲ್ಲಿ ITI
* ಲ್ಯಾಬ್ ಅಟೆಂಡಂಟ್ – SSLC / PUC ಜತೆಗೆ ಲ್ಯಾಬೋರೇಟರಿ ಟೆಕ್ನಿಕಲ್ ಸ್ಕಿಲ್.
* ಮೆಸ್ ಹೆಲ್ಪರ್ – SSLC
* ಮಲ್ಟಿ ಟಾಸ್ಕಿಂಗ್ ಸ್ಟಾಫ್ (MTS) – SSLC.
ಈ ಸುದ್ದಿ ಓದಿ:- ಮುಂದಿನ 5 ವರ್ಷ ಉಚಿತ ರೇಷನ್.! ಕೇಂದ್ರ ಸರ್ಕಾರದಿಂದ ಬಂಪರ್ ಕೊಡುಗೆ.!
ಅರ್ಜಿ ಶುಲ್ಕ:-
* ಸ್ಟಾಫ್ ನರ್ಸ್ ಹುದ್ದೆಗಳಿಗೆ ಸಾಮಾನ್ಯ ವರ್ಗಕ್ಕೆ ಸೇರಿದ ಅಭ್ಯರ್ಥಿಗಳಿಗೆ ರೂ.1500, SC / ST / PWD ಅಭ್ಯರ್ಥಿಗಳಿಗೆ ರೂ.500.
* ಇತರೆ ಹುದ್ದೆಗಳಿಗೆ ಅರ್ಜಿ ಹಾಕುವ ಸಾಮಾನ್ಯ ಮತ್ತು OBC ವರ್ಗದ ಅಭ್ಯರ್ಥಿಗಳಿಗೆ ರೂ.1000, ಇನ್ನುಳಿದ ಅಭ್ಯರ್ಥಿಗಳಿಗೆ ರೂ.500.
ಅರ್ಜಿ ಸಲ್ಲಿಸುವ ವಿಧಾನ:-
* https://navodaya.gov.in/nvs/en/Home1 ವೆಬ್ಸೈಟ್ ಗೆ ಭೇಟಿ ಕೊಟ್ಟು ಲಿಂಕ್ ಕ್ಲಿಕ್ ಮಾಡಿ ಪೂರಕ ದಾಖಲೆಗಳನ್ನು ಸಲ್ಲಿಸಿ ಅರ್ಜಿ ಸಲ್ಲಿಸಬೇಕು.
* ಶುಲ್ಕವನ್ನು ಪಾವತಿ ಮಾಡಿ ತಪ್ಪದೆ ಇ-ರಸೀದಿ ಪಡೆದುಕೊಳ್ಳಬೇಕು, ಕೊನೆಯಲ್ಲಿ ಸಬ್ಮಿಟ್ ಮಾಡಿದ ಮೇಲೆ ಅರ್ಜಿ ಸ್ವೀಕೃತಿ ಸಂಖ್ಯೆ ಕೂಡ ಪಡೆದುಕೊಳ್ಳಬೇಕು.
* ಹೆಚ್ಚಿನ ಮಾಹಿತಿಗಾಗಿ ವೆಬ್ ಸೈಟ್ ವಿಳಾಸಕ್ಕೆ ಭೇಟಿ ನೀಡಿ.