ಇತ್ತೀಚಿನ ದಿನಗಳಲ್ಲಿ ಬ್ಯಾಂಕ್ ಅಕೌಂಟ್ (Bank account) ಎನ್ನುವುದು ಪ್ರತಿಯೊಬ್ಬರಿಗೂ ಕೂಡ ಅನಿವಾರ್ಯ. ಈಗ ಎಲ್ಲಾ ಆರ್ಥಿಕ ವ್ಯವಹಾರವೂ ಕೂಡ ಬ್ಯಾಂಕ್ ಖಾತೆಗಳ ಮೂಲಕವೇ ನಡೆಯುತ್ತಿದೆ. ನಾವು UPI ಆಧಾರಿತ ಆಪ್ ಗಳನ್ನು (phone pe, Google pe, paytm etc.) ಬಳಸಿದರೂ ಅದಕ್ಕೆ ಉಳಿತಾಯ ಖಾತೆ ಇರಬೇಕು.
ಹಾಗೆಯೇ ನಮ್ಮ ಯಾವುದೇ ಸಹಾಯಧನಗಳು ಅಥವಾ ವೃತ್ತಿ ವೇತನ ಪಡೆಯಬೇಕು ಎಂದರೂ ಅಕೌಂಟ್ ಹೊಂದಿರಬೇಕು. ಈಗ ನಾವು ವ್ಯವಹಾರ ಕೂಡ ಬ್ಯಾಂಕ್ ಖಾತೆಗಳನ್ನು ಅವಲಂಬಿಸುತ್ತೇವೆ. ಈ ಮೇಲೆ ತಿಳಿಸಿದಂತೆ ಸಣ್ಣ ಪುಟ್ಟ ವ್ಯವಹಾರಗಳಿಗೆ ಆಪ್ ಗಳನ್ನು ಬಳಸಿದರೆ ದೊಡ್ಡ ದೊಡ್ಡ ವ್ಯವಹಾರಗಳು ಇದ್ದಾಗ ಚೆಕ್ (cheque) ನೀಡುತ್ತೇವೆ. ಚೆಕ್ ಗಳನ್ನು ಬಳಸುವುದು ಬ್ಯಾಂಕಿಂಗ್ ಕ್ಷೇತ್ರ ಆರಂಭವಾದ ದಿನದಲ್ಲೂ ಇದೆ ಆದರೆ ಇದರ ಒಂದು ನಿಯಮದ ಬಗ್ಗೆ ಹೆಚ್ಚಿನ ಜನರಿಗೆ ತಿಳಿದಿಲ್ಲ.
ಚೆಕ್ ಬರೆಯುವಾಗ ನಾವೇನಾದರೂ ತಪ್ಪುಗಳನ್ನು (cheques in wrong method) ಮಾಡಿದರೆ ಚೆಕ್ ಗಳನ್ನು ಕ್ಯಾಶ್ ಮಾಡಲು ಆಗುವುದಿಲ್ಲ. ಹಾಗೆ ಅಕೌಂಟಲ್ಲಿ ಹಣ ಇಲ್ಲದೆ ಚೆಕ್ ನೀಡಿದರೆ ಚೆಕ್ ಬೌನ್ಸ್ ಪ್ರಕರಣಗಳನ್ನು (Cheque bounce) ಎದುರಿಸಬೇಕಾಗುತ್ತದೆ.
ಈ ನಿಯಮಗಳ ಜೊತೆ ನಾವು ಚೆಕ್ ಬರೆಯುವ ಕ್ರಮ ಕೂಡ ಎಷ್ಟು ಮುಖ್ಯ ಎನ್ನುವುದು ಅನೇಕರಿಗೆ ಗೊತ್ತಿಲ್ಲ ಇದರಲ್ಲಿ ಇರುವ ನಿಯಮಗಳಲ್ಲಿ ಗ್ರಾಹಕರ ಹಿತ ದೃಷ್ಟಿಯಿಂದ ಒಂದು ಎಚ್ಚರಿಕೆ ಕ್ರಮದ ಬಗ್ಗೆ ಈ ಅಂಕಣದಲ್ಲಿ ಮಾಹಿತಿ ತಿಳಿಸುತ್ತಿದ್ದೇವೆ. ಅದೇನೆಂದರೆ ನೀವು ಯಾರಿಗಾದರೂ ಚೆಕ್ ನೀಡುತ್ತಿದ್ದೀರಿ ಎಂದಾಗ ಅದರಲ್ಲಿ ಬರೆಯುವ ಮೌಲ್ಯವನ್ನು ಒಂದು ಬಾರಿ ಅಂಕಿಗಳ ಮೂಲಕ ಮತ್ತೊಂದು ಬಾರಿ ಅಕ್ಷರಗಳ ಮೂಲಕ ಬರೆಯುತ್ತೀರಿ.
