ಲೋಕಸಭಾ ಚುನಾವಣೆ – 2024 (Lokasabha Election – 2024) ಹತ್ತಿರದವಾಗಿ ಚುನಾವಣೆ ದಿನಾಂಕ ಘೋಷಣೆಯಾಗುತ್ತಿದ್ದಂತೆ ರಾಜಕೀಯ ಪಕ್ಷಗಳಿಂದ ಪ್ರಣಾಳಿಕೆಯಿಂದ ಹೊಚ್ಚ ಹೊಸ ಯೋಜನೆಗಳ ಘೋಷಣೆಯಾಗುತ್ತಿದೆ. ಏಪ್ರಿಲ್ 19, 2024 ರಿಂದ ಭಾರತದಲ್ಲಿ ಏಳು ಹಂತಗಳಲ್ಲಿ ಚುನಾವಣೆ ನಡೆಯುತ್ತಿದೆ. ಪ್ರಯುಕ್ತವಾಗಿ ಕಳೆದ ವಾರವಷ್ಟೇ ಕಾಂಗ್ರೆಸ್ ಸರ್ಕಾರವು ಐದು ಮಹಿಳಾ ಖಾತರಿ ನ್ಯಾಯ ಯೋಜನೆಯನ್ನು ಘೋಷಿಸಿ ದೇಶದ ಮಹಿಳೆಯರ ಗಮನ ಸೆಳೆದಿದೆ.
ಇತ್ತ BJP ಯು ಕೂಡ ಇದಕ್ಕೆ ರಣತಂತ್ರ ಎಳೆಯಲು ಸಿದ್ಧವಾಗಿದ್ದು ಮುಂದಿನ ಐದು ವರ್ಷಗಳಿಗೆ ಅನ್ವಯವಾಗುವಂತೆ ರೇಷನ್ ಕಾರ್ಡ್ ಕುರಿತಾಗಿ ಒಂದು ದೊಡ್ಡ ಗಿಫ್ಟ್ ನ್ನು ದೇಶದ ಜನತೆಗೆ ನೀಡಿದೆ. ಈಗಾಗಲೇ BJP ನೇತೃತ್ವದಲ್ಲಿ ಎರಡು ಬಾರಿ ಪ್ರಧಾನಮಂತ್ರಿ ನರೇಂದ್ರ ಮೋದಿ ಯವರು (PM Narendra Modi) ದೇಶದ ಪ್ರಧಾನಿಯಾಗಿ ಅಧಿಕಾರದ ಚುಕ್ಕಾಣಿ ಹಿಡಿದು ಕಳೆದ ಹತ್ತು ವರ್ಷಗಳಿಂದ ಅನೇಕ ಜನಪ್ರಿಯ ಕಲ್ಯಾಣ ಯೋಜನೆಗಳನ್ನು ರಾಜ್ಯದ ಜಾರಿಗೆ ತಂದು ಹೆಸರು ವಾಸಿಯಾಗಿದ್ದಾರೆ.
ಈ ಸುದ್ದಿ ಓದಿ:- ಉಚಿತ ವಸತಿ ಶಾಲೆ ಪ್ರವೇಶಕ್ಕೆ ಅರ್ಜಿ ಆಹ್ವಾನ.! ಆಸಕ್ತರು ಅರ್ಜಿ ಸಲ್ಲಿಸಿ.!
ಹೆಣ್ಣು ಮಕ್ಕಳಿಗಾಗಿ, ಮಹಿಳೆಯರಿಗಾಗಿ, ರೈತರಿಗಾಗಿ, ವಿದ್ಯಾರ್ಥಿಗಳಿಗಾಗಿ, ಕಾರ್ಮಿಕರಿಗಾಗಿ ಹೀಗೆ ಪ್ರತಿಯೊಂದು ವರ್ಗದ ಶ್ರೇಯೋಭಿವೃದ್ಧಿಗಾಗಿ ಅನೇಕ ಯೋಜನೆಗಳನ್ನು ಜಾರಿಗೆ ತಂದಿದ್ದಾರೆ. ಈಗ ಚುನಾವಣೆ ವಿಶೇಷ ಎದುರು ನೋಡುತ್ತಿದ್ದವರಿಗೆ BJP ಸರ್ಕಾರದಿಂದ ಮತ್ತೊಂದು ಕೊಡುಗೆ ದೊರೆಯುತ್ತಿದೆ ಎನ್ನಬಹುದು.
