ಗೃಹಜ್ಯೋತಿ ಯೋಜನೆಗೆ ಅರ್ಜಿ ಹಾಕಿದ್ದವರು ಈ ತಪ್ಪು ಮಾಡಿದ್ರೆ ಅರ್ಜಿ ರಿಜೆಕ್ಟ್ ಆಗುತ್ತದೆ, ಉಚಿತ ವಿದ್ಯುತ್ ಸಿಗಲ್ಲ.!

 

WhatsApp Group Join Now
Telegram Group Join Now

ಗೃಹಜ್ಯೋತಿ ಯೋಜನೆಯು (Gruhajyothi Scheme) ಕಾಂಗ್ರೆಸ್ ಪಕ್ಷವು ಘೋಷಿಸಿದ್ದ ಮೊದಲೇ ಗ್ಯಾರಂಟಿ ಯೋಜನೆಯಾಗಿತ್ತು. ಕರ್ನಾಟಕದಲ್ಲಿ ನೂತನ ಸರಕಾರ ಸ್ಥಾಪನೆ ಆದಮೇಲೆ ಜೂನ್ ತಿಂಗಳಿನಿಂದ ಗೃಹಜ್ಯೋತಿ ಯೋಜನೆಗೆ ಅರ್ಜಿ ಸ್ವೀಕಾರ ಮಾಡಲಾಗುತ್ತಿದೆ. ಸೇವಾ ಸಿಂಧು ಪೋರ್ಟಲ್ ಬಳಸಿ ತಮ್ಮ ಮನೆಯ ವಿದ್ಯುತ್ ಖಾತೆ ಸಂಖ್ಯೆ (Acc.ID) ಹಾಗೂ ಆಧಾರ್ ಸಂಖ್ಯೆಯನ್ನು (aadhar number) ಕೊಟ್ಟು ಅನೇಕ ಜನರು ಯೋಜನೆಗೆ ನೋಂದಾಯಿಸಿಕೊಂಡಿದ್ದಾರೆ.

ಇಂಧನ ಇಲಾಖೆಯಿಂದ ಸಿಕ್ಕಿರುವ ಮಾಹಿತಿ ಪ್ರಕಾರ 1.43 ಕೋಟಿ ಗ್ರಾಹಕರು ಈಗಾಗಲೇ ಗೃಹಜ್ಯೋತಿ ಯೋಜನೆಗೆ ನೋಂದಾಯಿಸಿಕೊಂಡಿದ್ದಾರೆ. ಕರ್ನಾಟಕವನ್ನು ಕತ್ತಲೆ ಮುಕ್ತ ಮಾಡುವ ಉದ್ದೇಶ ಹೊಂದಿರುವ ಈ ಯೋಜನೆಯ ಮೂಲಕ ಕರ್ನಾಟಕದ ಪ್ರತಿ ಕುಟುಂಬಗಳಿಗೂ ಗೃಹ ಬಳಕೆಯ ವಿದ್ಯುತ್ ಅನ್ನು ಗರಿಷ್ಠ 200 ಯೂನಿಟ್ ವರೆಗೆ ಉಚಿತವಾಗಿ ನೀಡಲು ಸರ್ಕಾರ ನಿರ್ಧರಿಸಿದೆ.

ನಿಮ್ಮ APL ಕಾರ್ಡ್ ಅನ್ನು BPL ಕಾರ್ಡ್ ಆಗಿ ವರ್ಗಾವಣೆ ಮಾಡುವ ಸುಲಭ ವಿಧಾನ ಇಲ್ಲಿದೆ ನೋಡಿ.