ಆದರೆ ಈ ರೀತಿ ಬರೆದಾದ ಮೇಲೆ ಅಕ್ಷರಗಳ ಮುಂದೆ ಬರೆದಾಗ ಮಾತ್ರ (in eng only) ಎಂದು ಮತ್ತು ಮೊತ್ತವನ್ನು ಅಂಕಿಗಳಲ್ಲಿ ಬರೆದಾಗ ಕೊನೆಯಲ್ಲಿ ಹೈಫನ್ ಹಾಕಿ ಎರಡು ಸೊನ್ನೆ ಅಥವಾ ಅಂಕಿಗಳ ಮುಂದೆ ಬಾರ್ ಹಾಕಿ ಹೈಫನ್ ಹಾಕುವುದನ್ನು ಮರೆಯಬಾರದು ಯಾಕೆಂದರೆ ಇತ್ತೀಚಿನ ದಿನಗಳಲ್ಲಿ ಯಾರನ್ನು ಸಹ ನಂಬಲು ಸಾಧ್ಯವಿಲ್ಲ ಸ್ನೇಹಿತರಾಗಲಿ.
ಸಂಬಂಧಿಕರಾಗಲಿ ಮತ್ತೊಬ್ಬರೇ ಆಗಲಿ ಅನಾಹುತ ಆದಮೇಲೆ ಸಂಬಂಧ ಕಳೆದುಕೊಳ್ಳುವುದಕ್ಕಿಂತ ನಾವೇ ಎಚ್ಚರಿಕೆಯಾಗಿ ಇರುವುದು ಒಳ್ಳೆಯದು. ಯಾಕೆಂದರೆ ನಾವು ಬರಿ ಅಕ್ಷರದ ರೂಪದಲ್ಲಿ ಬರೆದು ಕೊಟ್ಟಾಗ ಅಥವಾ ಅಂಕಿಗಳ ಮೂಲಕ ಬರೆದು ಕೊಟ್ಟಾಗ ಅದರ ಮುಂದೆ ಎಷ್ಟು ಸಂಖ್ಯೆಗಳನ್ನು ಬೇಕಾದರೂ ಬರೆದುಕೊಳ್ಳಬಹುದು ಮತ್ತು ಅಕ್ಷರದಲ್ಲಿ ಬರೆದುಕೊಟ್ಟ ಕೂಡ ಅದರ ಮುಂದೆ ಕಂಟಿನ್ಯೂ ಮಾಡಬಹುದು.
ಉದಾಹರಣೆಗೆ ನೀವು ಒಂದು ಲಕ್ಷ ಎಂದು ಡಿಜಿಟ್ ಅಲ್ಲಿ ಬರೆದಾಗ 1,00,000 ಆಗುತ್ತದೆ ಅದನ್ನು ಯಾವುದೇ ಅಂಕಿಯಾಗಿ ತಿದ್ಧಬಹುದು ಅಥವಾ ಅದರ ಮುಂದೆ ಒಂದು ಎರಡು ಸೊನ್ನೆ ಹೆಚ್ಚಿಗೆ ಹಾಕಿಕೊಂಡು ಕಂಟಿನ್ಯೂ ಮಾಡಬಹುದು. ಹಾಗೆ ಅಕ್ಷರ ರೂಪದಲ್ಲಿ ಬರೆದಾಗಲೂ ಕೂಡ ಒಂದು ಲಕ್ಷ ಎಂದು ಬರೆದಾಗ ಅದರ ಮುಂದೆ ಮತ್ತಷ್ಟು ಹಣದಲ್ಲೂ ಬರೆದುಕೊಳ್ಳಬಹುದು.
ಈ ರೀತಿ ಆಗಬಾರದು ಎಂದರೆ ನೀವು ಓನ್ಲಿ ಎಂದು ಬರೆಯಬೇಕು. ಈ ಪ್ರೀತಿ ಬರೆಯದೆ ಇದ್ದಾಗ ಅಂತಹ ಚೆಕ್ ಗಳನ್ನು ಬ್ಯಾಂಕ್ ನಲ್ಲಿ ಸ್ವೀಕರಿಸುವುದಿಲ್ಲ ಎಂದು ಅರ್ಥವಲ್ಲ, ಆಗಲೂ ಕೂಡ ಇಂತಹ ಚೆಕ್ ಗಳು ಮಾನ್ಯವಾಗುತ್ತವೆ ಆದರೆ ನಿಮ್ಮ ಅನುಕೂಲಕ್ಕಾಗಿ ತಿಳಿಸಿದ್ದೇವೆ ಅಷ್ಟೇ.