ಇದನ್ನು ನೇರವಾಗಿ ಚುನಾವಣೆ ಪ್ರಣಾಳಿಕೆ ಎನ್ನಲಾಗದಿದ್ದರೂ ಚುನಾವಣೆ ಸನ್ನಿತವಾಗಿ ದಿನಾಂಕ ಘೋಷಣೆಯಾದ ಮೇಲೆ ಈ ಯೋಜನೆ ವಿಚಾರ ಪ್ರಸ್ತಾಪವಾಗಿರುವುದರಿಂದ ಇದನ್ನು ಚುನಾವಣೆ ಉದ್ದೇಶದಿಂದಲೇ ಜಾರಿಗೆ ತಂದಿದೆ ಎಂದು ಭಾವಿಸಲಾಗುತ್ತಿದೆ.
ಅಷ್ಟಕ್ಕೂ ಯಾವ ಯೋಜನೆಯನ್ನು ಸರ್ಕಾರ ಘೋಷಿಸಿದೆ ಎನ್ನುವುದರ ಬಗ್ಗೆ ಹೇಳುವುದಾದರೆ ದೇಶದಲ್ಲಿ ಈಗಲೂ ಜಾರಿಯಲ್ಲಿರುವ ಪ್ರಧಾನಮಂತ್ರಿ ಗರೀಬ್ ಕಲ್ಯಾಣ ಅನ್ನ ಯೋಜನೆಯನ್ನು (PMGKAY) ಇನ್ನು ಐದು ವರ್ಷಗಳವರೆಗೆ ವಿಸ್ತರಿಸುವುದಾಗಿ ಕೇಂದ್ರ ಸರ್ಕಾರ ಘೋಷಣೆ ಮಾಡಿದೆ.
ಈ ಸುದ್ದಿ ಓದಿ:-ಪೋಸ್ಟ್ ಆಫೀಸ್ ನಾ ಈ ಯೋಜನೆಯಲ್ಲಿ ಕೇವಲ 10,000 ಡಿಪಾಸಿಟ್ ಇಟ್ಟರೆ ಸಾಕು 7 ಲಕ್ಷ ಸಿಗಲಿದೆ.!
ಉಚಿತ ಆಹಾರ ಧಾನ್ಯ ಯೋಜನೆ ಅಥವಾ ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆ ಎಂದು ಕರೆಯಲಾಗುವ ಈ ಯೋಜನೆಯನ್ನು ಕೇಂದ್ರ ಸರ್ಕಾರವು ಮಾರ್ಚ್ 2020 ರಲ್ಲಿ ಕೋವಿಡ್ -19 (COVID – 19) ಕಾರಣದಿಂದಾಗಿ ಲಾಕ್ ಡೌನ್ ಸಮಯದಲ್ಲಿ ಮೊದಲ ಬಾರಿಗೆ ಪರಿಚಯಿಸಿತ್ತು.
