Deprecated: strtolower(): Passing null to parameter #1 ($string) of type string is deprecated in /home/u302298408/domains/rishithepower.com/public_html/wp-content/plugins/taboola/simple_html_dom.php on line 712
ಕುಡಿತ ಮುಕ್ತ ಗ್ರಾಮ ಹಾಗೂ ಸಮಾಜ ಎನ್ನುವುದು ಗಾಂಧೀಜಿಯವರ ಕನಸಾಗಿತ್ತು. ಆದರೆ ಇಂದು ದೇಶದ ಪರಿಸ್ಥಿತಿ ಏನಾಗಿದೆ ಎಂದರೆ ಸರ್ಕಾರಗಳೇ ಇದಕ್ಕೆ ಪರ್ಮಿಷನ್ ಕೊಡುತ್ತಿವೆ. ಒಂದೆಡೆ ಸರ್ಕಾರದ ಆದಾಯ ಹೆಚ್ಚಾಗುತ್ತದೆ ಎನ್ನುವ ಉದ್ದೇಶವಿದ್ದರೆ ಮತ್ತೊಂದೆಡೆ ಸಮಾಜದ ಅತ್ಯಂತ ಮುಖ್ಯ ಘಟಕವಾಗಿರುವ ಕುಟುಂಬಗಳು ಮನೆಯ ಮಕ್ಕಳೇ ಕುಡಿತದ ಚಟಕ್ಕೆ ದಾಸರಾಗಿರುವ ಕಾರಣ ಬೀದಿಗೆ ಬೀಳುತ್ತಿವೆ.
ವಯಸ್ಸಾದ ಕಾಲದಲ್ಲಿ ತಂದೆ ತಾಯಿಗೆ ಆಸರೆಯಾಗಬೇಕಿದ್ದ ಮಗ, ಹೆಂಡತಿ ಮಕ್ಕಳಿಗೆ ದುಡಿದು ಸಾಕಾಗಿದ್ದ ವ್ಯಕ್ತಿ ಕುಡಿತದ ಚಟಕ್ಕೆ ಬಲಿಯಾಗುತ್ತಿರುವುದರಿಂದ ಆ ಕುಟುಂಬಗಳು ಕಣ್ಣೀರ ಹೊಳೆಯನ್ನೇ ಹರಿಸುತ್ತಿವೆ. ವ್ಯಕ್ತಿಯ ಆರೋಗ್ಯ ಹಾಳಾಗುವುದು ಮಾತ್ರವಲ್ಲದೆ ಆ ಕುಟುಂಬದ ಆರ್ಥಿಕ ಪರಿಸ್ಥಿತಿ ಮಾನಸಿಕ ನೆಮ್ಮದಿ ಸಮಾಜದ ಸ್ವಾಸ್ಥ್ಯ ಎಲ್ಲವೂ ಕೂಡ ಹಾಳಾಗಿ ಹೋಗುತ್ತದೆ.
ಆದ ಕಾರಣದಿಂದಾಗಿ ಈ ರೀತಿ ಕುಡಿತದ ಚಟಕ್ಕೆ ಒಳಗಾಗಿರುವವರನ್ನು ಅದರಿಂದ ಮುಕ್ತರನ್ನಾಗಿ ಮಾಡಲು ಕುಟುಂಬಸ್ಥರು ಹರಕೆಗಳ ಮೊರೆ ಹೋಗುತ್ತಾರೆ, ಆಣೆ ಪ್ರಮಾಣ ಮಾಡುತ್ತಾರೆ, ಚಿಕಿತ್ಸೆ ಕೊಡಿಸುತ್ತಾರೆ, ವ್ಯಸನಮುಕ್ತ ಕೇಂದ್ರಗಳಿಗೂ ಸೇರಿಸುತ್ತಾರೆ ಆದರೂ ಕೂಡ ಪ್ರಯೋಜನವಾಗಿಲ್ಲ ಎಂದರೆ ಕರ್ನಾಟಕದಲ್ಲಿ ಒಂದು ವಿಶೇಷ ದೇವಾಲಯವಿದೆ.
ಈ ದೇವಸ್ಥಾನಕ್ಕೆ ಹೋಗಿ ಎಣ್ಣೆ ಬಿಡುತ್ತೇನೆ ಎಂದು ಹೇಳಿ ಮಾಲೆ ತೊಟ್ಟರೆ ಸಾಕು ಜೀವನ ಪೂರ್ತಿ ಅವರು ಎಣ್ಣೆ ಸಹವಾಸಕ್ಕೆ ಹೋಗುವುದಿಲ್ಲ. ಯಾಕೆಂದರೆ ಇಲ್ಲಿರುವ ದೇವರು ಎಷ್ಟು ಶಕ್ತಿಶಾಲಿ ಎಂದರೆ ಒಮ್ಮೆ ದೇವರಿಗೆ ಮಾತು ಕೊಟ್ಟರೆ ಮುಗಿಯಿತು ಆ ಮಾತನ್ನು ಮರೆತರೆ ಅಪಾಯ ಕಟ್ಟಿಟ್ಟ ಬುತ್ತಿ ಆ ಭಯಕ್ಕೆ ಮತ್ತೆ ಇವರು ಮಧ್ಯಪಾನ ಮಾಡುವುದಿಲ್ಲ.