ಈ ಯೋಜನೆಗೆ ಅರ್ಜಿ ಸಲ್ಲಿಸಿ ಸರ್ಕಾರ ವಿಧಿಸಿರುವ ಕಂಡೀಷನ್ ಪ್ರಕಾರ ವಿದ್ಯುತ್ ಬಳಕೆ ಮಾಡಿದ ಕುಟುಂಬಗಳು ಆಗಸ್ಟ್ 1ನೇ ತಾರೀಖಿನಿಂದ ಶೂನ್ಯ ವಿದ್ಯುತ್ ಬಿಲ್ (Zero current bill) ಪಡೆಯಲಿದ್ದಾರೆ. ಆಗಸ್ಟ್ 05, 2023 ರ ಬೆಳಗ್ಗೆ 11ಗಂಟೆಗೆ ಮುಖ್ಯಮಂತ್ರಿಗಳಾದ ಶ್ರೀ ಸಿದ್ದರಾಮಯ್ಯ (C.M Siddaramaih) ಮತ್ತು ಇಂಧನ ಸಚಿವ ಕೆ.ಜೆ ಜಾರ್ಜ್ (K.J George) ಅವರು ಕಲಬುರಗಿಯ N.V ಮೈದಾನದಲ್ಲಿ ಗೃಹಜ್ಯೋತಿ ಯೋಜನೆಗೆ ಚಾಲನೆ (Gruhajyothi Launch) ನೀಡಲಿದ್ದಾರೆ.

ಈ ಕಾರ್ಯಕ್ರಮಕ್ಕೆ ರಾಜ್ಯಸಭೆಯ ವಿರೋಧ ಪಕ್ಷದ ನಾಯಕರಾದ ಮಲ್ಲಿಕಾರ್ಜುನ್ ಖರ್ಗೆ (Mallikarjun Kharge) ಅವರು ಅತಿಥಿಗಳಾಗಿ (Chief Guest) ಭಾಗವಹಿಸಲಿದ್ದಾರೆ. ಇದಕ್ಕೆ ಸಂಬಂಧಪಟ್ಟ ಸುದ್ದಿಗೋಷ್ಠಿಯಲ್ಲಿ ಭಾಗವಹಿಸಿದ್ದ ಇಂಧನ ಸಚಿವರಾದ ಕೆ.ಜೆ ಜಾರ್ಜ್ ಅವರು ಗೃಹಜ್ಯೋತಿ ಯೋಜನೆಯ ಲಾಂಚ್ ದಿನಾಂಕದ ಜೊತೆಗೆ ಇನ್ನಷ್ಟು ವಿಷಯಗಳನ್ನು ಕೂಡ ಹಂಚಿಕೊಂಡಿದ್ದಾರೆ.

ಫೋನ್ ಪೇ, ಗೂಗಲ್ ಪೇ ಮೂಲಕ ಹಣ ಕಳುಹಿಸುವವರಿಗೆ RBI ನಿಂದ ಮಹತ್ವದ ಸೂಚನೆ.! ಈ ತಪ್ಪು ಮಾಡದಂತೆ ಎಚ್ಚರ

ಯೋಜನೆಗೆ ಅರ್ಜಿ ಸಲ್ಲಿಸಿದರು ಕೂಡ ಯಾರು ಈ ಉಚಿತ ವಿದ್ಯುತ್ ಯೋಜನೆ ವ್ಯಾಪ್ತಿಗೆ ಬರುವುದಿಲ್ಲ ಯಾವ ಅರ್ಜಿಗಳು ರಿಜೆಕ್ಟ್ ಆಗುತ್ತದೆ ಎನ್ನುವುದನ್ನು ಕೂಡ ತಿಳಿಸಿದ್ದಾರೆ. ಗರಿಷ್ಠ 200 ಯೂನಿಟ್ ವರೆಗೆ ಮಾತ್ರ ಉಚಿತ ವಿದ್ಯುತ್ ಸೌಲಭ್ಯ ಇರುವುದರಿಂದ ಯಾವ ಕುಟುಂಬಗಳು 200 ಯೂನಿಟ್ ಗಿಂತ ಹೆಚ್ಚು ವಿದ್ಯುತ್ ಬಳಕೆ ಮಾಡುತ್ತಾರೆ ಅವರಿಗೆ ಈ ಶೂನ್ಯ ವಿದ್ಯುತ್ ಬಿಲ್ ಬದಲಿಗೆ ಪೂರ್ತಿ ವಿದ್ಯುತ್ ಬಿಲ್ ಸಿಗಲಿದೆ ಎನ್ನುವುದನ್ನು ಇಂಧನ ಸಚಿವರು ತಿಳಿಸಿದ್ದಾರೆ.