ಈ ಯೋಜನೆ ಮೂಲಕ ಕೇಂದ್ರ ಸರ್ಕಾರದಿಂದ ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳಿಗೆ ತಿಂಗಳಿಗೆ 5Kg ಉಚಿತ ಆಹಾರ ಧಾನ್ಯಗಳನ್ನು ಒದಗಿಸಲಾಗುತ್ತಿದೆ. ಕರ್ನಾಟಕದಲ್ಲಿ ಅನ್ನ ಭಾಗ್ಯ ಯೋಜನೆ ಹೆಸರಿನಲ್ಲಿ ಈ ಯೋಜನೆ ಅಡಿ ಪಡಿತರ ಲಭ್ಯವಾಗುತ್ತಿತ್ತು ಕರ್ನಾಟಕ ಸೇರಿದಂತೆ ದೇಶದ ಇತರೆ ಭಾಗಗಳನ್ನು ಕೂಡ ಒಟ್ಟಾರೆಯಾಗಿ 81 ಕೋಟಿ ಜನರು ಈ ಯೋಜನೆಯ ಪ್ರಯೋಜನ ಪಡೆಯುತ್ತಿದ್ದಾರೆ.
PMGKAY ಉಚಿತ ಆಹಾರ ಧಾನ್ಯ, ಅಕ್ಕಿ ಅಥವಾ ಗೋಧಿಯನ್ನು NSFA ಫಲಾನುಭವಿಗಳಿಗೆ ಒದಗಿಸುತ್ತಿದೆ. ಒನ್ ನೇಷನ್ ಒನ್ ರೇಷನ್ ಕಾರ್ಡ್ (ONORC) ಯೋಜನೆಯ ಮೂಲಕ ಪಡೆಯಬಹುದಾದ ಈ ಯೋಜನೆ ಪ್ರಯೋಜನವನ್ನು ಪಡೆಯಬಹುದಾಗಿತ್ತು ಲಾಕ್ಡೌನ್ ತೆರವಿನ ನಂತರವೂ ಈ ಯೋಜನೆ ಪ್ರಯೋಜನವನ್ನು ವಿಸ್ತರಿಸಲಾಗಿತ್ತು.
ಈ ಸುದ್ದಿ ಓದಿ:-ಸೈಟ್, ಆಸ್ತಿ ಪತ್ರ, ಜಮೀನಿನ ಎಲ್ಲಾ ದಾಖಲೆಗಳನ್ನು ಕೇವಲ ಒಂದೇ ಕ್ಲಿಕ್ ನಲ್ಲಿ ಮೊಬೈಲ್ ಮೂಲಕವೇ ಡೌನ್ಲೋಡ್ ಮಾಡುವ ಸುಲಭ ವಿಧಾನ ಇಲ್ಲಿದೆ ನೋಡಿ.!
ನವೆಂಬರ್ 2023 ರಂದು ಕೇಂದ್ರ ಸಚಿವ ಸಂಪುಟವು ಮುಂದಿನ ಐದು ವರ್ಷಗಳಿಗೆ ಅಂದರೆ 2028 ರ ವರೆಗೂ ಕೂಡ ಯೋಜನೆ ಮುಂದುವರಿಸಿಕೊಂಡು ಹೋಗಲು ಒಪ್ಪಿಗೆ ನೀಡಿದೆ. 11.8 ಲಕ್ಷ ಕೋಟಿ ಬಜೆಟ್ ನಲ್ಲಿ ಮುಂದಿನ ಐದು ವರ್ಷಗಳ ವರೆಗೆ ಈ ಯೋಜನೆ ಪ್ರಯೋಜನವನ್ನು ದೇಶದ ಜನತೆ ಪಡೆಯಲಿದ್ದಾರೆ ಈಗ ಚುನಾವಣೆ ಸಮಯದಲ್ಲಿ ಈ ಹಿಂದೆಯೇ ಘೋಷಣೆಯಾಗಿದ್ದ ಈ ವಿಚಾರವು ಮತ್ತೊಮ್ಮೆ ಮುನ್ನೆಲೆಗೆ ಬರುತ್ತಿದೆ. ಈ ಯೋಜನೆಯು ಪಕ್ಷದ ಗೆಲುವಿಗೆ ಎಷ್ಟು ಕಾರಣವಾಗಲಿದೆ ಕಾದು ನೋಡೋಣ.