ಈ ದೇವಸ್ಥಾನ ಇರುವುದು ದಾವಣಗೆರೆ ಜಿಲ್ಲೆ ಮತ್ತು ತಾಲೂಕಿನ ಕೈದಾಳೆ ಎನ್ನುವಲ್ಲಿ. ಕೈದಾಳೆ ಮಲ್ಲಿಕಾರ್ಜುನ ಸ್ವಾಮೀಜಿ ಇಲ್ಲಿಯ ಶಕ್ತಿಶಾಲಿ ದೇವರು. ದೇವಸ್ಥಾನಕ್ಕೆ ಬಂದು ರುದ್ರಾಕ್ಷಿ ಮಾಲೆ ಹಾಕಿ ಕೊಂಡು ಕುಡಿಯುವುದಿಲ್ಲ ಎಂದು ದೇವರಿಗೆ ಮಾತು ಕೊಡಬೇಕು ಪ್ರತಿ ವರ್ಷ ಶಿವರಾತ್ರಿಯಂದು ಇಲ್ಲಿ ಜಾತ್ರೆ ನಡೆಯುತ್ತದೆ ಈ ಜಾತ್ರೆಗೆ ರಾಜ್ಯದ ನಾನಾ ಭಾಗಗಳಿಂದಲೂ ಕೂಡ ಭಕ್ತಾದಿಗಳು ಆಗಮಿಸುತ್ತಾರೆ.
ಹೀಗೆ ಬರುವ ಭಕ್ತಾದಿಗಳಲ್ಲಿ ದೀಕ್ಷೆ ತೊಡಲು ಬರುವವರ ಸಂಖ್ಯೆಯೇ ಹೆಚ್ಚಾಗಿರುತ್ತದೆ. ಕುಟುಂಬದ ಸದಸ್ಯರ ಒತ್ತಾಯದ ಮೇರೆಗೆ ಕೆಲವರು ಬಂದು ದೀಕ್ಷೆತೊಟ್ಟರೆ ಇನ್ನು ಕೆಲವು ಸ್ವ ಇಚ್ಛೆಯಿಂದ ಬಂದಿರುತ್ತಾರೆ, ಮತ್ತೆ ಕೆಲವರ ವಿಚಾರವೇನೆಂದರೆ ಅವರ ಕುಟುಂಬಸ್ಥರು ಇವರಿಗೆ ವಿಷಯವೇ ತಿಳಿಸದೆ ಕರೆದುಕೊಂಡು ಬಂದು ಮಾಲೆ ಹಾಕಿಸಲು ಮುಂದಾಗಿರುತ್ತಾರೆ.
ಇಷ್ಟವಿಲ್ಲದಿದ್ದರೂ ಭಗವಂತನಿಗೆ ಭಯಪಟ್ಟು ಅನೇಕರು ಇದನ್ನು ಪಾಲಿಸುತ್ತಾರೆ, ಇನ್ನು ಕೆಲವರು ಓಡಿ ಹೋಗಿರುವ ಉದಾಹರಣೆಯೂ ಇದೆ. ಆದರೆ ಒಮ್ಮೆ ದೀಕ್ಷೆ ತೊಟ್ಟರೆ ಮುಗೀತು ಮತ್ತೆ ಮಾತನ್ನು ಮುರಿಯುವ ಧೈರ್ಯ ಯಾರು ಮಾಡುವುದಿಲ್ಲ ಈ ರೀತಿ ಮಾಲೆ ತೊಟ್ಟವರಲ್ಲಿ ಸಂಕಲ್ಪವನ್ನು ಪೂರೈಸಿಕೊಂಡವರೇ ಲಕ್ಷಾಂತರ ಉದಾಹರಣೆ ಸಿಗುತ್ತಾರೆ.
ಬೆರಳೆಣಿಕೆಯಷ್ಟು ಮಂದಿ ಮತ್ತೆ ಮಧ್ಯಪಾನ ಮಾಡುವ ಪ್ರಯತ್ನ ಮಾಡಿ ಕೈದಾಳೆ ಮಲ್ಲಿಕಾರ್ಜುನ ಸ್ವಾಮಿಯ ಕೋ’ಪಕ್ಕೆ ತುತ್ತಾಗಿದ್ದಾರೆ. ನೀವು ಕೂಡ ಕುಡಿತದ ಚಟಕ್ಕೆ ದಾಸರಾಗಿದ್ದರೆ ಭಗವಂತನ ಮೇಲಿರುವ ನಂಬಿಕೆಯಿಂದ ಸಂಕಲ್ಪವನ್ನು ಕೈಗೊಳ್ಳಿ. ದೇವರ ಆಶೀರ್ವಾದದಿಂದ ನೀವು ನಿಧಾನಕ್ಕೆ ಆರೋಗ್ಯವಾಗಿ ಈ ದುಶ್ಚಟದಿಂದ ಹೊರಬಂದು ಸುಂದರ ಬದುಕಲು ಸೃಷ್ಟಿಸಿಕೊಳ್ಳುತ್ತೀರಿ.
ನಿಮಗೆ ನಿಮ್ಮ ತಪ್ಪು ಮನವರಿಕೆಯಾದರೆ ನಿಮ್ಮ ಕುಟುಂಬದ ಎಲ್ಲಾ ಸದಸ್ಯರ ಮುಖದಲ್ಲೂ ಕೂಡ ನಗು ಮೂಡುತ್ತದೆ. ಮಧ್ಯಪಾನವನ್ನು ತ್ಯಜಿಸಿ ಮತ್ತು ನಿಮ್ಮ ಸ್ನೇಹಿತರು ಹಾಗೂ ಸಂಬಂಧಿಕರಿಗೂ ಕೂಡ ಮಧ್ಯಪಾನ ಬಿಡುವಂತೆ ಉತ್ತೇಜಿಸಿ.