ಹಾಗೆಯೇ ಆಗಸ್ಟ್ ತಿಂಗಳಿನಲ್ಲಿ ಈ ಶೂನ್ಯ ವಿದ್ಯುತ್ ಬಿಲ್ ಪಡೆಯಲು ಫಲಾನುಭವಿಗಳು ಜುಲೈ 25ರ ಒಳಗೆ ಗೃಹಜ್ಯೋತಿ ಯೋಜನೆಗೆ ಅರ್ಜಿ ಸಲ್ಲಿಸಿರಬೇಕು. ಜುಲೈ 25ರ ನಂತರ ಅರ್ಜಿ ಸಲ್ಲಿಸಿದವರು ಸೆಪ್ಟೆಂಬರ್ ತಿಂಗಳಿಂದ ಈ ಉಚಿತ ವಿದ್ಯುತ್ ಸೌಲಭ್ಯ ಪಡೆಯಲಿದ್ದಾರೆ ಎನ್ನುವುದನ್ನು ತಿಳಿಸಿದ್ದಾರೆ. ವೀಡಿಯಾ ಹಾಗೂ ಸೋಶಿಯಲ್ ಮೀಡಿಯಾದಲ್ಲಿ ಈಗಾಗಲೇ ಶೂನ್ಯ ವಿದ್ಯುತ್ ಬಿಲ್ ಮಾದರಿ ಹೇಗಿರಲಿದೆ ಎನ್ನುವ ಚಿತ್ರ ಕೂಡ ವೈರಲ್ ಆಗುತ್ತಿದೆ.

ಆಸ್ತಿ ಖರೀದಿಗೆ ಮಿತಿ ವಿಧಿಸಿದ ಸರ್ಕಾರ. ಒಬ್ಬ ವ್ಯಕ್ತಿ ಎಷ್ಟು ಜಮೀನು ಖರೀದಿಸಬಹುದು ಗೊತ್ತಾ.?

ಆ ಪ್ರಕಾರ ಹೇಳುವುದಾದರೆ ಈ ಹಿಂದೆ ಸಿಗುತ್ತಿದ್ದ ವಿದ್ಯುತ್ ಬಿಲ್ ಮಾದರಿಯಲ್ಲಿಯೇ ಆದರೆ ಕೊಂಚ ಮಾರ್ಪಾಟಿನೊಂದಿಗೆ ಶೂನ್ಯ ವಿದ್ಯುತ್ ಬಿಲ್ ಇರಲಿದೆ. ESCOM ಹೆಸರು, R.R ಸಂಖ್ಯೆ ಮತ್ತು ವೈಯಕ್ತಿಕ ವಿವರಗಳು ಇರಲಿವೆ. ಗೃಹ ಜ್ಯೋತಿಯ ಅರ್ಹತೆಯ ವಿವರ, ವಿದ್ಯುತ್ ಬಳಕೆಯ ಬಿಲ್, ಬಿಲ್ ಅವಧಿ ಮತ್ತು ಗ್ರಾಹಕರು ಬಳಸಿದಂತ ವಿದ್ಯುತ್ ಬಳಕೆಯ ವಿವರ , ಸಹಾಯ ಧನಕ್ಕೆ ಅರ್ಹ ಯೂನಿಟ್ ಗಳು, ಗೃಹ ಜ್ಯೋತಿ ಸಹಾಯಧನದ ಮೊತ್ತ ಎಷ್ಟು ಎಂಬ ಎಲ್ಲಾ ಮಾಹಿತಿಯನ್ನು ಹೊಂದಿರಲಿದೆ.

Leave a Comment

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now